- ಅನಿತಾ ಈ,
ಭಾರತ ಕ್ರಿಕೆಟ್ ತಂಡದ ಮಾಜಿ ಮಧ್ಯಮ ವೇಗಿ ವೆಂಕಟೇಶ್ ಪ್ರಸಾದ್. ಮೈದಾನದಲ್ಲಿ ಅವರು ಬೌಲಿಂಗ್ ಮಾಡ್ತಿರೋದನ್ನ ಎಲ್ಲರೂ ನೋಡಿರುತ್ತಾರೆ. ಆದರೆ ಕ್ರಿಕೆಟ್ ಹೊರತುಪಡಿಸಿ ಅವರಿಗೆ ಮತ್ತೊಂದು ಟ್ಯಾಲೆಂಟ್ ಇದೆ ಅಂದ್ರೆ ನೀವು ನಂಬುತ್ತೀರಾ..? ನಂಬಲೇಬೇಕು.
ಬಲಗೈ ವೇಗದ ಬೌಲರ್ ಕೈ ಯಲ್ಲಿ ಚೆಂಡು ಹಿಡಿದು ಮೈದಾನಕ್ಕಿಳಿದರೆ, ಒಂದೆರಡು ವಿಕೆಟ್ ಪಕ್ಕಾ ಆಗಿತ್ತು. ಭಾರತೀಯ ತಂಡ ಬೌಲಿಂಗ್ ತರಬೇತುದಾರನಾಗಿಯೂ ವೆಂಕಿ ಕೆಲಸ ಮಾಡಿದ್ದರು. ಇಂತಹ ಪ್ರತಿಭಾನ್ವಿತ ಆಟಗಾರ ಈಗ ಸಿಂಗರ್ ಆಗಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ತನ್ನ ನಗ್ನ ಫೋಟೋ ಪೋಸ್ಟ್ ಮಾಡಿ ಸುದ್ದಿಯಾದ ಕನ್ನಡ ನಟಿ
ಹೌದು, ಈಗ ಐಪಿಎಲ್ಗೆ ಕಮೆಂಟ್ರಿ ಮಾಡ್ತಿರೋ ಅವರು ಸುಶ್ರಾವ್ಯವಾಗಿ ಹಾಡನ್ನೂ ಹಾಡುತ್ತಾರೆ. ಸದ್ಯ ವೆಂಕಟೇಶ್ ಪ್ರಸಾದ್ ಹಾಡಿರುವ ಹಾಡಿನ ವಿಡಿಯೋವನ್ನು ಮಾಜಿ ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದು, ವೈರಲ್ ಆಗುತ್ತಿದೆ. ಇದು ಮೊನ್ನೆ ಅಂದರೆ ಮೇ.8ರಂದು ನಡೆದ ಐಪಿಎಲ್ ಪಂದ್ಯದ ಕಮೆಂಟ್ರಿ ರೂಮ್ನಲ್ಲಿ ಹಾಡಿದ ಹಾಡು.
What a start today 😊 can you beat this ..hahaha ..@SujithSomsu @StarSportsIndia #starsportskannada #starnakelu @SunilJoshi_Spin @anilkumar_gk pic.twitter.com/YUmr5IlUzL
— vijay Bharadwaj ಮುಂದೆ ಹಾಕಿದ್ರೆ ಆಚೆ... (@Bharadwajvcric1) May 8, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ