Robin Uthappa: ರಾಬಿನ್ ಉತ್ತಪ್ಪ ಬ್ಯಾಟಿಂಗ್ ವೈಖರಿಯೇ ವೃತ್ತಿಜೀವನಕ್ಕೆ ಮುಳುವಾಯಿತೇ..? ಅವರ ಮಾತುಗಳಲ್ಲೇ ಕೇಳಿ..!

ಉತ್ತಪ್ಪ ಅವರು ಭಾರತ ತಂಡದ ಗೆಲುವಿಗೆ ವಿಭಿನ್ನ ರೀತಿಯ ಪಾತ್ರ ವಹಿಸಿದರು. ಸಮಯವನ್ನು ಮೀಸಲಿಟ್ಟರು. ಇದು ಭಾರತದ ತಂಡದ ಗಟ್ಟಿತನಕ್ಕೆ ಉಪಯುಕ್ತವಾದಂತೆ ತೋರಿದರೂ, ಅವರ ಬ್ಯಾಟಿಂಗ್ ಕ್ರಮದಲ್ಲಿ ಮಾಡಿಕೊಳ್ಳುತ್ತಿದ್ದ ಬದಲಾವಣೆಗಳೇ ವೃತ್ತಿಜೀವನಕ್ಕೆ ಅಡ್ಡಿ ಉಂಟು ಮಾಡಿತು ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ

  • Share this:

ಟೀಂ ಇಂಡಿಯಾ(Team India)ದ ಕನ್ನಡಿಗ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ(Robin Uthppa) ತನ್ನ ಬ್ಯಾಟಿಂಗ್‍ನಿಂದಲೇ ಹೆಚ್ಚು ಪ್ರಸಿದ್ಧಿ. 2006ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಏಳು ಸರಣಿಗಳ ಪೈಕಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‍ನ ವಿರುದ್ಧ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡುವ ಮೂಲಕ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಆಗ ಅವರಿಗಿನ್ನು 20 ವರ್ಷ. ಈ ಪಂದ್ಯದಲ್ಲಿ 96 ಬಾಲ್‍ಗಳಿಗೆ 86 ರನ್ನುಗಳನ್ನು ಬಾರಿಸಿ, ತಮ್ಮ ಮೊದಲನೇ ಪಂದ್ಯದಲ್ಲೇ ಭಾರತದ ಆಟಗಾರರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತಮ್ಮ ಮುಡಿಗೇರಿಸಿಕೊಂಡರು. ಈ ಮೂಲಕ ಅವರ ವೃತ್ತಿ ಜೀವನ ಸುಂದರವಾಗಿರಬೇಕಾಗಿತ್ತು. ಆದರೆ ಕೆಲವು ಸಂಗತಿ, ಸಂದರ್ಭಗಳು ಅವರು ಅಂದುಕೊಂಡಂತೆ ಬದುಕಲು ಬಿಡಲಿಲ್ಲ.


ಹೌದು, ಉತ್ತಪ್ಪ ಅವರು ಒಂದು ಯೂಟ್ಯೂಬ್‍ಗೆ ನೀಡಿದ ಸಂದರ್ಶನಲ್ಲಿ ತಮ್ಮ ವೃತ್ತಿಜೀವನ ಕೆಲವೇ ಓವರ್‌ಗಳಿಗೆ ಸೀಮಿತವಾಗಿರುವುದರ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.


ಉತ್ತಪ್ಪ ಅವರು ಭಾರತ ತಂಡದ(Team India) ಗೆಲುವಿಗೆ ವಿಭಿನ್ನ ರೀತಿಯ ಪಾತ್ರ ವಹಿಸಿದರು. ಸಮಯವನ್ನು ಮೀಸಲಿಟ್ಟರು. ಇದು ಭಾರತದ ತಂಡದ ಗಟ್ಟಿತನಕ್ಕೆ ಉಪಯುಕ್ತವಾದಂತೆ ತೋರಿದರೂ, ಅವರ ಬ್ಯಾಟಿಂಗ್ ಕ್ರಮದಲ್ಲಿ ಮಾಡಿಕೊಳ್ಳುತ್ತಿದ್ದ ಬದಲಾವಣೆಗಳೇ ವೃತ್ತಿಜೀವನಕ್ಕೆ ಅಡ್ಡಿ ಉಂಟು ಮಾಡಿತು ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.


ಮೊದ ಮೊದಲು ಭಾರತ ತಂಡದ ಓಪನಿಂಗ್ ಬ್ಯಾಟ್ಸ್‌ಮನ್‌ ಆಗಿದ್ದರು. ನಂತರ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆದರು. ತದನಂತರ ಐದನೇ, ಆರನೇ, ಏಳನೇ ಕ್ರಮಾಂಕಕ್ಕೆ ಬಂದಿತು. ಅವರ ವರ್ಚಸ್ಸು ಎಲ್ಲೋ ಕಡಿಮೆಯಾಗುತ್ತಾ ಬಂದಿತು. ಅಕಸ್ಮಾತ್ ಬಲಗೈ ಬ್ಯಾಟ್ಸ್‌ಮನ್‌ ಆದ ಉತ್ತಪ್ಪ ಅವರು ಒಂದೇ ಕ್ರಮದಲ್ಲಿ ಆಡಿದ್ದರೆ ಇನ್ನು ಸಾಕಷ್ಟು ಪಂದ್ಯಗಳನ್ನು ಭಾರತದ ತಂಡದಲ್ಲಿ ಆಡಬಹುದಾಗಿತ್ತು ಎಂದು ಹೇಳಿದ್ದಾರೆ.


ಇದನ್ನೂ ಓದಿ:Zomato: ಝೊಮ್ಯಾಟೋದಿಂದ ಉದ್ಯೋಗಿಗಳಿಗೆ ಉಚಿತ ಲಸಿಕಾ ಅಭಿಯಾನ

ಇನ್ನು ಅವರ ಕ್ರಿಕೆಟ್ ಪಯಣದ ಅಂಕಿ ಅಂಶಗಳನ್ನು ಗಮನಿಸಿದರೆ, ಇವರು ಒಂದೇ ಬ್ಯಾಟಿಂಗ್ ಕ್ರಮ ಅನುಸರಿಸಿ ಕನಿಷ್ಠ ಮೂರು ಇನ್ನಿಂಗ್ಸ್‌ಗಳಿಗಿಂತ ಹೆಚ್ಚು ಪಂದ್ಯಗಳನ್ನಾಡಿಲ್ಲ ಎಂದು ಗಮನಿಸಬಹುದು. ಒಂದೇ ಕ್ರಮದಲ್ಲಿ 49 ಪಂದ್ಯಗಳನ್ನಾಡಿದ್ದರೆ ಭಾರತಕ್ಕಾಗಿ 149 ಅಥವಾ 249 ಪಂದ್ಯಗಳನ್ನು ಆಡಬಹುದಿತ್ತು. ಆದರೆ ನಾನು ಎಲ್ಲೂ ನಿರ್ದಿಷ್ಟ ಕ್ರಮವನ್ನು ಅನುಸರಿಸಲಿಲ್ಲ ಎಂದು ಅವರೇ ಖುದ್ದಾಗಿ ತಮ್ಮ ಬ್ಯಾಟಿಂಗ್ ವೈಖರಿ ಬಗ್ಗೆ ಮಾತನಾಡಿದ್ದಾರೆ.


ನಾನು ಭಾರತದ ತಂಡಕ್ಕಾಗಿ ವಿಭಿನ್ನ ಪಾತ್ರವನ್ನು ಅಂದರೆ ವಿವಿಧ ಪರಿಯಾಗಿ ಆಡಿದೆ. ಅದು ಭಾರತದ ತಂಡಕ್ಕೆ ಅನುಕೂಲವಾಯಿತು. ಆದರೆ ನನಗೆ ವೈಯಕ್ತಿಕ ವೃತ್ತಿ ಬದುಕಿಗೆ ಹೊಡೆತ ಬಿದ್ದಿತು ಎನ್ನುತ್ತಾರೆ.




ಭಾರತಕ್ಕಾಗಿ 46 ಏಕದಿನ ಮತ್ತು 13 ಟಿ 20 ಪಂದ್ಯಗಳನ್ನು ಆಡಿದ ಉತ್ತಪ್ಪ 2007 ರ ಐಸಿಸಿ ಟಿ 20 ವಿಶ್ವಕಪ್ ಜಯಭೇರಿ ಬಾರಿಸುವಲ್ಲಿ ಶ್ರಮವಹಿಸಿದ್ದರು. ಇದೀಗ ಇವರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. 35 ವರ್ಷದ ರಾಬಿನ್ ಉತ್ತಪ್ಪ ಈ ಮೊದಲು ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್ ಹಾಗೂ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

Published by:Latha CG
First published: