Asia Cup 2022: ಪಾಕ್ ಸೋಲಿನಿಂದ ಹತಾಶೆ: ಭಾರತೀಯ ಪತ್ರಕರ್ತರ ಮೇಲೆ ಪಿಸಿಬಿ ಮುಖ್ಯಸ್ಥನ ಹುಚ್ಚಾಟ!

ಶ್ರೀಲಂಕಾ ತಂಡ ಮತ್ತು ಅಭಿಮಾನಿಗಳು ಕಪ್‌ ಗೆದ್ದ ಸಂಭ್ರಮದಲ್ಲಿದ್ದರೆ, ಇತ್ತ ಪಾಕ್‌ ಸೋಲಿನ ಬಗ್ಗೆ ಹತಾಶೆ ವ್ಯಕ್ತಪಡಿಸುವ ರೀತಿ ನಡೆದುಕೊಂಡಿದೆ. ಹೌದು, ಸ್ಥಳದಲ್ಲಿ ಹಾಜರಿದ್ದ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರು ಶ್ರೀಲಂಕಾ ವಿರುದ್ಧ ಸೋಲನ್ನು ಒಪ್ಪಿಕೊಳ್ಳದೇ ಆ ಸಿಟ್ಟನ್ನು ಭಾರತೀಯ ಪತ್ರಕರ್ತರ ಮೇಲೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಸ್ಟೇಡಿಯಂನಿಂದ ಹಿಂದಿರುಗುವಾಗ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಭಾರತೀಯ ಪತ್ರಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಪಿಸಿಬಿ ಮುಖ್ಯಸ್ಥ ರಮಿಜ್ ರಾಜಾ

ಪಿಸಿಬಿ ಮುಖ್ಯಸ್ಥ ರಮಿಜ್ ರಾಜಾ

  • Share this:
ದ್ವೀಪರಾಷ್ಟ್ರ ಶ್ರೀಲಂಕಾ (Sri Lanka), ಈ ಬಾರಿಯ ಏಷ್ಯಾ ಕಪ್‌ ಗೆದ್ದು ಬೀಗಿದೆ. ಪಾಕಿಸ್ತಾನವನ್ನು (Pakistan) ರೋಚಕವಾಗಿ ಸೋಲಿಸಿದ ಲಂಕಾ, ಪಂದ್ಯದಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಪಾಕ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಲಂಕಾ ಪಡೆಯ ಬೌಲರ್‌ಗಳು (Bowler) ತಂಡವನ್ನು ಆಲೌಟ್‌ ಮಾಡುವ ಮೂಲಕ 23 ರನ್‌ಗಳಿಂದ ಪಾಕ್‌ ಅನ್ನು ಸೋಲಿಸಿ ಕಪ್‌ ಗೆದ್ದು ಸಂಭ್ರಮಿಸಿದರು. ಏಷ್ಯಾಕಪ್‌ನಲ್ಲಿ ಆರನೇ ಬಾರಿಗೆ ಕಪ್‌ ಗೆದ್ದ ಶ್ರೀಲಂಕಾ ಹೊಸ ಕ್ರಿಕೆಟ್ ಸೂಪರ್ ಪವರ್ ಆಗಿ ಹೊರಹೊಮ್ಮಿದೆ. ನಿನ್ನೆ ನಡೆದ ಏಷ್ಯಾಕಪ್ 2022ರ (Asia Cup 2022) ಫೈನಲ್ ಕದನದಲ್ಲಿ, ಪಾಕಿಸ್ತಾನ ತಂಡವನ್ನು ಶ್ರೀಲಂಕಾ 23 ರನ್‌ಗಳಿಂದ ಸೋಲಿಸಿದೆ.

ಭಾನುಕಾ ರಾಜಪಕ್ಸೆ ಅಜೇಯ 71 ರನ್‌ ಮತ್ತು ವನಿಂದು ಹಸರಂಗಾ(3/27) ಸ್ಪಿನ್‌ ದಾಳಿಗೆ ಅಕ್ಷರಶಃ ನೆಲೆ ಕಂಡುಕೊಳ್ಳಲು ವಿಫಲರಾದ ಪಾಕ್‌ ಆಟಗಾರರು, ಲಂಕಾಗೆ ಶರಣಾದರು. ಪ್ರಸ್ತುತ ಶ್ರೀಲಂಕಾ ದಾಳಿಗೆ ತತ್ತರಿಸಿದ ಪಾಕ್‌ ತಂಡ ಸೋಲಿನ ನಂತರ ಮತ್ತೆ ಸುದ್ದಿಯಾಗಿದೆ.

ಪಿಸಿಬಿ ಮುಖ್ಯಸ್ಥರ ಹುಚ್ಚಾಟ
ಶ್ರೀಲಂಕಾ ತಂಡ ಮತ್ತು ಅಭಿಮಾನಿಗಳು ಕಪ್‌ ಗೆದ್ದ ಸಂಭ್ರಮದಲ್ಲಿದ್ದರೆ, ಇತ್ತ ಪಾಕ್‌ ಸೋಲಿನ ಬಗ್ಗೆ ಹತಾಶೆ ವ್ಯಕ್ತಪಡಿಸುವ ರೀತಿ ನಡೆದುಕೊಂಡಿದೆ. ಹೌದು, ಸ್ಥಳದಲ್ಲಿ ಹಾಜರಿದ್ದ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರು ಶ್ರೀಲಂಕಾ ವಿರುದ್ಧ ಸೋಲನ್ನು ಒಪ್ಪಿಕೊಳ್ಳದೇ ಆ ಸಿಟ್ಟನ್ನು ಭಾರತೀಯ ಪತ್ರಕರ್ತರ ಮೇಲೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಸ್ಟೇಡಿಯಂನಿಂದ ಹಿಂದಿರುಗುವಾಗ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಭಾರತೀಯ ಪತ್ರಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಭಾರತೀಯ ಪತ್ರಕರ್ತರ ಮೇಲೆ ಕೆಂಡಾಮಂಡಲವಾದ ರಮೀಜ್ ರಾಜಾ
ರಮೀಜ್ ರಾಜಾ ಹೊರಬರುತ್ತಿದ್ದಂತೆ ಮಾಧ್ಯಮಗಳು ರಮೀಜ್ ರಾಜಾ ಅವರ ಪ್ರತಿಕ್ರಿಯೆ ಪಡೆಯಲು ಮುಂದಾದರು. ಇದೇ ವೇಳೆ ಪಾಕಿಸ್ತಾನದ ಸೋಲಿನ ಬಗ್ಗೆ ಅಭಿಮಾನಿಗಳು ದುಃಖಿತರಾಗಿದ್ದಾರೆಯೇ? ನೀವು ಅವರಿಗೆ ಏನು ಹೇಳಲು ಇಷ್ಟಪಡುತ್ತೀರಿ ಎಂದು ಭಾತೀಯ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರಮೀಜ್ ರಾಜಾ ಕೆಂಡಾಮಂಡಲವಾದರು.

ಇದನ್ನೂ ಓದಿ:  Urvashi Rautela: ಊರ್ವಶಿ ರೌಟೇಲಾ ಕುರಿತು ಕೊನೆಗೂ ಮೌನ ಮುರಿದ ಪಾಕ್​ ಆಟಗಾರ, ಇವರಿಬ್ಬರ ನಡುವಿನ ಸಂಬಂಧ ನಿಜಾನಾ?

ಈ ಪ್ರಶ್ನೆಯನ್ನು ಸ್ವಾಗತಿಸದ ಪಿಸಿಬಿ ಮುಖ್ಯಸ್ಥರು ಕೋಪದಿಂದಲೇ ಪತ್ರಕರ್ತರಿಗೆ ಉತ್ತರಿಸಿದರು, “ಆಪ್ ಇಂಡಿಯಾ ಸೇ ಹೋಂಗೆ? ಆಪ್​ ತೊ ಬಡೆ ಖುಷ್ ಹೋಂಗೆ? (ನೀವು ಭಾರತೀಯರಾಗಿರಬೇಕು, ನಿಮಗೆ ಬಹಳ ಖುಷಿಯಾಗಿರಬೇಕು) ಎಂದು ಉತ್ತರಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಿರದ ರಮೀಜ್ ರಾಜಾ ಪ್ರಶ್ನೆ ಕೇಳಿದ ಪತ್ರಕರ್ತನ ಮೊಬೈಲ್‌ ಫೋನ್‌ ಅನ್ನು ಕಸಿದುಕೊಂಡು ಹುಚ್ಚಾಟ ನಡೆಸಿದರು. ಅಲ್ಲದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪಿಸಿಬಿ ಮುಖ್ಯಸ್ಥ ಹಾಗೆಯೇ ಇಲ್ಲಿಂದ ಹೊರಟು ಹೋದರು.ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಸುದ್ದಿಯಾಗಿದೆ. ಭಾರತೀಯ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಅವರು ತಪ್ಪಾದ ಪ್ರಶ್ನೆಯನ್ನು ಕೇಳಿದ್ದಾರಾ? ಎಂದು ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ರಾಜಾ ಫೋನ್ ತೆಗೆದುಕೊಳ್ಳಬಾರದಿತ್ತು ಎಂದು ಅವರು ಕಿಡಿಕಾರಿದ್ದಾರೆ.
ಪಾಕಿಸ್ತಾನ ಕ್ರಿಕೆಟ್‌ ಪಂದ್ಯದಲ್ಲಿ ಸೋತಾಗ ಏನಾದರೊಂದು ಅವಂತಾರ ಮಾಡಿಕೊಳ್ಳುತ್ತದೆ ಎಂಬುವುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ.

ಹೇಗಿತ್ತು ಏಷ್ಯಾ ಕಪ್‌ ನ ಫೈನಲ್‌ ಪಂದ್ಯ?
ಪಾಕಿಸ್ತಾನದ ಮಾರಕ ಬೌಲಿಂಗ್‌ ದಾಳಿಯ ನಡುವೆಯೂ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಶ್ರೀಲಂಕಾ 170 ರನ್‌ ಗಳಿಸಿತ್ತು. ಈ ರನ್‌ ಅನ್ನು ಚೇಸ್‌ ಮಾಡುವಲ್ಲಿ ವಿಫಲವಾದ ಪಾಕಿಸ್ತಾನವು 147 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ತಂಡದ ಮೊತ್ತ 102 ಇದ್ದಾಗ 55 ರನ್‌ ಗಳಿಸಿ ರಿಜ್ವಾನ್‌ ಔಟಾದ ಬಳಿಕ, ಪಾಕಿಸ್ತಾನದ ಸೋಲು ಖಚಿತವಾಯ್ತು.

ಇದನ್ನೂ ಓದಿ:  Hardik Pandya: ದೊಡ್ಡ ದೊಡ್ಡ ಬ್ರ್ಯಾಂಡ್​ಗಳಿಗೂ ಇವರೇ ಬೇಕಂತೆ! ಆಟಕಷ್ಟೇ ಅಲ್ಲ, ಅಲ್ಲೂ ಕೂಡ ಈ ಆಟಗಾರನಿಗೆ ಡಿಮ್ಯಾಂಡ್​

ಶ್ರೀಲಂಕಾ ತಂಡದಲ್ಲಿ ಹಸರಂಗ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 27 ರನ್‌ಗಳನ್ನು ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರು. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ವನಿಂದು ಹಸರಂಗ ಕಪ್‌ ಗೆಲ್ಲವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
Published by:Ashwini Prabhu
First published: