• Home
  • »
  • News
  • »
  • cricket-2
  • »
  • ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ: ಕೋಚ್ ದ್ರಾವಿಡ್‌ಗೆ ಬಹುಪರಾಕ್​​​ ಕೂಗುತ್ತಿರುವ ನೆಟ್ಟಿಗರು

ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ: ಕೋಚ್ ದ್ರಾವಿಡ್‌ಗೆ ಬಹುಪರಾಕ್​​​ ಕೂಗುತ್ತಿರುವ ನೆಟ್ಟಿಗರು

ಕೋಚ್​ ರಾಹುಲ್​​ ದ್ರಾವಿಡ್​​​

ಕೋಚ್​ ರಾಹುಲ್​​ ದ್ರಾವಿಡ್​​​

ದ್ರಾವಿಡ್​ ನೀಡಿದ ಸಲಹೆ ದೀಪಕ್ ಅವರ ಉತ್ತಮ ಆಟಕ್ಕೆ ನೆರವಾಗಿ ಪಂದ್ಯ ಗೆಲ್ಲುವಂತೆ ಮಾಡಿತು ಎಂದು ಟ್ವಿಟರ್‌ನಲ್ಲಿ ಅಭಿಮಾನಿಗಳು ಮೆಚ್ಚುಗೆ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

  • Share this:

    ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ಕ್ರಿಕೆಟ್ ತಂಡವು ನೇರವಾಗಿ 2-0 ಯಿಂದ ಸರಣಿಯನ್ನು ಜಯಿಸಿದ್ದು ಇನ್ನೂ ಒಂದು ಪಂದ್ಯ ಬಾಕಿಯಿದೆ. ಅದು ಈಗ ಔಪಚಾರಿಕವಷ್ಟೇ ಆಗಿದೆ. ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಮಿಸ್ಟರ್ ಡಿಪೆಂಡೇಬಲ್ ಮತ್ತು ದಿ ವಾಲ್ ಅಂತಾನೆ ಪ್ರಖ್ಯಾತಿ ಪಡೆದ ರಾಹುಲ್ ದ್ರಾವಿಡ್ ಅವರು ಆಯ್ಕೆಯಾದ ನಂತರ ಶ್ರೀಲಂಕಾ ವಿರುದ್ಧ ಸರಣಿ ಗೆದ್ದಿದ್ದು ಇವರ ಮೊದಲನೆಯ ಸರಣಿಯಾಗಿತ್ತು. ಅದನ್ನು ತುಂಬಾ ಸುಗಮವಾಗಿ ಜಯಿಸಿ ಎಲ್ಲರ ಮೆಚ್ಚುಗೆಗೆ ದ್ರಾವಿಡ್ ಪಾತ್ರರಾಗಿದ್ದಾರೆ.


    ಭಾರತ ಕ್ರಿಕೆಟ್ ತಂಡವು ಇನ್ನೇನು ಎರಡನೆಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ಸರಣಿಯಲ್ಲಿ 1-1 ಆಗುತ್ತದೆಯೋ ಎನ್ನುವ ಸ್ಥಿತಿಗೆ ತಲುಪಿತ್ತು. ಆಗ ದೀಪಕ್ ಚಹಾರ್ ಅವರು ತುಂಬಾ ಜವಾಬ್ದಾರಿಯುತ ಆಟ ಆಡಿ 69 ರನ್ ಗಳಿಸಿದರೆ ಭುವನೇಶ್ವರ್ ಕುಮಾರ್ ಅವರು 19 ರನ್ ಗಳನ್ನು ಹೊಡೆದು ಚಹಾರ್ ಅವರೊಂದಿಗೆ ಏಳನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿ ಅಜೇಯರಾಗಿ ಉಳಿದಿದರು. ಪಂದ್ಯವನ್ನು 193/7 ಇದ್ದಂತಹ ಸ್ಕೋರ್ ಅನ್ನು ಚೇಸ್ ಮಾಡಿ ಪಂದ್ಯವನ್ನು ಮೂರು ವಿಕೆಟ್ ಗಳ ಅಂತರದಿಂದ ಜಯಿಸಿ ಸರಣಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.


    ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 275/9 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ನಂತರ ಬ್ಯಾಟ್ ಮಾಡಿದ ಭಾರತ ತಂಡವು 193 ರನ್ ಗಳಿಸುವಷ್ಟರಲ್ಲಿಯೇ ತನ್ನ ಏಳು ವಿಕೆಟ್ ಗಳನ್ನು ಕಳೆದುಕೊಂಡು ತುಂಬಾ ಸಂಕಷ್ಟದಲ್ಲಿತ್ತು. ಆದರೆ ದೀಪಕ್ ಮತ್ತು ಭುವಿ ತಂಡದ ದಿಕ್ಕನ್ನೇ ಬದಲಾಯಿಸಿದರು ಎಂದರೆ ಸುಳ್ಳಲ್ಲ.





    ಪಂದ್ಯದ ನಂತರ ರಾಹುಲ್ ದ್ರಾವಿಡ್  ಬಗ್ಗೆ ಟ್ವಿಟ್ಟರ್ ನಲ್ಲಿ ಅವರ ಅಭಿಮಾನಿಗಳು ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆಟದ ಮೈದಾನದಲ್ಲಿ ಎಂದಿನಂತೆ ರಾಹುಲ್ ದ್ರಾವಿಡ್ ತುಂಬಾ ಶಾಂತವಾಗಿ ಕುಳಿತಿದ್ದರು ಮತ್ತು ಆಗಾಗ ಆಟಗಾರರಿರುವ ಡಗೌಟ್ ನಲ್ಲಿಗೆ ಬಂದು ಮೈದಾನದಲ್ಲಿ ಆಟವಾಡುತ್ತಿದ್ದ ದೀಪಕ್‌ಗೆ ಸಹೋದರ ರಾಹುಲ್‌ನಿಂದ ಸಂದೇಶವೊಂದನ್ನು ಕಳುಹಿಸಿದ್ದರು. ಆಗ ನೀಡಿದಂತಹ ಸಲಹೆ ದೀಪಕ್ ಅವರ ಉತ್ತಮ ಆಟಕ್ಕೆ ನೆರವಾಗಿ ಪಂದ್ಯ ಗೆಲ್ಲುವಂತೆ ಮಾಡಿತು ಎಂದು ಸಹ ಟ್ವಿಟರ್‌ನಲ್ಲಿ ಅಭಿಮಾನಿಗಳು ಹೇಳುತ್ತಿದ್ದಾರೆ.





    ಟ್ವಿಟರ್ ಬಳಕೆದಾರರೊಬ್ಬರು ಬೌಂಡರಿ ಹಿಂದೆ ಗೋಡೆ, ಬೇರೆ ಮಾತಿಲ್ಲ... ಬರೀ ರಾಹುಲ್ ದ್ರಾವಿಡ್, ಯಾರು ಕೋಚ್ ಇವಾಗ, ಶಾಸ್ತ್ರೀ ಅಲ್ಲ ಇವರು ರಾಹುಲ್ ದ್ರಾವಿಡ್, ರಾಹುಲ್ ದ್ರಾವಿಡ್ ದಿ ಬಾಸ್, ನೀವು ಅನೇಕ ಯುವ ಕ್ರಿಕೆಟರ್ ಗಳಿಗೆ ಒಂದು ಪ್ರೇರಣೆ ಎಂದು ಹೇಳಿದ್ದಾರೆ. ಭಾರತದ ಮೊದಲ ಸರಣಿ ಗೆಲುವು ರಾಹುಲ್ ದ್ರಾವಿಡ್ ಅವರ ಸಮ್ಮುಖದಲ್ಲಿ ಎಂದು ಅನೇಕ ತರಹದ ಕಾಮೆಂಟ್ಗ‌ಳನ್ನೂ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ರಾಹುಲ್ ದ್ರಾವಿಡ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    First published: