ಹೈದರಾಬಾದ್: 22 ವರ್ಷದ ಯುವಕ ಸ್ನೇಹಿತನನ್ನು (Friend) ಕೊಲೆಗೈದು ಪೊಲೀಸರಿಗೆ (Police) ಶರಣಾಗಿರುವ ಘಟನೆ ತೆಲಂಗಾಣದ (Telangana) ಹೈದರಾಬಾದ್ನಲ್ಲಿ (Hyderabad ) ನಡೆದಿದೆ. ಮೃತ ಯುವಕ ಕೊಲೆ ಆರೋಪಿಯ ಪ್ರೇಯಸಿಗೆ (Lover) ಫೋನ್, ಮೆಸೇಜ್ ಮಾಡುತ್ತಿದ್ದ ಕಾರಣ ಸ್ನೇಹಿತನನ್ನೇ ಕೊಲೆ ಮಾಡಲಾಗಿದೆ ಎಂಬ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ, ಯುವಕನನ್ನು ನಗ್ನಗೊಳಿಸಿ ಆತನ ಖಾಸಗಿ ಭಾಗಗಳು, ಬೆರಳು ಸೇರಿದಂತೆ ಆತನ ಎದೆ ಸೀಳಿ ಹೃದಯವನ್ನು (Heart) ಹೊರಗೆಳೆದು ಫೋಟೋ (Photo) ತೆಗೆದುಕೊಂಡಿದ್ದು, ಬಳಿಕ ನೇರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಒಂದೇ ಕಾಲೇಜಿನಲ್ಲಿ ಓದಿದ್ದ ಸ್ನೇಹಿತರು
ಆರೋಪಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಪ್ರಕರಣ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಅನ್ವಯ ಮೃತ ಯುವಕನನ್ನು ನವೀನ್ ಎಂದು ಗುರುತಿಸಲಾಗಿದ್ದು, ಆತನ ಸ್ನೇಹಿತ ಹರಿಹರ ಕೃಷ್ಣ ಅಲಿಯಾಸ್ ಹರಿನೇ ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: Bengaluru: ಅತ್ತೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಅಳಿಯ; ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಮಗು ಸಾವು
ಒಂದೇ ಯುವತಿಯ ಹಿಂದೆ ಬಿದ್ದಿದ್ದರು
ಮೃತ ನವೀನ್ ಹಾಗೂ ಹರಿ ಇಬ್ಬರು ಹೈದರಾಬಾದ್ನ ದಿಲ್ಸುಖ್ನಗರದ ಕಾಲೇಜಿನಲ್ಲಿ ಇಂಟರ್ ಮಿಡಿಯೇಟ್ ಪೂರ್ಣಗೊಳಿಸಿದ್ದರು. ಈ ಕೊಲೆ ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಓರ್ವ ಯುವತಿಗಾಗಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ನವೀನ್ ಹಾಗೂ ಹರಿ ಇಬ್ಬರು ಕೂಡ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಒಂದೇ ಹುಡುಗಿಯನ್ನು ಲವ್ ಮಾಡಿದ್ದರಂತೆ. ಆದರೆ ನವೀನ್ ಯುವತಿಗೆ ಬೇಗ ತನ್ನ ಪ್ರೇಮ ನಿವೇದನೆಯನ್ನು ಮಾಡಿದ್ದು, ಅದಕ್ಕೆ ಆಕೆ ಓಕೆ ಕೂಡ ಎಂದು ಎರಡು ವರ್ಷಗಳ ಕಾಲ ಸುತ್ತಾಡಿದ್ದರಂತೆ. ಆದರೆ ಆ ಬಳಿಕ ಇಬ್ಬರ ನಡುವೆ ಬ್ರೇಕ್ ಆಗಿ ದೂರವಾಗಿದ್ದರಂತೆ.
ಇಬ್ಬರು ಯುವಕರ ಜೊತೆಯೂ ಯುವತಿಯ ಪ್ರೇಮಾಯಣ
ನವೀನ್ ಜೊತೆ ಬ್ರೇಕ್ ಆಪ್ ಆಗಿದ್ದ ವಿಚಾರ ತಿಳಿದ ಹರಿ ಮತ್ತೆ ಯುವತಿಯನ್ನು ಸಂಪರ್ಕ ಮಾಡಿ ಪ್ರಪೋಸ್ ಮಾಡಿದ್ದು, ನವೀನ್ನನ್ನು ಬಿಟ್ಟಿದ್ದ ಆಕೆ ಹರಿ ಜೊತೆ ಹೊಸದಾಗಿ ಲವ್ ಶುರು ಮಾಡಿದ್ದಳಂತೆ. ಆದರೆ ಈ ನಡುವೆ ನವೀನ್ ಬ್ರೇಕ್ ಅಪ್ ಮಾಡಿಕೊಂಡಿದ್ದರು ಯುವತಿಗೆ ನಿರಂತರಾಗಿ ಫೋನ್ ಮಾಡೋದು, ಮೆಸೇಜ್ ಮಾಡೋದನ್ನು ಮುಂದುವರಿಸಿದ್ದನಂತೆ. ಇದರಿಂದ ಹರಿ ಅಸಮಾಧಾನಗೊಂಡಿದ್ದನಂತೆ.
ಮೃತದೇಹವನ್ನು ತುಂಡರಿಸಿದ್ದ ಯುವಕ
ಕಳೆದ ಮೂರು ತಿಂಗಳಿನಿಂದ ಉತ್ತಮ ಅವಕಾಶಕ್ಕಾಗಿ ಎದುರು ನೋಡಿತ್ತಿದ್ದ ಹರಿ, ಫೆಬ್ರವರಿ 17 ರಂದು ನವೀನ್ನನ್ನು ಭೇಟಿಯಾಗಿ ಕುಡಿದು ಪಾರ್ಟಿ ಮಾಡಿದ್ದಾರೆ. ಕಂಠಪೂರ್ತಿ ಕುಡಿದ್ದ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಈ ವೇಳೆ ರೊಚ್ಚಿಗೆದ್ದ ಹರಿ, ಸ್ನೇಹಿತನ್ನು ಕೊಲೆಗೈದಿದ್ದಾನೆ. ಅಲ್ಲದೆ ಕೊಲೆ ಮಾಡಿದ ಬಳಿಕ ಆತನ ಮೃತದೇಹವನ್ನು ನಗ್ನಗೊಳಿಸಿ, ಆತನ ಬೆರಳು, ತಲೆ, ಖಾಸಗಿ ಅಂಗ ಹಾಗೂ ಹೃದಯವನ್ನು ಕಟ್ ಮಾಡಿದ್ದಾನೆ.
ಇದನ್ನೂ ಓದಿ: Crime News: ಸಾಫ್ಟ್‌ವೇರ್ ಗಂಡನ ಬಳಿ ಹೋಗಲಿಲ್ಲ ಅಂತ ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!
ಫೋಟೋ ನೋಡಿ ಸಖತ್ ಖುಷಿಯಾಗಿದ್ದ ಯುವತಿ
ಅಲ್ಲದೆ, ನವೀನ್ನನ್ನು ಕೊಲೆ ಮಾಡಿದ ಬಳಿಕ ಆತನ ದೇಹವನ್ನು ಕಟ್ ಮಾಡಿದ್ದನ್ನು ಫೋಟೋ ತೆಗೆದುಕೊಂಡು ವಾಟ್ಸಾಪ್ನಲ್ಲಿ ಪ್ರೇಯಸಿಗೆ ಕಳುಹಿಸಿದ್ದಾನೆ. ಈ ಫೋಟೋಗಳನ್ನು ನೋಡಿ ಖುಷಿಗೊಂಡ ಯುವತಿ, Very Good ಅಂತ ಪ್ರತಿಕ್ರಿಯೆ ಕೂಡ ನೀಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಿರುವುದರಿಂದ ಪೊಲೀಸರು ಆತನನ್ನು ಬಂಧನ ಮಾಡಿ ಕೋರ್ಟ್ ಎದುರು ಹಾಜರುಪಡಿಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ