Fact Check| ಪಾಕಿಸ್ತಾನದ ಭದ್ರತೆಯ ಕುರಿತು ಅಣಕವಾಡಿ ಟ್ವೀಟ್ ಮಾಡಿದ ನ್ಯೂಜಿಲ್ಯಾಂಡ್ ಕ್ರಿಕೆಟರ್ ಫಿನ್ ಅಲೆನ್; ಸುದ್ದಿಯ ಅಸಲಿಯತ್ತೇನು?

ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಈ ಟ್ವೀಟ್ ಅನ್ನು ಮಾರ್ಫ್ (ತಂತ್ರಜ್ಞಾನವನ್ನು ಬಳಸಿಕೊಂಡು ಬದಲಿಸುವುದು) ಮಾಡಲಾಗಿದೆ ಎಂಬುದನ್ನು ಕಂಡುಕೊಂಡಿದ್ದು ಅಲೆನ್ ಈ ಬಗೆಯ ಯಾವುದೇ ಟ್ವೀಟ್ ಅನ್ನು ಮಾಡಿಲ್ಲ ಎಂಬುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಕೂಡ ದೃಢೀಕರಿಸಿದೆ.

ಫಿನ್ ಅಲೆನ್.

ಫಿನ್ ಅಲೆನ್.

 • Share this:
  ನ್ಯೂಜಿಲ್ಯಾಂಡ್ ಕ್ರಿಕೆಟ್ ಆಟಗಾರ ಫಿನ್ ಅಲೆನ್ (Finn Allen) ಪಾಕಿಸ್ತಾನದ ಭದ್ರತಾ ಪರಿಸ್ಥಿತಿಗಳನ್ನು ಅಣಕಿಸುತ್ತಾ ಮಾಡಿದ ಟ್ವೀಟ್‌ನ ಸ್ಪಷ್ಟ ಸ್ಕ್ರೀನ್‌ಶಾಟ್ ಒಂದು ಸದ್ಯ ಸಾಮಾಜಿಕ ತಾಣದಲ್ಲಿ (Social Media) ವೈರಲ್ ಆಗಿದೆ. ಇಂಡಿಯಾ ಟುಡೆ (India Today) ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ಈ ಟ್ವೀಟ್‌ನ ಸತ್ಯಾಸತ್ಯತೆ ಯನ್ನು ಪರಿಶೀಲಿಸಿದೆ. ಭದ್ರತಾ ಕಾರಣಗಳಿಗಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ (NewZealand Cricket) ತಂಡವು ಸಪ್ಟೆಂಬರ್ 17 ರ ಪಾಕಿಸ್ತಾನ (Pakistan Cricket) ಪ್ರವಾಸವನ್ನು ರದ್ದುಗೊಳಿಸಿತ್ತು. ಆದರೆ ಕೆಲವು ದಿನಗಳ ನಂತರ ತಂಡದ ಬ್ಯಾಟ್ಸ್‌ಮನ್ ಫಿನ್ ಅಲೆನ್ ಪಾಕಿಸ್ತಾನದ ಭದ್ರತಾ ವ್ಯವಸ್ಥೆಗಳನ್ನು ಅಣಕಿಸುತ್ತಿರುವ ಟ್ವೀಟ್ ಒಂದನ್ನು ಮಾಡಿದ್ದು ಈ ಟ್ವೀಟ್ ಇದೀಗ ವೈರಲ್ ಆಗಿದೆ. ಫೇಸ್‌ಬುಕ್ ಬಳಕೆದಾರರು ಟ್ವೀಟ್‌ನ ಅದೇ ನಕಲನ್ನು ಹಂಚಿಕೊಂಡಿದ್ದು, ಪಾಕಿಸ್ತಾನವು ಶಾಂತಿಯುತವಾಗಿದೆ ಹಾಗೂ ಸುಭದ್ರವಾಗಿದೆ. ಸಾವಿರಾರು ಜನರನ್ನು ಹತ್ಯೆಗೈದು ಲಾಡೆನ್ ಕೂಡ ಪಾಕಿಸ್ತಾನದಲ್ಲಿ ಶಾಂತಿಯುತವಾಗಿ ಬದುಕಿದ್ದ ಎಂಬ ಸಾರಾಂಶವನ್ನು ಟ್ವೀಟ್ ಒಳಗೊಂಡಿದೆ.  ಆದರೆ ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಈ ಟ್ವೀಟ್ ಅನ್ನು ಮಾರ್ಫ್ (ತಂತ್ರಜ್ಞಾನವನ್ನು ಬಳಸಿಕೊಂಡು ಬದಲಿಸುವುದು) ಮಾಡಲಾಗಿದೆ ಎಂಬುದನ್ನು ಕಂಡುಕೊಂಡಿದ್ದು ಅಲೆನ್ ಈ ಬಗೆಯ ಯಾವುದೇ ಟ್ವೀಟ್ ಅನ್ನು ಮಾಡಿಲ್ಲ ಎಂಬುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಕೂಡ ದೃಢೀಕರಿಸಿದೆ. ರದ್ದಾದ ಪಾಕಿಸ್ತಾನ ಪ್ರವಾಸದಿಂದ ಹೊರಬಿದ್ದಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದವರಲ್ಲಿ ಅಲೆನ್ ಕೂಡ ಒಬ್ಬರಾಗಿದ್ದಾರೆ.  ಅಲೆನ್ ಟ್ವಿಟ್ಟರ್ ಹೆಸರು @FinnAllen32 ಅನ್ನು ಸ್ಕ್ರೀನ್‌ಶಾಟ್‌ನಲ್ಲೂ ಕಾಣಬಹುದಾಗಿದೆ. ಆದರೆ ಸ್ಕ್ರೀನ್‌ಶಾಟ್‌ನಲ್ಲಿರುವ ದಿನಾಂಕವನ್ನು ಗಮನಿಸಿದಾಗ ಸಪ್ಟೆಂಬರ್ 17, 2021 ಎಂದಾಗಿದೆ ಆದರೆ ಅಲೆನ್ ಕೊನೆಯದಾಗಿ ಟ್ವೀಟ್ ಮಾಡಿರುವುದು ಅವರ ಅಧಿಕೃತ ಖಾತೆಯಲ್ಲಿ ಪರಿಶೀಲಿಸಿದಾಗ ಆಗಸ್ಟ್ 4 ಎಂದಾಗಿದೆ. ಆರ್ಕೈವ್ ಮಾಡಲಾದ ಟ್ವೀಟ್ ಆವೃತ್ತಿಗಾಗಿ ನಾವು ಹುಡುಕಾಡಿದೆವು. ವೇಬ್ಯಾಕ್ ಮೆಶೀನ್‌ನಲ್ಲಿ ನಾವು ಕಂಡುಕೊಂಡಿರುವುದು ಅಲೆನ್ ಅವರ ಟ್ವಿಟ್ಟರ್ ಖಾತೆ ಜೂನ್ 2 ರಂದು ಒಮ್ಮೆ ಮಾತ್ರ ಆರ್ಕೈವ್ ಆಗಿದೆ ಎಂದಾಗಿದೆ. ಅದೇ ರೀತಿ ಸುಧಾರಿತ ಕೀವರ್ಡ್ ಹುಡುಕಾಟವನ್ನು ನಾವು ನಡೆಸಿದೆವು. ಇದು ಒಂದೇ ಫಲಿತಾಂಶವನ್ನು ತೋರಿಸಿದ್ದು ಅಲೆನ್ ಮಾಡಿದ್ದಾರೆಂದು ಹೇಳಲಾಗಿರುವ ವೈರಲ್ ಟ್ವೀಟ್‌ನ ಪ್ರತ್ಯುತ್ತರ ಇದಾಗಿರಬಹುದು ಎಂದು ಸುದ್ದಿಸಂಸ್ಥೆ ತಿಳಿಸಿದೆ.  ಇದರಿಂದ ತಿಳಿದುಬರುವ ಒಂದು ಅಂಶವೆಂದರೆ ಅಲೆನ್ ಅವರ ಅಧಿಕೃತ ಖಾತೆಯಿಂದ ಯಾವುದೇ ಟ್ವೀಟ್ ಹೋಗಿಲ್ಲ ಎಂದಾಗಿದೆ ಬಹುಶಃ ಅವರ ಹೆಸರನ್ನು ಕೃತ್ರಿಮವಾಗಿ ಬಳಸಿಕೊಂಡು ಬೇರೆ ಯಾರೋ ಟ್ವೀಟ್ ಮಾಡಿರುವುದಾಗಿ ತಿಳಿದುಬಂದಿದೆ.

  ಟ್ವೀಟ್ ವೈರಲ್ ಆದಾಗ ಫಿನ್ ಅಲೆನ್ ಎಲ್ಲಿದ್ದರು?

  ಅಲೆನ್, ಸಪ್ಟೆಂಬರ್ 17 ಕ್ಕೆ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಬ್ಲ್ಯಾಕ್ ಕ್ಯಾಪ್ಸ್ ಸಿಬ್ಬಂದಿಯ ಭಾಗವಾಗಿದ್ದರು. ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್‌ನ ಮೊದಲ ODI ಅನ್ನು ನಿಗದಿಪಡಿಸಲಾಗಿತ್ತು.ಪ್ರವಾಸ ರದ್ದಾದ ಹಿನ್ನಲೆಯಲ್ಲಿ ಅಲೆನ್ ಹಾಗೂ ಅವರ ತಂಡದವರು ಸಪ್ಟೆಂಬರ್ 18 ರ ಮಧ್ಯಾಹ್ನ ದುಬೈನಲ್ಲಿ ಲ್ಯಾಂಡ್ ಆಗಿದ್ದರು. ಟ್ವೀಟ್‌ನಲ್ಲಿ ನಮೂದಾಗಿರುವ ದಿನಾಂಕ ಸಪ್ಟೆಂಬರ್ 17 ಸಂಜೆ 4.33 ಎಂದಾಗಿದೆ.  ಇದರರ್ಥ ಅಲೆನ್ ನಿಜವಾಗಲೂ ಟ್ವೀಟ್ ಮಾಡಿದ್ದರೆ ಅವರದನ್ನು ಪಾಕಿಸ್ತಾನದ ಲ್ಲಿದ್ದುಕೊಂಡು ಮಾಡಬೇಕಿತ್ತು. (ಪ್ರವಾಸ ರದ್ದಾಗದೇ ಇರುತ್ತಿದ್ದರೆ) ಆದರೆ ಹಾಗೆ ಸಂಭವಿಸಲಿಲ್ಲ. ಈ ವಿಷಯದ ಕುರಿತು ಇನ್ನಷ್ಟು ಸ್ಪಷ್ಟೀಕರಣ ಪಡೆಯಲು ಸುದ್ದಿ ಸಂಸ್ಥೆಯು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯನ್ನು ಸಂಧಿಸಿತು ಆದರೆ ಅಲೆನ್ ಈ ರೀತಿಯ ಯಾವುದೇ ಟ್ವೀಟ್ ಅನ್ನು ಮಾಡಿಲ್ಲ ಎಂಬುದಾಗಿ ಕ್ರಿಕೆಟ್ ಮಂಡಳಿ ಸ್ಪಷ್ಟೀಕರಿಸಿದೆ.
  First published: