Shahid Afridi: ಇಂಡಿಯಾ vs ಪಾಕ್​ ಪಂದ್ಯದ ವೇಳೆ ಭಾರತದ ಧ್ವಜ ಹಿಡಿದು ಸಂಭ್ರಮಿಸಿದ ಅಫ್ರಿದಿ ಮಗಳು!

ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಪಂದ್ಯ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿತ್ತು. ಅಭಿಮಾನಿಗಳೆಲ್ಲಾ ಉಗುರು ಕಚ್ಚಿಕೊಂಡು ಪಂದ್ಯ ವೀಕ್ಷಿಸುತ್ತಿದರು. ಆದರೆ ಅಫ್ರಿದಿ ಮಗಳು ಮಾತ್ರ ಪಾಕ್‌ ಬದಲಿಗೆ ಭಾರತ ಧ್ವಜ ಹಾರಿಸಿದರು. ಇದೇ ವಿಚಾರವನ್ನು ಆಫ್ರಿದಿ ಬಹಿರಂಗಪಡಿಸಿದ್ದು, ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ಅವರ ಮಗಳು ಭಾರತದ ಧ್ವಜವನ್ನು ಹಿಡಿದು ಸಂಭ್ರಮಿಸಿರುವುದಾಗಿ ಆಫ್ರಿದಿ ಹೇಳಿಕೊಂಡಿದ್ದಾರೆ.

ಭಾರತದ ಧ್ವಜ ಹಾರಿಸಿದ ಶಾಹಿದ್‌ ಅಫ್ರಿದಿ ಮಗಳು

ಭಾರತದ ಧ್ವಜ ಹಾರಿಸಿದ ಶಾಹಿದ್‌ ಅಫ್ರಿದಿ ಮಗಳು

  • Share this:
ಪಾಕಿಸ್ತಾನ (Pakistan) ಮತ್ತು ಭಾರತ ನಡುವಿನ ಏಷ್ಯಾ ಕಪ್ 2022 ಪಂದ್ಯದ ವೇಳೆ ತನ್ನ ಮಗಳು ಪಾಕ್‌ ಧ್ವಜದ ಬದಲಿಗೆ ಭಾರತದ ಧ್ವಜವನ್ನು ಬೀಸಿದ್ದಾಳೆ ಎಂಬ ವಿಚಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಶಾಹಿದ್ ಖಾನ್ ಅಫ್ರಿದಿ (Shahid Khan Afridi) ಖಚಿತಪಡಿಸಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಮತ್ತು ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಾಹಿದ್ ಅಫ್ರಿದಿಗೆ ವಿವಾದಗಳು ಹೊಸದೇನಲ್ಲ. ಭಾರತ ವಿರೋಧಿ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಾಗುವ ಅಫ್ರಿದಿ ಈ ಬಾರಿ ತಮ್ಮ ಮಗಳ ವಿಚಾರವಾಗಿ ಅಚ್ಚರಿ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಪಾಕ್‌ ಮತ್ತು ಭಾರತದ ಕ್ರಿಕೆಟ್‌ ಪಂದ್ಯಾವಳಿ (Cricket Match) ಎಂದರೆ ಎಲ್ಲರಿಗೂ ಒಂಥರಾ ಹಬ್ಬ. ಸಾಂಪ್ರದಾಯಿಕ ಎದುರಾಳಿಗಳೇ ಎಂದು ಕರೆಯಲಾಗುವ ಈ ಎರಡೂ ತಂಡಗಳು ಏಷ್ಯಾ ಕಪ್ 2022ರಲ್ಲಿ ಮುಖಾಮುಖಿಯಾಗಿದ್ದವು.

ಭಾರತ ಮತ್ತು ಪಾಕಿಸ್ತಾನ ನಡುವೆ ಎರಡು ಪಂದ್ಯಗಳು ನಡೆದವು. ಟೂರ್ನಿಯ ಗುಂಪು ಹಂತದಲ್ಲಿ ಮೊದಲ ಪಂದ್ಯ ನಡೆದಿತ್ತು. ಇದರಲ್ಲಿ ಭಾರತ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಬಳಿಕ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಇದೇ ವೇಳೆ ನಡೆದ ಒಂದು ಘಟನೆಯನ್ನು ಪಾಕಿಸ್ತಾನದ  ಮಾಜಿ ನಾಯಕ ಶಾಹಿದ್ ಅಫ್ರಿದಿ ಬಹಿರಂಗಪಡಿಸಿದ್ದಾರೆ.

ಭಾರತದ ಧ್ವಜ ಹಿಡಿದು ಸಂಭ್ರಮಿಸಿದ ಅಫ್ರಿದಿ ಮಗಳು
ಹೌದು, ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಪಂದ್ಯ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿತ್ತು. ಅಭಿಮಾನಿಗಳೆಲ್ಲಾ ಉಗುರು ಕಚ್ಚಿಕೊಂಡು ಪಂದ್ಯ ವೀಕ್ಷಿಸುತ್ತಿದರು. ಪಂದ್ಯದಲ್ಲಿ ಪಾಕ್‌ ಗೆಲುವಿನ ನಂತರ ಭಾರತ ಅಭಿಮಾನಿಗಳು ನಿರಾಶೆಗೊಂಡರು. ಆದರೆ ಅಫ್ರಿದಿ ಮಗಳು ಮಾತ್ರ ಪಾಕ್‌ ಬದಲಿಗೆ ಭಾರತ ಧ್ವಜ ಹಾರಿಸಿದರು. ಇದೇ ವಿಚಾರವನ್ನು ಆಫ್ರಿದಿ ಬಹಿರಂಗಪಡಿಸಿದ್ದು, ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ಅವರ ಮಗಳು ಭಾರತದ ಧ್ವಜವನ್ನು ಹಿಡಿದು ಸಂಭ್ರಮಿಸಿರುವುದಾಗಿ ಆಫ್ರಿದಿ ಹೇಳಿಕೊಂಡಿದ್ದಾರೆ.

"ಪಾಕ್‌ ಧ್ವಜ ಲಭ್ಯವಿಲ್ಲದ ಕಾರಣ ಭಾರತ ಧ್ವಜ ಬೀಸಿದ್ದಾಳೆ"
ಸೆಪ್ಟೆಂಬರ್ 4 ರಂದು ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂಗೆ ಕುಟುಂಬದವರು ಪಂದ್ಯ ವೀಕ್ಷಿಸಲು ತೆರಳಿದ್ದರು ಎಂದು ಆಫ್ರಿದಿ ಟಿವಿಯಲ್ಲಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಇಲ್ಲಿ ಮಾತನಾಡಿದ ಅಫ್ರಿದಿ, “ಕ್ರಿಡಾಂಗಣದಲ್ಲಿ ಅಷ್ಟೇನೂ ಪಾಕ್ ಅಭಿಮಾನಿಗಳಿರಲಿಲ್ಲ. ಕೇವಲ ಬೆರಳೆಣಿಕೆ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದರು.

ಇದನ್ನೂ ಓದಿ: Anushka Sharma and Virat Kohli: ಜಾಲಿಮೂಡ್‌ನಲ್ಲಿ ಕಿಂಗ್ ಕೊಹ್ಲಿ ದಂಪತಿ! ಲಂಡನ್‌ನ ಬೀದಿಗಳಲ್ಲಿ ವಿರಾಟ್-ಅನುಷ್ಕಾ ಸುತ್ತಾಟ

ಉಳಿದ 90 ಪ್ರತಿಶತದಷ್ಟು ಭಾರತೀಯ ಅಭಿಮಾನಿಗಳು ಪಂದ್ಯ ವೀಕ್ಷಿಸಲು ನೆರೆದಿದ್ದರು ಎಂದು ನನ್ನ ಹೆಂಡತಿ ಹೇಳಿದ್ದರು. ಆದ್ದರಿಂದ ಅಲ್ಲಿ ಪಾಕಿಸ್ತಾನದ ಧ್ವಜಗಳು ಹೆಚ್ಚಾಗಿ ಲಭ್ಯವಿರಲಿಲ್ಲ, ಹಾಗಾಗಿ ನನ್ನ ಕಿರಿಯ ಮಗಳು ಭಾರತದ ಧ್ವಜವನ್ನು ಹಿಡಿದು ಬೀಸುತ್ತಿದ್ದಳು, ನನ್ನ ಮಗಳು ಭಾರತದ ಧ್ವಜವನ್ನು ಬೀಸುತ್ತಿರುವ ವೀಡಿಯೊ ಕೂಡ ನನ್ನ ಬಳಿ ಇದೆ. ಆದರೆ ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದೇನೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

ಮತ್ತೆ ವಿವಾದಕ್ಕೆ ಸಿಲುಕಿಕೊಂಡ್ರು ಅಫ್ರಿದಿ  
ಶಾಹಿದ್ ಅಫ್ರಿದಿ ಎಂದು ಕರೆಯಲ್ಪಡುವ ಸಾಹಿಬ್ಜಾದಾ ಮೊಹಮ್ಮದ್ ಶಾಹಿದ್ ಖಾನ್ ಅಫ್ರಿದಿ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಆಲ್ ರೌಂಡರ್ ಆಗಿರುವ ಅಫ್ರಿದಿ ಬಲಗೈ ಲೆಗ್ ಸ್ಪಿನ್ನರ್ ಮತ್ತು ಬಲಗೈ ಬ್ಯಾಟ್ಸ್ ಮನ್ ಆಗಿದ್ದರು. ಹಲವಾರು ಮ್ಯಾಚ್‌ ಗಳನ್ನು ಉಲ್ಟಾ ಮಾಡಿದ ಮಾರಕ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟಿಗೆ 2018ರಲ್ಲಿ ನಿವೃತ್ತಿ ಘೋಷಿಸಿದರು.

ಇದನ್ನೂ ಓದಿ:  T20 World Cup 2022: ಹನಿಮೂನ್ ಮುಗಿದಿದೆ, ಇನ್ಮುಂದೆ ಸವಾಲುಗಳು ಎದುರಾಗಲಿದೆ; ದ್ರಾವಿಡ್​ಗೆ ಎಚ್ಚರಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

ಆಗಾಗ್ಗೆ ಭಾರತದ ವಿರುದ್ಧವಾಗಿ ಹೇಳಿಕೆ ನೀಡುವ ಅಫ್ರಿದಿ ಈ ವಿಚಾರವಾಗಿ ಹಲವು ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದರು. ಶಿಕ್ಷಿತ ರಾಷ್ಟ್ರಗಳು ಭಾರತವನ್ನು ಅನುಸರಿಸಬಾರದು, ಭಾರತವನ್ನು ಪಾಕಿಸ್ತಾನದ ಶತ್ರು ದೇಶ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆಗಳನ್ನು ಈ ಹಿಂದೆ ನೀಡಿದ್ದರು.
Published by:Ashwini Prabhu
First published: