• Home
  • »
  • News
  • »
  • cricket-2
  • »
  • ಭಾರತೀಯ ಕ್ರಿಕೆಟ್​ನಲ್ಲಿ ಮತ್ತೆ ಶುರುವಾಗಲಿದೆ 'ದಾದಾ'ಗಿರಿ; ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆ ಖಚಿತ

ಭಾರತೀಯ ಕ್ರಿಕೆಟ್​ನಲ್ಲಿ ಮತ್ತೆ ಶುರುವಾಗಲಿದೆ 'ದಾದಾ'ಗಿರಿ; ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆ ಖಚಿತ

ಪಂತ್ ಟೀಕೆಗಳನ್ನು ಕೇಳಿಸಿಕೊಳ್ಳುತ್ತಲೇ ಶಯಸ್ಸಿನ ಹಾದಿಕಂಡುಕೊಳ್ಳಬೇಕು. ಕೊಹ್ಲಿ ಸ್ಥಾನದಲ್ಲಿ ನಾನಿದ್ದರೆ ಪಂತ್ರನ್ನು ಅದೇ ಹಾದಿಯಲ್ಲಿ ಸಾಗಲು ಬಿಡುತ್ತಿದ್ದೆ. ಟೀಕೆಗಳಿಗೆ ಕಿವಿಗೊಡುವಂತೆ ಹಾಗೂ ಯಶಸ್ಸು ಕಂಡುಕೊಳ್ಳುವಂತೆ ಹೇಳುತ್ತಿದ್ದೆ- ಗಂಗೂಲಿ.

ಪಂತ್ ಟೀಕೆಗಳನ್ನು ಕೇಳಿಸಿಕೊಳ್ಳುತ್ತಲೇ ಶಯಸ್ಸಿನ ಹಾದಿಕಂಡುಕೊಳ್ಳಬೇಕು. ಕೊಹ್ಲಿ ಸ್ಥಾನದಲ್ಲಿ ನಾನಿದ್ದರೆ ಪಂತ್ರನ್ನು ಅದೇ ಹಾದಿಯಲ್ಲಿ ಸಾಗಲು ಬಿಡುತ್ತಿದ್ದೆ. ಟೀಕೆಗಳಿಗೆ ಕಿವಿಗೊಡುವಂತೆ ಹಾಗೂ ಯಶಸ್ಸು ಕಂಡುಕೊಳ್ಳುವಂತೆ ಹೇಳುತ್ತಿದ್ದೆ- ಗಂಗೂಲಿ.

Sourav Ganguly: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿರುವುದಕ್ಕೆ ಟ್ವಿಟ್ಟರ್​ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಹಾಗೇ, ರವಿಶಾಸ್ತ್ರಿಗೆ ಇನ್ನು ಉಳಿಗಾಲವಿಲ್ಲ ಎಂಬ ಟ್ರೋಲ್​ಗಳೂ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿವೆ.

  • Share this:

ನವದೆಹಲಿ (ಅ.14): ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಬಂಗಾಳದ ಹುಲಿ ಖ್ಯಾತಿಯ ಸೌರವ್​ ಗಂಗೂಲಿ ಭಾರತೀಯ ಕ್ರಿಕೆಟ್​ ಅಸೋಸಿಯೇಷನ್​ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಆಟಗಾರರೊಬ್ಬರು ಇದೇ ಮೊದಲ ಬಾರಿಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವ ಹೆಗ್ಗಳಿಕೆಗೆ ಗಂಗೂಲಿ ಪಾತ್ರರಾಗಲಿದ್ದಾರೆ. 

ಮೊದಲಿಗೆ ಕ್ರಿಕೆಟಿಗ ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬ್ರಿಜೇಟ್ ಪಟೇಲ್ ಈ ಬಾರಿಯ ಬಿಸಿಸಿಐ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ನಾಟಕೀಯ ಬೆಳವಣಿಗೆಯ ನಂತರ  ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಅಧ್ಯಕ್ಷರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಅವಿರೋಧವಾಗಿ ಇಂದು 'ದಾದಾ' ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. 47 ವರ್ಷದ ಗಂಗೂಲಿ ಸದ್ಯಕ್ಕೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. 2020ರಲ್ಲಿ ಅವರ ಅಧಿಕಾರಾವಧಿ ಅಂತ್ಯವಾಗಲಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರನ್ನು ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಹಾಲಿ ಕೇಂದ್ರ ಸಚಿವ ಅನುರಾಗ್ ಠಾಗೂರ್ ಸಹೋದರ ಅರುಣ್ ಧುಮಲ್- ಖಜಾಂಚಿ, ಕೇರಳ ಕ್ರಿಕೆಟ್ ಅಸೋಯೇಷನ್ ಅಧ್ಯಕ್ಷ ಜಯೇಶ್ ಜಾರ್ಜ್ - ಜಂಟಿ ಕಾರ್ಯದರ್ಶಿಯಾಗಲಿದ್ದಾರೆ ಎನ್ನಲಾಗಿದೆ.

India vs South Africa: ಮೈದಾನಕ್ಕೆ ನುಗ್ಗಿ ಕಾಲು ಹಿಡಿದ ಅಭಿಮಾನಿ; ನೆಲಕ್ಕುರುಳಿದ ರೋಹಿತ್ ಶರ್ಮ!

ಮಾಜಿ ಬಿಸಿಸಿಐ ಮುಖ್ಯಸ್ಥ ಎನ್. ಶ್ರೀನಿವಾಸನ್, ಮಾಜಿ ಕಾರ್ಯದರ್ಶಿ ನಿರಂಜನ್ ಶಾ, ಹಾಗೂ ಅನುರಾಗ್ ಠಾಕೂರ್ ಗಂಗೂಲಿ ಅವರನ್ನು ಬೆಂಬಲಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಬ್ರಿಜೇಟ್ ಪಟೇಲ್ ಅವರಿಗೆ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಭಾರೀ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ಸೌರವ್ ಗಂಗೂಲಿ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಗಂಗೂಲಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.


'ಬ್ರಿಜೇಶ್ ಪಟೇಲ್ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕಾಗಿ ಎನ್​ ಶ್ರೀನಿವಾಸನ್ ಮೂಲಕ ಸಾಕಷ್ಟು ಲಾಬಿ ನಡೆಸಿದ್ದರು. ಆದರೆ, ಅವರು ಅಧ್ಯಕ್ಷರಾಗುವ ಬಗ್ಗೆ ಹೆಚ್ಚು ಜನರಿಗೆ ಮೆಚ್ಚುಗೆಯಿರಲಿಲ್ಲ. ಈಗ ಸೌರವ್ ನೂತನ ಅಧ್ಯಕ್ಷರಾಗುತ್ತಿರುವುದಕ್ಕೆ ನಮಗೆಲ್ಲರಿಗೂ ಸಂತೋಷವಾಗುತ್ತಿದೆ' ಎಂದು ಹಿರಿಯ ಕ್ರಿಕೆಟಿಗರೊಬ್ಬರು ಹೇಳಿಕೆ ನೀಡಿದ್ದಾರೆ.


ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿರುವುದಕ್ಕೆ ಟ್ವಿಟ್ಟರ್​ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸೌರವ್ ಗಂಗೂಲಿ ಹೆಸರು ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದು, ಮೆಚ್ಚಿನ ದಾದಾಗೆ ಈ ಗೌರವ ಸಿಗುತ್ತಿರುವುದಕ್ಕೆ ಗಂಗೂಲಿ ಅಭಿಮಾನಿಗಳು ಸಂಭ್ರಮಾಚರಿಸುತ್ತಿದ್ದಾರೆ. ಹಾಗೇ, ರವಿಶಾಸ್ತ್ರಿಗೆ ಇನ್ನು ಉಳಿಗಾಲವಿಲ್ಲ ಎಂಬ ಟ್ರೋಲ್​ಗಳೂ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿವೆ.


 

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು