• ಹೋಂ
 • »
 • ನ್ಯೂಸ್
 • »
 • Crime
 • »
 • Crime News: 9 ವರ್ಷದ ಬಾಲಕಿಯ ಬರ್ಬರ ಹತ್ಯೆ, 10 ಪೀಸ್​ ಮಾಡಿ ಪ್ಲಾಸ್ಟಿಕ್​ ಕವರ್​ನಲ್ಲಿ ಎಸೆದು ಹೋದ ದುಷ್ಕರ್ಮಿಗಳು!

Crime News: 9 ವರ್ಷದ ಬಾಲಕಿಯ ಬರ್ಬರ ಹತ್ಯೆ, 10 ಪೀಸ್​ ಮಾಡಿ ಪ್ಲಾಸ್ಟಿಕ್​ ಕವರ್​ನಲ್ಲಿ ಎಸೆದು ಹೋದ ದುಷ್ಕರ್ಮಿಗಳು!

9 ವರ್ಷದ ಬಾಲಕಿ ಹತ್ಯೆ, ಗ್ರಾಮಸ್ಥರಲ್ಲಿ ಆತಂಕ

9 ವರ್ಷದ ಬಾಲಕಿ ಹತ್ಯೆ, ಗ್ರಾಮಸ್ಥರಲ್ಲಿ ಆತಂಕ

ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಲಕಿ ಮಾರ್ಚ್ 27 ರಂದು ನಾಪತ್ತೆಯಾಗಿದ್ದಳು. ಬಳಿಕ ಮಾವಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

 • News18 Kannada
 • 3-MIN READ
 • Last Updated :
 • Rajasthan, India
 • Share this:

ಉದಯಪುರ: ರಾಜಸ್ಥಾನದ (Rajasthan) ಉದಯಪುರದ (​​Udaipur) ಮಾವ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಲೋಪ್ರಾ ಗ್ರಾಮದಲ್ಲಿ 9 ವರ್ಷದ ಆದಿವಾಸಿ ಬಾಲಕಿಯನ್ನು (Tribal Girl) ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಅಮಾಯಕ ಬಾಲಕಿಯನ್ನು ಕೊಂದ ನಂತರ ದುರ್ಷರ್ಮಿಗಳು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದಾರೆ. ಪಾಲಿಥಿನ್ ಕವರ್ (Polythene Bags)​ ಒಳಗೆ ದೇಹದ ಭಾಗಗಳು ಇರುವುದನ್ನು ಪೊಲೀಸರು (Police) ಪತ್ತೆ ಮಾಡಿದ್ದಾರೆ. ಈ ಬಗ್ಗೆ ಹಲವು ಶಂಕಿತರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದರೆ ಅಮಾಯಕ ಬಾಲಕಿಯನ್ನು ಯಾವಾಗ, ಯಾರು ಮತ್ತು ಏಕೆ ಕೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.


ಬುಡಕಟ್ಟು ಸಮುದಾಯದ ಬಾಲಕಿ


ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಲಕಿ ಮಾರ್ಚ್ 27 ರಂದು ನಾಪತ್ತೆಯಾಗಿದ್ದಳು. ಬಳಿಕ ಮಾವಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕಳೆದ ಕೆಲವು ದಿನಗಳಿಂದ ಆ ಹೆಣ್ಣು ಮಗುವಿಗಾಗಿ ನಿರಂತರ ಹುಡುಕಾಟ ನಡೆಯುತ್ತಿತ್ತು. ಈ ನಡುವೆ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಪಾಳು ಬಿದ್ದ ಜಾಗದಲ್ಲಿ ವಾಸನೆ ಬರುತ್ತಿರುವುದು ಜನರ ಗಮನಕ್ಕೆ ಬಂದಿದೆ.


ಪಾಲಿಥಿನ್​ ಕವರ್​ನಲ್ಲಿ ದೇಹದ ಭಾಗಗಳು


ಈ ಬಗ್ಗೆ ಸ್ಥಳೀಯರು ಮಾಹಿತಿಯನ್ನು ಮಾವಲಿ ಠಾಣಾ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಪಾಲಿಥಿನ್‌ನಲ್ಲಿ ಮೃತದೇಹದ ಎರಡು ತುಂಡುಗಳು ಸಿಕ್ಕಿವೆ. ನಂತರ ಶ್ವಾನದಳದಿಂದ ಪರಿಶೀಲನೆ ಮಾಡಿದಾಗ ಬಾಲಕಿಯ ಮೃತ ದೇಹದ 10 ತುಂಡುಗಳು ಪತ್ತೆಯಾಗಿವೆ. ಈ ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ: UP Encounter: ಸುರೇಶ್​ ರೈನಾ ಸಂಬಂಧಿಕರ ಬರ್ಬರ ಹತ್ಯೆ, ಕುಖ್ಯಾತ ದರೋಡೆಕೋರನನ್ನು ಎನ್​ಕೌಂಟರ್​ ಮಾಡಿದ ಯುಪಿ ಪೊಲೀಸ್​


ಶ್ವಾನದಳ, ಎಫ್​ಎಸ್​ಎಲ್​ ತಂಡದಿಂದ ಪರಿಶೀಲನೆ


ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವೈದ್ಯಕೀಯ ಮಂಡಳಿಯು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬಾಲಕಿಯನ್ನು ಕೊಲೆ ಮಾಡಿ ಶವವನ್ನು ತುಂಡುಗಳಾಗಿ ಕತ್ತರಿಸಿ ಎಸೆಯಲಾಗಿದೆ. ಸ್ಥಳಕ್ಕೆ ಶ್ವಾನದಳ ಮತ್ತು ಎಫ್‌ಎಸ್‌ಎಲ್ ತಂಡವನ್ನು ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಮೃತದೇಹದ ಎಲ್ಲಾ ತುಂಡರಿಸಿದ ಭಾಗಗಳನ್ನು ಎಂಬಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಾಥಮಿಕ ಮಾಹಿತಿಗಾಗಿ ಕಾಯಲಾಗುತ್ತಿದೆ. ಅದರ ಆಧಾರದ ಮೇಲೆ ತನಿಖೆ ಮುಂದುವರಿಯಲಿದೆ.
ಗ್ರಾಮದಲ್ಲಿ ಆತಂಕದ ವಾತಾವರಣ


ಅಮಾಯಕ ಬಾಲಕಿಯನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ಇಡೀ ಗ್ರಾಮದಲ್ಲಿ ಒಂದು ಕಡೆ ಆತಂಕ, ಮತ್ತೊಂದು ಕಡೆ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರನ್ನ ಸಮಾಧಾನಪಡಿಸಲು ಹರಸಾಹಸ ಪಡುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ಅತ್ಯಾಚಾರದ, ನರಬಲಿ ಶಂಕೆ


ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರದ ನಂತರ ಕೊಲೆ ಮಾಡಲಾಗಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಮೂಢನಂಬಿಕೆಯಿಂದ ನರಬಲಿ ಕೊಟ್ಟಿರಬಹುದೇ ಎಂಬ ಚರ್ಚೆ ಊರಿನಲ್ಲಿ ನಡೆಯತ್ತಿವೆ. ಆದರೆ, ಈ ಎರಡೂ ಅಂಶಗಳ ಬಗ್ಗೆ ಪೊಲೀಸರು ಇಲ್ಲಿಯವರೆಗೂ ತಮ್ಮ ಯಾವುದೇ ನಿಲುವನ್ನು ಸ್ಪಷ್ಟಪಡಿಸಿಲ್ಲ. ತನಿಖೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ.


ಇದನ್ನೂ ಓದಿ:  Mosquito Coil: ಒಂದೇ ಕುಟುಂಬದ 6 ಮಂದಿಯ ಜೀವ ತೆಗೆದ ಸೊಳ್ಳೆ ಬತ್ತಿ, ವಿಷಕಾರಿ ಹೊಗೆಯಿಂದ ಮಲಗಿದ್ದಾಗಲೇ ಹಾರಿಹೋಯ್ತು ಪ್ರಾಣಪಕ್ಷಿ!


ಹೆಚ್ಚಾಗುತ್ತಿರುವ ದೇಹ ಕತ್ತರಿಸುವ ಪ್ರಕರಣಗಳು

top videos


  ದೆಹಲಿಯಲ್ಲಿ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದ ಶ್ರದ್ಧಾ ವಾಕರ್​ ಎಂಬ ಯುವತಿಯನ್ನು ಅಫ್ತಾಬ್‌ ಪೂನಾವಾಲಾ ಎಂಬಾತ ಕೊಲೆ ಮಾಡಿಬಳಿಕ ಆಕೆಯನ್ನು 35 ಪೀಸ್‌ಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ. ನಂತರ ಒಂದೊಂದು ಭಾಗಗಳನ್ನು ವಿವಿದೆಡೆ ಎಸೆದು ಬಂದಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯ ಬಳಿಕ ದೇಶದಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

  First published: