ಬೆಂಗಳೂರು: ಚಿನ್ನ (Gold) ಎಂದರೆ ಯಾರಿಗೆ ತಾನೇ ಆಸೆ ಇಲ್ಲ ಹೇಳಿ. ಆದರಲ್ಲೂ ಈ ಬೆಲೆ ಏರಿಕೆ ಸಮಯದಲ್ಲಿ 3 ಸಾವಿರ ರೂಪಾಯಿಗೆ ಒಂದು ಗ್ರಾಂ ಚಿನ್ನ ಕೊಡುತ್ತೇವೆ ಎಂದರೆ ಯಾರು ತಾನೇ ಬಿಡುತ್ತಾರೆ ಅಲ್ವಾ. ಹೀಗೆ ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಅಂತ ಆಸೆ ಪಟ್ಟ ಉದ್ಯಮಿಯೊಬ್ಬ (Businessman ) ಬರೋಬ್ಬರಿ 13 ಲಕ್ಷ ರೂಪಾಯಿ ಕಳೆದಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಹೀಗೆ ಪೊಲೀಸರು (Police) ಕೈಯಲ್ಲಿ ಹಿಡಿದುಕೊಂಡು ತೋರಿಸುತ್ತಿರುವ ಈ ಚಿನ್ನದ ಗಟ್ಟಿಯನ್ನು ಒಮ್ಮೆ ನೋಡಿ. ನೋಡೋಕೆ ಅಸಲಿಯಂತೆ ಕಾಣೋ ನಕಲಿ ಚಿನ್ನ (Fake Gold) ಇದು. ಇದೇ ನಕಲಿ ಚಿನ್ನವನ್ನು ಅಸಲಿ ಅಂತ ನಂಬಿಸಿ ಉದ್ಯಮಿ ನಿಕಿತ್ ಎಂಬಾತನಿಗೆ ಆಂಧ್ರ ಪ್ರದೇಶದ (Andhra Pradesh) ಮೂಲದ ಶಿವಶಂಕರ್ ವಂಚಿಸಿದ್ದಾನೆ. ಹಣ ಇರುವವರನ್ನೇ ಟಾರ್ಗೆಟ್ ಮಾಡಿ ಮೊದಲು ಪರಿಚಯ ಮಾಡಿಕೊಳ್ಳುತ್ತಿದ್ದಆರೋಪಿ ಬಳಿಕ ನನ್ನ ಬಳಿ ಚಿನ್ನದ ಗಟ್ಟಿ ಇದೆ. ಒಂದು ಗ್ರಾಂ ಚಿನ್ನಕ್ಕೆ ಮೂರು ಸಾವಿರದಂತೆ ಕೊಡುತ್ತೇನೆ ಅಂತ ಹೇಳಿ ನಂಬಿಸಿದ್ದ. ಸ್ಯಾಂಪಲ್ (Sample) ಕೊಡುವಾಗ ಅಸಲಿ ಚಿನ್ನದ ಗಟ್ಟಿ ತೋರಿಸಿ ಕೊನೆಗೆ ನಕಲಿ ಕೊಟ್ಟು 13 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿದ್ದ.
ಅಸಲಿ ಚಿನ್ನದ ಗಟ್ಟಿಯನ್ನ ತಂದು ತೋರಿಸುತ್ತಿದ್ದ
ಆರೋಪಿ ಶಿವಶಂಕರ್ ಉದ್ಯಮಿಗಳು, ವ್ಯಾಪಾರಿಗಳ ಬಳಿ ಬಂದು ಕೆಲ ಸಾಮಾಗ್ರಿಗಳನ್ನು ತೆಗೆದುಕೊಳ್ಳುವುದು ಸೇರಿದಂತೆ ವ್ಯಾಪಾರ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ. ಇದರಂತೆಯೇ ಗಿರಿನಗರದ ಮಂಗಳೂರು ಸ್ಟೋರ್ ಮಾಲೀಕ ನಿಕಿತ್ ಅವರನ್ನು ಪರಿಚಯ ಮಾಡಿಕೊಂಡು ಕಡಿಮೆ ಬೆಲೆಗೆ ಚಿನ್ನ ನೀಡುತ್ತೇನೆ ನಂಬಿಸಿದ್ದ.
ಇದನ್ನೂ ಓದಿ: Bengaluru: ಗೆಳೆಯನ ಭೇಟಿಗಾಗಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ ಸಾವು; ರಾತ್ರಿ ಇಬ್ಬರ ಮಧ್ಯೆ ನಡೆದಿದ್ದಾದ್ರೂ ಏನು?
ಆರೋಪಿ ಶಿವಶಂಕರ್ ಮೊದಲಿಗೆ ಉದ್ಯಮಿಯನ್ನು ನಂಬಿಸಲು ಅಸಲಿ ಚಿನ್ನದ ಗಟ್ಟಿಯನ್ನ ತಂದು ತೋರಿಸುತ್ತಿದ್ದ. ಅಲ್ಲದೇ ಈ ಚಿನ್ನದ ಗಟ್ಟಿ ತನ್ನ ಜಮೀನಿನಲ್ಲಿ ಹುದುಗಿದ್ದ ನಿಧಿ ಸಿಕ್ತು ಅಂತ ಹೇಳಿ ನಂಬಿಸುತ್ತಿದ್ದ. ಸ್ಯಾಂಪಲ್ ಕೊಡುವಾಗ ಅಸಲಿ ಚಿನ್ನದ ತುಣುಕನ್ನು ನೀಡುತ್ತಿದ್ದ. ಆದರೆ ಇದನ್ನ ನಂಬಿದ ವ್ಯಕ್ತಿ ಲಕ್ಷ ಲಕ್ಷ ಹಣ ಕೊಟ್ಟು ನಕಲಿ ಚಿನ್ನದ ಗಟ್ಟಿ ಕೊಂಡುಕೊಳ್ಳುತ್ತಿದ್ದರು.
ಆರೋಪಿಯಿಂದ 8 ಲಕ್ಷ ರೂಪಾಯಿ ನಗದು, ಬೈಕ್, ನಕಲಿ ಚಿನ್ನ ವಶ
ಆದರೆ ನಕಲಿ ಚಿನ್ನದ ಬಗ್ಗೆ ಅರಿವಾದ ಬಳಿಕ ನಿಕಿತ್ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಂಧ್ರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶಿವಶಂಕರ್ನನ್ನ ಬಂಧಿಸಿದ್ದಾರೆ. ಆತನಿಂದ 8 ಲಕ್ಷ ರೂಪಾಯಿ ಹಣ ಒಂದು ಬೈಕ್ ಮತ್ತು ನಕಲಿ ಚಿನ್ನದ ಗಟ್ಟಿ ಜಪ್ತಿ ಮಾಡಿದ್ದಾರೆ. ಇನ್ನು ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಶಂಕೆ ಇದ್ದು, ಗೋಲ್ಡ್ ಶಿವನನ್ನು ಗಿರಿನಗರ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Robbery Case: ಬೆಂಗಳೂರಿನ ಉದ್ಯಮಿಯ ಮನೆ ದೋಚಿ ಒಡಿಶಾದಲ್ಲಿ ಬಂಗಲೆ ಕಟ್ಟುತ್ತಿದ್ದ ಖದೀಮರ ಬಂಧನ
ನಶೆ ಮುಕ್ತಿ ಕೇಂದ್ರದಲ್ಲಿ ವ್ಯಕ್ತಿಯನ್ನು ಹೊಡೆದು ಕೊಂದ್ರು!
ಗುಜರಾತ್‌ನಲ್ಲಿ (Gujarat) ಭಯಾನಕ ಘಟನೆಯೊಂದು ನಡೆದಿದೆ. ಮದ್ಯಕ್ಕೆ (Alcohol) ದಾಸನಾಗಿದ್ದ ವ್ಯಕ್ತಿಯನ್ನು ಕುಟುಂಬಸ್ಥರು (Family ) ನಶೆ ಮುಕ್ತ ಕೇಂದ್ರಕ್ಕೆ ಸೇರಿದ್ದರು. ಆದರೆ ಇಲ್ಲಿ ಆತನನ್ನು ಹೊಡೆದು ಕೊಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಲೆ ಕೆಳಗೆ ಮಾಡಿ ಇಲ್ಲಿದ್ದ ಜನರು ದೊಣ್ಣೆಯಿಂದ ಮನಸೋ ಇಚ್ಛೆ ಥಳಿಸಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ