• ಹೋಂ
  • »
  • ನ್ಯೂಸ್
  • »
  • Crime
  • »
  • Child Marriage: ಅಪ್ರಾಪ್ತ ಹುಡುಗಿಯ ಮದುವೆ ಮಾಡಿಸಿದ್ದಕ್ಕೆ ಅಮ್ಮನ ಮೇಲೆ ಕೇಸ್, ವರನಿಗೂ ಜೈಲೂಟ!

Child Marriage: ಅಪ್ರಾಪ್ತ ಹುಡುಗಿಯ ಮದುವೆ ಮಾಡಿಸಿದ್ದಕ್ಕೆ ಅಮ್ಮನ ಮೇಲೆ ಕೇಸ್, ವರನಿಗೂ ಜೈಲೂಟ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಕಾನೂನುಗಳು ಅಸ್ಥಿತ್ವದಲ್ಲಿದ್ದರೂ ಸಹ ಇನ್ನೂ ಭಾರತ ದೇಶದಲ್ಲಿ ಬಾಲ್ಯ ವಿವಾಹಗಳು ಪ್ರಚಲಿತದಲ್ಲಿರುವುದು ನಿಜಕ್ಕೂ ದುರದೃಷ್ಟಕರ. ಈಗ ಇಲ್ಲಿಯೂ ಸಹ ಒಬ್ಬ ಅಪ್ರಾಪ್ತ ಹುಡುಗಿಯ ಮದುವೆ ಮಾಡಿಸಿದ್ದಾರೆ ನೋಡಿ.

  • Share this:

ಬಾಲ್ಯ ವಿವಾಹ (Child Marriage) ಮತ್ತು ಅಪ್ರಾಪ್ತ ಹುಡುಗಿ (Minor Girl) ಅಥವಾ ಹುಡುಗನಿಗೆ ಮದುವೆ ಮಾಡಿಸಿದರೆ ಅದು ಕಾನೂನಿನ ಪ್ರಕಾರ ಅಪರಾಧ. ಅಪ್ಪಿ ತಪ್ಪಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡರೆ ಕಠಿಣವಾದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈ ವಿಷಯ ಚೆನ್ನಾಗಿ ಗೊತ್ತಿದ್ದರೂ ಸಹ ಇನ್ನೂ ನಮ್ಮ ಭಾರತ ದೇಶದಲ್ಲಿ (India) ಕೆಲವು ರಾಜ್ಯಗಳಲ್ಲಿ ಪೋಷಕರು ತಮ್ಮ ಮಕ್ಕಳ ಬಾಲ್ಯ ವಿವಾಹಗಳನ್ನು ಕದ್ದು ಮುಚ್ಚಿ ಮಾಡಿಸುತ್ತಲೇ ಇದ್ದಾರೆ. ಭಾರತೀಯ ಕಾನೂನಿನ ಪ್ರಕಾರ, ಮಹಿಳೆ ಅಥವಾ ಪುರುಷನು ಮದುವೆಯಾಗಬೇಕಾದರೆ (Marriage) ಅವರಿಬ್ಬರು 21 ವರ್ಷ ವಯಸ್ಸಿನವರಾಗಿರಬೇಕು. ಇದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅದನ್ನು ಒಂದು ರೀತಿಯಲ್ಲಿ ಬಾಲ್ಯ ವಿವಾಹ ಅಂತಾನೆ ಪರಿಗಣಿಸಲಾಗುತ್ತದೆ ಅಂತ ಹೇಳಲಾಗುತ್ತದೆ.


ಈ ರೀತಿಯ ಬಾಲ್ಯ ವಿವಾಹಗಳು ಹೆಚ್ಚಾಗಿ ಅಪ್ರಾಪ್ತ ಹುಡುಗಿಯರನ್ನು ಒಳಗೊಂಡಿರುತ್ತವೆ, ಅವರಲ್ಲಿ ಅನೇಕರು ತುಂಬಾನೇ ಕೆಟ್ಟ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿರುವವರಾಗಿರುತ್ತಾರೆ. ಇನ್ನೂ ಕೆಲವೊಂದು ಘಟನೆಗಳಲ್ಲಿ ಪೋಷಕರು ಹಣದ ಆಮಿಷಕ್ಕಾಗಿ ಈ ರೀತಿಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸುತ್ತಾರೆ.


ಅಪ್ರಾಪ್ತ ಮಗಳ ಮದುವೆ ಮಾಡಿಸಿದ್ದಾರೆ ನೋಡಿ ಈ ಮಹಿಳೆ


ಇಷ್ಟೆಲ್ಲಾ ಕಾನೂನುಗಳು ಅಸ್ಥಿತ್ವದಲ್ಲಿದ್ದರೂ ಸಹ ಇನ್ನೂ ಭಾರತ ದೇಶದಲ್ಲಿ ಬಾಲ್ಯ ವಿವಾಹಗಳು ಪ್ರಚಲಿತದಲ್ಲಿರುವುದು ನಿಜಕ್ಕೂ ದುರದೃಷ್ಟಕರ. ಈಗ ಇಲ್ಲಿಯೂ ಸಹ ಒಬ್ಬ ಅಪ್ರಾಪ್ತ ಹುಡುಗಿಯ ಮದುವೆ ಮಾಡಿಸಿದ್ದಾರೆ ನೋಡಿ.


ಇದನ್ನೂ ಓದಿ: ‘ಹಿಂದಿ ಬೇಡ, ತಮಿಳಿನಲ್ಲಿ ಮಾತನಾಡು’ ಎಂದು ವೇದಿಕೆಯಲ್ಲೇ ಪತ್ನಿಗೆ ಹೇಳಿದ ಎಆರ್ ರೆಹಮಾನ್; ವಿಡಿಯೋ ವೈರಲ್‌


ಖನ್ನಾ ಪೊಲೀಸರು, 17 ವರ್ಷದ ಅಪ್ರಾಪ್ತ ಮಗಳನ್ನು 31 ವರ್ಷದ ವ್ಯಕ್ತಿಗೆ ಮದುವೆ ಮಾಡಿಕೊಟ್ಟ ಆರೋಪದ ಮೇಲೆ ಖನ್ನಾದ ಉತ್ತಮ್ ನಗರದ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಈ ಮದುವೆಯ ಬಗ್ಗೆ ದೂರು ದಾಖಲಿಸಿದ್ದು ಮನೆಯ ಮಾಲೀಕರಂತೆ


ಆರೋಪಿ ಮಹಿಳೆಯ ಮನೆಯ ಮಾಲೀಕರು ಈ ವಿಷಯದಲ್ಲಿ ದೂರು ದಾಖಲಿಸಿದ್ದು, ಆರು ತಿಂಗಳ ತನಿಖೆಯ ನಂತರ ಈಗ ಎಫ್ಐಆರ್ ದಾಖಲಿಸಲಾಗಿದೆ. ಲುಧಿಯಾನ ಜಿಲ್ಲೆಯ ಜೊನೆವಾಲ್ ಗ್ರಾಮದವನಾದ ವರನ ವಿರುದ್ಧವೂ ಸಹ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಪೊಲೀಸರು.


ಆರೋಪಿಗಳನ್ನು ಉತ್ತಮ್ ನಗರದ ಅನಿತಾ ದೇವಿ ಮತ್ತು ಜೋನೆವಾಲ್ ನ ಮುಖೇಶ್ ಗಿರಿ ಎಂದು ಗುರುತಿಸಲಾಗಿದೆ. ಖನ್ನಾದ ಉತ್ತಮ್ ನಗರದ ಬಬ್ಲಿ ಅವರ ಹೇಳಿಕೆಯ ನಂತರ ಈ ಎಫ್ಐಆರ್ ಅನ್ನು ದಾಖಲಿಸಲಾಗಿದೆ. ಅನಿತಾ ದೇವಿ ತನ್ನ ಪತಿ ಆನಂದ್ ಗಿರಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ತನ್ನ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಮೇ 25, 2022 ರಂದು ಮುಖೇಶ್ ಗಿರಿ ಅವರೊಂದಿಗೆ ತನ್ನ ಮಗಳ ಮದುವೆಗಾಗಿ ಅನಿತಾ ದೇವಿ ತನ್ನಿಂದ ಸ್ವಲ್ಪ ಹಣವನ್ನು ಎರವಲು ಪಡೆದಿದ್ದರು ಎಂದು ಮನೆಯೊಡತಿ ಹೇಳಿದರು. ನಂತರ, ಅನಿತಾ ದೇವಿ ತಮ್ಮ ಮಗಳ ಮದುವೆಯನ್ನು ನೆರವೇರಿಸಿದಾಗ ಆ ಹುಡುಗಿ ಇನ್ನೂ ಅಪ್ರಾಪ್ತ ವಯಸ್ಕಳು ಎಂದು ಮನೆಯೊಡತಿಗೆ ತಿಳಿಯಿತಂತೆ.


ಈ ಪ್ರಕರಣದ ಬಗ್ಗೆ ಪೊಲೀಸರು ಏನಂತಾರೆ?


ಈ ಬಗ್ಗೆ ತನಿಖೆ ನಡೆಸುತ್ತಿರುವ ಎಎಸ್ಐ ಮುಖ್ತಿಯಾರ್ ಸಿಂಗ್, ಆರೋಪಿಯ ಮನೆಯ ಮಾಲೀಕರಾದ ಬಬ್ಲಿ ಅವರು ಅಕ್ಟೋಬರ್ 4, 2022 ರಂದು ಎಸ್ಎಸ್‌ಪಿಗೆ ಈ ಮದುವೆಯ ಬಗ್ಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಖನ್ನಾ ನಗರ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಯ ಸೆಕ್ಷನ್ 4 (21 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ವಯಸ್ಕರು ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾಗುವುದು), 5 (ಬಾಲ್ಯ ವಿವಾಹ) ಮತ್ತು 6 (ಬಾಲ್ಯ ವಿವಾಹಕ್ಕೆ ಬೆಂಬಲಿಸಿದ್ದಕ್ಕಾಗಿ) ಹುಡುಗಿಯ ತಾಯಿಯ ವಿರುದ್ಧ ಮತ್ತು ವರನ ವಿರುದ್ಧ ಎಫ್ಐಆರ್ ಅನ್ನು ದಾಖಲಿಸಿಕೊಂಡಿದ್ದಾರೆ.

top videos
    First published: