ರಾಂಚಿ: ಕೆಲವು ತಿಂಗಳ ಜಾರ್ಖಂಡ್‌ನಲ್ಲಿ (Jharkhand) ರೆಬೆಕಾ ಪಹಡಿನ್ ಎಂಬ ಮಹಿಳೆಯರನ್ನು ಆಕೆಯ ಪತಿ ಮತ್ತು ಅತ್ತೆ ಬರ್ಬರವಾಗಿ ಕೊಂದಿದ್ದರು. ಈ ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಜಾರ್ಖಂಡ್‌ನಲ್ಲಿ ಮತ್ತೆ ಅಂಥದ್ದೊಂದು ಕೊಲೆ ನಡೆದಿದೆ. ಬೋರಿಯಾ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಚಟ್ಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ (Forest Area) ಮಹಿಳೆಯ ದೇಹದ 9 ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಶವ ಅಂಗನವಾಡಿ ಕಾರ್ಯಕರ್ತೆ (Anganavadi Activist) ಮಾಲೋತಿ ಸೊರೆನ್ ಎಂಬುವವರದ್ದು ಎಂದು ತಿಳಿದುಬಂದಿದೆ. ಮೃತರ ಬಟ್ಟೆ, ಕೂದಲು, ನೈಟಿ, ಸ್ಕಾರ್ಫ್, ಬೈಕ್ ಕೀ ಸೇರಿದಂತೆ ಹಲವು ವಸ್ತುಗಳನ್ನು ಅದೇ ಸ್ಥಳದಲ್ಲಿ ಸಿಕ್ಕಿದ್ದರಿಂದ, ಮೃತರ ಸಂಬಂಧಿಕರು ಮೃತದೇಹವನ್ನು ಸೊರೆನ್ ಎಂದು ಖಚಿತಪಡಿಸಿದ್ದಾರೆ.
ಕೊಲೆಗೆ ಕಾರಣವೇನು?
ಬುಧವಾರ ಸಂಜೆ ಬೋರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತ ದೇಹ ಪತ್ತೆಯಾದ ಬಗ್ಗೆ ಮೃತ ಮಾಲೋತಿ ಸೊರೆನ್ ಅವರ ಸಂಬಂಧಿಕರನ್ನ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಕೊಲೆಗೆ ಅಕ್ರಮ ಸಂಬಂಧ ಕಾರಣ ಎಂದು ಕಂಡುಬಂದಿದೆ. ಮೃತ ಮಹಿಳೆಯ ಸಹೋದರಿ ರಾಣಿ ಸೊರೆನ್ ನೀಡಿರುವ ಹೇಳಿಕೆ ಪ್ರಕಾರ, ಮಾಲೋತಿ ಪತಿಗೆ ಅಕ್ರಮ ಸಂಬಂಧ ಇದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಮಹಿಳೆ ಹಲವು ವರ್ಷಗಳ ಹಿಂದೆ ತೇಲು ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಇಬ್ಬರಿಗೂ ಮೂವರು ಮಕ್ಕಳು, ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗುವಿದೆ. ಈ ವೇಳೆ ಮಾಲೋತಿಯ ಪತಿ ತೇಲು ಕೆಲ ತಿಂಗಳಿಂದ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದು ಮಾಲೋತಿ ಅವರ ಗಮನಕ್ಕೆ ಬಂದಾಗ ಅವರು ಖಂಡಿಸಿದ್ದರು. ಈ ವಿಚಾರವಾಗಿ ದಂಪತಿಗಳಿಬ್ಬರಿಗೂ ಆಗಾಗ ಜಗಳ ನಡೆಯುತ್ತಿತ್ತು. ಪತಿ ತೇಲು ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಆಕೆಯ ಅತ್ತೆ ಸೇರಿ ಮನೆಯವರೆಲ್ಲಾ ಚಿತ್ರ ಹಿಂದೆ ಕೊಡುತ್ತಿದ್ದಂತೆ ರಾಣಿ ಆರೋಪಿಸಿದ್ದಾರೆ.
ದಿಢೀರ್ ನಾಪತ್ತೆ
ಜಗಳದ ನಂತರ ಮಾಲೋತಿ ತನ್ನ ಗಂಡನ ಮನೆಯಿಂದ ತವರು ಮನೆ ಬೋರಿಯೊ ಸಂತಾಲಿಗೆ ಬಂದಿದ್ದಳು. ಆದರೆ ಏಪ್ರಿಲ್ 19 ರಂದು ತೇಲು ಎರಡನೇ ವಿವಾಹವಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದ್ದು, ತಕ್ಷಣ ಆಕೆ ಅತ್ತೆಯ ಮನೆಗೆ ಹೋಗಿದ್ದಾಳೆ. ಆದರೆ ಏಪ್ರಿಲ್ 27 ರಿಂದ ಆಕೆ ಕಾಣೆಯಾಗಿದ್ದಳು. ಸಾಕಷ್ಟು ಹುಡುಕಾಡಿದ ನಂತರ, ಪೊಲೀಸರಿಗೆ ದೂರು ನೀಡಲಾಗಿತ್ತು.
ಪತಿ, ಆತನ 2ನೇ ಪತ್ನಿಯ ಬಂಧನ
ಮಾಲೋತಿ ಅವರ ದಾರುಣ ಹತ್ಯೆಯ ನಂತರ ಪೊಲೀಸರು ಆಕೆಯ ಪತಿ ತೇಲು ಕಿಸ್ಕು ಹಾಗೂ ಆತನ ಎರಡನೇ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೋತಿ ಕುಟುಂಬಸ್ಥರ ಪ್ರಕಾರ 2ನೇ ಮದುವೆಯನ್ನು ಪ್ರಶ್ನಿಸಿದ್ದಾಗ ಆಕೆಯನ್ನು ಕೊಲ್ಲುವುದಾಗಿ ತೇಲು ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಅವರಿಬ್ಬರೇ ಸೇರಿ ಮಾಲೋತಿಯನ್ನು ಕೊಂದಿದ್ದಾರೆ, ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!
ಅನಾಥರಾದ ಮೂರು ಮಕ್ಕಳು
ಮೃತ ಮಾಲೋತಿ ಸೊರೆನ್‌ಗೆ ಮೂವರು ಮಕ್ಕಳು, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಆಕೆಯ ತಂದೆಯೂ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೀಗ ಸಂಸಾರವನ್ನು ನೋಡಿಕೊಳ್ಳುತ್ತಿದ್ದ ಹಿರಿಯ ಮಗಳೂ ಇಹಲೋಕ ತ್ಯಜಿಸಿದ್ದಾರೆ. ಇದರಿಂದ ಚಿಕ್ಕ ಮಕ್ಕಳಿನ್ನು ನೋಡಿಕೊಳ್ಳುವುದಾದರೂ ಹೇಗೆ? ಈ ಕೊಲೆಯ ಹಿಂದೆ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕುಟುಂಬ ಸದಸ್ಯರ ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಶ್ವಾನದಳ, ವಿಧಿವಿಜ್ಞಾನ ತಂಡ, ರಾಂಚಿಯಿಂದ ಬೆರಳಚ್ಚು ತಜ್ಞರು ಗುರುವಾರ ಸಂಜೆ ಸಾಹಿಬ್‌ಗಂಜ್‌ಗೆ ಆಗಮಿಸಿ ತನಿಖೆ ನಡೆಸಿದ್ದಾರೆ. ಶುಕ್ರವಾರ ಎಲ್ಲರೂ ಘಟನಾ ಸ್ಥಳಕ್ಕೆ ಆಗಮಿಸಿ ಕೊಲೆಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ತನಿಖೆ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ