• Home
  • »
  • News
  • »
  • cricket-2
  • »
  • ICC T20 Team Ranking: ಅಗ್ರಸ್ಥಾನದಲ್ಲಿ ಭಾರತ, ಇಂಗ್ಲೆಂಡ್ ತಂಡಕ್ಕೆ ಎರಡನೇ ಸ್ಥಾನ

ICC T20 Team Ranking: ಅಗ್ರಸ್ಥಾನದಲ್ಲಿ ಭಾರತ, ಇಂಗ್ಲೆಂಡ್ ತಂಡಕ್ಕೆ ಎರಡನೇ ಸ್ಥಾನ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದೀಗ ಎಂಆರ್ ಎಫ್ ಟೈರ್ಸ್ ಮೆನ್ಸ್ ಟಿ20 ತಂಡಗಳ ಕ್ರಮಾಂಕ ಪಟ್ಟಿಯು ಬಿಡುಗಡೇಯಾಗಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳೆಲ್ಲರಿಗೂ ಸುಗ್ಗಿಯೋ ಸುಗ್ಗಿಯಾದಂತಾಗಿದೆ. ಕಾರಣ ಭಾರತ ಈ ಬಾರಿ ತನ್ನ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

  • Share this:

ಕ್ರಿಕೆಟ್ (Cricket) ಎಂಬುದು ಭಾರತದಲ್ಲಿ ಧರ್ಮವಿದ್ದಂತೆಯೇ. ಇದು ಒಂದು ರೀತಿಯಲ್ಲಿ ನಿಜವೂ ಕೂಡ ಹೌದು. ಮೊದಲಿನಿಂದಲೂ ಭಾರತೀಯರಿಗೆ ಚಿತ್ರರಂಗ ಬಿಟ್ಟರೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಉತ್ಸಾಹ ಹಾಗೂ ಪ್ರೀತಿ. ಕೋಟಿಗಟ್ಟಲೆ ಕ್ರಿಕೆಟ್ ಅಭಿಮಾನಿಗಳನ್ನು (Cricket Fans) ಹೊಂದಿರುವ ಭಾರತ ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ಭಾರತ ತಂಡ ಪ್ರತಿ ಪಂದ್ಯಗಳಲ್ಲೂ ಜಯಭೇರಿ ಬಾರಿಸಲೇಬೇಕೆಂದು ಬಯಸುತ್ತಾರೆ, ಅದರಂತೆ ನಮ್ಮ ತಂಡ (Team) ಯಾವಾಗಲೂ ವಿಶ್ವದ ಅತ್ಯುತ್ತಮ ತಂಡಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರಲೇಬೇಕೆಂಬ ಅದಮ್ಯ ಬಯಕೆಯನ್ನೂ ಸಹ ಹೊಂದಿರುತ್ತಾರೆ. ಹಾಗಾಗಿ ಪ್ರತಿ ಬಾರಿ ಕ್ರಿಕೆಟ್ ಅಭಿಮಾನಿಗಳು ವಿಶ್ವದ ಕ್ರಿಕೆಟ್ ತಂಡಗಳ ರ್‍ಯಾಂಕಿಂಗ್ (Ranking of cricket teams) ಬಿಡುಗಡೆಯಾಗುವುದನ್ನು ಬಕ ಪಕ್ಷಿಗಳಂತೆ ಕಾಯುತ್ತಲೇ ಇರುತ್ತಾರೆ.


ಇದೀಗ ಎಂಆರ್ ಎಫ್ ಟೈರ್ಸ್ ಮೆನ್ಸ್ ಟಿ20 ತಂಡಗಳ ಕ್ರಮಾಂಕ ಪಟ್ಟಿಯು ಬಿಡುಗಡೇಯಾಗಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳೆಲ್ಲರಿಗೂ ಸುಗ್ಗಿಯೋ ಸುಗ್ಗಿಯಾದಂತಾಗಿದೆ. ಕಾರಣ ಭಾರತ ಈ ಬಾರಿ ತನ್ನ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.


ಭಾರತದ ಅಂಕ
ತವರಿನಲ್ಲಿ ಆಸ್ಟ್ರೇಲಿಯಾ ತಂಡವನ್ನು ಇತ್ತೀಚೆಗೆ 2-1 ರಿಂದ ಸೋಲಿಸುವ ಮೂಲಕ ಭಾರತ ಈಗ ಐಸಿಸಿ ಪಟ್ಟಿಯಲ್ಲಿ ಒಂದು ಹೆಚ್ಚುವರಿ ಅಂಕಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ತದನಂತರದ ಸ್ಥಾನದಲ್ಲಿ ಇಂಗ್ಲೆಂಡ್ ತಂಡವಿದ್ದು ಅದಕ್ಕೆ ಒಟ್ಟು 261 ಅಂಕಗಳು ದೊರೆತಿವೆ. ಈಗ ಭಾರತ 268 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿದೆ.


ಕಳೆದ ಭಾನುವಾರದಂದು ನಡೆದ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನದ ಎದುರು ಸೋಲುವ ಮೂಲಕ ಭಾರತದೊಂದಿಗಿನ ಅಂಕಗಳ ಅಂತರವನ್ನು ಇನ್ನಷ್ಟು ವಿಸ್ತರಿಸಿಕೊಂಡಂತಾಗಿದೆ. ಇನ್ನು, ಮೂರನೇ ಸ್ಥಾನವನ್ನು ಒಟ್ಟು ಎರಡು ತಂಡಗಳು ಹಂಚಿಕೊಂಡಿದ್ದು ಅವುಗಳೆಂದರೆ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ. ಎರಡೂ ತಂಡಗಳು ಒಟ್ಟು 258 ಅಂಕಗಳನ್ನು ಹೊಂದಿವೆ.


ಇದನ್ನೂ ಓದಿ: T20 World Cup 2022: ಹೀಗೆ ಆಡಿದರೆ ಈ ಮೂವರು ಆಟಗಾರರು ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಅನುಮಾನವಂತೆ!


ಪಾಕಿಸ್ತಾನಕ್ಕಿದೆ ಅವಕಾಶ
ಇನ್ನು, ಎರಡನೇ ಕ್ರಮಾಂಕದಲ್ಲಿರುವ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕೆ ಆ ಸ್ಥಾನವನ್ನು ಪಡೆಯುವ ಸರ್ವ ಅವಕಾಶ ಈಗ ಪಾಕಿಸ್ತಾನಕ್ಕಿದೆ, ಆದರೆ, ಅದು ತನ್ನ ಮಿಕ್ಕ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಅನ್ನು ಮಣಿಸಬೇಕು. ಆದರೆ, ಇದು ಅಷ್ಟೊಂದು ಸುಲಭದ ಕೆಲಸವಲ್ಲ, ಏಕೆಂದರೆ ಪಾಕಿಸ್ತಾನ ಮಿಕ್ಕ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದ್ದರೆ ಇಂಗ್ಲೆಂಡ್ ತನ್ನ ಎರಡನೇ ಸ್ಥಾನ ಉಳಿಸಿಕೊಳ್ಳಲು ಅದು ಪಾಕಿಸ್ತಾನದ ಎದುರು ಮೂರು ಪಂದ್ಯಗಳಲ್ಲಿ ಕನಿಷ್ಠ ಒಂದನ್ನಾದರೂ ಗೆಲ್ಲಲೇಬೇಕು. ಪ್ರಸ್ತುತ ಇಂಗ್ಲೆಂಡ್-ಪಾಕಿಸ್ತಾನ ಸರಣಿಯು 2-2 ರಿಂದ ಸಮವಾಗಿದೆ.


ಆಸ್ಟ್ರೇಲಿಯಾದ ಒಂದು ಅಂಕ ಕುಸಿತ
ಇತ್ತೀಚೆಗೆ ಹೈದರಾಬಾದಿನಲ್ಲಿ ಪಡೆದ ರೋಮಾಂಚಕ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದ್ದು ಆ ಮೂಲಕ ಆಸ್ಟ್ರೇಲಿಯಾ ಒಂದು ಅಂಕವನ್ನು ಕಳೆದುಕೊಂಡಿದೆ. ಪ್ರಸ್ತುತ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡಿಗಿಂತ ಎರಡು ಅಂಕ ಕಡಿಮೆ ಹೊಂದಿದ್ದರೆ ಏಳನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡಕ್ಕಿಂತ ಏಳು ಅಂಕಗಳಷ್ಟು ಹೆಚ್ಚಿಗೆ ಹೊಂದಿದೆ. ಮಿಕ್ಕಂತೆ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನಗಳು ಮೊದಲ ಹತ್ತರ ಪಟ್ಟಿಯನ್ನು ಪೂರ್ಣಗೊಳಿಸುತ್ತವೆ.


ಭಾರತದ ಮುಂದಿರುವ ಸರಣಿಗಳು
ಭಾರತ ತನ್ನ ಮಹತ್ವಾಕಾಂಕ್ಷೆಯ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿದೆ. ಅದಕ್ಕೂ ಮುನ್ನ ಭಾರತ ದಕ್ಷಿಣ ಆಫ್ರಿಕಾದೊಂದಿಗೆ ಮೂರು ಟಿ20 ಪಂದ್ಯಗಳನ್ನಾಡಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ತಂಡವು ಭಾರತದೊಂದಿಗೆ ಸೆಣೆಸಲೆಂದು ಇಲ್ಲಿ ಬಂದಿಳಿದಿದೆ. ಈ ಪಂದ್ಯಗಳೂ ಸಹ ಸಾಕಷ್ಟು ಉತ್ಸುಕುತೆಯನ್ನು ಹುಟ್ಟುಹಾಕಿದ್ದು ಸೆಪ್ಟೆಂಬರ್ 28 ರಿಂದ ಪಂದ್ಯಗಳು ಆರಂಭವಾಗಲಿವೆ.


ಇದನ್ನೂ ಓದಿ:  Taniya Bhatia: ಇಂಗ್ಲೆಂಡ್​​ನಲ್ಲಿ ಭಾರತ ಕ್ರಿಕೆಟ್​ ಆಟಗಾರ್ತಿಯ ಬ್ಯಾಗ್​ ಕದ್ದ ಖದೀಮರು, ಮಹಿಳಾ​ ತಂಡಕ್ಕೆ ಇಷ್ಟೇನಾ ಸೆಕ್ಯೂರಿಟಿ?


ದಕ್ಷಿಣ ಆಫ್ರಿಕಾ ಪಂದ್ಯಾವಳಿಗಳಿಗೆ ಭಾರತ ತಂಡ ಈ ಕೆಳಗಿನಂತಿದೆ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಶ್ ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ, ಜಸ್ಪ್ರೀತ್ ಬುಮ್ರಾ

Published by:Ashwini Prabhu
First published: