IPL 2019, RR vs KXIP: ಬೌಲರ್​ಗಳ ಹೋರಾಟಕ್ಕೆ ಸಿಕ್ಕ ಜಯ; ಅಶ್ವಿನ್ ಪಡೆಗೆ ಗೆಲುವಿನ ಸಿಹಿ

185 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಆರ್​ಆರ್​ ಸ್ಪೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಅಜಿಂಕ್ಯ ರಹಾನೆ ಹಾಗೂ ಜಾಸ್ ಬಟ್ಲರ್ ಬಿರುಸಿನ ಆಟ ಪ್ರದರ್ಶಿಸಿದರು.

zahir | news18
Updated:March 27, 2019, 3:59 PM IST
IPL 2019, RR vs KXIP: ಬೌಲರ್​ಗಳ ಹೋರಾಟಕ್ಕೆ ಸಿಕ್ಕ ಜಯ; ಅಶ್ವಿನ್ ಪಡೆಗೆ ಗೆಲುವಿನ ಸಿಹಿ
ಪಂಜಾಬ್ ತಂಡದ ಆಟಗಾರರು
  • News18
  • Last Updated: March 27, 2019, 3:59 PM IST
  • Share this:
ಜೈಪುರ: ಇಲ್ಲಿನ ಸವಾಯ್ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ಭರ್ಜರಿ ಜಯ ಸಾಧಿಸಿದೆ. ಬೌಲರ್​ಗಳ ಸಂಘಟಿತ ಹೋರಾಟದ ಫಲವಾಗಿ ಅಶ್ವಿನ್ ಪಡೆ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದೆ.

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ದುಕೊಂಡಿತು. ನಾಯಕ ಅಜಿಂಕ್ಯ ರಹಾನೆ ಯೋಜನೆಯಂತೆ ರಾಯಲ್ಸ್​ ಬೌಲರ್​ಗಳು ಆರಂಭದಲ್ಲೇ ಯಶಸ್ಸು ಸಾಧಿಸಿದರು. ಕಿಂಗ್ಸ್​ ಇಲೆವೆನ್ ಆರಂಭಿಕ ಆಟಗಾರ ಕೆಎಲ್ ರಾಹುಲ್ (4) ಹಾಗೂ ಮಯಾಂಕ್ ಅಗರ್ವಾಲ್ (22) ವಿಕೆಟ್ ಬೇಗನೆ ಉರುಳಿಸಿದರು.

ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್​ನತ್ತ ಗಮನ ಹರಿಸಿದ್ದ ಗೇಲ್ ನಂತರ ಅಬ್ಬರಿಸಲು ಶುರುವಿಟ್ಟುಕೊಂಡರು. ಕೇವಲ 47 ಎಸೆತಗಳಲ್ಲಿ ಸಿಡಿಲಬ್ಬರದ 79 ರನ್ ಗಳಿಸುವ ​ ಮೂಲಕ ಪಂಜಾಬ್​ ತಂಡವನ್ನು ಆರಂಭಿಕ ಆಘಾತದಿಂದ ಗೇಲ್ ಪಾರು ಮಾಡಿದರು. ಈ ವೇಳೆ 4 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳು ಗೇಲ್​ ಬ್ಯಾಟ್​ನಿಂದ ಹರಿದುಬಂದವು.

ತಂಡದ ಮೊತ್ತ 144 ಆಗಿದ್ದಾಗ ಸಿಕ್ಸರ್ ಬಾರಿಸುವ ಯತ್ನದಲ್ಲಿ ಬೆನ್​ ಸ್ಟೋಕ್​ಗೆ ವಿಕೆಟ್ ಒಪ್ಪಿಸಿ ಗೇಲ್ ಹೊರನಡೆದರು. ಮತ್ತೊಂದೆಡೆ ಯುವ ಆಟಗಾರ ಸರ್ಫರಾಜ್ ಖಾನ್​ ಕೂಡ ಸ್ಫೋಟಕ ಹೊಡೆತಗಳಿಗೆ ಕೈ ಹಾಕಿ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. 6 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡ ಸರ್ಫರಾಜ್ ಬ್ಯಾಟ್​ನಿಂದ 29 ಎಸೆತಗಳಲ್ಲಿ ಅಜೇಯ 46 ರನ್​ಗಳು ಮೂಡಿಬಂದವು.

IPL Live Score, RR vs KXIP: ಬಟ್ಲರ್ ಹೋರಾಟ ವ್ಯರ್ಥ; ಪಂಜಾಬ್​ಗೆ 14 ರನ್​ಗಳ ಗೆಲುವು

ಗೇಲ್ ಅಬ್ಬರ ಹಾಗೂ ಸರ್ಫರಾಜ್ ಉತ್ತಮ ಆಟದಿಂದ ಪಂಜಾಬ್ 4 ವಿಕೆಟ್​ ನಷ್ಟಕ್ಕೆ 184 ರನ್​ಗಳಿಸಿತು. ಆರಂಭದಲ್ಲಿ ಉತ್ತಮ ಬೌಲಿಂಗ್ ನಡೆಸಿದ ರಾಜಸ್ಥಾನ ರಾಯಲ್ಸ್ ನಂತರ ಪಂಜಾಬ್​ ಬ್ಯಾಟ್ಸ್​ಮನ್​ಗಳ ವಿಕೆಟ್​ ಪಡೆಯುವಲ್ಲಿ ಪರದಾಡಬೇಕಾಯಿತು. ರಾಯಲ್ಸ್​ ಪರ ಬೆನ್ ಸ್ಟೋಕ್ಸ್​ಗೆ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

185 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಆರ್​ಆರ್​ ಸ್ಪೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಅಜಿಂಕ್ಯ ರಹಾನೆ ಹಾಗೂ ಜಾಸ್ ಬಟ್ಲರ್ ಬಿರುಸಿನ ಆಟ ಪ್ರದರ್ಶಿಸಿದರು. ಅದರಲ್ಲು ಅಬ್ಬರಿಸಿದ ಬಟ್ಲರ್ ಪಂಜಾಬ್ ಬೌಲರ್​ಗಳನ್ನು ಕಾಡಿದರು. ಈ ಜೋಡಿ ಮೊದಲ ವಿಕೆಟ್​ಗೆ 78 ರನ್​ಗಳ ಕಾಣಿಕೆ ನೀಡಿತು. ಅದುಕೂಡ ಕೇವಲ 8.1 ಓವರ್​​ಗಳಲ್ಲಿ. ಈ ಹೊತ್ತಿಗೆ ರಹಾನೆ(27) ನಿರ್ಗಮಿಸಿದರು.ಇದನ್ನೂ ಓದಿVIDEO: ಪಂದ್ಯಶ್ರೇಷ್ಠ​ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ಆ್ಯಂಡ್ರೆ ರಸೆಲ್: ಫ್ಯಾನ್ಸ್​ನಿಂದ ಮೆಚ್ಚುಗೆಯ ಮಹಾಪೂರ

ನಂತರದಲ್ಲಿ ಸಂಜು ಸ್ಯಾಮ್ಸನ್ ಜೊತೆಯಾದ ಬಟ್ಲರ್ ತನ್ನ ಸ್ಪೋಟಕ ಆಟ ಮುಂದುವರಿಸಿದರು. ಈ ಸಂದರ್ಭ ರಾಜಸ್ಥಾನ ಸುಲಭವಾಗಿ ಗೆಲುವಿನ ನಗೆ ಬೀರುವ ಹುಮ್ಮಸ್ಸಿನಲ್ಲಿತ್ತು. ಆದರೆ, ಬಟ್ಲರ್ ಅಶ್ವಿನ್ ಎಸೆತದಲ್ಲಿ ಊಹಿಸಲಾಗದ ರೀತಿಯಲ್ಲಿ ಔಟ್ ಆಗಿದ್ದೆ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸ್​ ಸಿಡಿಸಿ 69 ರನ್​​ಗೆ ನಿರ್ಗಮಿಸಿದರು. ಇದಾದ ಬೆನ್ನಲ್ಲೆ ಸ್ಯಾಮ್ಸನ್ ಕೂಡ 30 ರನ್​ಗೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು. ನಿಷೇಧದ ಬಳಿಕ ಐಪಿಎಲ್​​ಗೆ ಮರಳಿದ ಸ್ಟೀವನ್ ಸ್ಮಿತ್ ಆಟ ಕೇವಲ 20 ರನ್​ಗೆ ನಿಂತಿತು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. ಪರಿಣಾಮ ನಿಗದಿತ 20 ಓವರ್​ಗೆ ರಾಜಸ್ಥಾನ್​​ 9 ವಿಕೆಟ್ ಕಳೆದುಕೊಂಡು 170 ರನ್​ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಕೊಂಡಿತು. ಪಂಜಾಬ್ ಪರ ಸ್ಯಾಮ್ ಕುರ್ರನ್, ಮುಜೀದ್ ಹಾಗೂ ರಜಪೂತ್ ತಲಾ 2 ವಿಕೆಟ್ ಕಿತ್ತರು. ಈ ಮೂಲಕ ಪಂಜಾಬ್ ಬೌಲರ್​ಗಳ ಉತ್ತಮ ಪ್ರದರ್ಶನದಿಂದ 14 ರನ್​ಗಳ ಗೆಲುವಿನೊಂದಿಗೆ ಸಶ್ವಿನ್ ಪಡೆ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ.
First published:March 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading