ಎರ್ನಾಕುಲಂ, ಕೇರಳ: ಸುಮಾರು ಒಂದೂವರೆ ವರ್ಷದ ಹಿಂದೆ ಪತ್ನಿಯನ್ನು ಕೊಂದು ಮನೆಯ ಆವರಣದಲ್ಲಿ ಹೂತಿಟ್ಟಿದ್ದ ಕೇರಳದ ಎರ್ನಾಕುಲಂ (Ernakulam) ಮೂಲದ ಆರೋಪಿಯೊಬ್ಬನನ್ನು ಪೊಲೀಸರು 18 ತಿಂಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂಜರಕ್ಕಲ್ (Njarakkal) ಪೊಲೀಸರು ಆರೋಪಿ ಮೇಲೆ ಸತತ ಒಂದು ವರ್ಷ ನಿಗಾವಹಿಸಿ ಎರ್ನಾಕುಲಂನಲ್ಲಿರುವ ಆತನ ಮನೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋನ್ ಕರೆ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಸಂಜೀವ್ ಎಂಬಾತ ಪತ್ನಿ ರಮ್ಯಾಳನ್ನು ಬರ್ಬರವಾಗಿ ಹತ್ಯೆ (Murder) ಮಾಡಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ಮನೆಯ ಆವರಣದಲ್ಲೇ ಗುಂಡಿ ತೋಡಿ ಸಮಾಧಿ ಮಾಡಿ, ಅದೇ ಜಾಗದಲ್ಲಿ ಒಂದು ವರ್ಷ ವಾಸ ಮಾಡಿದ್ದಾನೆ.
ಸಂಜೀವ್ ಪತ್ನಿ ರಮ್ಯಾ 2021ರ ಆಗಸ್ಟ್ ತಿಂಗಳಲ್ಲಿ ಕಾಣೆಯಾಗಿದ್ದರು. ಆದರೆ ಆತ 2022ರ ಫೆಬ್ರವರಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನಾಪತ್ತೆ ದಾಖಲಿಸಿದ್ದ. ಪ್ರಕರಣವನ್ನು ತನಿಖೆ ನಡೆಸಿದ ವಿಶೇಷ ಪೊಲೀಸ್ ತಂಡ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ ಆರೋಪಿಯನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದೆ.
ಒಂದು ವರ್ಷ ನಿಗಾ ಇರಿಸಿದ್ದ ಪೊಲೀಸ್
ಪತ್ನಿ ಕಾಣೆಯಾದ 7 ತಿಂಗಳ ನಂತರ ದೂರು ನೀಡಿದ್ದ ಆರೋಪಿ ನಡೆದಿರುವ ಘಟನೆಗೂ ತನಗೂ ಯಾವುದೆ ಸಂಬಂಧ ಇಲ್ಲದವನಂತೆ ನಟಿಸುತ್ತಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಅವನನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ್ದಾರೆ. ಸತತ ಒಂದು ವರ್ಷದಿಂದ ಆತನ ಮೇಲೆ ನಿಗಾ ಇರಿಸಿದ್ದರು. ಆದರೆ ಸಾಕ್ಷಿಗಳಿಲ್ಲದ ಕಾರಣ ಆತನನ್ನು ವಿಚಾರಣೆ ನಡೆಸಿರಲಿಲ್ಲ. ವಿಚಾರಣೆಗೆ ಒಳಪಡಿಸಲು ಅಗತ್ಯವಾದ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ ನಂತರ ಪೊಲೀಸರ ತಂಡ ಸಂಜೀವ್ನನ್ನು ಬಂಧಿಸಿದೆ.
ಕೊಲೆಗೆ ಕಾರಣ
ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ದೂರವಾಣಿ ಕರೆಯ ವಿಚಾರದಲ್ಲಿ, ಕೊಲೆಯಾದ ರಮ್ಯಾ ಹಾಗೂ ಪತಿ ಸಜೀವ್ ಜೊತೆ ಜಗಳ ಮಾಡಿಕೊಂಡಿದ್ದು, ಈ ಜಗಳವೇ ವಿಕೋಪಕ್ಕೆ ತಿರುಗಿ ಸಂಜೀವ್ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ರಮ್ಯಾಳ ಶವವನ್ನು ಮನೆಯ ಪಕ್ಕದಲ್ಲೇ ಸಮಾಧಿ ಮಾಡಿದ್ದು ಅದೇ ಮನೆಯಲ್ಲಿ ಒಂದೂವರೆ ವರ್ಷ ವಾಸವಾಗಿದ್ದಾನೆ. ಇದೇ ಕಾರಣದಿಂದ ಈತನೇ ಕೊಲೆ ಮಾಡಿದ್ದಾನೆಂಬ ಅನುಮಾನ ಯಾರಿಗೂ ಬಂದಿರಲಿಲ್ಲ.
ಎರಡನೇ ಮದುವೆಗೆ ಸಿದ್ಧತೆ
ತನ್ನ ಸಂಬಂಧಿಕರು ಹಾಗೂ ಸ್ಥಳೀಯರ ಜೊತೆಗೆ ಪತ್ನಿ ರಮ್ಯಾ ಯಾರ ಜೊತೆಯಲ್ಲೋ ಓಡಿ ಹೋಗಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಪತ್ನಿ ನಾಪತ್ತೆಯಾಗಿರುವ ನೆಪ ಹೇಳಿ ಸಂಜೀವ್ ಎರಡನೇ ವಿವಾಹಕ್ಕೆ ಸಿದ್ಧತೆ ನಡೆಸಲಾರಂಭಿಸಿದ್ದಾನೆ. ಪೊಲೀಸರು ತಮಗೆ ಸಿಕ್ಕಿದ್ದ ಸಾಕ್ಷಿಯೊಂದಿಗೆ ಸಂಜೀವ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಪತ್ನಿಯನ್ನು ತಾನೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮನೆಯ ಆವರಣದಲ್ಲಿ ಮಹಿಳೆಯ ಶವ ಸಿಕ್ಕಿದ್ದ ಆಧಾರದ ಮೇಲೆ ಸಂಜೀವ್ನನ್ನು ಕೊಲೆ ಪ್ರಕರಣದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯನ್ನು ಮನೆಯಲ್ಲೇ ಹೂತಿಟ್ಟಿದ್ದ ಪತ್ನಿ
ಹೈದರಾಬಾದ್ನಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಮಹಿಳೆಯೊಬ್ಬಳು ಮೊದಲ ಪತಿಯಿಂದ ಬೇರ್ಪಟ್ಟು ಎರಡನೇ ವಿವಾಹವಾಗಿದ್ದಳು. ಆದರೆ ಮಹಿಳೆಯನ್ನು ವಿವಾಹವಾಗಿದ್ದ ವ್ಯಕ್ತಿ ಮಹಿಳೆಯ ಮೊದಲ ಪತಿಯಿಂದ ಜನಿಸಿದ್ದ ಹೆಣ್ಣುಮಕ್ಕಳ ಜೊತೆಗೆ ಕುಡಿದು ಬಂದು ಅನುಚಿತವಾಗಿ ವರ್ತಿಸುತ್ತಿದ್ದನು. ಇದರಿಂದ ಕೋಪಗೊಂಡು ಮಹಿಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಲ್ಲದೆ ತಾವು ವಾಸವಿದ್ದ ಮನೆಯಲ್ಲೆ ಪತಿಯ ಶವವನ್ನು ಹೂತಿಟ್ಟಿದ್ದಳು. ಮಗ ಕಾಣೆಯಾದನಂತರ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಕೊಲೆಯಾದವನ ಪತ್ನಿಯನ್ನು ವಿಚಾರಣೆ ನಡೆಸಿದಾಗ ಆಕೆ ನಿಜಾಂಶವನ್ನು ಬಾಯ್ಬಿಟ್ಟಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ