Urvashi and Rishabh: ಊರ್ವಶಿ ರೌಟೇಲಾ ಬಗ್ಗೆ ರಿಷಬ್ ಪಂತ್ ಹೀಗೆ ಅನ್ನೋದಾ! ಇನ್‌ಸ್ಟಾಗ್ರಾಮ್‌ನಲ್ಲಿ ಈ ಸ್ಟೋರಿಯನ್ನು ರಿಷಬ್ ಅಳಿಸಿದ್ದಾದ್ರೂ ಯಾಕೆ?

ಭಾರತದ ಸ್ಟಾರ್ ಕ್ರಿಕೆಟರ್‌ ರಿಷಬ್ ಪಂತ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಇವರು ಇತ್ತಿಚೀಗೆ ತಮ್ಮ ಅಧಿಕೃತ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿ ಹಾಕಿದ್ದಾರೆ. ಆ ಸ್ಟೋರಿ ಅಲ್ಲಿ ಏನು ಎಂಬುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿ...

ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್

ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್

  • Share this:
ಭಾರತದ ಸ್ಟಾರ್ ವಿಕೆಟ್‌ ಕೀಪರ್-ಬ್ಯಾಟ್ಸ್ ಮನ್ ರಿಷಬ್ ಪಂತ್ (Rishabh Pant) ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಇವರು ಇತ್ತಿಚೀಗೆ ತಮ್ಮ ಅಧಿಕೃತ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಖಾತೆಯಿಂದ 10 ನಿಮಿಷಗಳಿಗಿಂತ ಕಡಿಮೆ ಇರುವ ಒಂದು ಸ್ಟೋರಿ ಹಾಕಿದ್ದಾರೆ. ಆ ಸ್ಟೋರಿ ಅಲ್ಲಿ ಏನು ಇತ್ತು? ಎಂಬುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿ ನೀಡುತ್ತೇವೆ, ಮುಂದೆ ಓದಿ. 24ರ ಹರೆಯದ ಕ್ರಿಕೆಟಿಗ ರಿಷಬ್‌ ಪಂತ್‌, ನಟಿ ಊರ್ವಶಿ ರೌಟೇಲಾ (Urvashi Rautela) ಅವರನ್ನು ಗುರಿಯಾಗಿಟ್ಟುಕೊಂಡು ಒಂದು ಸಿಕ್ರೆಟ್‌ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ. ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ (Interview) ನಟಿ ಊರ್ವಶಿ ರೌಟೇಲಾ ಅವರು ಪಂತ್ ಬಗ್ಗೆ ಮಾತನಾಡಿದ್ದಾರೆ.

ಆದರೆ ವಾಸ್ತವವಾಗಿ ಹೇಳಬೇಕೆಂದರೆ ಅವರ ಹೆಸರನ್ನು ಸಂಪೂರ್ಣವಾಗಿ ಈ ಸಂದರ್ಶನದಲ್ಲಿ ಬಹಿರಂಗಪಡಿಸಲಿಲ್ಲ ಆದರೆ "ಮಿಸ್ಟರ್ ಆರ್‌ ಪಿ" ಎಂಬ ಮೊದಲಕ್ಷರಗಳನ್ನು ಬಳಸಿದ್ದಾರೆ. ಇದರ ಹಿನ್ನೆಲೆಯಾಗಿ ಪಂತ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಸ್ಟೋರಿ ಹಾಕಿದ್ದಾರೆ.

ಆ ಸ್ಟೋರಿಯ ಸಾಲುಗಳು ಹೀಗಿತ್ತು 
"ಕೆಲವರು ಕಡಿಮೆ ಜನಪ್ರಿಯತೆಗಾಗಿ ಮತ್ತು ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳಲು ಜನರು ಸಂದರ್ಶನಗಳಲ್ಲಿ ಸುಳ್ಳು ಹೇಳುವುದು ತಮಾಷೆಯಾಗಿದೆ. ಕೆಲವರು ಖ್ಯಾತಿ ಮತ್ತು ಹೆಸರಿಗಾಗಿ ಎಷ್ಟು ದಾಹವನ್ನು ಹೊಂದಿದ್ದಾರೆ ಎಂಬುದು ಅತ್ಯಂತ ದುಃಖಕರ ಸಂಗತಿ ಆಗಿದೆ. ದೇವರು ಅವರನ್ನು ಆಶೀರ್ವದಿಸಲಿ" ಮೆರಾಪೀಚಾಛೋಡೊಬಹನ್ #ಝೂಟ್‍ಕಿಭಿಲಿಮಿಟ್‍ಹೋತಿಹೈ ಎಂದು ಪಂತ್ ಅವರು ತಮ್ಮ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಆದರೆ ಈಗ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಅಳಿಸಲಾಗಿದೆ.

ನಟಿ ಊರ್ವಶಿ ರೌಟೇಲಾ ರಿಷಬ್‌ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದೇನು?
ಊರ್ವಶಿ ಅವರು “ನಾನು ಆ ದಿನ ವಾರಣಾಸಿಯಲ್ಲಿ ಶೂಟಿಂಗ್‌ ಮಾಡುತ್ತಿದ್ದೆ. ನನಗೆ ನವ ದೆಹಲಿಯಲ್ಲಿ ವಹಾನ್‌ ಸೆ ಎಂಬ ಕಾರ್ಯಕ್ರಮವು ಇತ್ತು. ಆದ್ದರಿಂದ ನಾನು ವಾರಣಾಸಿಯಿಂದ ನವ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು. ವಿಮಾನದ ಮೂಲಕ ನಾನು ನವ ದೆಹಲಿಯನ್ನು ತಲುಪಿದೆ. ನವದೆಹಲಿಯಲ್ಲಿ, ನನಗೆ ಫುಲ್ ಡೇ ಶೂಟಿಂಗ್ ಇತ್ತು ಮತ್ತು ಸುಮಾರು 10 ಗಂಟೆಗಳ ಕಾಲ ನಿರಂತರ ಶೂಟಿಂಗ್ ಇತ್ತು. ಈ ಶೂಟಿಂಗ್‌ನಿಂದ ನಾನು ಹಿಂತಿರುಗಿದಾಗ, ನಾನು ಮತ್ತೆ ರೆಡಿಯಾಗಬೇಕಾಗಿತ್ತು.

ಇದನ್ನೂ ಓದಿ: Pooja Hegde: ಬಣ್ಣದ ಹೂಗಳ ಫ್ರಾಕ್ ಧರಿಸಿ ನ್ಯೂಯಾರ್ಕ್ ನಗರ ಸುತ್ತಿದ್ದ ಪೂಜಾ ಹೆಗ್ಡೆನಿಮಗೆ ತಿಳಿದಿರುವ ಹಾಗೆ ಹುಡುಗಿಯರು ರೆಡಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಅದೇ ಸಮಯಕ್ಕೆ ನನ್ನ ನೋಡಲು ರಿಷಬ್‌ ಪಂತ್‌ ಬಂದರು ಎಂದು ಹೇಳುವಾಗ ಅವರ ಹೆಸರನ್ನು ಪೂರ್ಣವಾಗಿ ಹೇಳದೆ ಕೇವಲ ಮಿ. ಆರ್‌.ಪಿ ಎಂದು ಕರೆದಿದ್ಧಾರೆ. "ಅವರು ಲಾಬಿಯಲ್ಲಿ ಕುಳಿತು ನನಗಾಗಿ ಕಾಯುತ್ತಿದ್ದರು, ಮತ್ತು ಅವರು ನನ್ನನ್ನು ಭೇಟಿಯಾಗಲು ಬಯಸಿದ್ದರು. ಆದರೆ ನನಗೆ ತುಂಬಾ ಸುಸ್ತಾಗಿದ್ದರಿಂದ ನಾನು ಮಲಗಿದ್ದೆ. ರಿಷಬ್‌ ಅವರು ನನಗೆ ತುಂಬಾ ಸಲ ಕರೆ ಮಾಡಿದ್ದಾರೆ. ಆದರೆ ನನಗೆ ಇಷ್ಟೊಂದು ಕರೆಗಳು ಬಂದಿವೆ ಎಂದು ತಿಳಿದಿರಲಿಲ್ಲ" ಎಂದು ರೌಟೇಲಾ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಮತ್ತೆ ರಿಷಬ್ ಪಂತ್ ಅವರನ್ನು ಭೇಟಿಯಾಗ್ತಾರಾ ಊರ್ವಶಿ
ತಮ್ಮ ಮಾತನ್ನು ಮುಂದುವರೆಸುತ್ತ ನಟಿ "ಹಾಗಾಗಿ, ನಾನು ಎಚ್ಚರವಾದಾಗ, ನನ್ನ ಪೋನ್‌ನಲ್ಲಿ 16-17 ತಪ್ಪಿದ ಕರೆಗಳನ್ನು ನೋಡಿದೆ. ಇದರಿಂದ ನನಗೆ ತುಂಬಾ ಬೇಸರವಾಯಿತು. ಏಕೆಂದರೆ ನನಗಾಗಿ ಲಾಬಿಯಲ್ಲಿ ಕಾಯುತ್ತಿದ್ದರು ಮತ್ತು ನಾನು ಹೋಗಲಿಲ್ಲ. ಏಕೆಂದರೆ ಬಹಳಷ್ಟು ಹುಡುಗಿಯರು ಈ ತರ ಆದಾಗ ಜಾಸ್ತಿ ಕಾಳಜಿ ವಹಿಸುವುದಿಲ್ಲ. ಯಾರನ್ನಾದರೂ ಕಾಯುವಂತೆ ಮಾಡುವ ಬಗ್ಗೆ ಏನು ಬೇಸರ ಮಾಡಿಕೊಳ್ಳುವುದಿಲ್ಲ. ಆದರೆ ನನಗೆ ತುಂಬಾ ಬೇಸರವಾಯಿತು. ಆ ನಂತರ ನೀವು ಮುಂಬೈಗೆ ಬಂದಾಗ ಭೇಟಿಯಾಗೋಣ ಎಂದು ನಾನು ರಿಷಬ್‌ಗೆ ಹೇಳಿದೆ ”ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Nayanthara: ಪತಿ ಜೊತೆ ಫ್ಲೈಟ್​ನಲ್ಲಿ ನಯನತಾರಾ ರೊಮ್ಯಾನ್ಸ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ವಾಟ್ಸಾಪ್‌ನಲ್ಲಿ ಊರ್ವಶಿಯನ್ನು ಬ್ಲಾಕ್ ಮಾಡಿದ್ದಾರಂತೆ ಪಂತ್ !
ಕುತೂಹಲಕಾರಿಯಾಗಿ, ಪಂತ್ ಮತ್ತು ಊರ್ವಶಿ ಸ್ಟೋರಿಗಳು ಜೊತೆ ಆಗಿರುವುದು ಇದೇ ಮೊದಲಲ್ಲ. 2018 ರಲ್ಲಿ, ಇಬ್ಬರೂ ಆಗಾಗ ಊಟಕ್ಕೆ ಅಥವಾ ಕೂಟಗಳಿಗೆ ಹೋಗುತ್ತಿದ್ದರು ಮತ್ತು ಇಬ್ಬರೂ ಜೊತೆ ನಿಂತು ಮಾಧ್ಯಮಗಳಿಗೆ ಪೋಟೋ ಪೋಸ್‌ ನೀಡುತ್ತಿದ್ದರು. ಆದರೆ ವಾಟ್ಸಾಪ್‌ನಲ್ಲಿ ಪಂತ್ ಊರ್ವಶಿಯನ್ನು ಬ್ಲಾಕ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದರಿಂದ ವದಂತಿಗಳು ಹುಟ್ಟಿಕೊಂಡವು. ತದ ನಂತರ, ಇದು ಇಬ್ಬರೂ ತೆಗೆದುಕೊಂಡ ಪರಸ್ಪರ ನಿರ್ಧಾರ ಮತ್ತು ಒಬ್ಬರ ವೇದಿಕೆಯ ಮೇಲೆ ಇನ್ನೊಬ್ಬರು ಬರುವುದಕ್ಕೆ ಅವಕಾಶವಿಲ್ಲ ಎಂಬ ನಿರ್ಬಂಧಗಳನ್ನು ತಮಗೆ ತಾವೇ ಹಾಕಿಕೊಂಡಿದ್ಧಾರೆ ಎಂಬ ಸುದ್ದಿ ಹೊರಬಿದ್ದಿತ್ತು.
Published by:Ashwini Prabhu
First published: