ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru), ಮಂಡ್ಯ (Mandya), ಬಾಗಲಕೋಟೆ (Bagalakote) ಸೇರಿದಂತೆ ರಾಜ್ಯದ ಹಲವೆಡೆ ಇಂದು ಅಗ್ನಿ ಅನಾಹುತಗಳು (Fire disasters) ನಡೆದಿವೆ. ಬೆಂಗಳೂರಿನ ಮಲ್ಲೇಶ್ವರದ (Mallaeshwaram) ಮಂತ್ರಿಮಾಲ್ (Mantri Mall) ಹಿಂಭಾಗದ ಮನೆಯೊಂದರಲ್ಲಿ ಅಗ್ನಿ ಅವಘಡದಲ್ಲಿ ಮಹಿಳೆಯೊಬ್ಬರು ಸಜೀವ ದಹನವಾಗಿದ್ದಾರೆ. ಮಲ್ಲೇಶ್ವರದ ಸಂಪಿಗೆ ರಸ್ತೆ ಹಿಂಭಾಗದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಅಡುಗೆ ಮಾಡ್ತಿದ್ದ 55 ವರ್ಷದ ಮೇರಿ ಎಂಬುವರು ಸಜೀವಾಗಿ ದಹನಗೊಂಡಿದ್ದಾರೆ. ಮಲ್ಲೇಶ್ವರದ ಮಂತ್ರಿಮಾಲ್ ಎದುರಿನ ಸಂಪಿಗೆ ರಸ್ತೆಯಿಂದ ರಾಜಾಜಿನಗರ ಕಡೆ ಹೋಗುವ ರಸ್ತೆಯಲ್ಲಿರುವ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮೇರಿ ಮೈದುನನ ತಿಂಗಳ ಕಾರ್ಯ ಇಂದು ನಡೆಯುತ್ತಿತ್ತು. ಈ ವೇಳೆ ಅಡುಗೆ ತಯಾರಿಸುವಾಗ ಬಟ್ಟೆಗೆ ಬೆಂಕಿ ಹೊತ್ತುಕೊಂಡು, ಮೇರಿಯವರನ್ನೂ ಬೆಂಕಿ ಆವರಿಸಿದೆ. ಪರಿಣಾಮ ಚಿಕಿತ್ಸೆ ಫಲಿಸದೇ ಮೇರಿ ಸಾವನ್ನಪ್ಪಿದ್ದಾರೆ.
ಬೆಂಗಳೂರಲ್ಲಿ ಮಹಿಳೆ ಸಜೀವ ದಹನ
ಮಲ್ಲೇಶ್ವರದಲ್ಲಿ ಅಡುಗೆ ಮಾಡುವಾಗ ಬೆಂಕಿ ಹೊತ್ತುಕೊಂಡು ಮಹಿಳೆಯೊಬ್ಬರು ಸಜೀವವಾಗಿ ದಹನವಾಗಿದ್ದಾರೆ. ಮೇರಿ ಎಂಬುವರು ತಮ್ಮ ಮೈದುನನ ತಿಂಗಳ ಕಾರ್ಯದ ನಿಮಿತ್ತ ಮನೆಯಲ್ಲಿ ಅಡುಗೆ ತಯಾರಿ ಮಾಡುತ್ತಿದ್ದರು. ಈ ವೇಳೆ ಸ್ಟವ್ ನಲ್ಲಿ ಬೆಂಕಿ ಹೆಚ್ಚಾಗಿ, ಪಕ್ಕದಲ್ಲೇ ಇದ್ದ ಬಟ್ಟೆಗೆ ಹೊತ್ತಿಕೊಂಡಿದೆ. ನಂತರ ಗ್ಯಾಸ್ ಪೈಪ್ ಹಾಗೂ ಮನೆಯಲ್ಲಿರುವ ವಸ್ತುಗಳಿಗೆ ಬೆಂಕಿ ತಗುಲಿದೆ.
ಚಿಕಿತ್ಸೆ ಫಲಿಸದೇ ಮಹಿಳೆ ಸಾವು
ಬೆಂಕಿ ಜಾಸ್ತಿಯಾಗುತ್ತಿದ್ದಂತೆ ಅಡುಗೆ ಮನೆಯಲ್ಲಿದ್ದ ಮಹಿಳೆ ಹೊರ ಬರಲಾರದೆ ಕಂಗಾಲಾಗಿದ್ದಾರೆ. ಅಕ್ಕಪಕ್ಕದ ಮನೆಯವರು ಬಂದು ರಕ್ಷಣೆ ಮಾಡುವಷ್ಟರಲ್ಲಿ ಬೆಂಕಿಯಲ್ಲಿ ಸಿಲುಕಿಕೊಂಡು ಮೇರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಮೇರಿಯನ್ನು ರಕ್ಷಣೆ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿಯೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೇರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Crime News: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆಯ ಮಗಳನ್ನೇ ಅತ್ಯಾಚಾರ ಎಸಗಿದ ಕಾಮುಕ ಅಂದರ್
ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮ
ಇನ್ನು ಇದೇ ವೇಳೆ ಬೆಂಕಿ ಅನಾಹುತದಿಂದ ಮೇರಿ ಮಗಳು ಕರ್ಪುಗಂ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ಲ್ಯಾಪ್ ಟಾಪ್, ಬಟ್ಟೆ, ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಸಾಫ್ಟ್‌ವೇರ್ ಕಂಪನಿಯಲ್ಲಿ ಅಗ್ನಿ ಅನಾಹುತ
ಮತ್ತೊಂದೆಡೆ ಯಲಹಂಕದ ಸಾಪ್ಟ್ ವೇರ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏರ್ಪೋರ್ಟ್ ರಸ್ತೆಯ ಯಲಹಂಕ ಜಂಕ್ಷನ್ ಬಳಿಯಿರುವ ಕಂಪನಿಯ ಎಂಟನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. 8 ಮಹಡಿಗಳ ಕಟ್ಟಡದ ಹಲವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಸಿಬ್ಬಂದಿಯನ್ನ ಹೊರ ಕಳಿಸಿ, ಬೆಂಕಿ ನಂದಿಸುವ ಕಾರ್ಯ ನಡೆಯಿತು.
ಹೊತ್ತಿ ಉರಿದ ಸ್ಟೆಶನರಿ ಅಂಗಡಿ
ಅತ್ತ ಬಾಗಲಕೋಟೆಯ ಶಿರೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸ್ಟೇಶನರಿ ಅಂಗಡಿಯೊಂದು ಹೊತ್ತಿ ಉರಿದಿದೆ. ಮಾನಪ್ಪ ಬಡಿಗೇರ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಬೆಂಕಿ ಹೊತ್ತುಕೊಂಡು, ಅಂಗಡಿಯಲ್ಲಿ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ಸುಮಾರು 3.50 ಲಕ್ಷ ರೂಪಾಯಿ ನಷ್ಟವಾಗಿದೆ ಅಂತ ಅಂದಾಜಿಸಲಾಗುತ್ತಿದೆ.
ಹುಲ್ಲು ತುಂಬಿದ ಲಾರಿ ಬೆಂಕಿಗೆ ಆಹುತಿ
ಹಾಸನ ಜಿಲ್ಲೆಯ ಆಲೂರಿನಲ್ಲಿ ಅಗ್ನಿ ಅನಾಹುತ ನಡೆದಿದೆ. ಆಲೂರಿನ ಪಾಳ್ಯ ಹೋಬಳಿ ಕರಿಗುಡ್ಡನಹಳ್ಳಿ ಗ್ರಾಮದಲ್ಲಿ ಹುಲ್ಲು ತುಂಬಿದ ಲಾರಿ ವಿದ್ಯುತ್ ತಂತಿಗೆ ತಗುಲಿದೆ. ಇದರ ಪರಿಣಾಮ ಲಾರಿಯಲ್ಲಿದ್ದ ಸುಮಾರು ಹುಲ್ಲುಗಳು ಸುಟ್ಟು ಭಸ್ಮವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ