• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಮಗಳನ್ನೇ ಹೊಡೆದು ಕೊಂದ ತಂದೆ! ಗಂಡನ ಬಿಟ್ಟು ಬಂದವಳ ಪಾಲಿಗೆ ಯಮನಾದ ಅಪ್ಪ!

Crime News: ಮಗಳನ್ನೇ ಹೊಡೆದು ಕೊಂದ ತಂದೆ! ಗಂಡನ ಬಿಟ್ಟು ಬಂದವಳ ಪಾಲಿಗೆ ಯಮನಾದ ಅಪ್ಪ!

ಮಗಳನ್ನೇ ಕೊಂದ ತಂದೆ!

ಮಗಳನ್ನೇ ಕೊಂದ ತಂದೆ!

ಈ ಹಿಂದೆ ವ್ಯಕ್ತಿಯೊಬ್ಬನನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಆಶಾ ಆತನನ್ನು ಮದುವೆಯಾಗಿದ್ದಳು. ಬಳಿಕ ಗಂಡನೊಂದಿಗೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು. ಹೀಗೆ ತವರು ಸೇರಿದ್ದ ಮಗಳಿಗೆ ಆಕೆಯ ತಂದೆಯೇ ಯಮನಂತೆ ಆಗಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಮಗಳ ಹತ್ಯೆಗೆ ಕಾರಣ ಏನು ಎನ್ನುವ ಸ್ಫೋಟಕ ವಿಚಾರವನ್ನು ತಂದೆ ಬಾಯ್ಬಿಟ್ಟಿದ್ದಾನೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ತಂದೆಯೊಬ್ಬ (father) ತನ್ನ ಮಗಳನ್ನೇ (daughter) ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ (Bengakuru) ನಡೆದಿದೆ. ಕೋಡಿಗೆಹಳ್ಳಿ ಪೊಲೀಸ್ ಠಾಣೆ (Kodigehalli Police Station) ವ್ಯಾಪ್ತಿಯ ಧನಲಕ್ಷ್ಮಿ ಲೇಔಟ್‌ನಲ್ಲಿ ಇಂಥದ್ದೊಂದು ಅಮಾನುಷ ಘಟನೆ ನಡೆದಿದೆ. 32 ವರ್ಷದ ಆಶಾ ಎಂಬಾಕೆಯನ್ನು ಆಕೆಯ ತಂದೆ 60 ವರ್ಷದ ರಮೇಶ್ ಎಂಬಾತ ಕೊಲೆ ಮಾಡಿದ್ದಾನೆ. ಈ ಹಿಂದೆ ವ್ಯಕ್ತಿಯೊಬ್ಬನನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಆಶಾ ಆತನನ್ನು ಮದುವೆಯಾಗಿದ್ದಳು. ಬಳಿಕ ಗಂಡನೊಂದಿಗೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು. ಹೀಗೆ ತವರು ಸೇರಿದ್ದ ಮಗಳಿಗೆ ಆಕೆಯ ತಂದೆಯೇ ಯಮನಂತೆ ಆಗಿದ್ದಾನೆ. ಇದೀಗ ಆರೋಪಿ ರಮೇಶ್‌ನನ್ನು ಬಂಧಿಸಿರುವ ಕೋಡಿಗೆಹಳ್ಳಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗಳ ಹತ್ಯೆಗೆ ಕಾರಣ ಏನು ಎನ್ನುವ ಸ್ಫೋಟಕ ವಿಚಾರವನ್ನು ತಂದೆ ಬಾಯ್ಬಿಟ್ಟಿದ್ದಾನೆ.


ತಂದೆ ಬಿಇಎಲ್ ನಿವೃತ್ತ ಉದ್ಯೋಗಿ, ಮಗಳು ಉಪನ್ಯಾಸಕಿ


ಆರೋಪಿ ರಮೇಶ್ ನಿವೃತ್ತ ಬಿಇಎಲ್ ಉದ್ಯೋಗಿಯಾಗಿದ್ದರು. ಮೃತ ಆಶಾ ಫ್ಯಾಶನ್ ಡಿಸೈನಿಂಗ್‌ನಲ್ಲಿ ಎಂಎಸ್ಸಿ ಪದವಿ ಮುಗಿಸಿದ್ದು, ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳಂತೆ. 2020ರಲ್ಲಿ ಪ್ರೀತಿಸಿ ಆಶಾ ಮದುವೆಯಾಗಿದ್ದಳಂತೆ.


ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದ್ವೆಯಾಗಿದ್ದ ಆಶಾ


ಮೃತ ಆಶಾ ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಪ್ರೀತಿ ಮದುವೆಯಾಗಿದ್ದರು. ಇವರ ಪ್ರೀತಿಗೆ ತಂದೆ, ತಾಯಿ ಸೇರಿದಂತೆ ಮನೆಯವರೆಲ್ಲ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಯಾವುದನ್ನೂ ಲೆಕ್ಕಿಸದ ಆಶಾ, ಮನೆಯವರನ್ನು ಧಿಕ್ಕರಿಸಿ ಪ್ರೀತಿಸಿದವನೊಂದಿಗೆ ಹೋಗಿ, ಮದುವೆ ಆಗಿದ್ದಳು.


ಇದನ್ನೂ ಓದಿ: Marriage: ಪ್ರೇಯಸಿಯ ಮದುವೆಗೆ ಬಂದು ಕತ್ತು ಕುಯ್ದುಕೊಂಡ ಯುವಕ; ಮಂಟಪದಿಂದ ಓಡಿ ಹೋದ ವರ


ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದ ಆಶಾ


ಆದರೆ ಆಶಾ ಪ್ರೇಮ ವಿವಾಹ ತುಂಬಾ ದಿನಗಳ ಕಾಲ ಇರಲಿಲ್ಲ. ಪ್ರೀತಿಸಿ ಮದುವೆಯಾಗಿದ್ದ ಗಂಡನ ಜೊತೆ ವೈಮನಸ್ಸು ಬಂದು, ಆಶಾ ಆತನನ್ನು ತೊರೆದಿದ್ದಳು. ಬಳಿಕ ತಂದೆಯ ಮನೆಯಲ್ಲೇ ಉಳಿದುಕೊಂಡಿದ್ದಳು.


ತವರುಮನೆಯಲ್ಲಿ ತಂದೆ, ತಾಯಿ, ತಂಗಿಗೆ ಕಿರುಕುಳ


ಗಂಡನ ಬಿಟ್ಟು ತವರು ಮನೆ ಸೇರಿದ್ದ ಆಶಾ, ಅಲ್ಲಿ ಬೇರೆಯದ್ದೇ ರೂಪ ತಾಳಿದ್ದಳಂತೆ. ಮನೆಯಲ್ಲಿದ್ದ ತಂದೆ, ತಾಯಿ ಹಾಗೂ ತಂಗಿಗೆ ಪ್ರತಿನಿತ್ಯ ವಿನಾಕಾರಣ ಕಿರುಕುಳ ನೀಡುತ್ತಿದ್ದಳಂತೆ.


ಚಾಕು ತೋರಿಸಿ ಧಮ್ಕಿ ಹಾಕಿದ್ದ ಆಶಾ


ನಿನ್ನೆಯೂ ಆಶಾ ತಂದೆ, ತಾಯಿ ಹಾಗೂ ತಂಗಿ ಜೊತೆ ಜಗಳ ಮಾಡಿದ್ದಾಳೆ. ನಿನ್ನೆ ರಾತ್ರಿ ಮನೆ ಮಂದಿ ಜೊತೆ ಜಗಳವಾಡಿದ್ದಾಳೆ. ಚಾಕು ಹಿಡಿದುಕೊಂಡು ಮನೆಯವರಿಗೆಲ್ಲ ಧಮ್ಕಿ ಹಾಕಿದ್ದಳಂತೆ. ಹೀಗಾಗಿ ಭಯಗೊಂಡಿದ್ದ ಮನೆಯವರು ಆಕೆ ಮಲಗುವವರೆಗೆ ಕಾದಿದ್ದರು.


ದೊಣ್ಣೆಯಿಂದ ಹೊಡೆದು ಮಗಳನ್ನು ಕೊಲೆಗೈದ ತಂದೆ


ಮಗಳ ವರ್ತನೆಯಿಂದ ಕಿರಿಕಿರಿಗೆ ಒಳಗಾಗಿದ್ದ ತಂದೆ ರಮೇಶ್ ನಿನ್ನೆ ದುಡುಕಿನ ನಿರ್ಧಾರ ಕೈಗೊಂಡಿದ್ದರು. ಆಶಾ ಮಲಗಿದ್ದಾಗ ಆಕೆಯ ತಲೆ ಮೇಲೆ ದೊಣ್ಣೆಯಿಂದ ಹೊಡೆದು ರಮೇಶ್ ಕೊಲೆ ಮಾಡಿದ್ದಾರೆ. ಈ ವೇಳೆ ತೀವ್ರ ಆಶಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಪೊಲೀಸರಿಂದ ಆರೋಪ ತಂದೆ ಬಂಧನ


ರಮೇಶ್ ಕೋಪದಲ್ಲಿ ಕೊಲೆ ಮಾಡೋದೇನೋ ಮಾಡಿಬಿಟ್ಟು, ಕೊನೆಗೆ ಆತಂಕಕ್ಕೆ ಒಳಗಾಗಿದ್ದಾರೆ. ಈ ವೇಳೆ ಅಸಹಜ ಸಾವು ಎಂದು ಪೊಲೀಸರಿಗೆ ಕುಟುಂಬಸ್ಥರೆಲ್ಲ ಸೇರಿ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಕೋಡಿಗೆಹಳ್ಳಿ ಠಾಣೆ ಪೊಲೀಸರು ಇದೊಂದು ಕೊಲೆ ಅಂತ ಪತ್ತೆ ಹಚ್ಚಿದ್ದಾರೆ. ಸದ್ಯ ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ತಂದೆ ರಮೇಶ್‌ರನ್ನು  ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು