Viral Video: ರಾಂಚಿ T20 ಪಂದ್ಯದ ಸಮಯದಲ್ಲಿ ನಿಯಮ ಉಲ್ಲಂಘಿಸಿದ ಅಭಿಮಾನಿ! ಮಾಡಿದ್ದೇನು ಗೊತ್ತೇ?

ನಿನ್ನೆಯೂ ಅಂತಹದ್ದೇ ಘಟನೆ ನಡೆದಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ರಾಂಚಿಯಲ್ಲಿ ಸರಣಿಯ ಎರಡನೆಯ ಪಂದ್ಯ ನಡೆಯುತ್ತಿರುವಾಗ ದಿಢೀರನೆ ಅಭಿಮಾನಿಯೊಬ್ಬ ಆಟದ ಮೈದಾನದ ಭದ್ರತೆ ಉಲ್ಲಂಘಿಸಿ ಓಡುತ್ತಾ ನೇರವಾಗಿ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಬಳಿ ಹೋಗಿ ಅವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದರು.

ಫೋಟೋ: ಟ್ವಿಟ್ಟರ್

ಫೋಟೋ: ಟ್ವಿಟ್ಟರ್

  • Share this:
    India v/s New Zealand: ನಿನ್ನೆ ಭಾರತ (India) ಮತ್ತು ನ್ಯೂಜಿಲ್ಯಾಂಡ್ (new zealand) ನಡುವೆ ರಾಂಚಿಯಲ್ಲಿ ನಡೆದ T20 ಸರಣಿಯ ಎರಡನೆಯ ಪಂದ್ಯವನ್ನು ಯಾರು ವೀಕ್ಷಿಸಿರುತ್ತಾರೆಯೋ, ಅವರು ಖಂಡಿತವಾಗಿ ಆಟದ ಮಧ್ಯೆ ನಡೆದ ಒಂದು ಘಟನೆ ನೋಡಿರುತ್ತಾರೆ. ಯಾರು ಈ ಪಂದ್ಯವನ್ನು ನೋಡದೆ ಮಿಸ್ ಮಾಡಿಕೊಂಡಿದ್ದೀರೋ, ಅವರಿಗಾಗಿ ಈ ಆಟದ ಮೈದಾನದಲ್ಲಿ (Ground) ನಡೆದ ಘಟನೆಯ ಬಗ್ಗೆ ಹೇಳಲೇಬೇಕು.ಕ್ರಿಕೆಟ್ ಆಟಕ್ಕೆ ಮತ್ತು ಆಟಗಾರರಿಗೆ ಅಭಿಮಾನಿಗಳು ಇರುತ್ತಾರೆ. ತುಂಬಾ ಹಿಂದಿನಿಂದಲೂ ಆಟ ನಡೆಯಬೇಕಾದರೆ ಅಭಿಮಾನಿಗಳು (Fans) ತಮ್ಮ ನೆಚ್ಚಿನ ಆಟಗಾರನನ್ನು ತುಂಬಾ ಹತ್ತಿರದಿಂದ ನೋಡಬೇಕು, ಅವರ ಕೈ ಕುಲುಕಿ ಬರಬೇಕು, ಅವರನ್ನು ಒಮ್ಮೆ ಹತ್ತಿರ ಹೋಗಿ ನಮಸ್ಕರಿಸಿ ಬರಬೇಕೆಂದು ಮೈದಾನದ ಭದ್ರತೆಯನ್ನು ಸಹ ಉಲ್ಲಂಘಿಸಿ ಆಟದ ಮೈದಾನಕ್ಕೆ ಅಭಿಮಾನಿಗಳು ನುಗ್ಗಿರುವುದು ನೋಡುತ್ತಲೇ ಬಂದಿದ್ದೇವೆ.

    ನಿನ್ನೆಯೂ ಅಂತಹದ್ದೇ ಘಟನೆ ನಡೆದಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ರಾಂಚಿಯಲ್ಲಿ ಸರಣಿಯ ಎರಡನೆಯ ಪಂದ್ಯ ನಡೆಯುತ್ತಿರುವಾಗ ದಿಢೀರನೆ ಅಭಿಮಾನಿಯೊಬ್ಬ ಆಟದ ಮೈದಾನದ ಭದ್ರತೆ ಉಲ್ಲಂಘಿಸಿ ಓಡುತ್ತಾ ನೇರವಾಗಿ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಬಳಿ ಹೋಗಿ ಅವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದರು.

    ನಂತರ ಭದ್ರತಾ ಸಿಬ್ಬಂದಿ ತನ್ನತ್ತ ಓಡಿ ಬರುವುದನ್ನು ನೋಡಿದ ಅಭಿಮಾನಿ ಯಾರಿಗೂ ಸಿಗದಂತೆ ಪೆವಿಲಿಯನ್ ಕಡೆಗೆ ಓಡಿ ಹೋದನು. ಕೋವಿಡ್ ನಿಯಮಾವಳಿಗಳಿಂದಾಗಿ ಅಭಿಮಾನಿಗೆ ರೋಹಿತ್ ಪಾದಗಳನ್ನು ಮುಟ್ಟಲು ಸಾಧ್ಯವಾಗಲಿಲ್ಲ.

    ಈ ಅಭಿಮಾನಿಯು ಹೀಗೆ ಭದ್ರತೆ ಉಲ್ಲಂಘಿಸಿ ಆಟದ ಮೈದಾನಕ್ಕೆ ನುಗ್ಗಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ 3 ಬಾರಿ ಆಟದ ಮೈದಾನದ ಭದ್ರತೆ ಉಲ್ಲಂಘಿಸಿರುವ ಇಂಗ್ಲೆಂಡ್‌ನ ಪ್ರಸಿದ್ಧ ಅಭಿಮಾನಿ ಜಾರ್ವೊರನ್ನು ನೆನಪಿಸುವಂತಿತ್ತು.

    Read Also: Video Viral: ಅಭಿಮಾನಿಯನ್ನು ವೇದಿಕೆ ಮೇಲೆ ಕರೆದು ಮುಖದ ಮೇಲೆ ಮೂತ್ರ ಮಾಡಿದ ಖ್ಯಾತ ಗಾಯಕಿ!

    ಅಭಿಮಾನಿಗಳು ಆಗಾಗ್ಗೆ ತಮ್ಮ ನೆಚ್ಚಿನ ಆಟಗಾರರನ್ನು ಭೇಟಿಯಾಗಲು ಹಿಂದೆಯೂ ಅನೇಕ ಬಾರಿ ಭದ್ರತೆ ಉಲ್ಲಂಘಿಸಿದ್ದಾರೆ. ಆದರೆ ಪ್ರಸ್ತುತ ಶಿಷ್ಟಾಚಾರಗಳನ್ನು ಗಮನಿಸಿದರೆ, ಭದ್ರತಾ ಉಲ್ಲಂಘನೆಗಳು ಸಂಪೂರ್ಣ ಸರಣಿಯ ಮೇಲೆ ಪರಿಣಾಮ ಬೀರಬಹುದು. ರೋಹಿತ್‌ಗೆ ತುಂಬಾ ಜನ ಅಭಿಮಾನಿಗಳಿದ್ದು, ಅವರನ್ನು ಭೇಟಿಯಾಗಲು ಆಗಾಗ್ಗೆ ಆಟದ ಮೈದಾನಕ್ಕೆ ಅಭಿಮಾನಿಗಳು ನುಗ್ಗಿದ್ದಾರೆ ಎಂದು ಹೇಳಬಹುದು.





    ಟಿ20 ಸರಣಿ ಗೆದ್ದ ಭಾರತ ತಂಡ

    ಭಾರತ ಕ್ರಿಕೆಟ್ ತಂಡವು ಎರಡನೆಯ ಪಂದ್ಯ ಗೆಲ್ಲಲು ಎದುರಾಳಿ ನ್ಯೂಜಿಲ್ಯಾಂಡ್ ತಂಡವು 154 ರನ್‌ಗಳ ಗುರಿ ನೀಡಿದ್ದರು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರರಾದ ರೋಹಿತ್ ಮತ್ತು ಕೆ.ಎಲ್. ರಾಹುಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿ 8 ಓವರ್‌ಗಳಲ್ಲಿ 57 ರನ್ ಸೇರಿಸಿದ್ದರು.

    Read Also: Spam call: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

    ನ್ಯೂಜಿಲ್ಯಾಂಡ್ ಪರ ಯಾವುದೇ ಬ್ಯಾಟ್ಸ್‌ಮನ್ 50 ರನ್‌ಗಳ ಗಡಿ ದಾಟಲು ಯಶಸ್ವಿಯಾಗಲಿಲ್ಲ. ಮಾರ್ಟಿನ್ ಗುಪ್ಟಿಲ್ ಮತ್ತು ಡ್ಯಾರಿಲ್ ಮಿಚೆಲ್ ತಲಾ 31 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 21 ಎಸೆತಗಳಲ್ಲಿ 34 ರನ್ ಗಳಿಸಿದರು. ಎರಡನೆಯ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತವು ಸರಣಿ ಜಯಿಸಿದ್ದು, ಇನ್ನೂ ಉಳಿದಿರುವ ಒಂದು ಟಿ20 ಪಂದ್ಯವನ್ನು ಭಾನುವಾರ ಕೋಲ್ಕತ್ತಾದಲ್ಲಿ ಆಡಲಿದೆ.
    Published by:Harshith AS
    First published: