• Home
  • »
  • News
  • »
  • cricket-2
  • »
  • IND vs SA ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು, ವರ್ಲ್ಡ್​ಕಪ್​ಗೂ ಮುಂಚೆ ಕುಕ್ಕೆಗೆ ಹೋಗಿ ಪೂಜೆ ಮಾಡ್ಸಿ ಎಂದ ಫ್ಯಾನ್ಸ್​!

IND vs SA ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು, ವರ್ಲ್ಡ್​ಕಪ್​ಗೂ ಮುಂಚೆ ಕುಕ್ಕೆಗೆ ಹೋಗಿ ಪೂಜೆ ಮಾಡ್ಸಿ ಎಂದ ಫ್ಯಾನ್ಸ್​!

ಮೈದಾನಕ್ಕೆ ನುಗ್ಗಿದ ಹಾವು

ಮೈದಾನಕ್ಕೆ ನುಗ್ಗಿದ ಹಾವು

ನಿನ್ನೆ ರಾತ್ರಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವೆ ನಡೆದಂತಹ ಟಿ- 20 ಕ್ರಿಕೆಟ್ ಪಂದ್ಯದಲ್ಲಿ ಒಂದು ಉದ್ದನೆಯ ಹಾವು ಹಾಗೆಯೇ ಕ್ರಿಕೆಟ್ ಆಟದ ಮೈದಾನಕ್ಕೆ ನುಗ್ಗಿರುವ ಘಟನೆ ನಡೆಯಿತು.

  • Share this:

ಕ್ರಿಕೆಟ್ (Cricket) ಪಂದ್ಯದಲ್ಲಿ ಬರೀ ಬಾಲ್ (Ball) ಮತ್ತು ಬ್ಯಾಟ್ (Bat) ಗಳ ಅಬ್ಬರ ಇರುತ್ತದೆ ಅಂತ ನೀವು ತಿಳಿದುಕೊಂಡರೆ, ಅದು ತಪ್ಪು, ಏಕೆಂದರೆ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಆಟದ ಮೈದಾನ (Ground) ದಲ್ಲಿ ಏನಾದರೊಂದು ರೋಚಕವಾದ ಘಟನೆಗಳು ನಡೆಯುತ್ತಲೆ ಇರುವುದನ್ನು ನಾವು ನೋಡಿರುತ್ತೇವೆ. ಪ್ರೇಕ್ಷಕರು (Audience) ಕಿಕ್ಕಿರಿದು ಬಂದು ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕ್ರಿಕೆಟ್ ಆಟದ ಮಜಾ ಜೊತೆ ಒಮ್ಮೊಮ್ಮೆ ಇನ್ನಿತರೆ ಬೇರೆ ಬೇರೆ ಅನಿರೀಕ್ಷಿತ ಘಟನೆಗಳನ್ನೂ ಸಹ ಅವರು ನೋಡಬಹುದಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹಿಂದೆ ನಾವು ಕ್ರಿಕೆಟ್ ಆಟ(Cricket Game) ನಡೆಯಬೇಕಾದರೆ ಆಟದ ಮೈದಾನಕ್ಕೆ ದಿಢೀರನೆ ನಾಯಿಯೊಂದು ನುಗ್ಗಿ ಸ್ವಲ್ಪ ಹೊತ್ತು ಯಾವೊಬ್ಬ ಸಿಬ್ಬಂದಿಯ ಕೈಗೂ ಸಿಗದೇ ಇಡೀ ಆಟದ ಮೈದಾನವನ್ನು ಸುತ್ತಿಕೊಂಡು ಬಂದಿದ್ದ ಘಟನೆಯೊಂದು ನಡೆದಿತ್ತು.


ಇನ್ನೊಂದು ಘಟನೆಯಲ್ಲಿ ಜೇನುನೊಣಗಳ ಹಿಂಡೊಂದು ಆಟದ ಮೈದಾನಕ್ಕೆ ನುಗ್ಗಿತ್ತು. ಆಗ ಎಲ್ಲಾ ಕ್ರಿಕೆಟ್ ಆಟಗಾರರು ಎಲ್ಲಿ ಜೇನುನೊಣಗಳು ಕಚ್ಚಬಹುದು ಅಂತ ಎಲ್ಲರೂ ಅಲ್ಲಿಯೇ ಕೆಳಗೆ ಕುಳಿತುಕೊಂಡು ತಮ್ಮ ಕ್ಯಾಪ್ ಸಹಾಯದಿಂದ ಮುಖ ಮುಚ್ಚಿಕೊಂಡಿದ್ದನ್ನು ನೋಡಿದ್ದೆವು.


ಕ್ರಿಕೆಟ್​ ಮೈದಾನಕ್ಕೆ ಬಂದ ಹಾವು!


ಈಗ ನಿನ್ನೆ ರಾತ್ರಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವೆ ನಡೆದಂತಹ ಟಿ- 20 ಕ್ರಿಕೆಟ್ ಪಂದ್ಯದಲ್ಲಿ ಒಂದು ಉದ್ದನೆಯ ಹಾವು ಹಾಗೆಯೇ ಕ್ರಿಕೆಟ್ ಆಟದ ಮೈದಾನಕ್ಕೆ ನುಗ್ಗಿರುವ ಘಟನೆ ನಡೆಯಿತು. ಭಾರತೀಯ ಇನ್ನಿಂಗ್ಸ್ ನ 7ನೇ ಓವರ್ ನ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಎಲ್ಲರೂ ಫೀಲ್ಡಿಂಗ್ ಅನ್ನು ಮರು ಹೊಂದಿಸುತ್ತಿರುವಾಗ ಅಲ್ಲೊಂದು ಹಾವು ಆಟದ ಮೈದಾನದಲ್ಲಿ ಓಡಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ಆ ಹಾವು ಲಾಂಗ್-ಆನ್ ಕಡೆಗೆ ಚಲಿಸುತ್ತಿದ್ದುದ್ದನ್ನು ಆಟಗಾರರು ನೋಡಿದ್ದಾರೆ.


ರಾಹುಲ್ ಬ್ಯಾಟಿಂಗ್ ಮಾಡ್ತಿದ್ದ ವೇಳೆ ಹಾವು ಎಂಟ್ರಿ!


ಹಾವು ಮಧ್ಯೆ ಬಂದಿದ್ದಕ್ಕೆ ಸ್ವಲ್ಪ ಹೊತ್ತು ಅದನ್ನು ಹಿಡಿದುಕೊಂಡು ಹೋಗಲು ಆಟದ ಮೈದಾನದ ಸಿಬ್ಬಂದಿಗಳು ಮೈದಾನಕ್ಕೆ ಇಳಿದಾಗ ಆಟವನ್ನು ಸ್ವಲ್ಪ ಹೊತ್ತು ನಿಲ್ಲಿಸಲಾಯಿತು. ಕ್ರಿಕೆಟ್ ಆಟದ ಇತಿಹಾಸದಲ್ಲಿ, ಆಟವನ್ನು ನಿಲ್ಲಿಸಲು ಹಲವಾರು ವಿಲಕ್ಷಣ ಕಾರಣಗಳಿವೆ. ಆದರೆ ಇದು ತುಂಬಾನೇ ಹೊಸ ಘಟನೆ ಅಂತ ಹೇಳಬಹುದು. ಅಸ್ಸಾಂನ ಗುವಾಹಟಿಯಲ್ಲಿರುವ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೊಳೆಯುವ ಕಪ್ಪು ಬಣ್ಣದ ಸರೀಸೃಪದಿಂದಾಗಿ ಆಟವನ್ನು ಸಂಕ್ಷಿಪ್ತವಾಗಿ ನಿಲ್ಲಿಸಿದ ವಿಶಿಷ್ಟ ಸ್ಥಳವಾ


ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ತ್ರಿಮೂರ್ತಿಗಳ ವಿಶೇಷ ದಾಖಲೆ, ಅತಿವೇಗದ ಅರ್ಧಶತಕ ಬಾರಿಸಿದ ಯಾದವ್​


ವಿಡಿಯೋ ಸಿಕ್ಕಾಪಟ್ಟೆ ವೈರಲ್​!


ಇಲ್ಲಿನ ಹಾವುಗಳು ನಿಜವಾದ ಕ್ರಿಕೆಟ್ ಅಭಿಮಾನಿಗಳು ಅಂತ ಅನ್ನಿಸುತ್ತದೆ, ಏಕೆಂದರೆ ಆಟದ ಮೈದಾನದಲ್ಲಿ ಓಡಾಡುತ್ತಿದ್ದ ಆ ಹಾವನ್ನು ನಾಲ್ಕು ಜನ ಸಮವಸ್ತ್ರಧಾರಿ ಪುರುಷರ ಗುಂಪು ಸ್ವಲ್ಪವೂ ಸಹ ಆತಂಕಗೊಳ್ಳದೇ ಬಂದು ಅದನ್ನು ಹಿಡಿದುಕೊಂಡು ಹೋದರು.ಒಬ್ಬರ ಕೈಯಲ್ಲಿ ಹಾವು ಹಿಡಿಯುವ ಕೋಲು ಮತ್ತು ಇನ್ನೊಬ್ಬರ ಬಳಿ ಒಂದು ಪಾತ್ರೆ ಇತ್ತು. ಬ್ರಾಡ್ ಕಾಸ್ಟರ್ ಗಳು ಆ ಹಾವನ್ನು ಹೇಗೆ ಹಿಡಿದರು ಅನ್ನೋದನ್ನ ತೋರಿಸದೆ ರೋಹಿತ್ ಶರ್ಮಾ ಅವರು ಸಿಕ್ಸರ್ ಗಳನ್ನು ಹೊಡೆಯುವ ಹಳೆಯ ದೃಶ್ಯಾವಳಿಯನ್ನು ತೋರಿಸಲು ಪ್ರಾರಂಭಿಸಿದರು.


ಇದನ್ನೂ ಓದಿ: ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಜಯ, ವ್ಯರ್ಥವಾದ ಮಿಲ್ಲರ್ ಶತಕ


ಅಂತೂ ಇಂತೂ ಅಸ್ಸಾಂ ನಲ್ಲಿರುವ ಕ್ರಿಕೆಟ್ ಆಟದ ಮೈದಾನವು ಈ ಹಾವಿನ ಕಾರಣದಿಂದಾಗಿ ಇತಿಹಾಸದ ಪುಸ್ತಕಗಳಲ್ಲಿ ಸೇರಿಕೊಂಡಿತು ಎಂದು ಹೇಳಬಹುದು.


ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಭಾರತದ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾ ತನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಒಂದು ಬದಲಾವಣೆ ಮಾಡಿದ್ದು, ಎಡಗೈ ಸ್ಪಿನ್ನರ್ ತಬ್ರೈಜ್ ಶಮ್ಸಿ ಬದಲಿಗೆ ವೇಗಿ ಲುಂಗಿ ಎನ್ಗಿಡಿ ಅವರನ್ನು ಕರೆಸಿದ್ದರು. ಕೊನೆಗೆ ಈ ಪಂದ್ಯವನ್ನು ಭಾರತ ತಂಡವು 16 ರನ್ ಗಳಿಂದ ಗೆದ್ದುಕೊಂಡಿತು.

Published by:ವಾಸುದೇವ್ ಎಂ
First published: