ಮುಂಬೈ: ಸಾಮಾಜಿಕ ಜಾಲಾತಾಣದಲ್ಲಿ (Social Media) ಮೋಸ ಹೋಗುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಉಡುಗೊರೆ (Gift),ದೊಡ್ಡ ಆಫರ್, ಉದ್ಯೋಗ ಹೀಗೆ ಹಲವಾರು ಹೆಸರಿನಲ್ಲಿ ಮುಗ್ದ ಜನರನ್ನು ಟಾರ್ಗೆಟ್ ಮಾಡಿಕೊಂಡು ಸೈಬರ್ ಖದೀಮರು (cyber criminal)ಮೋಸ ಮಾಡುತ್ತಿದ್ದಾರೆ. ಇವರ ತಾಳಕ್ಕೆ ಸಿಕ್ಕಿಕೊಳ್ಳುವ ಜನರು ತಾವೂ ಕಷ್ಟ ಪಟ್ಟು ದುಡಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಪ್ರಕರಣ ಮುಂಬೈನಲ್ಲಿ (Mumbai)ನಡೆದಿದ್ದು, ಮಹಿಳೆಯೊಬ್ಬರು ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಇನ್ಸ್ಟಾಗ್ರಾಮ್ ಗೆಳೆಯನಿಂದ ವಿಶೇಷ ಉಡುಗೊರೆಯ ಆಮಿಷಕ್ಕೊಳಗಾಗಿ 3.68 ಲಕ್ಷ ರೂಪಾಯಿಗಳನ್ನು ಕಳೆದುಕೊಂದಿದ್ದಾರೆ.
ವಾರದ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಗೆಳೆತನ
ಮುಂಬೈ ನಿವಾಸಿಯಾಗಿರುವ 51 ವರ್ಷದ ವಿವಾಹಿತ ಮಹಿಳೆಗೆ ಇನ್ಸ್ಟಾಗ್ರಾಮ್ ಮೂಲಕ ವ್ಯಕ್ತಿಯೊಬ್ಬ ಅಲೆಕ್ಸ್ ಲೊರೆಂಜೊ ಎಂದು ಹೇಳಿಕೊಂಡು ವಾರದ ಹಿಂದೆಯಷ್ಟೆ ಪರಿಚಯ ಮಾಡಿಕೊಂಡಿದ್ದ. ನಂತರ ತಾನೂ ವ್ಯಾಲೆಂಟೈನ್ ಪ್ರಯುಕ್ತ ಗಿಫ್ಟ್ ಕಳುಹಿಸುತ್ತೇನೆ, ಇದಕ್ಕೆ ಡೆಲಿವರಿ ಚಾರ್ಜ್ ಆಗಿ 750 ಯೂರೋ (66,252 ರೂ) ನೀಡಿ ಸ್ವೀಕರಿಸುವಂತೆ ತಿಳಿಸಿದ್ದಾನೆ. ಮಹಿಳೆ ಆತ ಹೇಳಿದಂತೆ ಪಾವತಿ ಮಾಡಿದ್ದಾರೆ.
ಪಾರ್ಸಲ್ ಭಾರ ಮಿತಿ ಮೀರಿದೆ ಎಂದು 72,000 ರೂ ಸುಲಿಗೆ
ಮೊದಲು ಪಾರ್ಸಲ್ ಸ್ವೀಕರಿಸಲು ಮಹಿಳೆ ಪಾರ್ಸೆಲ್ ಚಾರ್ಚ್ ಆಗಿ 66,237 ರೂಪಾಯಿಗಳನ್ನು ಕಳುಹಿಸಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಕೊರಿಯರ್ ಕಂಪನಿಯ ಹೆಸರಿನಲ್ಲಿ ಮಹಿಳೆ ಮತ್ತೊಂದು ಸಂದೇಶ ಸ್ವೀಕರಿಸಿದ್ದು, ಅದರಲ್ಲಿ, ಪಾರ್ಸೆಲ್‌ನ ಭಾರ ಅನುಮತಿಸಿರುವ ಮಿತಿಗಿಂತ ಹೆಚ್ಚಾಗಿದೆ. ಆದ್ದರಿಂದ ಹೆಚ್ಚುವರಿಯಾಗಿ 72,000 ರೂಪಾಯಿಗಳನ್ನು ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಮಹಿಳೆ ಆ ಹಣವನ್ನೂ ಪಾವತಿ ಮಾಡಿದ್ದಾರೆ.
ಯುರೋಪಿಯನ್ ಕರೆನ್ಸಿ ಆಸೆ ತೋರಿಸಿ 2.6 ಲಕ್ಷ ರೂ ಮೋಸ
ಎರಡು ಬಾರಿ ಸಂತ್ರಸ್ತೆ ಹಣವನ್ನು ಕಳುಹಿಸಿದ ನಂತರ ಕೊರಿಯರ್ ಕಂಪನಿಯ ಪ್ರತಿನಿಧಿಗಳು ಕರೆ ಮಾಡಿ ಪಾರ್ಸೆಲ್‌ನಲ್ಲಿ ಯುರೋಪಿಯನ್ ಕರೆಸ್ಸಿ ನೋಟುಗಳಿವೆ ಇದೆ. ಆದ್ದರಿಂದ ಹಣ ವರ್ಗಾವಣೆ ಶುಲ್ಕ ಪಾವತಿಸುವುದನ್ನು ತಪ್ಪಿಸಲು 2,65,000 ಪಾವತಿಸಿ ಎಂದು ಸೂಚಿಸಿದ್ದಾರೆ. ಇದನ್ನೂ ನಂಬಿದ ಮಹಿಳೆ ಅವರು ಹೇಳಿದಂತೆ ಮತ್ತೆ ಹಣವನ್ನು ಪಾವತಿ ಮಾಡಿದ್ದಾರೆ.
ಮತ್ತೆ ಹಣ ಕೇಳಿದಾಗ ಅನುಮಾನ
ಅಲೆಕ್ಸ್ ಲೊರೆಂಜೋ ಕಳುಹಿಸಿರುವ ಪಾರ್ಸೆಲ್ ಸ್ವೀಕರಿಸಲು ಮತ್ತೆ 98,000 ರೂ ಪಾವತಿ ಮಾಡಬೇಕೆಂದು ಮತ್ತೊಂದು ಕರೆ ಬಂದಿದೆ. ಆಗ ಮಹಿಳೆಗೆ ತಾನೂ ಮೋಸ ಹೋಗಿರಬೇಕೆಂಬ ಅನುಮಾನ ಶುರುವಾಗಿದೆ. ತಕ್ಷಣ ಹಣ ಪಾವತಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಸಿಟ್ಟಾದ ಲೊರೆಂಜ್ ಬೆದರಿಸಲು ಶುರು ಮಾಡಿದ್ದಾನೆ.
ಫೋಟೋ ಶೇರ್ ಮಾಡುವುದಾಗಿ ಬೆದರಿಕೆ
ಹಣ ಕಳುಹಿಸದಿದ್ದರೆ ತನ್ನ ಬಳಿ ಇರುವ ಸಂತ್ರಸ್ತೆಯ ಫೋಟೋಗಳನ್ನು ಸಾಮಾಜಿ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಹಾಗೂ ಆಕೆಯ ಕುಟುಂಬದವರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇಷ್ಟೆಲ್ಲಾ ಆದ ನಂತರ ಹೆದರಿದ ಮಹಿಳೆ ಖೆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
420 ಕೇಸ್ ಪ್ರಕರಣ ದಾಖಲು
ಮಹಿಳೆ ನೀಡಿದ ದೂರಿನ ಮೇರೆಗೆ ಭಾನುವಾರ ಪೊಲೀಸರು ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಸನ್ 420 (ವಂಚನೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಸ್ಕಾಂ ಬಿಲ್ ಹೆಸರಲ್ಲಿ ಮೋಸ
ಬೆಸ್ಕಾಂ ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ವಂಚನೆ ಮಾಡುವ ಜಾಲ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ. ವೃದ್ಧರೊಬ್ಬರಿಗೆ ಕರೆ ಮಾಡಿ 1.98 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೃಷ್ಣಮೂರ್ತಿ ಎಂಬ ವ್ಯಕ್ತಿ ಮೊಬೈಲ್ ಫೋನ್ಗೆ ಕರೆ ಮಾಡಿರು ಖದೀಮರು ವಿದ್ಯುತ್ ಬಿಲ್ನಲ್ಲಿ ಬಾಕಿ ಉಳಿದಿದೆ, ತಕ್ಷಣ ಪಾವತಿ ಮಾಡದಿದ್ದರೆ ಮನೆಯ ಸಂಪರ್ಕ ಕಡಿತಗೊಳಿಸುತ್ತೇವೆ ಎಂದ ಹೆದರಿಸಿದ್ದಾರೆ. ಜೊತೆಗೆ ಆನ್‌ಲೈನ್ ಸಹಾಯವಾಣಿಗೆ ಕರೆ ಮಾಡಿ ಸಂಪರ್ಕ ಕಡಿತಗೊಳಿಸದಂತೆ ಮನವಿ ಮಾಡಲು ಮೊಂಬೈಲ್ ನಂಬರ್ ಕೊಟ್ಟಿದ್ದಾರೆ.
1.98 ಲಕ್ಷ ಮೋಸ
ಕೃಷ್ಣಮೂರ್ತಿ ಆ ನಂಬರ್ಗೆ ಕರೆ ಮಾಡಿದಾಗ ಮತ್ತೊಬ್ಬ ವ್ಯಕ್ತಿ ಮೊಬೈಲ್ಗೆ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡಿ 10 ರೂ ಪಾವತಿಸಲು ಹೇಳಿದ್ದಾರೆ. ನಂತರ ಉಳಿದ ಹಣವನ್ನು ಪಾವತಿ ಮಾಡಲು ತಿಳಿಸಿದ್ದಾರೆ. ಅದರಂತೆ ಕೃಷ್ಣ ಮೂರ್ತಿ 10 ರೂ ಪಾವತಿ ಮಾಡಿದ್ದಾರೆ. ಕೆಲವೇ ಸಮಯದಲ್ಲಿ ಅವರ ಖಾತೆಯಲ್ಲಿ 1.98 ಲಕ್ಷ ರೂ ಮೊತ್ತವನ್ನು ಹಂತ ಹಂತವಾಗಿ ಲಪಟಾಯಿಸಲಾಗಿದೆ. ಕೊನೆಗೆ ಮೋಸ ಹೋದ ಅವರು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ