ಹೊಸೂರು: ಪತ್ನಿಯೊಂದಿಗೆ (Husband And Wife) ಖಾಸಗಿಯಾಗಿ ಸಮಯ ಕಳೆಯಲು ಅಡ್ಡ ಬರುತ್ತಿದ್ದಾನೆ ಎಂದು ಮೂರು ವರ್ಷದ ಕಂದಮ್ಮ ಅಂತನೂ ನೋಡದೆ ಮಲತಂದೆಯೋರ್ವ (Stepfather) ದಾರುಣವಾಗಿ ಕೊಲೆ ಮಾಡಿ, ಹೂತು ಹಾಕಿರುವ ಘಟನೆ ತಮಿಳುನಾಡಿ ಹೊಸೂರಿನಲ್ಲಿ (Tamilnadu-Hosur) ಬೆಳಕಿಗೆ ಬಂದಿದೆ. ಜಗನ್ನಾಥನ್ ಕೊಲೆಯಾದ ಮೂರು ವರ್ಷದ ಮಗುವಾಗಿದ್ದು, ಡಿಸೆಂಬರ್ 6ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಗು ಕೊಲೆಗೈದ ಆರೋಪದ ಮೇರೆಗೆ ಹೊಸೂರಿನ ಪಾರ್ವತಿ ನಗರ ವಾಸಿಗಳಾಗಿರುವ ಮಲತಂದೆ ರಂಜಿತ್(35), ತಾಯಿ ನಂದಿನಿ(25)ಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಸರಸಕ್ಕೆ ಅಡ್ಡಿ ಅಂತ ಮಗುವನ್ನೇ ಕೊಲೆಗೈದ
ಕಳೆದ ಡಿಸೆಂಬರ್ 6 ರಂದು ರಂಜಿತ್ ಮತ್ತು ನಂದಿನಿ ಖಾಸಗಿಯಾಗಿ ಸಮಯ ಕಳೆಯುತ್ತಿದ್ದಾಗ ಮಗು ಅಡ್ಡಿಪಡಿಸಿದೆ ಎನ್ನಲಾಗಿದ್ದು, ಇದರಿಂದ ಕೋಪಗೊಂಡ ಆರೋಪಿ, ಕುಡಿದು ಬಿಸಾಡಿದ್ದ ಬಿಯರ್ ಬಾಟಲಿಯಿಂದ ಮಗುವಿನ ತಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಗು ತೀವ್ರವಾಗಿ ಗಾಯಗೊಂಡಿದ್ದು, ನೆಪಮಾತ್ರಕ್ಕೆ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದಾನೆ.
ಇದನ್ನೂ ಓದಿ: Bengaluru: ಕೋರಮಂಗಲ ಕಿಡ್ನಾಪ್ ಕೇಸ್ಗೆ ರೋಚಕ ಟ್ವಿಸ್ಟ್; ಮಹಿಳೆಯ ಮೊಬೈಲ್ನಲ್ಲಿತ್ತು ನಗ್ನ ಫೋಟೋ
ಆ ಬಳಿ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸೆಂಬರ್ 22ರ ವರೆಗೂ ಮಗುವಿಗೆ ಚಿಕಿತ್ಸೆ ಕೊಡಿಸಿದ್ದು, ಡಿ.22ಕ್ಕೆ ಆಸ್ಪತ್ರೆಯಿಂದ ಮಗುವನ್ನು ಕರೆತಂದಿದ್ದಾನೆ. ಆದರೆ ಗಾಯದ ತೀವ್ರತೆಗೆ ಮಗು ಸಾವಿನ ಬದುಕಿನ ನಡುವೆ ಒದ್ದಾಡಿ ಡಿಸೆಂಬರ್ 25 ರಂದು ಸಾವನ್ನಪ್ಪಿದೆ.
ಯಾರಿಗೂ ತಿಳಿಯದಂತೆ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ರು
ಮಗು ಸಾವನ್ನಪ್ಪುತ್ತಿದ್ದಂತೆ ಅಕ್ಕಪಕ್ಕದ ಮನೆಯವರಿಗೂ ತಿಳಿಯದಂತೆ ಮಲತಂದೆ, ತಾಯಿ ಇಬ್ಬರು ಸೇರಿ ಅಂತ್ಯಕ್ರಿಯೆ ನಡೆಸಿದ್ದಾರೆ. ಕೆಲ ಸಮಯದ ಬಳಿ ಆರೋಪಿ ನಂದಿನಿ ತಾಯಿ ವಲ್ಲಿ ಮನೆಗೆ ಬಂದು ಮಗು ಇಲ್ಲದಿರೋದನ್ನು ಕಂಡು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ನಂದಿನಿ ಸರಿಯಾಗಿ ಉತ್ತರಿಸದ ಕಾರಣ ಅನುಗೊಂಡು ಪೊಲೀಸ್ ಠಾಣೆಗೆ ತೆರಳಿ ಮಗಳ ವಿರುದ್ಧವೇ ದೂರು ದಾಖಲಿಸಿದ್ದಾಳೆ.
ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ
ಪ್ರಕರಣ ದಾಖಲಿಸಿಕೊಂಡ ಹಟ್ಕೊ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದು, ಪೊಲೀಸರ ತನಿಖೆ ವೇಳೆ ಮಗುವಿನ ಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ನಂದಿನಿ ಪೊಲೀಸರ ಎದುರು ತಪ್ಪೋಪ್ಪಿಕೊಂಡಿದ್ದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಅಂದಹಾಗೇ, ಆರೋಪಿ ನಂದಿನಿಯನ್ನು ಕೆಲ ವರ್ಷಗಳ ಹಿಂದೆ ಶಕ್ತಿ ಎಂಬಾತನಿಗೆ ನೀಡಿ ಮದುವೆ ಮಾಡಿಕೊಡಲಾಗಿತ್ತು.
ಮೊದಲ ಪತಿ ಸಾವನ್ನಪ್ಪಿದ್ದಕ್ಕೆ ಹೊಸ ಸಂಸಾರ ಆರಂಭಿಸಿದ್ದ ಮಹಿಳೆ
ದಂಪತಿಗೆ ಪ್ರವೀಣ್ ಹಾಗೂ ಜಗನ್ನಾಥನ್ ಎಂಬ ಇಬ್ಬರು ಮಕ್ಕಳು ಕೂಡ ಜನಿಸಿದ್ದರು. ಆದರೆ ಕಳೆದ ಏಳು ತಿಂಗಳ ಹಿಂದಷ್ಟೇ ನಂದಿನಿ ಮೊದಲ ಪತಿ ಶಕ್ತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರಂತೆ. ಪತಿ ಸಾವನ್ನಪ್ಪಿದ ಬಳಿಕ ರಂಜಿತ್ ಜೊತೆ ನಂದಿನಿ ಹೊಸ ಸಂಸಾರ ಆರಂಭ ಮಾಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಮಗು ಸಾವನ್ನಪ್ಪಿದ ವಿಚಾರ ಯಾರಿಗಾದರೂ ಹೇಳಿದ್ರೆ ನಿನ್ನನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದ, ಆದ್ದರಿಂದ ಈ ವಿಚಾರ ಯಾರಿಗೂ ಹೇಳಿಲ್ಲ ಎಂದು ನಂದಿನಿ ತನ್ನ ತಾಯಿಗೆ ಹೇಳಿದ್ದಳಂತೆ. ಅಲ್ಲದೇ ಪದೇ ಪದೇ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ ಕಾರಣ ತನ್ನ ಮೊದಲ ಮಗನನ್ನ ಹಾಸ್ಟೆಲ್ಗೆ ಸೇರಿಸಿ ಮನೆಯಿಂದ ದೂರ ಮಾಡಿದ್ದಳಂತೆ. ಆದರೆ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಗುವಿನ ಅಜ್ಜಿ ಮನೆಗೆ ಬಂದಾಗ ಮಗು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.
ಬಾರ್ನಲ್ಲಿ ಬಡಿದಾಟ!
ವಿದ್ಯಾಕಾಶಿ ಧಾರವಾಡದಲ್ಲಿ (Dharwad) ಕಿಡಿಗೇಡಿಗಳು ಕುಡಿದು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಬಾರ್ ಮ್ಯಾನೇಜರ್ ಜೊತೆ ಜಗಳ ಮಾಡಿದ ಪುಂಡರು, ಸುಖಾ ಸುಮ್ಮನೇ ಕಿರಿಕ್ ಮಾಡಿ, ಥಳಿಸಿದ್ದಾರೆ. ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ