ಭೋಪಾಲ್ : ಪ್ರಪಂಚದಲ್ಲಿ ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದಿದ್ದರು ಕೆಲವೊಂದು ಮೂಢನಂಬಿಕೆ ಆಚರಣೆಗಳು ಹಾಗೆ ಉಳಿದುಕೊಂಡಿವೆ. ಇಂತಹ ಮೂಢನಂಬಿಕೆಯ ಆಚರಣೆಯಿಂದ ಏನೂ ಅರಿಯದ 3 ತಿಂಗಳ ಹಸುಗೂಸು ಜೀವ ಬಿಟ್ಟಿರುವ ಧಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ 3 ತಿಂಗಳ ಹೆಣ್ಣು ಮಗುವಿಗೆ ಬುಡಕಟ್ಟು ಸಂಪ್ರದಾಯ ಚಿಕಿತ್ಸೆ ಎಂದು ಮಗುವಿನ ತಂದೆ ತಾಯಿ ಕಾದ ಕಬ್ಬಿಣದ ರಾಡ್ಅನ್ನು ಮಗುವಿನ ಹೊಟ್ಟೆಯ ಮೇಲೆ ಇಟ್ಟಿದ್ದಾರೆ. ಮೊದಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗು ರಾಡ್‌ನಿಂದ ಸುಟ್ಟದ್ದರಿಂದ ಗಾಯಗಳಾಗಿದೆ, ಚಿಕಿತ್ಸೆಗಾಗಿ ಆಸ್ಪತ್ರೆಗಾಗಿ ಕರೆತಂದೂ 15 ದಿನಗಳ ನಂತರ ಪ್ರಾಣವನ್ನೇ ಬಿಟ್ಟಿದೆ.
ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯ ಇರುವ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಚಿಕಿತ್ಸೆಗೆ ಚಿಕಿತ್ಸೆಗೆ ಸೇರಿಸುವ ಮುನ್ನ ತಮ್ಮ ಸಂಪ್ರದಾಯದ ಹಿನ್ನಲೆ ಹೀಗೆ ಮಾಡಲಾಗಿದ್ದು, ಇದಾದ ಕೆಲ ದಿನಗಳ ಬಳಿಕ ಮಗು ಮೃತಪಟ್ಟಿದೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದ ಸಮಾಧಿ ಮಾಡಲಾಗಿದ್ದ ಮಗುವಿನ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಂದ ಪ್ರಕರಣ ಬೆಳಕಿಗೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಆಸ್ಪತ್ರೆಗೆ ತಲುಪಿದಾಗ, ಈ ಮೂಢನಂಬಿಕೆಯ ಆಘಾತಕಾರಿ ಪ್ರಕರಣವು 15 ದಿನಗಳ ಹಿಂದೆ ನಡೆದಿರುವುದು ಬೆಳಕಿಗೆ ಬಂದಿದೆ. ನ್ಯುಮೋನಿಯಾಕ್ಕೆ ಸೂಕ್ತ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗದ ಕಾರಣ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಶಹದೋಲ್ ಜಿಲ್ಲಾಧಿಕಾರಿ ವಂದನಾ ವೈದ್ಯ ಹೇಳಿದ್ದಾರೆ.
ಇದನ್ನೂ ಓದಿ: Shocking News: ಅಪ್ಪನ ಫೋನ್ನಿಂದ ಫುಡ್ ಆರ್ಡರ್ ಮಾಡಿದ ಮಗು, ಡ್ಯಾಡ್ ಶಾಕ್, ಸನ್ ರಾಕ್!
ಮೊದಲೇ ಆಸ್ಪತ್ರೆ ತಂದಿದ್ದರೆ ಜೀವ ಉಳಿಯುತ್ತಿತ್ತು
ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗು ಉಸಿರಾಡಲು ಕಷ್ಟಪಡುತ್ತಿತ್ತು. ಪರಿಸ್ಥಿತಿ ತೀವ್ರ ಹದಗೆಟ್ಟ ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ತಕ್ಷಣ ಚಿಕಿತ್ಸೆ ಕೊಡಲಾಗಿದೆಯಾದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಗುವನ್ನು ಮೊದಲೇ ಆಸ್ಪತ್ರೆಗೆ ಕರೆತಂದಿದ್ದರೆ ಉಳಿಸಬಹುದಿತ್ತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಇಂತಹ ಪದ್ದತಿ ಸಾವಿಗೆ ಕಾರಣ
" ಮಧ್ಯಪ್ರದೇಶದ ಅನೇಕ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ, ನ್ಯುಮೋನಿಯಾಗೆ ಚಿಕಿತ್ಸೆ ಎಂದು ಬಿಸಿ ಕಬ್ಬಿಣದ ರಾಡ್‌ನಿಂದ ಚುಚ್ಚುವುದು ಸಾಮಾನ್ಯ ಅಭ್ಯಾಸವಿದೆ. ಆದರೆ ರಾಡ್ಗಳಿಂದ ಚುಚ್ಚುವುದು ಸಾವಿಗೆ ಕಾರಣವಾಗಬಹುದು. ಈ ರೀತಿಯ ಕ್ರಮ ನೋವನ್ನು ಕಡಿಮೆ ಮಾಡಲು ಬಳಸುವ ಮಾರ್ಗ, ಆದರೆ ಇಂದರಿಂದಾಗುವ ಸಮಸ್ಯೆಯೆಂದರೆ ಗಾಯಗಳು ಸೋಂಕಾಗಿ ಮಾರ್ಪಟ್ಟು ಸಾವಿಗೆ ಕಾರಣವಾಗುತ್ತದೆ " ವೈದ್ಯ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಡಾ ವಿಕ್ರಾಂತ್ ಭುರಿಯಾ ಮಾಹಿತಿ ನೀಡಿದ್ದಾರೆ.
ಇಂತಹ ಅಘಾತಕಾರಿ ಪದ್ಧತಿಗಳು ಇನ್ನೂ ಚಾಲ್ತಿಯಲ್ಲಿವೆ, ತಕ್ಷಣವೇ ದೂರು ದಾಖಲಿಸಿಕೊಂಡು ಈ ರೀತಿಯ ಘಟನೆ ಮುಂದೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುಬೇಕೆಂದು ಆ ಪ್ರದೇಶದ ಮುಖ್ಯ ವೈದ್ಯಾಧಿಕಾರಿಗೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ವಕ್ತಾರ ಡಾ.ಹಿತೇಶ್ ವಾಜಪೇಯಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ