• Home
  • »
  • News
  • »
  • crime
  • »
  • Santro Ravi Arrest: ವಿಗ್ ತೆಗೆದು ವೇಷ ಮರೆಸಿಕೊಂಡಿದ್ದ ರವಿ! ಹೇಗಿತ್ತು ಗೊತ್ತಾ 'ಆಪರೇಷನ್ ಸ್ಯಾಂಟ್ರೋ'?

Santro Ravi Arrest: ವಿಗ್ ತೆಗೆದು ವೇಷ ಮರೆಸಿಕೊಂಡಿದ್ದ ರವಿ! ಹೇಗಿತ್ತು ಗೊತ್ತಾ 'ಆಪರೇಷನ್ ಸ್ಯಾಂಟ್ರೋ'?

ವೇಷ ಬದಲಿಸಿಕೊಂಡ ಸ್ಯಾಂಟ್ರೋ ರವಿ

ವೇಷ ಬದಲಿಸಿಕೊಂಡ ಸ್ಯಾಂಟ್ರೋ ರವಿ

ತಲೆ ತುಂಬಾ ವಿಗ್ (Wig) ಹಾಕಿಕೊಂಡು ಪೋಸ್ ಕೊಡುತ್ತಿದ್ದ ಸ್ಯಾಂಟ್ರೋ ರವಿ, ಇದೀಗ ವಿಗ್ ತೆಗೆದು, ಶೇವಿಂಗ್ ಮಾಡಿಸಿಕೊಳ್ಳದೇ ವೇಷ ಮರೆಸಿಕೊಂಡಿದ್ದ. ಈ ಮೂಲಕ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದ. ಕೊನೆಗೂ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಾಗಾದರೆ ಹೇಗಿತ್ತು 'ಆಪರೇಷನ್ ಸ್ಯಾಂಟ್ರೋ'?

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಬೆಂಗಳೂರು: ವಂಚಕ ಸ್ಯಾಂಟ್ರೋ ರವಿ (Santro Ravi) ಬಂಧನವಾಗಿರುವ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಂಧನ ಕಾರ್ಯಾಚರಣೆ ಹೇಗಿತ್ತು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸ್ಯಾಂಟ್ರೋ ರವಿಯನ್ನು ಗುಜರಾತ್‌ನ ಅಹಮದಾಬಾದ್‌ (Ahmedabad in Gujarat) ಬಳಿ ಬಂಧಿಸಲಾಗಿದ್ದು, ಆತನ ಜೊತೆಗೆ ಸತೀಶ್ ಮತ್ತು ರಾಮ್‌ಜೀ ಎನ್ನುವವರನ್ನು ಬಂಧಿಸಿದ್ದಾಗಿ ಹೇಳಿದ್ದಾರೆ. ರಾಮನಗರ (Ramanagar), ಮೈಸೂರು ಪೊಲೀಸರು (Mysuru Police) ಕಾರ್ಯಾಚರಣೆ ನಡೆಸಿ ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆ ಅಂತ ಹೇಳಿದ್ದಾರೆ. ಇನ್ನು ತಲೆ ತುಂಬಾ ವಿಗ್ (Wig) ಹಾಕಿಕೊಂಡು ಪೋಸ್ ಕೊಡುತ್ತಿದ್ದ ಸ್ಯಾಂಟ್ರೋ ರವಿ, ಇದೀಗ ವಿಗ್ ತೆಗೆದು, ಶೇವಿಂಗ್ ಮಾಡಿಸಿಕೊಳ್ಳದೇ ವೇಷ ಮರೆಸಿಕೊಂಡಿದ್ದ. ಈ ಮೂಲಕ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದ. ಕೊನೆಗೂ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.


“ಸ್ಯಾಂಟ್ರೋ ರವಿ ಹೊಸ ಕ್ರಿಮಿನಲ್ ಅಲ್ಲ”


ಗುಜರಾತ್​ನಲ್ಲಿದ್ದ ಕರ್ನಾಟಕ ಪೊಲೀಸರು ಗುಜರಾತ್ ಕ್ರೈಂ ಪೊಲೀಸರ ಸಹಕಾರದಿಂದ ಸ್ಯಾಂಟ್ರೋ ರವಿ ಬಂಧನವಾಗಿದೆ. ರಾಜ್ಯಕ್ಕೆ ಬಂದ ಬಳಿಕ ಹೆಚ್ಚಿನ ತನಿಖೆ ಮಾಡುತ್ತೇವೆ ಅಂತ ಅಲೋಕ್ ಕುಮಾರ್ ಹೇಳಿದ್ದಾರೆ. ಸ್ಯಾಂಟ್ರೋ ರವಿ ಬಿಳಿಬಟ್ಟೆ ಧರಿಸಿರುವ ಕ್ರಿಮಿನಲ್. ಸ್ಯಾಂಟ್ರೋ ರವಿ ಹೊಸ ಕ್ರಿಮಿನಲ್ ಅಲ್ಲ. ಈತ 11 ತಿಂಗಳು ಜೈಲಿನಲ್ಲಿದ್ದ. ಈ ಎಲ್ಲಾ ಹಿನ್ನೆಲೆಯಿಂದ ಸ್ಯಾಂಟ್ರೋ ರವಿಗೆ ತಪ್ಪಿಸಿಕೊಳ್ಳುವುದು ಗೊತ್ತಿತ್ತು ಅಂತ ಅಲೋಕ್ ಕುಮಾರ್ ಹೇಳಿದ್ದಾರೆ.




“ಮೀಸೆ ತೆಗಿದಿದ್ದು, ವಿಗ್ ಅನ್ನೂ ತೆಗೆದಿದ್ದ”


ಸ್ಯಾಂಟ್ರೋ ರವಿ ಕೊಚ್ಚಿಯಿಂದ ಪುಣೆಗೆ ಹೋಗಿದ್ದ. ಆತ ತಪ್ಪಿಸಿಕೊಳ್ಳೋಕೆ ಮೀಸೆ ತೆಗೆದಿದ್ದ, ನಮಗೆ ಮೋಸ ಮಾಡೋಕೆ ಮೀಸೆ ತೆಗೆದಿದ್ದ. ಸ್ಯಾಂಟ್ರೋ ರವಿ ಜತೆ ಸತೀಶ್, ರಾಮ್ ಜೀ ಎಂಬುವರನ್ನು ಬಂಧಿಸಲಾಗಿದೆ. ಅಂತ ಆಂತರಿಕ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Santro Ravi Arrest: ಕೊನೆಗೂ ಖಾಕಿ ಬಲೆಗೆ ಬಿದ್ದ ಸ್ಯಾಂಟ್ರೋ ರವಿ! ಗುಜರಾತ್‌ನಲ್ಲಿ ಆರೋಪಿ ಅರೆಸ್ಟ್


ಸ್ಯಾಂಟ್ರೋ ರವಿ ಜಾಗ, ಕಾರ್, ಮೊಬೈಲ್, ಸಿಮ್ ಎಲ್ಲವನ್ನೂ ಬದಲಿಸ್ತಿದ್ದ,. ಆದರೂ ಪೊಲೀಸರು ಅವನ ಬೆನ್ನು ಬಿದ್ದಿದ್ದರು. ತೆಲಂಗಾಣ, ಮಹಾರಾಷ್ಟ್ರದಲ್ಲೂ ಹುಡುಕಾಟ ನಡೆಸಿದ್ದು, ಕೊನೆಗೆ ಗುಜರಾತ್‌ನಲ್ಲಿ ಸಿಕ್ಕಿ ಬಿದ್ದಿದ್ದಾನೆ ಅಂತ ಮಾಹಿತಿ ನೀಡಿದ್ರು.




ಮಧ್ಯರಾತ್ರಿ ಅಥವಾ ಮುಂಜಾನೆ ರಾಜ್ಯಕ್ಕೆ


ಪೊಲೀಸ್ ತಂಡ ಗುಜರಾತ್ ಗೆ ತೆರಳಿ ಅಲ್ಲಿ ಸ್ಯಾಂಟ್ರೋ ರವಿ ಬಂಧಿಸಿದೆ. ಸದ್ಯ ಅಹಮದಾಬಾದ್ ನಲ್ಲಿ ಪೊಲೀಸರ ವಶದಲ್ಲಿರೋ ಸ್ಯಾಂಟ್ರೋ ರವಿಯನ್ನು ಇಂದು ಮಧ್ಯರಾತ್ರಿ ಅಥವಾ ಮುಂಜಾನೆ ಮೈಸೂರಿಗೆ ಕರೆತರುವ ಸಾಧ್ಯತೆ ಇದೆ. ಸದ್ಯ ಗುಜರಾತ್‌ನಲ್ಲಿ ಕಾನೂನು ಪ್ರಕ್ರಿಯೆ ಮುಗಿಸುತ್ತಿರೋ ಪೊಲೀಸರು, ಅಹಮದಾಬಾದ್ ಕೋರ್ಟ್‌ಗೆ ಹಾಜರು ಪಡಿಸಿ, ಸ್ಯಾಂಟ್ರೋ ರವಿ ಮೇಲೆ ದಾಖಲಾಗಿದ್ದ ಕೇಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿದ ಬಳಿಕ ಬಾಡಿವಾರೆಂಟ್ ಮೇಲೆ ಮೈಸೂರಿಗೆ ಕರೆತರಲಿದ್ದಾರೆ. ಬಹುತೇಕ ಒಂದು ಗಂಟೆ ಒಳಗೆ ಇದೆಲ್ಲಾ ಪ್ರಕ್ರಿಯೆ ಮುಗಿಯಲಿದೆ. ಮದ್ಯರಾತ್ರಿ ವೇಳೆಗೆ ಅಥವಾ ಮುಂಜಾನೆ ಮೈಸೂರಿಗೆ ಕರೆತರಲಿರೋ ಸಾಧ್ಯತೆ ಇದೆ.


ಇದನ್ನೂ ಓದಿ: Santro Ravi: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?


ಗೃಹಸಚಿವರು ಹೇಳಿದ್ದೇನು?


ಕಳೆದ ಹನ್ನೊಂದು ದಿನಗಳಿಂದ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ತಪ್ಪಿಸಿ ಕೊಳ್ಳುತ್ತಿದ್ದ, ಸ್ಯಾಂಟ್ರೋ ರವಿ ಯನ್ನು, ಆತನ ವಿರುದ್ಧ ಇರುವ ಆರೋಪಗಳ ಬಗ್ಗೆ  ಪೊಲೀಸರು ವಿಚಾರಣೆ ನಡೆಸಿ, ತಪ್ಪಿಸ್ಥಸ್ಥ ನಾಗಿದ್ದರೆ, ಸೂಕ್ತ ಕಾನೂನು ಕ್ರಮ ಜರುಗಿಸಿ, ಸಂತ್ರಸ್ತ ವ್ಯಕ್ತಿಗೆ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಾರೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.

Published by:Annappa Achari
First published: