ಮಂಡ್ಯ : ದಿನದಿಂದ ದಿನಕ್ಕೆ ಸೈಬರ್ ವಂಚಕರ (Cyber Froud) ಮೋಸ ಜಾಲ ಹೆಚ್ಚಾಗುತ್ತಿದೆ. ವಂಚನೆ ಜಾಲದಲ್ಲಿ ಸಿಲುಕಿ ಸಾವಿರಾರರು ಮಂದಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ದಿನಕ್ಕೊಂದು ಹೊಸ ರೀತಿಯಲ್ಲಿ ವಂಚಕರು ಸಾಮಾನ್ಯ ಜನರಿಗೆ ಮೋಸ (Cheating) ಮಾಡುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಹಣ (Money) ಗಳಿಸುವ, ಬೆಲೆ ಬಾಳುವ ಉಡುಗೊರೆ ಸಿಗುವ ಆಸೆಯಿಂದ ಹಲವರು ಈಗಾಗಲೇ ದುಡಿದು ಕುಟ್ಟಿದ್ದ ಹಣವನ್ನು ಕಳೆದುಕೊಂಡಿದ್ದಾರೆ. ಇದೇ ರೀತಿಯ ಘಟನೆಯೊಂದು ಮಂಡ್ಯ (Mandya) ಜಿಲ್ಲೆಯಲ್ಲಿ ವರದಿಯಾಗಿದ್ದು, ಉದ್ಯೋಗ ಕೊಡಿಸುವ ಭರವಸೆ ನೀಡಿ ಯುವತಿಯೊಬ್ಬರಿಗೆ ಬರೋಬ್ಬರಿ 31 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಪಡೆದು ಖದೀಮರು ವಂಚನೆ ಮಾಡಿದ್ದಾರೆ. ಮ್ಯಾಟ್ರಿಮೋನಿ (Matrimony) ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದ ಮಾಹಿತಿಯನ್ನು ಕದ್ದು ವಂಚಕರು ಮೋಸದ ಜಾಲಕ್ಕೆ ಸೃಷ್ಟಿಸಿ ವಂಚನೆ ಮಾಡಿದ್ದಾರೆ.
ಏನಿದು ಪ್ರಕರಣ?
ಮಂಡ್ಯದಲ್ಲಿ ಸೈಬರ್ ಕ್ರೈಂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಲಿಂಗಾಯಿತ ಮ್ಯಾಟ್ರಿಮೋನಿಯಲ್ಲಿ ಹಾಕಿದ್ದ ಪ್ರೋಫೈಲ್ ಡಿಟೇಲ್ಸ್ ತೆಗೆದುಕೊಂಡು ವಂಚನೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಮೂಲದ ಬಿದರಕೋಟೆ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ವಿದ್ಯಾರ್ಥಿನಿಗೆ ವಂಚಕರು ಬರೋಬ್ಬರಿ 31 ಲಕ್ಷದ 34 ಸಾವಿರದ 300 ರೂಪಾಯಿ ವಂಚನೆ ಮಾಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಕೊಡಿಸುವುದಾಗಿ ವಿದ್ಯಾರ್ಥಿನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ವಂಚನೆ ಸಂಬಂಧ ವಿದ್ಯಾರ್ಥಿನಿ ಮಂಡ್ಯದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Hassan: 85 ವರ್ಷದ ವೃದ್ಧೆಯನ್ನ ಕೊಂದು ಅತ್ಯಾಚಾರ ಎಸಗಿದ್ದ ನೀಚ ಯುವಕನ ಬಂಧನ
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯೋರ್ವನನ್ನು ಬಂಧನ ಮಾಡಿದ್ದಾರೆ. ವಿದ್ಯಾರ್ಥಿನಿಗೆ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದ ಆರೋಪಿ ಮಧು ಎಂಬಾತನನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಆರೋಪಿಯ ವಿಚಾರಣೆ ವೇಳೆ ಮತ್ತಷ್ಟು ಭಯಾನಕ ಮಾಹಿತಿ ಹೊರ ಬಂದಿದ್ದು, ಈಗಾಗಲೇ ಆರೋಪಿ ಮಂಡ್ಯ, ಮೈಸೂರು, ಕೆ.ಆರ್ ನಗರ, ಕಾಟನ್ ಪೇಟೆ, ಹರಿಹರದಲ್ಲಿಯೂ ಕೆಲಸ ಕೊಡಿಸುವುದಾಗಿ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಸದ್ಯ ಬಂಧಿತ ಆರೋಪಿಯಿಂದ ಪೊಲೀಸರು 10 ಲಕ್ಷ ನಗದು, 2ಲಕ್ಷ 34 ಸಾವಿರ ಮೌಲ್ಯದ ಚಿನ್ನಾಭರಣ, 1 ಲಕ್ಷ 30 ಸಾವಿರ ಮೌಲ್ಯದ ಐಫೋನ್, ಒಂದು ಪಲ್ಸರ್ ಬೈಕ್ ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ