• Home
  • »
  • News
  • »
  • crime
  • »
  • Bengaluru: ತಂಗಿಗಾಗಿ ಹೆಂಡತಿಯ ಅಣ್ಣನನ್ನ ಚಾಕುವಿನಿಂದ ಚುಚ್ಚಿ ಕೊಲೆಗೈದ; ಬಾವನಿಂದಲೇ ಬಾಮೈದನ ಬರ್ಬರ ಹತ್ಯೆ

Bengaluru: ತಂಗಿಗಾಗಿ ಹೆಂಡತಿಯ ಅಣ್ಣನನ್ನ ಚಾಕುವಿನಿಂದ ಚುಚ್ಚಿ ಕೊಲೆಗೈದ; ಬಾವನಿಂದಲೇ ಬಾಮೈದನ ಬರ್ಬರ ಹತ್ಯೆ

ಕೊಲೆಯಾದ ಸತೀಶ್/ಆರೋಪಿ ವೆಂಕಟೇಶ್

ಕೊಲೆಯಾದ ಸತೀಶ್/ಆರೋಪಿ ವೆಂಕಟೇಶ್

ಚಿಕ್ಕಮಗಳೂರು ಮೂಲದ ಸತೀಶ್ ಕೊಲೆಯಾದ ವ್ಯಕ್ತಿಯಾಗಿದ್ದು, ಮದುವೆ ಸಂದರ್ಭದಲ್ಲಿ ಈಗಾಗಲೇ ಮದುವೆಯಾಗಿದ್ದ ವೆಂಕಟೇಶ್ ತಂಗಿಯ ಪರಿಚಯ ಸತೀಶ್​​ಗೆ ಆಗಿತ್ತಂತೆ. ಇಬ್ಬರ ನಡುವಿನ ಪರಿಚಯ ಕಾಲಕ್ರಮೇಣ ಸ್ನೇಹಕ್ಕೆ ತಿರುಗಿ ಬಳಿಕ ಅಕ್ರಮ ಸಂಬಂಧಕ್ಕೂ ದಾರಿ ಮಾಡಿಕೊಟ್ಟಿತ್ತಂತೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಬಾವನಿಂದಲೇ ಬಾಮೈದ ಬರ್ಬರ ಹತ್ಯೆಯಾಗಿರೋ ಘಟನೆ ರಾಜ್ಯ ರಾಜಧಾನಿ ಬೆಂಗಳೂರು (Bengaluru) ನಗರದ ಕೆಂಗೇರಿಯಲ್ಲಿ (Kengeri) ನಡೆದಿದೆ. ಘಟನೆಯಲ್ಲಿ ಚಿಕ್ಕಮಗಳೂರು (Chikkamagaluru) ಮೂಲದ ಸತೀಸ್ (25) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿಯ ಅಣ್ಣನನ್ನೇ ಕೊಲೆಗೈದ ವೆಂಕಟೇಶ್​ (32) ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧನ ಮಾಡಿದ್ದಾರೆ. ಇನ್ನು, ತಂಗಿಗೆ ಕಿರುಕುಳ ನೀಡುತ್ತಿದ್ದ, ಆಕೆಯ ಜೀವನ ಹಾಳು ಮಾಡಿದ ಎಂಬ ಕೋಪದ ಮೇಲೆಯೇ ಆರೋಪಿ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಏನಿದು ಪ್ರಕರಣ?


ಚಿಕ್ಕಮಗಳೂರಿನ ಸತೀಶ್‌ ಎಂಬಾತನ ತಂಗಿಯ ಜೊತೆಗೆ ವೆಂಕಟೇಶ ಮದುವೆ ಮಾಡಿಕೊಂಡಿದ್ದರಂತೆ. ಈ ಮದುವೆ ಸಂದರ್ಭದಲ್ಲಿ ಈಗಾಗಲೇ ಮದುವೆಯಾಗಿದ್ದ ವೆಂಕಟೇಶ್ ತಂಗಿಯ ಪರಿಚಯ ಸತೀಶ್​​ಗೆ ಆಗಿದ್ದು, ಇಬ್ಬರು ಆ ವೇಳೆ ಫೋನ್‌ ನಂಬರ್ ಕೂಡ ಎಕ್ಸ್ ಚೇಂಜ್ ಮಾಡಿಕೊಂಡಿದ್ದರಂತೆ. ಇನ್ನು, ಇಬ್ಬರ ನಡುವಿನ ಪರಿಚಯ ಕಾಲಕ್ರಮೇಣ ಸ್ನೇಹಕ್ಕೆ ತಿರುಗಿ ಬಳಿಕ ಅಕ್ರಮ ಸಂಬಂಧಕ್ಕೂ ದಾರಿ ಮಾಡಿಕೊಟ್ಟಿತ್ತಂತೆ.


ಇದನ್ನೂ ಓದಿ: Bengaluru: ಪ್ರೀತಿ ನಿರಾಕರಿಸಿದಕ್ಕೆ ವಿದ್ಯಾರ್ಥಿನಿ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದಿದ್ದ ಆರೋಪಿ ಅರೆಸ್ಟ್


ಮೃತ ಸತೀಶ್​ ತಂಗಿಯನ್ನ ಮದ್ವೆಯಾಗಿದ್ದ ವೆಂಕಟೇಶ್


ಇನ್ನು, ಸತೀಶ್​ ಪರಿಚಯವಾದ ಬಳಿಕ ವೆಂಕಟೇಶ್​ ತಂಗಿಯ ಸಂಸಾರದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ಗಂಡನನ್ನು ತೊರೆದು ಬಂದಿದ್ದ ವೆಂಕಟೇಶ್ ತಂಗಿ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಮನೆ ಮಾಡಿಕೊಂಡು ಸತೀಶ್​ ಜೊತೆ ಲಿವಿಂಗ್ ಟುಗೆದರ್​​ನಲ್ಲಿ ಹೊಸ ಜೀವನ ಆರಂಭಿಸಿದ್ದರಂತೆ. ಆದರೆ ಕೆಲ ಸಮಯದಿಂದ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಈ ಬಗ್ಗೆ ವೆಂಕಟೇಶ್​ಗೆ ತಂಗಿ ಹೇಳಿಕೊಂಡಿದ್ದಳಂತೆ. ಇದರಿಂದ ಕೋಪಗೊಂಡಿದ್ದ ವೆಂಕಟೇಶ್​, ತನ್ನ ತಂಗಿಯ ಸಂಸಾರವನ್ನು ಹಾಳು ಮಾಡಿ, ಈಗ ತಂಗಿಯೊಂದಿಗೂ ಗಲಾಟೆ ಮಾಡಿ ಹಿಂಸೆ ನೀಡುತ್ತಿದ್ದಾನೆ ಎಂದು ಮಾತುಕತೆ ನಡೆಸಲು ಕೆಂಗೇರಿ ಸ್ಥಳವೊಂದಕ್ಕೆ ಕರೆಯಿಸಿಕೊಂಡಿದ್ದನಂತೆ.




ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆಗೈದ ಆರೋಪಿ


ಇಬ್ಬರ ನಡುವಿನ ಮಾತುಕತೆಗೂ ಇಬ್ಬರು ಮದ್ಯಪಾನ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ಆಗಿದ್ದು, ವಿಕೋಪಕ್ಕೆ ತಿರುಗಿದ ಜಗಳ ಸತೀಸ್ ಕೊಲೆಯಲ್ಲಿ ಅಂತ್ಯವಾಗಿದೆ. ಜನವರಿ 16ರ ಮಧ್ಯಾಹ್ನ ಘಟನೆ ನಡೆದಿದ್ದು, ಸತೀಶ್‌ನನ್ನ ನೈಸ್ ರಸ್ತೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಹಾಗೂ ಎದೆಗೆ ಚುಚ್ಚಿ ವೆಂಕಟೇಶ್‌ ಕೊಲೆ ಮಾಡಿದ್ದಾನೆ. ಆ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಒಂದು ದಿನದ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿ ಶರಣಾಗಿದ್ದಾನೆ.


ಬೆಂಗಳೂರು ಪೊಲೀಸ್


ಕೊಲೆಗೈದ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ವೆಂಕಟೇಶ್​


ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರ, ವೆಂಕಟೇಶ್​ ತಂಗಿ ಮೊದಲ ಗಂಡನನ್ನು ಬಿಟ್ಟು ಸತೀಸ್​ ಜೊತೆ ಬಂದಿದ್ದಳು. ಕಳೆದ ಮೂರು ವರ್ಷಗಳಿಂದ ಇಬ್ಬರು ಜೊತೆಯಲ್ಲೇ ನೆಲೆಸಿದ್ದರು. ಆದರೂ ಇಬ್ಬರು ಸುಖವಾಗಿ ಇರೋದಿಲ್ಲ. ಗಂಡನನ್ನು ಬಿಟ್ಟು ಬಂದರೂ ತಂಗಿಗೆ ಸತೀಸ್ ಕಿರುಕುಳ ನೀಡುತ್ತಿದ್ದನಂತೆ.


ಇದನ್ನೂ ಓದಿ: Crime News: ಸರಸಕ್ಕೆ ಅಡ್ಡಿಯಾದ ಮಗು; ಬಿಯರ್​ ಬಾಟಲಿಯಿಂದ ಹೊಡೆದು 3 ವರ್ಷದ ಕಂದಮ್ಮನನ್ನೇ ಕೊಲೆಗೈದ ಮಲತಂದೆ


ಈ ಬಗ್ಗೆ ಹಲವು ಬಾರಿ ವೆಂಕಟೇಶ್​​, ಸತೀಶ್​ ಜೊತೆ ಮಾತನಾಡಿ ತಿಳಿ ಹೇಳುವ ಕೆಲಸ ಮಾಡಿದ್ದನಂತೆ. ಆದರೆ ಸತೀಶ್​ ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿರಲಿಲ್ಲವಂತೆ. ಇದರಿಂದ ರೋಸಿ ಹೋಗಿದ್ದ ವೆಂಕಟೇಶ್​ ಕೊಲೆ ಮಾಡುವ ಉದ್ದೇಶದಿಂದಲೇ ಮದ್ಯಪಾನ ಮಾಡಲು ಕರೆದುಕೊಂಡು ಕೊಲೆ ಮಾಡಿದ್ದಾನೆ. ಆ ಬಳಿಕ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದ. ಈ ಮಾಹಿತಿ ಅನ್ವಯ ಸ್ಥಳ ಪರಿಶೀಲನೆ ನಡೆಸಿದರೆ ಮೃತದೇಹ ಪತ್ತೆಯಾಗಿತ್ತು. ಸದ್ಯ ಆತನನ್ನು ಬಂಧನ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

Published by:Sumanth SN
First published: