ಕೆ.ಎಲ್. ರಾಹುಲ್‌ ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದಾರೆ, ಮಯಾಂಕ್​ ಕಾಯಲೇಬೇಕು: ಕೈಫ್​

India vs England Second Test: ರಾಹುಲ್ ತಮ್ಮ ಉತ್ತಮ ಆಟ ಪ್ರದರ್ಶಿಸಿ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ ಮತ್ತು ಮುಂದಿನ ಒಂದೆರಡು ಟೆಸ್ಟ್‌ಗಳನ್ನು ಆಡುತ್ತಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಕೈಫ್ ಹೇಳಿದ್ದಾರೆ.

ಕೆ.ಎಲ್​. ರಾಹುಲ್​ ಫೈಲ್​ ಫೋಟೊ

ಕೆ.ಎಲ್​. ರಾಹುಲ್​ ಫೈಲ್​ ಫೋಟೊ

 • Share this:

  2 ವರ್ಷಗಳ ನಂತರ ಮತ್ತೆ ಭಾರತೀಯ ಕ್ರಿಕೆಟ್ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಕೆ.ಎಲ್. ರಾಹುಲ್‌ಗೆ ಈಗ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿ ಅವರ ಉತ್ತಮ ಆಟ ಪ್ರದರ್ಶಿಸಲು ಮತ್ತು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅವಶ್ಯಕವಾಗಿದೆ.ಇದನ್ನು ಚೆನ್ನಾಗಿ ಅರಿತುಕೊಂಡ ರಾಹುಲ್, ಇಂಗ್ಲೆಂಡ್ ವಿರುದ್ಧ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಎಂದಿನಂತೆ ವೇಗವಾಗಿ ಆಡದೆ, ತುಂಬಾ ಶಾಂತ ಚಿತ್ತದಿಂದ ಆಟವಾಡಿದ್ದು, 214 ಎಸೆತಗಳನ್ನು ಎದುರಿಸಿ 84 ರನ್‌ಗಳನ್ನು ಗಳಿಸಿದ್ದು, ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಸ್ವಲ್ಪ ಮಟ್ಟಿಗೆ ಮುನ್ನಡೆ ಸಾಧಿಸಿತ್ತು. ಇನ್ನೊಬ್ಬ ಆಟಗಾರ ಮಯಾಂಕ್ ಅಗರ್ವಾಲ್ ಅಭ್ಯಾಸ ಮಾಡುವ ಸಮಯದಲ್ಲಿ ತಮ್ಮ ತಲೆಗೆ ಪೆಟ್ಟಾದ್ದರಿಂದ ಮೊದಲನೆಯ ಟೆಸ್ಟ್‌ನಿಂದ ಹೊರಗುಳಿಯಬೇಕಾಯಿತು ಮತ್ತು ರಾಹುಲ್‌ಗೆ ಮೊದಲ ಟೆಸ್ಟ್‌ನಲ್ಲಿ ಆಡುವಂತಹ ಅವಕಾಶ ಸಿಕ್ಕಿತು. ಆ ಅವಕಾಶವನ್ನು ರಾಹುಲ್ ಸಮರ್ಥವಾಗಿ ಬಳಸಿಕೊಂಡಿದ್ದು ವಿಶೇಷವಾಗಿದೆ.


  ರಾಹುಲ್ ತಮ್ಮ ಲಯವನ್ನು ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಪ್ರದರ್ಶಿಸಿದ್ದು ಅವರು ಗಳಿಸಿದ 25 ರನ್‌ಗಳಲ್ಲಿ 6 ಬೌಂಡರಿಗಳನ್ನು ಹೊಡೆದದ್ದು, ಅವರು ತಮ್ಮ ಆಟದ ಲಯವನ್ನು ಮತ್ತೆ ಕಂಡುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.


  ಮತ್ತೆ ಮಯಾಂಕ್ ಅಭ್ಯಾಸಕ್ಕೆ ನೆಟ್ಸ್‌ಗೆ ಮರಳಿದ್ದು, ಫಿಟ್ ಆಗಿದ್ದಾರೆ. "ಆದರೆ ಮಯಾಂಕ್ ಈಗ ಟೆಸ್ಟ್ ಸರಣಿಯಲ್ಲಿ ಅವಕಾಶವನ್ನು ಪಡೆಯಲು ಸ್ವಲ್ಪ ಸಮಯ ಕಾಯಬೇಕಾಗಬಹುದು" ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ.


  ರಾಹುಲ್ ತಮ್ಮ ಉತ್ತಮ ಆಟ ಪ್ರದರ್ಶಿಸಿ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ ಮತ್ತು ಮುಂದಿನ ಒಂದೆರಡು ಟೆಸ್ಟ್‌ಗಳನ್ನು ಆಡುತ್ತಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಕೈಫ್ ಹೇಳಿದ್ದಾರೆ.


  ಇದನ್ನೂ ಓದಿ: ಒಲಿಂಪಿಕ್ಸ್ ಹಾಕಿ ಆಟಗಾರರಿಗೆ ಪಂಜಾಬ್​ನಲ್ಲಿ ಭಾಂಗ್ರಾ ಡ್ಯಾನ್ಸ್ ಮೂಲಕ ಅದ್ದೂರಿ ಸ್ವಾಗತ

  ಈ ನಿಟ್ಟಿನಲ್ಲಿ ಮಯಾಂಕ್ ತಮ್ಮ ಸರದಿ ಬರುವವರೆಗೆ ತಾಳ್ಮೆಯಿಂದ ಕಾಯಲೇಬೇಕು ಎಂದು ಕೈಫ್ ಬುಧವಾರ ಸುದ್ದಿ ಮಾಧ್ಯಮದವರ ಜೊತೆಗೆ ಮಾತನಾಡುತ್ತ ಹೇಳಿದರು.


  "2018ರಲ್ಲಿ ರಾಹುಲ್ ತಮ್ಮ ಇನ್ನಿಂಗ್ಸ್ ಆರಂಭಿಸಿದ ತಕ್ಷಣ ಬೌಂಡರಿಗಳನ್ನು ಹೊಡೆಯಲು ಮತ್ತು ರನ್ ಗಳನ್ನು ವೇಗವಾಗಿ ಗಳಿಸುವ ಆತುರತೆ ಅವರ ಆಟದಲ್ಲಿ ಕಾಣುತ್ತಿತ್ತು. ಹಾಗಾಗಿ ಅವರು ಅನೇಕ ಬಾರಿ ಬೇಗನೆ ತಮ್ಮ ವಿಕೆಟ್ ಒಪ್ಪಿಸಿದ್ದುಂಟು. ಆದರೆ ಇಂಗ್ಲೆಂಡ್ ವಿರುದ್ದದ ಮೊದಲನೆಯ ಟೆಸ್ಟ್‌ನಲ್ಲಿ ಹೆಚ್ಚು ಶಾಂತಚಿತ್ತನಾಗಿ ಆಟವಾಡಿದ್ದು, ತಂಡದಲ್ಲಿನ ಪಾತ್ರವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ನನಗೆ ಅನ್ನಿಸಿತು" ಎಂದು ಕೈಫ್ ಹೇಳಿದರು.


  ಇದನ್ನೂ ಓದಿ: ಎರಡು ವರ್ಷದಿಂದ ಒಂದು ಶತಕವನ್ನು ಭಾರಿಸದ ಕೊಯ್ಲಿ; ಫಾರ್ಮ್​ ಕಳೆದುಕೊಂಡ ವಿರಾಟ್​?

  "ಎರಡು ವರ್ಷಗಳಲ್ಲಿ ರಾಹುಲ್ ತಮ್ಮ ಆಟವನ್ನು ತುಂಬಾ ಸುಧಾರಿಸಿಕೊಂಡಿದ್ದು, ಐಪಿಎಲ್‌ನಲ್ಲಿ ಪಂಜಾಬ್ ತಂಡವನ್ನು ನಾಯಕನಾಗಿ ತುಂಬಾ ಜವಾಬ್ದಾರಿಯುತವಾಗಿ ಮುನ್ನಡೆಸುತ್ತಿದ್ದಾರೆ", ಎಂದೂ ಹೇಳಿದರು.


  ಕೆ.ಎಲ್. ರಾಹುಲ್‌ ಭಾರತದ ಹಿಂದಿನ ಇಂಗ್ಲೆಂಡ್ ಪ್ರವಾಸದ ಭಾಗವಾಗಿದ್ದು, 5 ಟೆಸ್ಟ್‌ಗಳಲ್ಲಿ 299 ರನ್ ಗಳಿಸಿದ್ದರು. ಇಂಗ್ಲೆಂಡ್ ಪ್ರವಾಸದ ನಂತರ 7 ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾಗಿರುವುದನ್ನು ಗಮನಿಸಿ ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು.


  Published by:Sharath Sharma Kalagaru
  First published: