• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಮಕ್ಕಳ ಬಾತ್‌ರೂಂನಲ್ಲೇ ಕ್ಯಾಮೆರಾ ಇಟ್ಟಿದ್ದ ಪಾಪಿ ತಂದೆ! ಆತನ ಮೊಬೈಲ್​ನಲ್ಲಿತ್ತು 900 ಅಶ್ಲೀಲ ವಿಡಿಯೋಗಳು

Crime News: ಮಕ್ಕಳ ಬಾತ್‌ರೂಂನಲ್ಲೇ ಕ್ಯಾಮೆರಾ ಇಟ್ಟಿದ್ದ ಪಾಪಿ ತಂದೆ! ಆತನ ಮೊಬೈಲ್​ನಲ್ಲಿತ್ತು 900 ಅಶ್ಲೀಲ ವಿಡಿಯೋಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತಂದೆ ತಾಯಿ ಎಂದರೆ ಇಎಲ್ಲರಿಗೂ ಪಂಚಪ್ರಾಣ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಮಕ್ಕಳನ್ನು ಬಳಸಿಕೊಂಡ ರೀತಿ ನೋಡಿದ್ರೆ ನೋಡುಗರನ್ನೇ ಒಮ್ಮೆ ಅಚ್ಚರಿಗೊಳಿಸುತ್ತೆ. ಹಾಗಿದ್ರೆ ಅಷ್ಟಕ್ಕೂ ಆತ ಮಾಡಿದ್ದು ಏನು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

 • Share this:

  ಮಕ್ಕಳು ತಂದೆ ತಾಯಿಯನ್ನು (Parents) ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ತಂದೆ ತಾಯಿಗಳಿಗೂ ಅಷ್ಟೇ ಮಕ್ಕಳೆಂದರೆ (Childrens) ತುಂಬಾ ಪ್ರೀತಿ. ಆದರೆ ಇದು ಅತಿಯಾಗಲೂ ಬಾರದು. ತಂದೆಗೆ ತಕ್ಕ ಮಕ್ಕಳು ಎಂಬ ನಾವು ಹಲವಾರು ಸಂಗತಿಗಳನ್ನು ಕೇಳಿರುತ್ತೇವೆ. ಇನ್ನು ಅದಕ್ಕೆ ತಕ್ಕಂತೆ ಮಕ್ಕಳು ಕೇಳಿದ್ದನ್ನೆಲ್ಲಾ ತಂದೆಯಾದವನು ಈಡೇರಿಸುತ್ತಾರೆ. ಇನ್ನು ಒಂದು ಕುಟುಂಬ ಸಂತೋಷವಾಗಿದ್ದರೆ ಆ ಮನೆ ಎಷ್ಟೊಂದು ಖುಷಿಯಿಂದಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ರತಿ ತನ್ನ ಸ್ವಾರ್ಥಕ್ಕಾಗಿ ಮಕ್ಕಳನ್ನೇ ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ. ಹೆಂಡತಿ, ಮಕ್ಕಳೆಂದರೆ ಪ್ರತೀತಿಯಿಂದ ನೋಡುವ ಈ ಕಾಲದಲ್ಲಿ ಇಲ್ಲೊಬ್ಬ ಮಕ್ಕಳು ಸ್ನಾನ ಮಾಡುವ ಬಾತ್​ರೂಂನಲ್ಲೇ ಕ್ಯಾಮೆರಾವನ್ನು (Bath Room Camera) ಇಟ್ಟಿದ್ದಾನೆ.


  ತಂದೆ ತಾಯಿ ಎಂದರೆ ಎಲ್ಲರಿಗೂ ಪಂಚಪ್ರಾಣ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಮಕ್ಕಳನ್ನು ಬಳಸಿಕೊಂಡ ರೀತಿ ನೋಡಿದ್ರೆ ನೋಡುಗರನ್ನೇ ಒಮ್ಮೆ ಅಚ್ಚರಿಗೊಳಿಸುತ್ತೆ. ಹಾಗಿದ್ರೆ ಅಷ್ಟಕ್ಕೂ ಆತ ಮಾಡಿದ್ದು ಏನು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


  ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಘಟನೆ


  ಇನ್ನು ಈ ಪ್ರಕರಣ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. 34 ವರ್ಷದ ವ್ಯಕ್ತಿಯೊಬ್ಬರು ತಮ್ಮ ಫೋನ್‌ನಲ್ಲಿ ಆಗಾಗ ಅಶ್ಲೀಲ ವಿಡಯೋಗಳನ್ನು ವೀಕ್ಷಿಸುತ್ತಿದ್ದರು. ಈ ವಿಷಯ ಹೆಂಡತಿಗೂ ಗೊತ್ತಿದ್ದರೂ ನಿರ್ಲಕ್ಷಿಸುತ್ತಿದ್ದಳು. ಆದರೆ ಒಂದು ದಿನ ಅದು ತುಂಬಾ ವಿಪರೀತವಾಗ್ಬಹುದು ಎಂದು ಊಹಿಸಿಯೂ ಇರಲಿಲ್ಲ.


  ಇದನ್ನೂ ಓದಿ: AIADMK ಜೊತೆ ಮೈತ್ರಿ ಮಾಡಿಕೊಂಡರೆ ನಾನು ಬಿಜೆಪಿಯನ್ನೇ ತೊರೆಯುತ್ತೇನೆ: ಅಣ್ಣಾಮಲೈ ಎಚ್ಚರಿಕೆ!


  ಗೆಸ್ಟ್​ ಬಾತ್​​ ರೂಂನಲ್ಲಿ ಕ್ಯಾಮೆರಾ ಅಳವಡಿಕೆ


  ಸಾಮಾನ್ಯವಾಗಿ ಒಂದು ಮನೆಯಲ್ಲಿ ಮನೆಗೆ ಬಂದ ಗೆಸ್ಟ್​​ಗಾಗಿ ವಿಶೇಷ ಬಾತ್​​ ರೂಂ ಅನ್ನು ರೆಡಿ ಮಾಡಿರುತ್ತಾರೆ. ಈ ಪದ್ಧತಿ ವಿದೇಶದಲ್ಲಂತೂ ಹೆಚ್ಚಾಗಿಯೇ ಇದೆ. ಅದೇ ರೀತಿ ಈ ವ್ಯಕ್ತಿಯ ಮನೆಯಲ್ಲಿಯೂ ಗೆಸ್ಟ್ ಬಾತ್​ ರೂಂ ಇತ್ತು. ಒಂದು ದಿನ ಹೆಂಡತಿ ಗೆಸ್ಟ್​ ಬಾತ್​ ರೂಂ ಕ್ಲೀನ್​ ಮಾಡುವ ಸಂದರ್ಭದಲ್ಲಿ ತನ್ನ ಗಂಡ ಇಟ್ಟಿದ್ದಂತಹ ಕ್ಯಾಮೆರಾ ಹೆಂಡತಿಯ ಕಣ್ಣಿಗೆ ಬಿದ್ದಿದೆ. ತಕ್ಷಣ ಗಂಡನನ್ನು ಕರೆದು ಕೇಳಿದಾಗ ಮೊದಲು ಒಪ್ಪಲಿಲ್ಲ, ಆದರೆ ನಂತರದಲ್ಲಿ ಒಪ್ಪಿಕೊಂಡು ಶೀಘ್ರದಲ್ಲೇ ತೆಗೆಯುತ್ತೇನೆ ಎಂದು ಹೇಳಿದ್ದರು. ಇದನ್ನು ಕೇಳಿ ಹೆಂಡತಿ ಸಹ ಸುಮ್ಮನಿದ್ದಳು.


  ಸ್ವಂತ ಮಕ್ಕಳ ಅಶ್ಲೀಲ ವಿಡಯೋ ರೆಕಾರ್ಡ್​ ಮಾಡಿದ ವ್ಯಕ್ತಿ


  ಗೆಸ್ಟ್​ ಬಾತ್​ ರೂಂ ನಲ್ಲಿ ಕ್ಯಾಮೆರಾ ನೋಡಿದವಳು ತಕ್ಷಣ ಮನೆಯಿಡೀ ಹುಡುಕಲು ಆರಂಭಿಸಿದಳು. ಚೆಕ್ ಮಾಡುವಾಗ ಆ ವ್ಯಕ್ತಿ ಮಕ್ಕಳ ಬಾತ್​ ರೂಂನಲ್ಲಿಯೂ ಕ್ಯಾಮೆರಾ ಅಳವಡಿಸಿದ್ದಾನೆಂಬುದು ತಿಳಿದುಬಂದಿದೆ. ಇದನ್ನು ನೋಡಿದ ಪತ್ನಿಯ ಕೋಪ ನೆತ್ತಿಗೇರಿತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


  ಸಾಂಕೇತಿಕ ಚಿತ್ರ


  ತನಿಖೆ ನಡೆಸಿದಾಗ, ಈ ವ್ಯಕ್ತಿಯು ಎರಡೂ ಸ್ನಾನಗೃಹಗಳ ಕ್ಯಾಮೆರಾ ಅಳವಡಿಸಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಮೂಲಕ ಅವನು ತನ್ನ ಸ್ವಂತ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಹ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಆ ರೆಕಾರ್ಡೆಡ್​ ವಿಡಿಯೋಗಳನ್ನು ಆತ ನೋಡುತ್ತಿದ್ದನು ಎಂದು ಹೇಳಲಾಗಿದೆ. ಆದರೆ ಬೇರೆಯವ್ರಿಗೆ ಶೇರ್​ ಮಾಡಿದ್ದಾನೆಯೋ, ಇಲ್ಲವೋ? ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


  900 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಹೊಂದಿದ್ದ


  ಕ್ಯಾಮೆರಾಗಳ ಹಾರ್ಡ್ ಡ್ರೈವ್‌ಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದಾಗ ಆತನ ಹೆಂಡತಿ ಇನ್ನಷ್ಟು ಆಶ್ಚರ್ಯಚಕಿತಳಾದಳು . ಈ ವ್ಯಕ್ತಿ ತನ್ನ ಸ್ವಂತ ಮಕ್ಕಳ 900 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಮತ್ತು ಚಿತ್ರಗಳನ್ನು ಮಾಡಿದ್ದಾನೆ.
  ಫೋರೆನ್ಸಿಕ್ ತನಿಖೆಯ ವರದಿ ಪ್ರಕಾರ, ಕೆಲವೇ ತಿಂಗಳುಗಳಲ್ಲಿ ಎಲ್ಲಾ ವಿಡಿಯೋಗಳನ್ನು ಸ್ನಾನಗೃಹದಲ್ಲೇ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅನೇಕ ವಿಡಿಯೋಗಳಲ್ಲಿ ಮಕ್ಕಳ ಜೊತೆಗೆ ದೊಡ್ಡವರೂ ಇದ್ದರು. ಇನ್ನು ಅವುಗಳ ಜೊತೆಗೆ ಮನೆಗೆ ಬರುವ ಅತಿಥಿಗಳ ಅಶ್ಲೀಲ ಚಿತ್ರಗಳೂ ಇದ್ದವು. ಆದರೆ ಇವೆಲ್ಲಾ ತನಿಖೆಯ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

  Published by:Prajwal B
  First published: