• ಹೋಂ
  • »
  • ನ್ಯೂಸ್
  • »
  • Crime
  • »
  • Crime: ಏಕಾಂತದಲ್ಲಿದ್ದ ವೇಳೆ ಪ್ರೇಯಸಿ ತಾಯಿ ನೋಡಿ ಭಯಕ್ಕೆ ಸತ್ತ ಯುವಕ, ಅತ್ತ ನೋಯ್ಡಾದಲ್ಲಿ ಗೆಳತಿಯನ್ನು ಹೆದರಿಸಲು ಹೋಗಿ ಬೆಂಗಳೂರು ಟೆಕ್ಕಿ ಸಾವು

Crime: ಏಕಾಂತದಲ್ಲಿದ್ದ ವೇಳೆ ಪ್ರೇಯಸಿ ತಾಯಿ ನೋಡಿ ಭಯಕ್ಕೆ ಸತ್ತ ಯುವಕ, ಅತ್ತ ನೋಯ್ಡಾದಲ್ಲಿ ಗೆಳತಿಯನ್ನು ಹೆದರಿಸಲು ಹೋಗಿ ಬೆಂಗಳೂರು ಟೆಕ್ಕಿ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

18 ವರ್ಷದ ವಿದ್ಯಾರ್ಥಿಯೊಬ್ಬ ರಾತ್ರಿ ಸಮಯದಲ್ಲಿ ಅಪಾರ್ಟ್​ಮೆಂಟ್​ವೊಂದರಲ್ಲಿ ಇದ್ದ ತನ್ನ ಪ್ರಿಯತಮೆಯನ್ನು ನೋಡಲು ತೆರಳಿದ್ದಾನೆ. ಇಬ್ಬರು ಮಾತನಾಡುವುದನ್ನು ಹುಡುಗಿಯ ತಾಯಿ ಬಂದಿದ್ದಾರೆ. ಇದರಿಂದ ಗಾಬರಿಗೊಂಡ ಯುವಕ ಬಾಲ್ಕನಿಯಿಂದ ಜಿಗಿದೇ ಬಿಟ್ಟಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಮಿಳುನಾಡಿನ ಸೇಲಂ ಬಳಿಯ ಚಿನ್ನಕೊಳ್ಪಟ್ಟಿ ಎಂಬ ಸ್ಥಳದಲ್ಲಿ ಘಟನೆ ನಡೆದಿದೆ.

ಮುಂದೆ ಓದಿ ...
  • Share this:

    ಚೆನ್ನೈ: ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ - ಪ್ರೇಮ (Love) ಎಂಬುದು ಸಹಜ, ಆದರೆ ಅದು ಸೀಮಿತ ಹಂತದಲ್ಲಿದ್ದರೆ ಒಳ್ಳೆಯದು. ಪ್ರೀತಿ ಮಾಡುತ್ತಿದ್ದೇವೆಂದು ಅದರಲ್ಲೇ ಮುಳುಗಿ ಹೋದರೆ ಅಪಾಯ ತರುತ್ತದೆ. ಅದು ಜೀವಕ್ಕಾದರೂ ಅಥವಾ ಜೀವನಕ್ಕಾದರೂ (Life) ಹೌದು ಎನ್ನುವುದಕ್ಕೆ ತಮಿಳುನಾಡಿನಲ್ಲಿ (Tamil Nadu) ಒಂದು ಘಟನೆ ಸಾಕ್ಷಿಯಾಗಿದೆ. ಹೊತ್ತಿಲ್ಲದ ಹೊತ್ತಿನಲ್ಲಿ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದ 18ರ ವಯಸ್ಸಿನ ಯುವಕ, ಪ್ರೇಯಸಿಯ ತಾಯಿ (Mother) ಕಂಡೊಡನೆ ಗಾಬರಿಯಲ್ಲಿ ಅಪಾರ್ಟ್​ಮೆಂಟ್​ನಿಂದ (Apartment) ಜಿಗಿದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾನೆ.


    ಈ ಘಟನೆ ತಮಿಳುನಾಡಿನ ಸೇಲಂ ಬಳಿಯ ಚಿನ್ನಕೊಳ್ಪಟ್ಟಿ ಎಂಬ ಸ್ಥಳದಲ್ಲಿ ನಡೆದಿದೆ. 18 ವರ್ಷದ ವಿದ್ಯಾರ್ಥಿಯೊಬ್ಬ ರಾತ್ರಿ ಸಮಯದಲ್ಲಿ ಅಪಾರ್ಟ್​ಮೆಂಟ್​ವೊಂದರಲ್ಲಿ ಇದ್ದ ತನ್ನ ಪ್ರಿಯತಮೆಯನ್ನು ನೋಡಲು ತೆರಳಿದ್ದಾನೆ. ಇಬ್ಬರು ಮಾತನಾಡುವುದನ್ನು ಹುಡುಗಿಯ ತಾಯಿ ಬಂದಿದ್ದಾರೆ. ಇದರಿಂದ ಗಾಬರಿಗೊಂಡ ಯುವಕ ಬಾಲ್ಕನಿಯಿಂದ ಜಿಗಿದೇ ಬಿಟ್ಟಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


    ಕ್ಲಾಸ್​ಮೇಟ್​ ಮೇಲೆ ಲವ್​


    ಪೊಲೀಸರ ಮಾಹಿತಿಯ ಪ್ರಕಾರ ಸಂಜಯ್​ ಎಂಬ ಯುವಕ ತನ್ನ ತರಗತಿಯಲ್ಲಿ ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆ ಹುಡುಗಿ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಳು. ಈ ಅಪಾರ್ಟ್​ಮೆಂಟ್​ ಹತ್ತಿರದಲ್ಲೇ ಸಂಜಯ್​ ಮನೆ ಇತ್ತು. ಶನಿವಾರ ಕೌಂಪೌಂಡ್ ಮೂಲಕ ಪ್ರೇಯಸಿ ಮನೆಯ ಮಹಡಿ ಏರಿದ್ದಾನೆ. ಆ ಹುಡುಗಿಯೂ ಅಲ್ಲಿಗೆ ಆಗಮಿಸಿದ್ದು, ಇಬ್ಬರು ಮಾತನಾಡಲು ಶುರು ಮಾಡಿದ್ದಾರೆ.


    ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಭೂಕಂಪಕ್ಕೆ ಸತ್ತವರ ಸಂಖ್ಯೆ 1300ಕ್ಕೆ ಏರಿಕೆ, ಭಾರತ ಸೇರಿ 45 ರಾಷ್ಟ್ರಗಳಿಂದ ಸಹಾಯಹಸ್ತ


    ಇವರಿಬ್ಬರು ಮೈ ಮರೆತು ಮಾತನಾಡುವ ವೇಳೆ ಹುಡುಗಿಯ ತಾಯಿ ಮಹಡಿಯ ಮೇಲೆ ಬಂದಿದ್ದಾರೆ. ಇದರಿಂದ ಗಾಬರಿಗೊಂಡ ಸಂಜಯ್ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಪಾರ್ಟ್​ಮೆಂಟ್​ನ 2ನೇ ಫ್ಲೋರ್​ನಿಂದ ಜಿಗಿದಿದ್ದಾನೆ. ಆದರೆ ಸಂಜಯ್ ತಲೆ ನೆಲಕ್ಕೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಶವವನ್ನು ಸೇಲಂ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.




    ನೋಯ್ಡಾದಲ್ಲಿ ಬೆಂಗಳೂರಿನ ಟೆಕ್ಕಿ ಸಾವು


    ವಿದೇಶಕ್ಕೆ ಹೋಗುವ ಯೋಜನೆಯಲ್ಲಿದ್ದ ಬೆಂಗಳೂರಿನ ಟೆಕ್ಕಿಯೊಬ್ಬ ತನ್ನ ಗೆಳತಿಯೊಂದಿಗೆ ಜಗಳ ಮಾಡಿಕೊಂಡು ನೋಯ್ಡಾದ ಅಪಾರ್ಟ್​ಮೆಂಟ್​ನ 20ನೇ ಫ್ಲೋರ್​ನಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ. ನೋಯ್ಡಾದ ರೆಸಿಡೆನ್ಸಿಯಲ್ ಸೊಸೈಟಿ ಸೆಕ್ಟರ್​ 168ರಲ್ಲಿ ಶುಕ್ರವಾರ ಸಂಜೆ 9 ಗಂಟೆಯ ಸುಮಾರಿನಲ್ಲಿ ಈ ಘಟನೆ ನಡೆದಿದೆ.


    ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ


    ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷ ಸಾಫ್ಟ್​ವೇರ್​ ಇಂಜಿನಿಯರ್ ತನ್ನ ಗೆಳತಿಯನ್ನು ಭೇಟಿ ಮಾಡುವುದಕ್ಕೆ ನೋಯ್ಡಾಗೆ ಆಗಮಿಸಿದ್ದಾನೆ. ಚಂಢೀಗಡ ಮೂಲದ ಯುವತಿ ಮತ್ತು ಈತ ಇಬ್ಬರು ಗೋಲ್ಡನ್​ ಪಾಲ್ಮ್​ ಸೊಸೈಟಿಯ ಫ್ಲಾಟ್​ನಲ್ಲಿ ಭೇಟಿಯಾಗಲು ನಿರ್ಧರಿಸಿ ರೂಮ್ ಬುಕ್ ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಇಬ್ಬರು ಭೇಟಿಯಾಗಿ ಮದ್ಯ ಸೇವಿಸಿದ್ದಾರೆ. ಆ ಮಹಿಳೆ ತನ್ನ ಗೆಳತಿಯನ್ನು ಅಲ್ಲಿಗೆ ಕರೆಸಿಕೊಂಡಿದ್ದಾಳೆ. ಆಕೆ ಸಂಜೆ 5ರ ತನಕ ಅಲ್ಲೆ ಇದ್ದು ನಂತರ ಹೊರ ಹೋಗಿದ್ದಾಳೆ. ಸ್ನೇಹಿತೆ ಕರೆಸಿದರಿಂದ ಕೋಪಗೊಂಡು ತನ್ನ ಗೆಳತಿಯ ಜೊತೆಗೆ ಜಗಳ ಮಾಡಿಕೊಂಡಿದ್ದಾನೆ.


    ಹೆದರಿಸಲು ಹೋಗಿ ಸಾವು


    ಈ ಜಗಳ ಅತಿರೇಕಕ್ಕೆ ಹೋಗಿದ್ದು, ಯುವಕ ಕಟ್ಟಡದಿಂದ ಜಿಗಿಯುವುದಾಗಿ ಬೆದರಿಸಿದ್ದಾನೆ. ಗಾಬರಿಗೊಂಡ ಗೆಳತಿ ತಕ್ಷಣ ಸೆಕ್ಯುರಿಟಿಗೆ ಈ ವಿಷಯ ತಿಳಿಸಲು ಬಂದಿದ್ದಾಳೆ. ಆದರೆ ಟೆಕ್ಕಿ 20ನೇ ಮಹಡಿಯಿಂದ ಜಿಗಿದಿದ್ದಾನೆ. ಅಪಾರ್ಟ್​ಮೆಂಟ್​ ಕೆಳಗಿದ್ದ ಕೆಫೆಯೊಂದರ ಡೈನಿಂಗ್ ಟೇಬಲ್ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಕ್ಷಣ ಯುವತಿ ಮತ್ತು ಸೆಕ್ಯುರಿಟಿ ಗಾರ್ಡ್​ ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲಾಗಲೇ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ ಆ ಯುವಕ ಮೂಲತಃ ಹರಿಯಾಣದ ಸೋನೆಪತ್​ ನವನು ಎಂದು ತಿಳಿದುಬಂದಿದೆ.

    Published by:Rajesha B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು