Sourav Ganguly: ಸೌರವ್ ಗಂಗೂಲಿ ಮಾಡಿದ ಅದೊಂದು ಪೋಸ್ಟ್ ಈಗ ಇಷ್ಟೆಲ್ಲಾ ಸದ್ದು ಮಾಡ್ತಿದೆ! ನೀವು ನೋಡಿದ್ರಾ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐನ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಯವರ ಕಾಪಿ-ಪೇಸ್ಟ್ ಪ್ರಮಾದದ ಬಗ್ಗೆ ನಿಮಗೆ ಈಗಾಗಲೇ ತಿಳಿದಿರುತ್ತದೆ ಎಂದು ನಾವು ಅಂದುಕೊಳ್ಳುತ್ತೇವೆ. ಯಾರಿಗೆ ಇದರ ಬಗ್ಗೆ ತಿಳಿದಿಲ್ಲವೋ, ಇಲ್ಲಿ ಓದಿ ಅದನ್ನು ತಿಳಿದುಕೊಳ್ಳಬಹುದು.

ಸೌರವ್ ಗಂಗೂಲಿಯವರ ಸೋಶಿಯಲ್ ಮೀಡಿಯಾ ಪೋಸ್ಟ್

ಸೌರವ್ ಗಂಗೂಲಿಯವರ ಸೋಶಿಯಲ್ ಮೀಡಿಯಾ ಪೋಸ್ಟ್

  • Share this:
ಕೆಲವೊಮ್ಮೆ ನಾವು ಯಾರಿಗೊ ಮೊಬೈಲ್ ಫೋನ್ ನಲ್ಲಿ (Mobile Phone) ಸಂದೇಶ ಕಳುಹಿಸಬೇಕಾದರೆ, ಅದರಲ್ಲಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿರುವ ಸಾಧ್ಯತೆಗಳಿರುತ್ತವೆ ಹಾಗೂ ಅದರಂತೆ ನೋಡಿದವರು ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ನೀವು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಏನಾದರೂ ಪೋಸ್ಟ್ ಮಾಡುವಾಗ ಒಂದು ಸಣ್ಣ ತಪ್ಪು ಮಾಡಿದರೂ ಸಹ ಅದನ್ನು ಕೂಡಲೇ ನೆಟ್ಟಿಗರು ಅದಕ್ಕೆ ಟ್ವೀಟ್ (Tweet) ಮಾಡಿಯೋ ಅಥವಾ ಆ ತಪ್ಪಿನ (Mistakes) ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಅದನ್ನು ಮರು ಹಂಚಿಕೊಳ್ಳುವುದರೊಂದಿಗೆ ಪೋಸ್ಟ್ ಅನ್ನು ಸಿಕ್ಕಾಪಟ್ಟೆ ವೈರಲ್ ಆಗುವಂತೆ ಮಾಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ನೆಟ್ಟಿಗರು ಈ ಜನಪ್ರಿಯ ವ್ಯಕ್ತಿಗಳು ಹಾಕುವ ಪೋಸ್ಟ್ ಗಳ (Post) ಮೇಲೆ ಹದ್ದಿನ ಕಣ್ಣನ್ನು ಇಟ್ಟಿರುತ್ತಾರೆ.

ಮಾಜಿ ಕ್ರಿಕೆಟಿಗನ ಪೋಸ್ಟ್ ವೈರಲ್ 
ಇಲ್ಲಿಯೂ ಸಹ ಒಬ್ಬ ದೊಡ್ಡ ಮಾಜಿ ಕ್ರಿಕೆಟಿಗನ ಪೋಸ್ಟ್ ಅನ್ನು ವೈರಲ್ ಆಗುವಂತೆ ಮಾಡಿದ್ದಾರೆ ನೋಡಿ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐನ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಯವರ ಕಾಪಿ-ಪೇಸ್ಟ್ ಪ್ರಮಾದದ ಬಗ್ಗೆ ನಿಮಗೆ ಈಗಾಗಲೇ ತಿಳಿದಿರುತ್ತದೆ ಎಂದು ನಾವು ಅಂದುಕೊಳ್ಳುತ್ತೇವೆ. ಯಾರಿಗೆ ಇದರ ಬಗ್ಗೆ ತಿಳಿದಿಲ್ಲವೋ, ಇಲ್ಲಿ ಓದಿ ಅದನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Video: ಇವ್ರೇನು ರಾಕಿ ಭಾಯ್‌ನಾ, ರಾಕಿ ಭಾಯ್ ತಮ್ಮನಾ? ಸೆಲ್ಫಿಗಾಗಿ ಓಡೋಡಿ ಬಂದವಳು ಫುಲ್ ಕನ್ಫ್ಯೂಸ್!

ಇತ್ತೀಚೆಗೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಮೀಶೋ ಅವರ ಇತ್ತೀಚಿನ ಒಂದು ಪ್ರಾಜೆಕ್ಟ್ ಬಗ್ಗೆ ಈ ಪೋಸ್ಟ್ ಆಗಿದ್ದು, ಇದರ ಸಂಚಲನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿ ಸೃಷ್ಟಿಸಲು ಹಲವಾರು ಸೆಲೆಬ್ರಿಟಿಗಳನ್ನು ನೇಮಿಸಲಾಯಿತು. ಆದಾಗ್ಯೂ, ಪ್ರಚಾರದ ಸ್ಟಂಟ್ ಸಮಯದಲ್ಲಿ ತಮ್ಮ ಗುರುತನ್ನು ಬಹಿರಂಗಪಡಿಸದಂತೆ ಮೀಶೋ ಸೆಲೆಬ್ರಿಟಿಗಳನ್ನು ಹೇಳಿದ್ದರು. ಆದರೆ, ಗಂಗೂಲಿ ಅವರ ಸಾಮಾಜಿಕ ಮಾಧ್ಯಮ ತಂಡವು ಆಕಸ್ಮಿಕವಾಗಿ ಅದನ್ನು ಬಹಿರಂಗಪಡಿಸಿತು ಮತ್ತು ಈ ಪೋಸ್ಟ್ ಆನ್ಲೈನ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು.

ಇದಕ್ಕೆ ಮೀಶೋ ಪ್ರತಿಕ್ರಿಯೆ ಹೀಗಿತ್ತು
ಇದಾದ ನಂತರ ಮೀಶೋ ಹೇಗೆ ಪ್ರತಿಕ್ರಿಯಿಸಿರುತ್ತಾರೆ ಅಂತ ತಿಳಿದುಕೊಳ್ಳಲು ನಿಮಗೆ ತುಂಬಾನೇ ಕುತೂಹಲವಿರುತ್ತೆ ಅಂತ ಹೇಳಿದರೆ ಸುಳ್ಳಾಗದು. ಈ ಪೋಸ್ಟ್ ವೈರಲ್ ಆದ ನಂತರ ಮೀಶೋ ಟ್ವಿಟ್ಟರ್ ನಲ್ಲಿ ಬುದ್ಧಿವಂತ ಪೋಸ್ಟ್ ನೊಂದಿಗೆ ಇಡೀ ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಕಾಮಿಡಿ ಶೋ ನ ದಿಗ್ಗಜ ಕಪಿಲ್ ಶರ್ಮಾ ಮತ್ತು ಕ್ರಿಕೆಟಿಗ ರೋಹಿತ್ ಶರ್ಮಾ ಅವರಂತಹ ಸೆಲೆಬ್ರಿಟಿಗಳು ಸೌರವ್ ಗಂಗೂಲಿ ಅವರೊಂದಿಗೆ ಮೀಶೋ ಅವರ ಇತ್ತೀಚಿನ ಪ್ರಾಜೆಕ್ಟ್ ನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನವನ್ನು ಸೃಷ್ಟಿಸಲು ಸೇರಿಕೊಂಡರು.ಸೆಲೆಬ್ರಿಟಿಗಳು ಮೆಗಾ ಬ್ಲಾಕ್ ಬಸ್ಟರ್ ಚಿತ್ರದ ಪೋಸ್ಟರ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದರ ಟ್ರೈಲರ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಲಿದೆ ಎಂದು ಸಹ ಅದರಲ್ಲಿ ಬರೆದಿದೆ. ಆದಾಗ್ಯೂ, ಬಿಸಿಸಿಐ ಅಧ್ಯಕ್ಷರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ನಲ್ಲಿ ಎದ್ದುಕಾಣುವ ದೋಷವನ್ನು ಹದ್ದಿನ ಕಣ್ಣಿನ ನೆಟ್ಟಿಗರು ಗಮನಿಸದೆ ಇರಲು ಸಾಧ್ಯವಾಗಲಿಲ್ಲ.

ಪೋಸ್ಟ್ ಡಿಲೀಟ್ ಮಾಡಿದ್ರೂ ಫುಲ್ ವೈರಲ್ 
ವಾಸ್ತವವಾಗಿ, ಕ್ರಿಕೆಟಿಗನ ಸಾಮಾಜಿಕ ಮಾಧ್ಯಮ ತಂಡವು ಮೀಶೋ ಹಂಚಿಕೊಂಡ ಸಂಪೂರ್ಣ ಸಂದೇಶವನ್ನು ಹಾಗೆಯೇ ಕಾಪಿ ಮಾಡಿ ಇವರ ಪುಟದಲ್ಲಿ ಪೇಸ್ಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇದು ಆಕಸ್ಮಿಕವಾಗಿ ಬಹಿರಂಗಪಡಿಸುವಿಕೆಗೆ ಕಾರಣವಾಯಿತು. ನಂತರ ಆ ಪೋಸ್ಟ್ ಅನ್ನು ಅಳಿಸಲಾಗಿದೆ, ಆದರೆ ಅದರ ಸ್ಕ್ರೀನ್ ಶಾಟ್ ಸ್ಪಷ್ಟವಾಗಿ ಆನ್ಲೈನ್ ನಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Viral Post: 16 ಮಕ್ಕಳಿಗೆ ಜನ್ಮ ನೀಡಿ 17ನೇ ಮಗುವಿನ ನಿರೀಕ್ಷೆಯಲ್ಲಿರುವ ಮಹಾ ತಾಯಿ!

ನಂತರ, ಮೀಶೋ ಟ್ವಿಟ್ಟರ್ ನಲ್ಲಿ ತಮಾಷೆಯ ಪೋಸ್ಟ್ ನೊಂದಿಗೆ ಅದಕ್ಕೆ ಪ್ರತಿಕ್ರಿಯಿಸಿದೆ. "ದಾದಾ ಸರಿಯಾಗಿ ಶಾಟ್ ಹೊಡೆದರೂ, ಅದು ಸಿಕ್ಸರ್. ದಾದಾ ಕೆಲವೊಮ್ಮೆ ಆ ಶಾಟ್ ಅನ್ನು ಹೊಡೆಯಲು ಮಿಸ್ ಆಗಿ ಹೋದರೂ ಅದು ಸಿಕ್ಸ್ ಹೋಗಿರುತ್ತದೆ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ನೋಡಿದ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ “ದಾದಾ ನೇ ಮ್ಯಾನ್ ಆಫ್ ದಿ ಮ್ಯಾಚ್” ಅಂತ ಒಬ್ಬರು ಕಾಮೆಂಟ್ ಹಾಕಿದರೆ, ಇನ್ನೊಬ್ಬರು “ಇದು ಎಡ್ಜ್ ಆಗಿದೆ, ಆದರೆ ಕ್ಯಾಚ್ ಆಗಲಿಲ್ಲ” ಅಂತ ಬರೆದಿದ್ದಾರೆ.
Published by:Ashwini Prabhu
First published: