Hardik Pandya: ಮಾಹಿ ಭಾಯ್ ನಾಯಕತ್ವದಲ್ಲಿ ಆಡಿದ್ದು ನನ್ನ ಅದೃಷ್ಟ, ಹಾರ್ದಿಕ್ ಪಾಂಡ್ಯ ಅಚ್ಚರಿಯ ಹೇಳಿಕೆ

ಕ್ಯಾಪ್ಟನ್ ಕೂಲ್ ಅಂತಾನೆ ಖ್ಯಾತಿ ಅಗಿದ್ದಂತಹ ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಕ್ರಿಕೆಟ್ ಗೆ ನೀಡಿದಂತಹ ಕೊಡುಗೆ ತುಂಬಾನೇ ಅಪಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ಭಾರತಕ್ಕೆ ಎರಡನೆಯ ವಿಶ್ವಕಪ್ ತಂದು ಕೊಟ್ಟರು ಮತ್ತು ಅನೇಕ ಸರಣಿಗಳನ್ನು ಗೆದ್ದುಕೊಂಡರು. ಇಷ್ಟೇ ಅಲ್ಲದೆ ಅವರು ಅನೇಕ ಯುವ ಆಟಗಾರರರಿಗೆ ತಂಡದಲ್ಲಿ ಅವಕಾಶವನ್ನು ಸಹ ಮಾಡಿಕೊಟ್ಟರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ಯಾಪ್ಟನ್ ಕೂಲ್ (Captain Cool) ಅಂತಾನೆ ಖ್ಯಾತಿ ಅಗಿದ್ದಂತಹ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರು ಭಾರತೀಯ ಕ್ರಿಕೆಟ್ ಗೆ ನೀಡಿದಂತಹ ಕೊಡುಗೆ ತುಂಬಾನೇ ಅಪಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ಭಾರತಕ್ಕೆ ಎರಡನೆಯ ವಿಶ್ವಕಪ್ (World Cup) ತಂದು ಕೊಟ್ಟರು ಮತ್ತು ಅನೇಕ ಸರಣಿಗಳನ್ನು ಗೆದ್ದುಕೊಂಡರು. ಇಷ್ಟೇ ಅಲ್ಲದೆ ಅವರು ಅನೇಕ ಯುವ ಆಟಗಾರರರಿಗೆ (Players) ತಂಡದಲ್ಲಿ ಅವಕಾಶವನ್ನು ಸಹ ಮಾಡಿಕೊಟ್ಟರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಆರ್ ಅಶ್ವಿನ್ ಇವರೆಲ್ಲರೂ ಧೋನಿ ನಾಯಕತ್ವದಲ್ಲಿಯೇ ಭಾರತಕ್ಕೆ (India) ಪಾದಾರ್ಪಣೆ ಮಾಡಿದರು, ವೃತ್ತಿಪರವಾಗಿ ಉತ್ತಮ ವಿಷಯಗಳನ್ನು ಸಾಧಿಸಲು ಮತ್ತು ಭಾರತೀಯ ಕ್ರಿಕೆಟ್ (Indian Cricket) ಅನ್ನು ಅಭೂತಪೂರ್ವ ಎತ್ತರಕ್ಕೆ ಏರಿಸಿದ್ದು ಧೋನಿ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

2022 ರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ
ಕೊಹ್ಲಿ ಮತ್ತು ರೋಹಿತ್ ವಿಶ್ವ ಕ್ರಿಕೆಟ್ ನ ಇಬ್ಬರು ಅತ್ಯುತ್ತಮ ಬ್ಯಾಟ್ಸ್ಮನ್ ಗಳಾಗಿದ್ದರೆ, ಅಶ್ವಿನ್ ಶ್ರೇಷ್ಠ ಟೆಸ್ಟ್ ಸ್ಪಿನ್ನರ್ ಆಗಿದ್ದಾರೆ. 2016 ರಲ್ಲಿ ಒಬ್ಬ ಭರವಸೆಯ ಆಲ್ರೌಂಡರ್ ಧೋನಿ ಅಡಿಯಲ್ಲಿ ಪಾದಾರ್ಪಣೆ ಮಾಡಿದರು, ಅವರು ಇಂದು ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಯಾರು ಎಂದರೆ 2022 ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬ್ಯಾಟ್ ಮತ್ತು ಬಾಲ್ ನೊಂದಿಗೆ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಎಂದು ಹೇಳಬಹುದು.

ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸುವ ಮೂಲಕ 2022 ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ವಿಜಯಶಾಲಿಯಾಗಿ ಮರಳಿದರು, ಆದರೆ ನಾಯಕನಾಗಿ ತಮ್ಮ ಚೊಚ್ಚಲ ಐಪಿಎಲ್ ನಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿ ಪಡೆಯುವಂತೆ ಮಾಡಿ ವಿಶಿಷ್ಟವಾದ ಸಾಧನೆ ಮಾಡಿದರು.

ಎಂ ಎಸ್ ಧೋನಿ ಬಗ್ಗೆ ಹಾರ್ದಿಕ್ ಪಾಂಡ್ಯ ಹೇಳಿದ್ದು ಹೀಗೆ
ತಮ್ಮ ಚೊಚ್ಚಲ ಭಾರತ ಪದಾರ್ಪಣೆಯನ್ನು ನೆನಪಿಸಿಕೊಂಡ ಹಾರ್ದಿಕ್, ಎಂ ಎಸ್ ಧೋನಿ ಅವರು ನೀಡಿದ ಬೆಂಬಲವು ಸಾಟಿಯಿಲ್ಲದ್ದು ಎಂದು ಹೇಳಿದರು. ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಮಾಡಿದ ಹಾರ್ದಿಕ್ ತಮ್ಮ ಮೊದಲ ಓವರ್ ನಲ್ಲಿ 21 ರನ್ ನೀಡಿದರು ಮತ್ತು ಇಂತಹ ಸಮಯದಲ್ಲಿ ಬೇರೆ ಯಾವುದೇ ನಾಯಕನಾಗಿದ್ದರೂ ಸಹ ಯುವ ಆಟಗಾರನಿಗೆ ಮತ್ತೊಂದು ಓವರ್ ನೀಡಲು ಹಿಂಜರಿಯುತ್ತಿದ್ದರು. ಆದರೆ ಧೋನಿ ಅವರು ತೋರಿಸಿದ ಆತ್ಮವಿಶ್ವಾಸಕ್ಕೆ ಧನ್ಯವಾದಗಳು, ಮೂರು ಓವರ್ ಗಳಲ್ಲಿ 37 ರನ್ ನೀಡಿ ನಾನು ಆ ಪಂದ್ಯದಲ್ಲಿ 2 ವಿಕೆಟ್ ಪಡೆದದ್ದು ನನಗೆ ಇನ್ನೂ ನೆನಪಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: HBD Ajinkya Rahane: ಅಂದು ಆಟೋಗೆ ಡಿಕ್ಕಿ ಹೊಡೆದಿದ್ದೇ ವರವಾಯ್ತಂತೆ ರಹಾನೆಗೆ? ಇವ್ರ ಲವ್​ ಸ್ಟೋರಿ ನೋಡಿ ಮಜಾ ಇದೆ

"ನಾನು ಭಾರತ ತಂಡವನ್ನು ಸೇರಿಕೊಂಡಾಗ ಸುರೇಶ್ ರೈನಾ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಆಶಿಶ್ ನೆಹ್ರಾ ರಂತಹ ಅನುಭವಿ ಆಟಗಾರರಿದ್ದರು. ನಾನು ಭಾರತಕ್ಕಾಗಿ ಅವರೊಂದಿಗೆ ಆಡುತ್ತಿದ್ದೇನೆ ಎನ್ನುವುದೇ ದೊಡ್ಡ ವಿಷಯವಾಗಿತ್ತು” ಎಂದು ಹೇಳಿದ್ದಾರೆ.

“ಮೊದಲ ಓವರ್ ನಲ್ಲಿಯೇ 21 ರನ್ ನೀಡಿದ ಮೊದಲ ಕ್ರಿಕೆಟಿಗ ನಾನೇ ಎಂದು ಭಾವಿಸುತ್ತೇನೆ. ಇದು ನನ್ನ ಕೊನೆಯ ಓವರ್ ಆಗಿರಬಹುದು ಎಂದು ನಾನು ನಿಜವಾಗಿಯೂ ಭಾವಿಸಿದ್ದೆ. ಆದರೆ ಮಾಹಿ ಭಾಯ್ ಅವರ ನಾಯಕತ್ವದಲ್ಲಿ ಆಡಿದ್ದು ನನ್ನ ಅದೃಷ್ಟ ಅಂತಾನೆ ಹೇಳಬಹುದು. ಅವರು ನನ್ನ ಮೇಲೆ ಸಾಕಷ್ಟು ನಂಬಿಕೆಯನ್ನು ತೋರಿಸಿದ್ದಾರೆ, ಅದು ಇವತ್ತು ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಹಾರ್ದಿಕ್ ಇತ್ತೀಚಿನ ಒಂದು ಫೋಡ್ಕಾಸ್ಟ್ ನಲ್ಲಿ ತಿಳಿಸಿದ್ದಾರೆ.

ವಿಶ್ವಕಪ್ ತಂಡದಲ್ಲಿ ಆಡಲು ಅವಕಾಶ ಕಲ್ಪಿಸಿಕೊಟ್ಟ ಧೋನಿ
ಹಾರ್ದಿಕ್ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ, ಆದರೆ ಅವರು ಮೂರು ವಿಕೆಟ್ ಗಳನ್ನು ಪಡೆದರು. ಆದಾಗ್ಯೂ, ಧೋನಿ ಹಾರ್ದಿಕ್ ಅವರಿಂದ ಎಷ್ಟು ಪ್ರಭಾವಿತರಾದರೆಂದರೆ, ಅವರು ವಿಶ್ವಕಪ್ ತಂಡದಲ್ಲಿ ಆಲ್ರೌಂಡರ್ ಸ್ಥಾನಕ್ಕೆ ನನ್ನನ್ನು ಸೇರಿಸಿಕೊಂಡರು ಎಂದು ಹಾರ್ದಿಕ್ ತಿಳಿಸಿದರು.

ಇದನ್ನೂ ಓದಿ: Prithvi Shaw Love Story: ಬಾಲಿವುಡ್ ನಟಿಯೊಂದಿಗೆ ಬ್ರೇಕಪ್ ಮಾಡಿಕೊಂಡ ಪೃಥ್ವಿ ಶಾ? ಇಲ್ಲಿದೆ ಸಾಕ್ಷಿ

"ನನ್ನ ಅಂತರರಾಷ್ಟ್ರೀಯ ವೃತ್ತಿಜೀವನದ ಮೂರನೇ ಪಂದ್ಯದ ನಂತರ, ಮಾಹಿ ಭಾಯ್ ನೀವು ವಿಶ್ವಕಪ್ ತಂಡದ ಭಾಗವಾಗುತ್ತೀರಿ ಎಂದು ನನಗೆ ಹೇಳಿದರು. ಆದ್ದರಿಂದ ನನಗೆ ಆಗ ವಿಶ್ವಕಪ್ ನಲ್ಲಿ ಆಡುವ ಬಗ್ಗೆ ತುಂಬಾನೇ ಖುಷಿಯಾಯಿತು. ಇದು ಒಂದು ರೀತಿಯಲ್ಲಿ ನನ್ನ ಕನಸು ಬೇಗನೆ ನನಸಾದಂತೆ ಇತ್ತು" ಎಂದು ಹಾರ್ದಿಕ್ ಆ ಕ್ಷಣವನ್ನು ನೆನಪಿಸಿಕೊಂಡರು.
Published by:Ashwini Prabhu
First published: