IPL 2019: ಧೋನಿ ಪಡೆಗೆ ಡೆಲ್ಲಿ ಸವಾಲು; ಎರಡನೇ ಜಯಕ್ಕೆ ಉಭಯ ತಂಡಗಳ ಹೋರಾಟ

ಉಭಯ ತಂಡಗಳು ಈಗಾಗಲೇ ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡಿದೆ. ಚೆನ್ನೈ ಆರ್​ಸಿಬಿ ವಿರುದ್ಧ 7 ವಿಕೆಟ್​ಗಳಿಂದ ಗೆದ್ದು ಬೀಗಿದ್ದರೆ, ಇತ್ತ ಡೆಲ್ಲಿ ಮುಂಬೈ ವಿರುದ್ಧ 37 ರನ್​ಗಳ ಜಯ ಸಾಧಿಸಿತ್ತು.

Harshith AS | news18
Updated:March 27, 2019, 4:03 PM IST
IPL 2019: ಧೋನಿ ಪಡೆಗೆ ಡೆಲ್ಲಿ ಸವಾಲು; ಎರಡನೇ ಜಯಕ್ಕೆ ಉಭಯ ತಂಡಗಳ ಹೋರಾಟ
ಡೆಲ್ಲಿ ಕ್ಯಾಪಿಟಲ್ v/s​ ಚೆನೈ ಸೂಪರ್​ ಕಿಂಗ್ಸ್​
  • News18
  • Last Updated: March 27, 2019, 4:03 PM IST
  • Share this:
ಡೆಲ್ಲಿ: ಐಪಿಎಲ್​​​ನಲ್ಲಿ ಇಂದು ಎರಡು ಬಲಿಷ್ಠ ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ. ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಚೆನೈ ಸೂಪರ್ ಕಿಂಗ್ಸ್​​ ತಂಡಗಳ ನಡುವೆ ಹೋರಾಟ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಉಭಯ ತಂಡಗಳು ಈಗಾಗಲೇ ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡಿದೆ. ಚೆನ್ನೈ ಆರ್​ಸಿಬಿ ವಿರುದ್ಧ 7 ವಿಕೆಟ್​ಗಳಿಂದ ಗೆದ್ದು ಬೀಗಿದ್ದರೆ, ಇತ್ತ ಡೆಲ್ಲಿ ಮುಂಬೈ ವಿರುದ್ಧ 37 ರನ್​ಗಳ ಜಯ ಸಾಧಿಸಿತ್ತು.

ಡೆಲ್ಲಿ ತಂಡದ ಬ್ಯಾಟ್ಸ್​ಮನ್​​ಗಳು ಭರ್ಜರಿ ಫಾರ್ಮ್​​ನಲ್ಲಿದ್ದು, ರಿಷಭ್ ಪಂತ್ ಅಂತೂ ಅಬ್ಬರಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಪಂತ್ ಜೊತೆಗೆ ಧವನ್, ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಹಾಗೂ ಕಾಲಿನ್ ಇನ್​​ಗ್ರಾಂ ಪ್ರಮುಖ ಬ್ಯಾಟಿಂಗ್ ಬಲ. ಬೌಲಿಂಗ್​ನಲ್ಲು ಡೆಲ್ಲಿ ಸ್ಟಾರ್ ಆಟಗಾರರನ್ನು ಹೊಂದಿದೆ.

ಇದನ್ನೂ ಓದಿ: VIDEO: ವಿವಾದಕ್ಕೆ ಕಾರಣವಾಯ್ತಾ ಅಶ್ವಿನ್​ ‘ಮನ್​ ಕಡ್​ ರನೌಟ್​‘

ಇತ್ತ ಧೋನಿ ಪಡೆ ಎರಡನೇ ಗೆಲುವಿಗೆ ಹಾತೊರೆಯುತ್ತಿದ್ದು, ಕಳೆದ ತಂಡದ ಆಟಗಾರರೆ ಇಂದು ಕೂಡ ಕಣಕ್ಕಿಳಿಯುವುದು ಪಕ್ಕ. ಸ್ಪಿನ್ನರ್​​ಗಳೆ ಪ್ರಮುಖ ಅಸ್ತ್ರವಾಗಿರು ಚೆನ್ನೈಗೆ ವೇಗಿಗಳು ಒಂದಿಷ್ಟು ಸಾತ್ ನೀಡಿದರೆ ಮತ್ತೊಂದು ಜಯ ಸಾಧಿಸುವುದು ಕಷ್ಟವೇನಲ್ಲ. ಬ್ಯಾಟಿಂಗ್​ನಲ್ಲಂತು ಬಲಿಷ್ಠವಾಗಿರುವ ಚೆನ್ನೈ ಎಲ್ಲರೂ ಅದ್ಭುತ ಫಾರ್ಮ್​​ನಲ್ಲಿದ್ದಾರೆ.

ಒಟ್ಟಾರೆ ಇಂದು ಡೆಲ್ಲಿಯಲ್ಲಿ ಮತ್ತೊಂದು ಬಿಗ್ ಮ್ಯಾಚ್ ನಡೆಯಲಿದ್ದು ಸಂಜೆ 8 ಗಂಟೆಗೆ ಆರಂಭವಾಗಲಿರುವ ಪಂದ್ಯಕ್ಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ದೆಹಲಿ ಕ್ಯಾಪಿಟಲ್ಸ್ ಆಟಗಾರರು:ಶ್ರೇಯಸ್​ ಅಯ್ಯರ್ (ಕ್ಯಾಪ್ಟನ್​), ರಿಷಬ್ ಪಂತ್ , ಪೃಥ್ವಿ ಷಾ, ಶಿಖರ್ ಧವನ್, ಕೋಲಿನ್ ಇಂಗ್ರಾಮ್, ಕೀಮೋ ಪಾಲ್, ಅಕ್ಸಾರ್ ಪಟೇಲ್, ರಾಹುಲ್ ತೆವಾಟಿಯಾ, ಕಗಿಶೋ ರಾಬಾಡಾ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ, ಹನುಮಾ ವಿಹಾರಿ, ಅಂಕುಶ್ ಬೈನ್ಸ್, ಹರ್ಷಲ್ ಪಟೇಲ್, ಮಂಜೋತ್ ಕಾಲ್ರಾ, ಕ್ರಿಸ್ ಮೋರಿಸ್, ಶೇರ್ಫೇನ್ ರುದರ್ಫೋರ್ಡ್, ಜಲಜ್ ಸಕ್ಸೇನಾ, ಅಮಿತ್ ಮಿಶ್ರಾ, ಸಂದೀಪ್ ಲಮಿಖಾನೆ, ಆವೆಶ್ ಖಾನ್, ನಾತು ಸಿಂಗ್, ಬಂದರು ಅಯ್ಯಪ್ಪ, ಕೊಲಿನ್ ಮುನ್ರೊ

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು :

ಎಂಎಸ್ ಧೋನಿ (ಕ್ಯಾಪ್ಟನ್​ & ವಿಕೆಟ್​ ಕೀಪರ್​), ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಸುರೇಶ್ ರೈನಾ, ಕೇದಾರ ಜಾಧವ್, ರವೀಂದ್ರ ಜಡೇಜಾ, ಡ್ವೇಯ್ನ್ ಬ್ರಾವೋ, ದೀಪಕ್ ಚಹಾರ್, ಶರ್ದಲ್ ಠಾಕೂರ್, ಹರಭಜನ್ ಸಿಂಗ್, ಇಮ್ರಾನ್ ತಾಹಿರ್, ಫಾಫ್ ಡು ಪ್ಲೆಸಿಸ್, ಮುರಳಿ ವಿಜಯ್, ಸ್ಯಾಮ್ ಬಿಲ್ಲಿಂಗ್ಸ್, ಧ್ರೂವ್ ಶೊರೆ, ಎನ್ ಜಗದೀಶನ್, ರುತುರಾಜ್ ಗಿಕ್ವಾಡ್, ಡೇವಿಡ್ ವಿಲ್ಲೆ, ಚೈತನ್ಯ ಬಿಷ್ನೋಯಿ, ಕರ್ನ್ ಶರ್ಮಾ, ಮಿಚೆಲ್ ಸಾಂಟ್ನರ್, ಮೋಹಿತ್ ಶರ್ಮಾ, ಕೆ.ಎಂ. ಆಸಿಫ್, ಮೊನುಕುಮಾರ್.

First published:March 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading