ಲಕ್ನೋ: ಉತ್ತರ ಪ್ರದೇಶದ (Uttar Pradesh) ಅಲಿಗಢ (Aligarh) ಜಿಲ್ಲೆಯಲ್ಲಿ ವಾಮಾಚಾರಕ್ಕೆ ನರಬಲಿ (Human Sacrifice) ಕೊಟ್ಟಿರುವ ಆಘಾತಕಾರಿ ಘಟನೆ ಮುನ್ನೆಲೆಗೆ ಬಂದಿದೆ. ವಾಮಾಚಾರದ ಹಿನ್ನಲೆಯಲ್ಲಿ 3 ವರ್ಷದ ಮಗುವನ್ನು ಸೋದರ ಅತ್ತೆ ಗಂಡ ಬಲಿ ಕೊಟ್ಟಿದ್ದಾನೆ ಎಂದು ಮಗುವಿನ ತಂದೆ ಆರೋಪಿಸಿದ್ದಾರೆ. ಪೋಷಕರು (Parents) ದೂರು ನೀಡಿರುವ ಹಿನ್ನಲೆ, ಪೋಷಕರು ನೆಲ ಅಗೆದು ಮಗುವಿನ ಶವವನ್ನು (Dead Body) ಹೊರತೆಗೆದು, ಶವಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಘಟನೆ ನಡೆದು 4 ದಿನಗಳಾಗಿವೆ ಎಂದು ತಿಳಿದುಬಂದಿದೆ.
ಅಲಿಘರ್‌ನ ಗಾಂಧಿ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಡೋರಿ ನಗರದ ನಿವಾಸಿ ಹಿರಲಾಲ್ ಎಂಬುವವರ 3 ವರ್ಷದ ಮಗ ರಿತೇಶ್ ಬಲಿಯಾದ ದುರ್ದೈವಿ. ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಕುಂದಪುರ ಗ್ರಾಮದಲ್ಲಿ ತನ್ನ ಅತ್ತೆ ಮನೆಯಲ್ಲಿ ಬಾಲಕ ಕೆಲವು ದಿನಗಳಿಂದ ವಾಸವಿದ್ದ. ಕಳೆದ ಶುಕ್ರವಾರ ಚಾವಣಿಯಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಕರೆ ಬಂದಿತ್ತು. ನಾನು ಸ್ವಲ್ಪ ಗಂಗಾಜಲವನ್ನು ಹಾಕಿ ಎಂದು ಹೇಳಿದ್ದೆ. ಆದರೆ ನಾನು ಅಲ್ಲಿಗೆ ಹೋದಾಗ ಮಗು ನಿತ್ರಾಣಗೊಂಡು ಬಿದ್ದಿತ್ತು. ಬಹುತೇಕ ಉಸಿರಾಟ ನಿಂತು ಹೋಗಿತ್ತು, ಗಂಭೀರ ಸ್ಥಿತಿ ನೋಡಿ ವೈದ್ಯರು ಮೆಡಿಕಲ್ ಕಾಲೇಜಿಗೆ ರೆಫರ್ ಮಾಡಿದ್ದರು.
ಇದನ್ನೂ ಒದಿ: Hyderabad: ಪಾರ್ಸೆಲ್ ನೀಡಲು ಹೋದಾಗ ನಾಯಿ ದಾಳಿ! 3ನೇ ಮಹಡಿಯಿಂದ ಬಿದ್ದು ಡೆಲಿವರಿ ಬಾಯ್ ಗಂಭೀರ
ಹಲವೆಡೆ ಗಾಯದ ಗುರುತು
ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದಾಗ ಮಗುವಿನ ದೇಹದ ಮೇಲೆಲ್ಲಾ ಹಲವೆಡೆ ಗಾಯದ ಗುರುತುಗಳಿವೆ ಎಂದು ವೈದ್ಯರು ತಿಳಿಸಿದರು. ಹಾಗಾಗಿ ನಾವು ನ್ಯಾಯಯುತ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಯಸುತ್ತೇವೆ. ಇದರೊಂದಿಗೆ ವಾಮಾಚಾರ ಮಾಡಿ ಅಮಾಯಕ ಮಗುವನ್ನು ಬಲಿ ನೀಡಲಾಗಿದೆ ಎಂದು ಮೃತ ಮಗುವಿನ ತಂದೆ ಆರೋಪಿಸಿದ್ದಾರೆ.
ಗಂಡು ಮಗು ಆಗುತ್ತದೆ ಎಂದು ಬಲಿ ಆರೋಪ
ಹಿರಲಾಲ್ ಸಹೋದರಿಗೆ 4 ಹೆಣ್ಣು ಮಕ್ಕಳಿದ್ದು, ಮಗನಿಲ್ಲ ಎಂದು ಕೊರಗುತ್ತಿದ್ದರು. ಈ ಕಾರಣಕ್ಕೆ ಮಂತ್ರವಾದಿ ಮಾತು ಕೇಳಿ, ಗಂಡು ಮಗುವ ಆಗಬಹುದು ಎಂದು ನನ್ನ 3 ವರ್ಷದ ಮಗುವನ್ನು ಬಲಿ ತೆಗೆದುಕೊಂಡಿದ್ದಾರೆ ಎಂದು ತಂದೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ನಂತರ ಸಕ್ರಿಯರಾದ ಪೊಲೀಸರು ಮಗುವಿನ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ.
ಮಂತ್ರವಾದಿ ಮಾತು ಕೇಳಿ ಕೊಲೆ
ಮೃತ ಮಗುವಿನ ತಂದೆ ಹೇಳುವಂತೆ, ಆತನ ತಂಗಿಗೆ ಮೊದಲು ಮೂವರು ಹೆಣ್ಣು ಮಕ್ಕಳಿದ್ದರು ನಂತರ ಅವರು ಮಂತ್ರವಾದಿ ಬಳಿ ಹೋದರು. ಅಲ್ಲಿ ತಂತ್ರಿ ಈ ಬಾರಿ ಗಂಡು ಮಗುವಾಗುತ್ತದೆ ಎಂದಿದ್ದರು. ಆದರೆ ನಾಲ್ಕನೇ ಬಾರಿಯೂ ಹೆಣ್ಣು ಮಗು ಜನಿಸಿತು. ಆದ್ದರಿಂದ ಸಹೋದರಿ ಮತ್ತು ಅವಳ ಪತಿ ತಂತ್ರಿಕನನ್ನು ಭೇಟಿ ಆದಾಗ ತನ್ನ ಆತ ಒಂದು ಮಗುವನ್ನು ಬಲಿಕೊಟ್ಟರೆ ಗಂಡು ಮಗು ಹುಟ್ಟುತ್ತದೆ ಎಂದು ಹೇಳಿದ್ದಾನೆ. ಇದೇ ಕಾರಣದಿಂದ ನನ್ನ ಮಗುವನ್ನು ಬಲಿ ಕೊಟ್ಟಿದ್ದಾರೆ. ಅವರು ಹೇಳಿವಂತೆ ಚಾವಣಿಯಿಂದ ಬಿದ್ದರೆ ಸಾಯುವುದಿಲ್ಲ, ಬಿದ್ದರೂ ಪೆಟ್ಟು ಬೀಳುತ್ತದೆ. ಆದರೆ ಇಡೀ ಮೈಮೇಲೆ ಗಾಯದ ಗುರುತುಗಳಿವೆ ಎಂದು ಹಿರಲಾಲ್ ಆರೋಪಿಸಿದ್ದಾರೆ.
ಮರಣೋತ್ತರ ವರದಿ ಆಧರಿಸಿ ಕ್ರಮ
ಮದ್ರಾಕ್ ಸಿಒ ವಿಶಾಲ್ ಚೌಧರಿ ಅವರ ಪ್ರಕಾರ, 19 ಮೇ 2023 ರಂದು 3 ವರ್ಷದ ಬಾಲಕ ತನ್ನ ಅತ್ತೆ ಮನೆಯಲ್ಲಿದ್ದನು. ರಾತ್ರಿ ಮಲಗಿದ್ದಾಗ, ಟೆರೇಸ್‌ನಿಂದ ಕೆಳಗೆ ಬಿದ್ದು ಗಾಯಗೊಂಡನು. ಮನೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ವೈದ್ಯರು ಮಗು ಮೃತಪಟ್ಟಿದೆಎಂದು ಅವರು ಹೇಳಿದ್ದಾರೆ. ಇದಾದ ನಂತರ ಸಂಬಂಧಿಕರು ಆತನನ್ನು ಸಮಾಧಿ ಮಾಡಿದ್ದಾರೆ, ಮರುದಿನ ಪೋಷಕರು, ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ 20 ಮೇ 2023 ರಂದು ದೂರು ಸ್ವೀಕರಿಸಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ