ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೈದಾನಕ್ಕಿಳಿದಿದ್ದ ಭಾರತ ತಂಡದ ಫೈನಲ್ ಕನಸು ನುಚ್ಚುನೂರಾಗಿತ್ತು. ಮೊದಲ ಮೂರು ಕ್ರಮಾಂಕದ ಆಟಗಾರರು ಒಂದೊಂದೇ ರನ್ ಗಳಿಸಿ ಪೆವಿಲಿಯನ್ ಸೇರುತ್ತಿದ್ದಂತೆ ಎಲ್ಲರ ನಿರೀಕ್ಷೆಯಿದ್ದಿದ್ದು ಮಹೇಂದ್ರ ಸಿಂಗ್ ಧೋನಿ ಮೇಲೆ ಮಾತ್ರ. ಆ ನಿರೀಕ್ಷೆ ಹುಸಿಗೊಳಿಸದಂತೆ ಹೀನಾಯ ಸ್ಥಿತಿಯಲ್ಲಿದ್ದ ತಂಡಕ್ಕೆ 50 ರನ್ಗಳನ್ನು ಕಲೆಹಾಕಿಕೊಟ್ಟ ಧೋನಿ ರನ್ಔಟ್ ಆಗಿಬಿಟ್ಟಿದ್ದರು.
ಕಿವೀಸ್ ತಂಡದ ಮಾರ್ಟಿನ್ ಗಪ್ಟಿಲ್ ಎಸೆತಕ್ಕೆ ಧೋನಿ ರನ್ಔಟ್ ಆಗುತ್ತಿದ್ದಂತೆ ಪಂದ್ಯ ಗೆಲ್ಲುವ ಆಸೆಗೂ ಅಭಿಮಾನಿಗಳು ಎಳ್ಳುನೀರು ಬಿಟ್ಟಾಗಿತ್ತು. ಆದರೆ, ನಿನ್ನೆ ನಡೆದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ನ ಫೈನಲ್ ಪಂದ್ಯದ ಸೂಪರ್ ಓವರ್ನಲ್ಲಿ ಅದೇ ಮಾರ್ಟಿನ್ ಗಪ್ಟಿಲ್ ರನ್ಔಟ್ ಆಗಿದ್ದಾರೆ. ಈ ಫೋಟೋವನ್ನು ಧೋನಿ ರನ್ಔಟ್ ಆದ ಫೋಟೋದೊಂದಿಗೆ ಕೊಲಾಜ್ ಮಾಡಿ ಭಾರತದ ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡುತ್ತಿದ್ದಾರೆ.
ಧೋನಿ ಅಭಿಮಾನಿಗಳು ಹಾಕಿದ ಶಾಪದ ಫಲದಿಂದಲೇ ಗಪ್ಟಿಲ್ ರನ್ಔಟ್ ಆದರು ಎಂದು ಹಲವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕರ್ಮ ಯಾರನ್ನೂ ಬಿಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಧೋನಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಗಪ್ಟಿಲ್ನಿಂದ ಧೋನಿ ರನ್ಔಟ್ ಆಗಿದ್ದಕ್ಕೆ ಭಾರತ ಸೆಮಿಫೈನಲ್ನಿಂದ ಹೊರಬಿತ್ತು. ಫೈನಲ್ ಮ್ಯಾಚ್ನ ಸೂಪರ್ ಓವರ್ನಲ್ಲಿ ಗಪ್ಟಿಲ್ ರನ್ಔಟ್ ಆಗಿದ್ದಕ್ಕೆ ನ್ಯೂಜಿಲೆಂಡ್ ವಿಶ್ವಕಪ್ನಿಂದಲೇ ವಂಚಿತವಾಯಿತು! ಎಂದು ಟ್ವಿಟ್ಟರ್ನಲ್ಲಿ ಅನುಕಂಪ ಸೂಚಿಸಿದ್ದಾರೆ.
ICC World Cup 2019: ಮೂವರು ಆಟಗಾರರ ನಡುವೆ ಪೈಪೋಟಿ: ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿ ಯಾರಿಗೆ?
ವಿಶ್ವಕಪ್ ಇತಿಹಾಸದಲ್ಲೇ ಅತ್ಯದ್ಭುತ ಫೈನಲ್ ಮೂಲಕ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಮೆಗಾ ಫೈನಲ್ ಎರೆಡೆರಡು ಬಾರಿ ರೋಚಕ ಟೈನಲ್ಲಿ ಅಂತ್ಯಗೊಂಡು, ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ನೂತನ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
England vs New Zealand; ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಇಂಗ್ಲೆಂಡ್; ಇಲ್ಲಿದೆ ಚಿತ್ರಗಳು
ನಿನ್ನೆ ನ್ಯೂಜಿಲೆಂಡ್ ನೀಡಿದ 241 ರನ್ಗಳನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಅಷ್ಟೇ ರನ್ಗೆ ಸರ್ವಪತನಗೊಳ್ಳುವ ಮೂಲಕ ಪಂದ್ಯವು ಟೈಯಲ್ಲಿ ಅಂತ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಏಕದಿನ ವಿಶ್ವಕಪ್ ಫೈನಲ್ ಸೂಪರ್ ಓವರ್ಗೆ ಸಾಕ್ಷಿಯಾಯಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 16 ರನ್ಗಳನ್ನು ಗುರಿ ನೀಡಿತು. ಈ ಸವಾಲನ್ನು ಭರ್ಜರಿಯಾಗಿಯೇ ಚೇಸ್ ಮಾಡಿದ ನ್ಯೂಜಿಲೆಂಡ್ಗೆ ಅಂತಿಮ ಎಸೆತದಲ್ಲಿ 2 ರನ್ಗಳ ಅವಶ್ಯಕತೆಯಿತ್ತು. ಆದರೆ ಇಲ್ಲೂ ಅದೃಷ್ಟ ಲಕ್ಷ್ಮಿಯ ಕಣ್ಣಾ ಮುಚ್ಚಾಲೆ ಆಟ ಆಡಿತ್ತು. ಪರಿಣಾಮ ಮತ್ತೊಮ್ಮೆ ಸೂಪರ್ ಪಂದ್ಯ ಟೈಯಲ್ಲಿ ಅಂತ್ಯವಾಯಿತು. ಈ ಹಿನ್ನೆಲೆಯಲ್ಲಿ ನಿಯಮದ ಪ್ರಕಾರ ಅಧಿಕ ಬೌಂಡರಿ ಬಾರಿಸಿದ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇದರೊಂದಿಗೆ ನ್ಯೂಜಿಲೆಂಡ್ನ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ