ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಮಾಹಿ ಇನ್ನು ಮೊದಲ ಆಯ್ಕೆ ಅಲ್ಲ; ವಿಂಡೀಸ್​ ಎದುರಿನ ಟೂರ್ನಿಯಲ್ಲೂ ಆಡಲ್ಲ!

MS Dhoni: ಎಂ.ಎಸ್. ಧೋನಿಯನ್ನು ಈಗಲೇ ತಂಡದಿಂದ ಹೊರಗಿಡುವುದು ಆರೋಗ್ಯಕರವಲ್ಲ. ಅವರ ಮಾರ್ಗದರ್ಶನ ಈಗಲೂ ತಂಡಕ್ಕೆ ಅಗತ್ಯವಿದೆ. ಹೀಗಾಗಿ ಅವರು 15ರ ಬಳಗದಲ್ಲಿ ಇದ್ದರೂ, ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಕಷ್ಟ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

MAshok Kumar | news18
Updated:July 17, 2019, 3:54 PM IST
ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಮಾಹಿ ಇನ್ನು ಮೊದಲ ಆಯ್ಕೆ ಅಲ್ಲ; ವಿಂಡೀಸ್​ ಎದುರಿನ ಟೂರ್ನಿಯಲ್ಲೂ ಆಡಲ್ಲ!
ಎಂ.ಎಸ್​. ಧೋನಿ
  • News18
  • Last Updated: July 17, 2019, 3:54 PM IST
  • Share this:
ಮಹತ್ವದ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜೆಲೆಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡ ಸೋಲನುಭವಿಸಿ ತವರಿಗೆ ವಾಪಸ್ ಆಗಿದೆ. ಆದರೆ, ಇದೀಗ ಭಾರತದ ಸೋಲಿಗಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿವಾದ.

ವಿಶ್ವಕಪ್ ನಂತರ ಆಗಸ್ಟ್ 3 ರಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಅವರದೆ ನಾಡಿನಲ್ಲಿ 3 ಟಿ-20 ಹಾಗೂ 3 ಸೀಮಿತ ಓವರ್​ಗಳ ಸರಣಿಯನ್ನು ಆಡಲಿದೆ. ಈ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಮೊದಲೇ ಧೋನಿ ಬಳಿ ಆಯ್ಕೆ ಸಮಿತಿ ಮಾತುಕತೆ ನಡೆಸಿದ್ದು, ತಾನು ಈ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಆದರೆ, ಬಿಸಿಸಿಐ ಮೂಲಗಳ ಮಾಹಿತಿಯ ಪ್ರಕಾರ “ವೆಸ್ಟ್ ಇಂಡೀಸ್ ಮಾತ್ರವಲ್ಲ, ಭಾರತದಲ್ಲಿ ನಡೆಯಲಿರುವ ಟೂರ್ನಿಗಳಲ್ಲೂ ಧೋನಿ ತಂಡದ ಜೊತೆ ಇರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ತಂಡದ ಜೊತೆ ಇದ್ದರೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳ ಆಯ್ಕೆಯಲ್ಲಿ ಆಯ್ಕೆದಾರರ ಎದುರಿನ ಮೊದಲ ಆಯ್ಕೆ ಧೋನಿ ಅಲ್ಲ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಉಸಿರು ಇರೋವರೆಗೂ ಕೇನ್​ ವಿಲಿಯಮ್ಸನ್​ಗೆ ಕ್ಷಮೆ ಕೇಳುತ್ತೇನೆ; ವಿಶ್ವಕಪ್​ ಹೀರೋ ಬೆನ್​​ಸ್ಟೋಕ್ಸ್​​ ಹೀಗಂದಿದ್ಯಾಕೆ?

ಯುವ ಆಟಗಾರ ರಿಷಬ್ ಪಂತ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನವನ್ನು ತುಂಬಲಿದ್ದು, ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇದು ಅವರಿಗೆ ಉತ್ತಮ ಅವಕಾಶ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

“ಎಂ.ಎಸ್. ಧೋನಿಯನ್ನು ಈಗಲೇ ತಂಡದಿಂದ ಹೊರಗಿಡುವುದು ಆರೋಗ್ಯಕರವಲ್ಲ. ಅವರ ಮಾರ್ಗದರ್ಶನ ಈಗಲೂ ತಂಡಕ್ಕೆ ಅಗತ್ಯವಿದೆ. ಹೀಗಾಗಿ ಅವರು 15ರ ಬಳಗದಲ್ಲಿ ಇದ್ದರೂ, ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಕಷ್ಟ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರ ನಿವೃತ್ತಿಯ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು, “ನಿವೃತ್ತಿಯ ಕುರಿತು ಈವರೆಗೆ ಧೋನಿ ನಮ್ಮ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ. ಆದರೆ, ತಾನು ಎಂತಹ ಆಟಗಾರ, ತಂಡಕ್ಕೆ ತನ್ನ ಅಗತ್ಯ ಎಷ್ಟು ಎಂಬುದನ್ನು ಈಗಾಗಲೇ ಹಲವು ಬಾರಿ ಅವರು ಸಾಬೀತುಪಡಿಸಿದ್ಧಾರೆ. ಈಗಲೂ ಅವರು ಉತ್ತಮವಾಗಿಯೇ ಆಟವಾಡುತ್ತಿದ್ದಾರೆ. ಹೀಗಾಗಿ ಅವರ ನಿವೃತ್ತಿಗೆ ಅವಸರ ಇಲ್ಲ” ಎಂದು ಮಾಹಿತಿ ನೀಡಿದ್ದಾರೆ.ಈಗಾಗಲೇ ತಂಡದಲ್ಲಿ ಮತ್ತೊಬ್ಬ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಸಹ ಇದ್ದಾರೆ. ಹೀಗಾಗಿ ಧೋನಿಯ ವೃತ್ತಿ ಬದುಕಿನ ಭವಿಷ್ಯ ಆಯ್ಕೆ ಸಮಿತಿಯ ಕೈಯಲ್ಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : #FaceApp: 50 ವರ್ಷದ ನಂತರ ಕೊಹ್ಲಿ ಸೇರಿ ಈ ಕ್ರಿಕೆಟ್ ತಾರೆಯರು ಹೇಗೆ ಕಾಣಿಸಲಿದ್ದಾರೆ ಗೊತ್ತಾ?

First published:July 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ