• Home
  • »
  • News
  • »
  • cricket-2
  • »
  • Sourav Ganguly: ಮುಂದಿನ 3 ಜನ್ಮದಲ್ಲೂ ಕೂಡ ಭಾರತದಲ್ಲೇ ಹುಟ್ಟಿ, ಇಂಡಿಯಾ ಟೀಂನಲ್ಲೇ ಆಡಲು ಸೌರವ್ ಗಂಗೂಲಿ ಉತ್ಸುಕ

Sourav Ganguly: ಮುಂದಿನ 3 ಜನ್ಮದಲ್ಲೂ ಕೂಡ ಭಾರತದಲ್ಲೇ ಹುಟ್ಟಿ, ಇಂಡಿಯಾ ಟೀಂನಲ್ಲೇ ಆಡಲು ಸೌರವ್ ಗಂಗೂಲಿ ಉತ್ಸುಕ

113 ಟೆಸ್ಟ್ ಪಂದ್ಯಗಳಲ್ಲಿ ಗಂಗೂಲಿ ಭಾರತವನ್ನು ಪ್ರತಿನಿಧಿಸಿದರು. 35 ಅರ್ಧಶತಕ ಮತ್ತು 16 ಶತಕಗಳ ಸಹಾಯದಿಂದ 7212 ರನ್ ಗಳಿಸಿದರು. ಅವರು ಟೆಸ್ಟ್ ನಲ್ಲಿ ಅಮೂಲ್ಯ 32 ವಿಕೆಟ್‌ಗಳನ್ನು ಪಡೆದರು.

  • Share this:

    ಭಾರತದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥ ಸೌರವ್ ಗಂಗೂಲಿ ಅವರು ತಮ್ಮ “ಮುಂದಿನ 3 ಜನ್ಮದಲ್ಲಿಯೂ ಕೂಡ ತಾನು ಭಾರತದಲ್ಲೇ ಹುಟ್ಟಿ, ಭಾರತ ತಂಡದಲ್ಲಿ ಆಡಲು ಇಚ್ಛಿಸಿರುವುದಾಗಿ ಹೇಳಿದ್ದಾರೆ. ಕ್ರಿಕೆಟ್ ಉತ್ಸಾಹಿಗಳಲ್ಲಿ ದಾದಾ ಎಂದು ಜನಪ್ರಿಯವಾಗಿರುವ ಗಂಗೂಲಿ ಮಂಗಳವಾರ ನೀಲಿ ಜರ್ಸಿಯಲ್ಲಿ ತನ್ನ ಲಾಫ್ಟೆಡ್ ಶಾಟ್ ಆಡುತ್ತಿರುವ ಫೋಟೋವನ್ನು ಹಂಚಿಕೊಂಡರು. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಗಂಗೂಲಿ, ತಮ್ಮ ಮುಂದಿನ ಮೂರು ಜೀವನದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಬಯಕೆಯನ್ನು ತಮ್ಮ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದರು. 1992 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಸೌರವ್ ಗಂಗೂಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದರು. 2007 ರಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದ ಇವರು, ಕೊನೆಗೆ 2008 ರಲ್ಲಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

    ತಮ್ಮ ಚೊಚ್ಚಲ ಪಂದ್ಯದಲ್ಲಿ ಗಂಗೂಲಿ ಅವರು ಆ್ಯಂಡ್ರೇ ಕಮ್ಮಿನ್ಸ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸುವ ಮೊದಲು ಕೇವಲ 3 ರನ್ ಮಾತ್ರ ಗಳಿಸಿದ್ದರು. ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ, ಆಫ್ ಸೆಡ್ ಕಿಂಗ್ ಖ್ಯಾತಿಯ ಎಡಗೈ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ಗ್ವಾಲಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ಶೋಯೆಬ್ ಅಖ್ತರ್ ಎಸೆತದಲ್ಲಿ ಐದು ರನ್‌ ಗಳಿಸಿದ್ದಾಗ ಔಟ್ ಆದರು. ಗಂಗೂಲಿ ತಮ್ಮ ವೃತ್ತಿ ಜೀವನದಲ್ಲಿ 22 ಶತಕ ಮತ್ತು 72 ಅರ್ಧಶತಕಗಳ ಸಹಾಯದಿಂದ ಭಾರತ ಪರ 11,363 ರನ್ ಗಳಿಸಿದರು. ಅವರು ಏಕದಿನದಲ್ಲಿ 5.06ರ ಎಕಾನಮಿ ರೇಟ್‌ನಲ್ಲಿ 100 ವಿಕೆಟ್ ಗಳಿಸಿದ್ದಾರೆ.

    ಇದನ್ನೂ ಓದಿ: Aircraft Crash: ಪಂಜಾಬ್​ನಲ್ಲಿ ಮಿಗ್-21 ಯುದ್ಧವಿಮಾನ ಪತನ; IAF ಪೈಲಟ್ ಸಾವು

    1996ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗಂಗೂಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದು, 301 ಎಸೆತಗಳಲ್ಲಿ 20 ಬೌಂಡರಿಗಳನ್ನು ಸಿಡಿಸಿ 131 ರನ್ ಗಳಿಸಿದರು. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಮೊದಲ ಹಾಗೂ ಎರಡನೇ ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 85 ಮತ್ತು 0 ರನ್ ಗಳಿಸಿದರು.

    113 ಟೆಸ್ಟ್ ಪಂದ್ಯಗಳಲ್ಲಿ ಗಂಗೂಲಿ ಭಾರತವನ್ನು ಪ್ರತಿನಿಧಿಸಿದರು. 35 ಅರ್ಧಶತಕ ಮತ್ತು 16 ಶತಕಗಳ ಸಹಾಯದಿಂದ 7212 ರನ್ ಗಳಿಸಿದರು. ಅವರು ಟೆಸ್ಟ್ ನಲ್ಲಿ ಅಮೂಲ್ಯ 32 ವಿಕೆಟ್‌ಗಳನ್ನು ಪಡೆದರು.

    ಇದನ್ನೂ ಓದಿ: Stratosphere Layer: 60 ವರ್ಷಗಳಲ್ಲಿ 4% ಕುಗ್ಗಿದ ವಾಯುಮಂಡಲದ ಸ್ಟ್ರಾಟೋಸ್ಫಿಯರ್ ಪದರ; ಇದಕ್ಕೆ ಕಾರಣವೇನು?

    ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಂಟು ವರ್ಷಗಳ ನಂತರ ಭಾರತ ತಂಡವು ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ತುತ್ತಾಯಿತು. ಗಂಗೂಲಿಗೆ 2000 ರಲ್ಲಿ ಭಾರತದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಯಿತು. ಭಾರತೀಯ ತಂಡವನ್ನು ಅದ್ಭುತವಾಗಿ ಮತ್ತೊಮ್ಮೆ ಕಟ್ಟಿಕೊಟ್ಟ ಅವರು ತಮ್ಮ ಆಕ್ರಮಣಕಾರಿ ಮನಸ್ಥಿತಿಗೆ ಹೆಸರಾಗಿದ್ದಾರೆ.

    ಗಂಗೂಲಿ 49 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು, ಇದರಲ್ಲಿ ದೇಶವು 21 ಪಂದ್ಯಗಳಲ್ಲಿ ಜಯಗಳಿಸಿದರೆ 15 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತು. ನಾಯಕನಾಗಿ 146 ಏಕದಿನ ಪಂದ್ಯಗಳಲ್ಲಿ 76 ಪಂದ್ಯಗಳಲ್ಲಿ ಜಯಗಳಿಸಲು ಭಾರತಕ್ಕೆ ಮಾರ್ಗದರ್ಶನ ನೀಡಿದರು.

    Published by:Latha CG
    First published: