ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ನಡೆದ ವಿವಾದವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ನನ್ನಿಂದಾದ ತಪ್ಪಿಗೆ ತಂದೆಯನ್ನು ಅಪಹಾಸ್ಯ ಮಾಡುವುದು ಎಷ್ಟು ಸರಿ? ಎಂದು ಪಾಂಡ್ಯ ಹೇಳಿದ್ದಾರೆ.
ಇತ್ತೀಚೆಗೆ ಖ್ಯಾತ ಕ್ರಿಕೆಟ್ ಕಾಮೆಂಟರೇಟ್ ಹರ್ಷ ಭೋಗ್ಲೆ ಅವರೊಂದಿಗೆ ಲೈವ್ ಚಾಟ್ನಲ್ಲಿ ಮಾತನಾಡಿದ್ದ ಪಾಂಡ್ಯ, ಈ ವಿಚಾರವನ್ನು ನೆನೆದುಕೊಂಡಿದ್ದಾರೆ. ಮತ್ತೊಮ್ಮೆ ಅಂತಹ ತಪ್ಪನ್ನು ನನ್ನಿಂದ ಮರುಕಳಿಸುವುದಿಲ್ಲ ಎಂದಿದ್ದಾರೆ.
ಕಳೆದ ವರ್ಷ ‘ಕಾಫಿ ವಿಥ್ ಕರಣ್‘ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಾರ್ದಿಕ್ ಪಾಂಡ್ಯ ಹೇಳಿರುವ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಅವರನ್ನು ಕೆಲ ಕಾಲ ಟೀಂ ಇಂಡಿಯಾದಿಂದ ಅಮಾನತುಗೊಳಿಸಲಾಗಿತ್ತು.
ಇನ್ನೂ ಲೈವ್ ಚಾಟ್ನಲ್ಲಿ ಮಾತು ಮುಂದುವರೆಸಿದ ಹಾರ್ದಿಕ್, ‘ನಾನು ನನ್ನ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತೇನೆ. ಕುಟುಂಬವಿಲ್ಲದೆ ನಾನು ಏನೂ ಅಲ್ಲ. ಕುಟುಂಬ ನನ್ನ ಬೆನ್ನೆಲುಬು. ಸಾಕಷ್ಟು ಜನರು ಹಾರ್ದಿಕ್ ಪಾಂಡ್ಯರನ್ನು ತೆರೆಮರೆಯಲ್ಲಿ ನೋಡಿರುತ್ತಾರೆ. ನಾನು ಮಾನಸಿಕವಾಗಿ ಸ್ಥಿರವಾಗಿ, ಸಂತೋಷವಾಗಿರುತ್ತೇನೆ ಎಂದು ಅವರು ಗ್ರಹಿಸಿರುತ್ತಾರೆ.
ಕಾಫಿ ವಿಥ್ ಕರಣ್ ವಿವಾದದ ತಪ್ಪನ್ನು ನಾನು ಒಪ್ಪಿಕೊಳ್ಳಲು ಮತ್ತು ಸರಿ ಪಡಿಸಲು ಮುಂದಾಗಿದ್ದೆ. ಈ ಸಮಯದಲ್ಲಿ ಜನರು ನನ್ನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನನ್ನ ತಂದೆ ಸಂದರ್ಶನದಲ್ಲಿ ಮಾತನಾಡಿದ್ದನ್ನು ಅಪಹಾಸ್ಯ ಮಾಡಿದ್ದರು. ನನ್ನಿಂದಾದ ತಪ್ಪಿಗೆ ನನ್ನ ಕುಟುಂಬವನ್ನುದೂರುವುದು ಮತ್ತು ಅಪಹಾಸ್ಯ ಮಾಡುವುದು ಎಷ್ಟು ಸರಿ?ಎಂದು ಅಸಮಾಧಾನ ಹೊರಹಾಕಿದ್ದಾರೆ.
Oppo Fantastic Days sale; ಫ್ಯಾಂಟಾಸ್ಟಿಕ್ ಡೇಸ್ ಸೇಲ್; ಡಿಸ್ಕೌಂಟ್ ಬೆಲೆಗೆ ಒಪ್ಪೊ ಸ್ಮಾರ್ಟ್ಫೋನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ