ಮೋಸಗಾರನ ಪತ್ನಿ... ಶೇಮ್ ಶೇಮ್; ಮಗಳು ಸೇರಿ ಅಶ್ವಿನ್ ಹೆಂಡತಿ ಟ್ರೋಲ್ ಆಗಿದ್ದು ಹೀಗೆ!

ಮನ್​​ಕಡ್ ರನೌಟ್ ಬಗ್ಗೆ ಕ್ರಿಕೆಟ್ ದಿಗ್ಗಜರು ಸಹ ಈ ಸಂಬಂಧ ಪರ-ವಿರೋದ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Vinay Bhat | news18
Updated:March 27, 2019, 4:03 PM IST
ಮೋಸಗಾರನ ಪತ್ನಿ... ಶೇಮ್ ಶೇಮ್; ಮಗಳು ಸೇರಿ ಅಶ್ವಿನ್ ಹೆಂಡತಿ ಟ್ರೋಲ್ ಆಗಿದ್ದು ಹೀಗೆ!
ಮನ್​​ಕಡ್ ರನೌಟ್ ಬಗ್ಗೆ ಕ್ರಿಕೆಟ್ ದಿಗ್ಗಜರು ಸಹ ಈ ಸಂಬಂಧ ಪರ-ವಿರೋದ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
  • News18
  • Last Updated: March 27, 2019, 4:03 PM IST
  • Share this:
ಐಪಿಎಲ್ 12ನೇ ಆವೃತ್ತಿಯ ನಿನ್ನೆಯ ಪಂದ್ಯದಲ್ಲಿ ಕಿಂಗ್ಸ್​ ಇಲೆವನ್​ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್​ ವಿರುದ್ಧ14 ರನ್​ಗಳ ಗೆಲುವು ಸಾಧಿಸಿದೆ. ಈ ರೋಚಕ ಪಂದ್ಯದಲ್ಲಿ ರಾಜಸ್ಥಾನ ತಂಡದ ಆಟಗಾರ ಜಾಸ್​ ಬಟ್ಟರ್​ ಔಟ್ ಆದ ರೀತಿ ಹೊಸ ಚರ್ಚೆಗೆ ಕಾರಣವಾಗಿತ್ತು. ರಾಜಸ್ಥಾನ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನದಲ್ಲಿದ್ದ ಜಾಸ್ ಬಟ್ಲರ್​ ಅನ್ನು ಆರ್​. ಅಶ್ವಿನ್ ಮನ್​ಕಡ್ ರನೌಟ್ ಮೂಲಕ ಪೆವಿಲಿಯನ್ ಕಳುಹಿಸಿದ್ದರು.

43 ಎಸೆತಗಳಲ್ಲಿ ಅಮೋಘ 69 ರನ್ ಸಿಡಿಸಿದ್ದ ಬಟ್ಲರ್​ ರನ್ನು ಅಶ್ವಿನ್ ಬೌಲಿಂಗ್ ಮಾಡುವ ಮುನ್ನವೇ ರನೌಟ್​ ಮಾಡಿದ್ದರು. ಬ್ಯಾಟ್ಸಮನ್​ಗೆ ಯಾವುದೇ ರೀತಿಯ ಎಚ್ಚರಿಕೆ ನೀಡದೇ ಔಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಕೆಟ್ ದಿಗ್ಗಜರು ಸಹ ಈ ಸಂಬಂಧ ಪರ-ವಿರೋದ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ‘ನನ್ನ ಆಟಕ್ಕೆ ಕ್ಯಾಪ್ಟನ್ ಕೂಲ್, ಕೂಲ್ ಆಗಿರಲ್ಲ'; ಧೋನಿಗೂ ಶುರುವಾಗಿದೆ ಪಂತ್ ಭಯ!

ಅದರಲ್ಲೂ ಅಶ್ವಿನ್ ಪತ್ನಿ ಪೃಥ್ವಿ ಅಶ್ವಿನ್ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಫೋಟೋಕ್ಕೆ ವಿಚಿತ್ರ ರೀತಿಯಲ್ಲಿ ಕಮೆಂಟ್ ಬರೆದು ಟ್ರೋಲ್ ಮಾಡಿದ್ದಾರೆ. 'ಮೇಡಂ,.. ಅಶ್ವಿನ್ ಅವರು ಅವಮಾನಕರ ರೀತಿಯಲ್ಲಿ ವರ್ತಿಸಿದ್ದಾರೆ. ಬಟ್ಲರ್​​​ ಅನ್ನು ಔಟ್ ಮಾಡಲು ಅಶ್ವಿನ್ ಮೊರೆಹೋದ ರೀತಿ ತುಂಬಾ ಕೆಟ್ಟದಾಗಿತ್ತು' ಎಂಬ ಕಮೆಂಟ್​​ಗಳು ಬಂದಿವೆ.

 
 
ಇನ್ನು 'ಮೋಸಗಾರನ ಪತ್ನಿ… ಶೇಮ್ ಶೇಮ್' ಎಂಬ ಮತ್ತೊಂದು ಕಮೆಂಟ್ ಇದ್ದರೆ, 'ನಿಮ್ಮ ಗಂಡ ಇಂದು ಕ್ರಿಕೆಟ್​ನಲ್ಲಿ ಎಲ್ಲರಿಗೂ ನಾಜಿಕೆಯಾಗುವ ಕೆಲಸ ಮಾಡಿದ್ದಾರೆ' ಸೇರಿ ಅನೇಕ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ಮನ್​​ಕಡ್ ರನೌಟ್: ಕ್ರಿಕೆಟ್​ ಜಗತ್ತಿಗೆ ಈ ನಿಯಮವನ್ನು ಪರಿಚಯಿಸಿದ್ದು ಭಾರತೀಯ ಆಟಗಾರ..!

ಕೇವಲ ಪೃಥ್ವಿ ಅಶ್ವಿನ್​ರ ಫೋಟೋಕ್ಕೆ ಮಾತ್ರವಲ್ಲದೆ ಅವರ ಮಗಳು ಆಧ್ಯಾ ಅವರ ಫೋಟೋಕ್ಕೂ 'ನಿನ್ನ ತಂದೆ ದೊಡ್ಡ ಮೋಸಗಾರ' ಎಂದು ಕಮೆಂಟ್ ಮಾಡಿದ್ದಾರೆ.

 

ಇದರಿಂದ ಬೇಸತ್ತು ಕೊನೆಗೆ ಟ್ವೀಟ್ ಮಾಡಿರುವ ಪೃಥ್ವಿ ಅಶ್ವಿನ್, 'ಈ ವಿಚಾರಕ್ಕೆ ಸಂಭಂಪಟ್ಟಂತೆ ನಿಯಮ ಹಾಗೂ ಕ್ಯಾಮೆರಗಳಿವೆ. ನನ್ನನ್ನು ಬಿಟ್ಟುಬಿಡಿ' ಎಂಬ ರೀತಿಯಲ್ಲಿ ಬರೆದುಕೊಂಡಿದ್ದಾರೆ.

 

ಇನ್ನು ಪಂದ್ಯ ಮುಗಿದ ಬಳಿಕ ಬಟ್ಲರ್ ಔಟ್ ಮಾಡಿದ ಬಗ್ಗೆ ಮಾತಮಾಡಿದ ಅಶ್ವಿನ್ , ನಾನು ಕ್ರಿಕೆಟ್ ನಿಯಮಗಳ ಪ್ರಕಾರ ಜಾಸ್ ಬಟ್ಲರ್ ರನ್ನು ಔಟ್ ಮಾಡಿದ್ದೇನೆ. ಇಲ್ಲಿ ಕ್ರೀಡಾಸ್ಪೂರ್ತಿಯ ಪ್ರಶ್ನೆ ಎಲ್ಲಿಂದ ಉದ್ಭವ ಆಗಿದೆ ಎಂದು ತಿಳಿಯುತ್ತಿಲ್ಲ. ಐಸಿಸಿಯ ರೂಲ್ಸ್​ನ 41.16 ನಿಯಮದ ಅಡಿಯಲ್ಲಿ ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸಮನ್ ಕ್ರೀಸ್ ಬಿಟ್ಟರೆ, ಆತನನ್ನು ರನೌಟ್ ಮಾಡಬಹುದು. ಈಗ ನಾನು ಮಾಡಿದ್ದು ತಪ್ಪು ಎಂದಾದರೆ ಮೊದಲು ನಿಯಮವನ್ನು ಬದಲಿಸಬೇಕಾಗುತ್ತದೆ ಎಂದು ಅಶ್ವಿನ್ ಹೇಳಿದ್ದರು.

 

First published:March 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading