ಭಾರತದಲ್ಲಿ ಕ್ರಿಕೆಟ್ ಅನ್ನು ಕೇವಲ ಆಟಕ್ಕಿಂತ ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಕ್ರಿಕೆಟ್ ಪಂದ್ಯಗಳನ್ನು, ಕ್ರಿಕೆಟಿಗರನ್ನು ಬೆರಗು ಗಣ್ಣುಗಳಿಂದಲೇ ನೋಡುತ್ತಾರೆ, ಫಾಲೋ ಮಾಡುತ್ತಾರೆ. ಇದೇ ರೀತಿ, ದೇಶದ ಕ್ರಿಕೆಟ್ ಅಭಿಮಾನಿಗಳ ಪೈಕಿ ಮೊದಲಿಗರ ಸಾಲಿನಲ್ಲಿ ಇರುವ ಅಭಿಮಾನಿ ಅಂದರೆ ಸುಧೀರ್ ಕುಮಾರ್ ಚೌಧರಿ ಎಂದರೆ ತಪ್ಪಾಗಲಾರದು. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಉತ್ಕಟ ಅಭಿಮಾನಿಯಾಗಿದ್ದ ಸುಧೀರ್, ಅವರ ನಿವೃತ್ತಿಯ ನಂತರವೂ ಮೆನ್ ಇನ್ ಬ್ಲೂಗಾಗಿ ಹಲವು ವರ್ಷಗಳಿಂದ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿರಂತರವಾಗಿ ಹುರಿದುಂಬಿಸುತ್ತಿರುತ್ತಾರೆ. ಬಿಹಾರ ಮೂಲದ ಮತ್ತು ವೃತ್ತಿಯಲ್ಲಿ ಶಿಕ್ಷಕನಾಗಿರುವ ಸುಧೀರ್, ಸ್ಟೇಡಿಯಂನಲ್ಲಿ ಜನಸಂದಣಿಯ ನಡುವೆಯೂ ಗುರುತಿಸಿಕೊಳ್ಳುತ್ತಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿಯುವುದಷ್ಟೇ ಅಲ್ಲದೆ, ಅವರ ದೇಹದ ಮೇಲೂ ಭಾರತದ ರಾಷ್ಟ್ರ ಧ್ವಜವೇ ಚಿತ್ರಿತವಾಗಿದೆ. ಸದ್ಯ, ಭಾರತದಲ್ಲಿ ಕೋವಿಡ್ - 19 ಕೇಸ್ಗಳು ಹೆಚ್ಚಿರುವುದರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಸ್ಟೇಡಿಯಂನಲ್ಲಿ ಯಾವ ಅಭಿಮಾನಿಗಳಿಗೆ ಪ್ರವೇಶವಿಲ್ಲದಿದ್ದರೂ ಸಹ ಸಚಿನ್ ಅಭಿಮಾನಿ ಸುಧೀರ್ ಮಾತ್ರ ಟೀಂ ಇಂಡಿಯಾಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಲೇ ಇದ್ದಾರೆ. ಸ್ಟೇಡಿಯಂಗೆ ದೂರದಿಂದ ಹಾಗೂ ಬೆಟ್ಟದ ಮೇಲೆ ನಿಂತುಕೊಂಡು ಚಿಯರ್ಸ್ ಹೇಳುತ್ತಿದ್ದಾರೆ. ಹೌದು, ಪುಣೆಯಲ್ಲಿ ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಳಿಯ ಬೆಟ್ಟದ ಮೇಲೆ ನಿಂತುಕೊಂಡು ತವರು ತಂಡಕ್ಕೆ ಬೆಂಬಲವನ್ನು ನೀಡಿದರು.
ಟಾಸ್ ಸೋತರೂ ಭಾರತ ತಂಡ ಮೊದಲು ಬ್ಯಾಟಿಂಗ್ಗೆ ಇಳಿದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ತಮ್ಮ ಐದನೇ ಶತಕ ಸಿಡಿಸಿದ ವೇಳೆ ಈ ಸೂಪರ್ ಫ್ಯಾನ್ ಸುಧೀರ್ ಅವರನ್ನು ಪಂದ್ಯಾವಳಿಯ ನಡುವೆ ಗುರುತಿಸಲಾಯ್ತು.
Indian cricket team super fan sudhir kumar gautam cheering for the team. #INDvENG thanks to cameraman. pic.twitter.com/5EJJ21YSJt
— SaiCric Krishna🏆🏏🎤🖋️ 🌱💂🎬 (@SaiKris75286313) March 26, 2021
ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ಸುಧೀರ್, ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದ್ದಕ್ಕೆ ತಮ್ಮ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ವೇಳೆಯೂ ಅವರು ಬೆಟ್ಟದ ಮೇಲೆ ನಿಂತುಕೊಂಡಿದ್ದರು.
ಎರಡನೇ ಏಕ ದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಶತಕ ಸಿಡಿಸಿದರೆ ವಿರಾಟ್ ಕೊಹ್ಲಿ 66 (79) ರನ್ ಗಳಿಸಿ ತಮ್ಮ ಮತ್ತೊಂದು ಅರ್ಧ ಶತಕ ದಾಖಲಿಸಿದರು. ಅಲ್ಲದೆ, ಕೇವಲ 40 ಎಸೆತಗಳಲ್ಲಿ 77 ರನ್ ಗಳಿಸಿದ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಚುರುಕಾದ 35 ರನ್ ಸಿಡಿಸಿ ಭಾರತವನ್ನು ಮತ್ತೊಮ್ಮೆ 300 ಕ್ಕೂ ಹೆಚ್ಚು ರನ್ ಗಳಿಸುವಂತೆ ನೋಡಿಕೊಂಡರು. ಒಟ್ಟಾರೆ ಟೀಂ ಇಂಡಿಯಾ 50 ಓವರ್ಗಳಲ್ಲಿ
336/6 ರನ್ ಗಳಿಸಿತು. ಆದರೂ, ಇಂಗ್ಲೆಂಡ್ ತಂಡ ಉತ್ತಮವಾಗಿ ಚೇಸ್ ಮಾಡಿ ಭಾರತದ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ.
View this post on Instagram
ಕೊಹ್ಲಿ ಆರು ಏಕದಿನ ಪಂದ್ಯಗಳಲ್ಲಿ ಅಗ್ರ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದು, 161 ರನ್ ಗಳಿಸಿದ್ದಾರೆ. 192 ಏಕದಿನ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 10046 ರನ್ ಗಳಿಸಿದ್ದಾರೆ. ನಂ. 4 ಬ್ಯಾಟಿಂಗ್ ಕ್ರಮಾಂಕದಲ್ಲಿ ಕೊಹ್ಲಿ 42 ಪಂದ್ಯಗಳಿಂದ 1767 ರನ್ ಗಳಿಸಿದ್ದು, 5 ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಐದು ಪಂದ್ಯಗಳಲ್ಲಿ 127 ರನ್ ಗಳಿಸಿದ್ದಾರೆ. ಇದೇ ರೀತಿ 6 ನೇ ಕ್ರಮಾಂಕದಲ್ಲಿ ಅವರು ಅಜೇಯ 23 ರನ್ ಗಳಿಸಿದ್ದರೆ, 7 ನೇ ಕ್ರಮಾಂಕದಲ್ಲಿ 37 ರನ್ ಗಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ