• Home
  • »
  • News
  • »
  • cricket-2
  • »
  • India vs England: ರಿಷಬ್ ಪಂತ್ ಬಗ್ಗೆ ಈ ಪಾಕ್ ಆಟಗಾರ ಏನು ಹೇಳಿದ್ರು ನೋಡಿ..

India vs England: ರಿಷಬ್ ಪಂತ್ ಬಗ್ಗೆ ಈ ಪಾಕ್ ಆಟಗಾರ ಏನು ಹೇಳಿದ್ರು ನೋಡಿ..

Salman Butt

Salman Butt

Rishabh Pant: ರಿಷಬ್ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಕಳೆದ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ (England) ಕ್ರಿಕೆಟ್ ಮೈದಾನದಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.

  • Share this:

    ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಐದು ಟೆಸ್ಟ್‌ಗಳ ಸರಣಿ ಆಡುತ್ತಿದ್ದು, ಭಾರತದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್(Rishbabh Pant ) ಸ್ವಿಂಗ್ ಆಗುತ್ತಿರುವ ಚೆಂಡನ್ನು ಆಡುವಲ್ಲಿ ತುಂಬಾನೇ ಪರದಾಡುತ್ತಿದ್ದಾರೆ.ಪಂತ್ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರು ಗಳಿಸಿದ ರನ್‌ಗಳನ್ನು ನೋಡಿದರೆ ಯಾರಿಗಾದರೂ ಪಂತ್ ಹೀಗೇಕೆ ಆಟವಾಡುತ್ತಿದ್ದಾರೆ ಎಂದೆನಿಸುವುದು ಸಹಜ. ಮೂರು ಟೆಸ್ಟ್ ಪಂದ್ಯಗಳಲ್ಲಿ 25, 37, 22, 2 ಮತ್ತು 1 ರನ್ ಗಳಿಸಲು ಅವರಿಗೆ ಸಾಧ್ಯವಾಗಿದ್ದು, ಸ್ವಿಂಗ್ ಆಗುತ್ತಿರುವ ಚೆಂಡನ್ನು ಸಮರ್ಥವಾಗಿ ಎದುರಿಸಲು ಆಗದೆ ತಮ್ಮ ವಿಕೆಟ್ ಅನ್ನು ಎದುರಾಳಿ ಬೌಲರ್‌ಗಳಿಗೆ ಸುಲಭವಾಗಿ ಒಪ್ಪಿಸುತ್ತಿದ್ದಾರೆ.


    ರಿಷಬ್ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಕಳೆದ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ (England) ಕ್ರಿಕೆಟ್ ಮೈದಾನದಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.


    ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್(Salman Butt) ಅವರು ಶನಿವಾರ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 76 ರನ್‌ಗಳಿಂದ ಹೆಡಿಂಗ್ಲೆ ಟೆಸ್ಟ್‌ನಲ್ಲಿ ಪರಾಭವಗೊಂಡ ಭಾರತ ತಂಡದ ಆಟ ನೋಡಿ, ಅದರಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ತಂತ್ರ ಮತ್ತು ತಾಳ್ಮೆಯ ಬಗ್ಗೆ ಮಾತಾಡಿದ್ದಾರೆ.


    ಪ್ರಸ್ತುತ ಇಂಗ್ಲೆಂಡ್‌ ಪ್ರವಾಸದಲ್ಲಿ ಪದೇ ಪದೇ ವಿಫಲವಾಗಿದ್ದರೂ ಪಂತ್ ಪ್ರಸ್ತುತ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 43ಕ್ಕಿಂತಲೂ ಹೆಚ್ಚಿನ ಸರಾಸರಿ ಹೊಂದಿದ್ದಾರೆ. "ಇಂಗ್ಲೆಂಡ್ ಮೈದಾನಗಳಲ್ಲಿ ಯಶಸ್ವಿಯಾಗಿ ರನ್ ಗಳಿಸುವ ತಂತ್ರ ರಿಷಬ್ ಪಂತ್‌ಗೆ ತಿಳಿದಿಲ್ಲ. ಅವರು ಕೇವಲ ಬೌಲರ್‌ಗಳಿಗೆ ಮುಂದೆ ಹೋಗಿ ಆಡಲು ಸಾಧ್ಯವಿಲ್ಲ. ಸ್ವಲ್ಪ ತಾಳ್ಮೆಯಿಂದ ಆಟವಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.


    "ರಿಷಬ್ ಪಂತ್ ಈ ರೀತಿಯಲ್ಲಿ ಆಡಿದರೆ ಎಂದಿಗೂ ಯಶಸ್ವಿ ಟೆಸ್ಟ್ ಬ್ಯಾಟ್ಸ್‌ಮನ್‌ ಆಗಲು ಸಾಧ್ಯವಿಲ್ಲ. ಅವರು ಸ್ವಲ್ಪ ತಾಳ್ಮೆ ಬೆಳೆಸಿಕೊಳ್ಳಬೇಕು ಮತ್ತು ರಕ್ಷಣಾತ್ಮಕ ತಂತ್ರದ ಬಗ್ಗೆಯೂ ಕೆಲಸ ಮಾಡಬೇಕಾಗಿದೆ" ಎಂದು ಸಲ್ಮಾನ್ ಹೇಳಿದ್ದಾರೆ.


    ಇಂಗ್ಲೆಂಡ್‌ನಲ್ಲಿ ನಿಯಮಿತವಾಗಿ ಗಾಳಿಯಲ್ಲಿ ಚೆಂಡು ತಿರುಗುತ್ತಿರುತ್ತವೆ. ಅಂತಹ ಚೆಂಡಿನ ವಿರುದ್ಧ ರಕ್ಷಣಾತ್ಮಕವಾಗಿ ಆಟವಾಡಬೇಕಾಗುತ್ತದೆ ಎಂದು ಮಾಜಿ ಎಡಗೈ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಪಂತ್‌ಗೆ ಹೇಳಿದ್ದಾರೆ.


    "ಪಂತ್ ಉತ್ತಮ ಹೊಡೆತಗಳನ್ನು ಸಮರ್ಥವಾಗಿ ಆಡಬಲ್ಲರು, ಆದರೆ ಅವರ ರಕ್ಷಣಾತ್ಮಕ ತಂತ್ರವು ಟೆಸ್ಟ್ ಕ್ರಿಕೆಟ್‌ಗೆ ಮತ್ತು ವಿಶೇಷವಾಗಿ ಇಂಗ್ಲೆಂಡ್ ಅಂತಹ ಪರಿಸ್ಥಿತಿಗಳಲ್ಲಿ ಆಡಲು ಅಷ್ಟೊಂದು ಬಲವಾಗಿಲ್ಲ”ಎಂದು ಸಲ್ಮಾನ್ ಹೇಳಿದ್ದಾರೆ.


    "ಭಾರತ ಮತ್ತು ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಆಟದ ಮೈದಾನದಲ್ಲಿ ಚೆಂಡು ಅಷ್ಟೊಂದು ಸ್ವಿಂಗ್ ಆಗದೆ ಇರುವುದರಿಂದ ಅವರು ಹೆಚ್ಚು ರನ್‌ಗಳನ್ನು ಗಳಿಸಬಹುದು” ಎಂದು ಹೇಳಿದ್ದಾರೆ.

    Published by:Sharath Sharma Kalagaru
    First published: