ಶ್ರೀಲಂಕಾದ ಬ್ಯಾಟ್ಸಮನ್​​ನ ತಬ್ಬಿಕೊಂಡ ಕೃನಾಲ್.. ಇದಪ್ಪಾ ದ್ರಾವಿಡ್​​ ಪಾಠ ಎನ್ನುತ್ತಿರುವ ನೆಟ್ಟಿಗರು!

ಪಾಂಡ್ಯ ಅವರು ಚರಿತ್ ಅಸಲಂಕಾ ಅವರನ್ನು ತಬ್ಬಿಕೊಂಡಿರುವ ಬಗ್ಗೆ ಮೆಮ್ಸ್ ಗಳು ಬಂದಿವೆ. ರವಿ ಶಾಸ್ತ್ರಿ ಭಾರತ ತಂಡದ ಕೋಚ್ ಆಗಿದ್ದಾಗ ಮತ್ತು ಈಗ ದ್ರಾವಿಡ್ ಕೋಚ್ ಆಗಿದ್ದಾಗ ಎಂದು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ.

ಅಸಲಂಕಾರನ್ನು ತಬ್ಬಿಕೊಂಡ ಕೃನಾಲ್​

ಅಸಲಂಕಾರನ್ನು ತಬ್ಬಿಕೊಂಡ ಕೃನಾಲ್​

 • Share this:
  ಕೊಲಂಬೋದಲ್ಲಿ ನಡೆಯುತ್ತಿರುವ ಭಾರತ ಶ್ರೀಲಂಕಾ ನಡುವಣ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲನೆಯ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿ ಸರಣಿಯಲ್ಲಿ 1-0 ಇಂದ ಮುನ್ನಡೆ ಸಾಧಿಸಿದ್ದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದ ವಿಷಯವೇ. ಆದರೆ ಈ ಪಂದ್ಯದಲ್ಲಿ ಭಾರತ ತಂಡದ ಬೌಲರ್ ಕೃನಾಲ್ ಪಾಂಡ್ಯ ಅವರು ಚರಿತ್ ಅಸಲಂಕಾ ಅವರನ್ನು ತಬ್ಬಿಕೊಂಡಿದ್ದು ಮತ್ತು ಹೊಸದಾಗಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾದ ರಾಹುಲ್ ದ್ರಾವಿಡ್ ಗೂ ಸಂಬಂಧ ಕಲ್ಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಮೆಮ್ಸ್ ಗಳ ಸುರಿಮಳೆ ಸುರಿಸಿದಂತೂ ನಿಜ.


  ಸರಣಿಯ ಮೊದಲನೆಯ ಪಂದ್ಯದಲ್ಲಿ ಮೊದಲಿಗೆ ಬ್ಯಾಟ್ ಮಾಡಿದಂತಹ ಶ್ರೀಲಂಕಾ ತಂಡವು 262 ರನ್ ಗಳನ್ನು ಕಲೆಹಾಕಿತ್ತು. ನಂತರ ಕಣಕ್ಕಿಳಿದಂತಹ ಭಾರತ ತಂಡವು 80 ಎಸೆತಗಳು ಬಾಕಿ ಇರುವಂತೆಯೇ 263 ರನ್ ಗಳ ಗುರಿಯನ್ನು ತಲುಪಿದ್ದು ಏಳು ವಿಕೆಟ್ ಗಳಿಂದ ವಿಜಯ ಸಾಧಿಸಿದೆ.


  ಆರಂಭಿಕ ಆಟಗಾರರಾದ ಪೃಥ್ವಿ ಷಾ (43 ರನ್) ಮತ್ತು ನಾಯಕ ಶಿಖರ್ ಧವನ್ (86 ರನ್) ಅವರು ಸ್ಪೋಟಕ ಬ್ಯಾಟಿಂಗ್ ಮಾಡಿ ತಂಡವನ್ನು ಗುರಿ ಮುಟ್ಟಲು ಪ್ರಾರಂಭದಲ್ಲಿಯೇ ಅಡಿಪಾಯವನ್ನು ಹಾಕಿದ್ದರು. ಆನಂತರ ಬಂದ ಇಶಾನ್ ಕಿಶನ್ ಅವರು ಶ್ರೀಲಂಕಾ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿ 59 ರನ್ ಬಾರಿಸಿದರು.


  ಪಂದ್ಯದ 22ನೇ ಓವರ್ ನಲ್ಲಿ ಭಾರತದ ಪರ ಕೃನಾಲ್ ಪಾಂಡ್ಯ ಅವರು ಶ್ರೀಲಂಕಾದ ಬ್ಯಾಟ್ಸಮನ್ ಧನಂಜಯ್ ಡಿಸಿಲ್ವಾ ಅವರಿಗೆ ಬೌಲ್ ಮಾಡಿದಾಗ ಅವರು ನೇರವಾಗಿ ಹೊಡೆದ ಚೆಂಡು ಹಿಡಿಯಲು ಹೋಗಿ ಪಾಂಡ್ಯ ಅವರು ನಾನ್ ಸ್ಟ್ರೈಕರ್ ಆದ ಚರಿತ್ ಅಸಲಂಕಾ ಅವರಿಗೆ ಹೋಗಿ ಡಿಕ್ಕಿ ಹೊಡೆಯುತ್ತಾರೆ ಅದಕ್ಕೆ ಪುನಃ ಪಾಂಡ್ಯ ಅವರನ್ನು ತಬ್ಬಿಕೊಳ್ಳುತ್ತಾರೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗಿದ್ದು ಅಲ್ಲದೆ ಅನೇಕ ಜನರು ಇದನ್ನು "ಟ್ರು ರಾಹುಲ್ ದ್ರಾವಿಡ್ ಎಫೆಕ್ಟ್" ಎಂದಿದ್ದಾರೆ.


  ಕ್ರೀಡಾ ಮೈದಾನದಲ್ಲಿ ಈ ರೀತಿಯಾಗಿ ಕ್ರೀಡಾ ಮನೋಭಾವನೆಯನ್ನು ಮೆರೆದಿದ್ದಾರೆ ಎಂದರೆ ಇದು ಖಂಡಿತವಾಗಿಯೂ ರಾಹುಲ್ ದ್ರಾವಿಡ್ ಅವರ ಕಲಿಕೆಯೇ ಎಂದು ಹೇಳಿದ್ದಾರೆ. ಆದರೆ ಇನ್ನು ಕೆಲವರು ಇದಕ್ಕೂ ರಾಹುಲ್ ದ್ರಾವಿಡ್ ಗೂ ಯಾವುದೇ ಸಂಬಂಧವಿಲ್ಲ ಈ ರೀತಿಯಾದಂತಹ ಸನ್ನಿವೇಶಗಳು ಸುಮಾರು ಬಾರಿ ಕ್ರಿಕೆಟ್ ಆಟದ ಮೈದಾನದಲ್ಲಿ ನಡೆದಿದೆ, ಸುಮ್ಮನೆ ಇದಕ್ಕೆಲ್ಲಾ ರಾಹುಲ್ ಗೆ ಕ್ರೆಡಿಟ್ ಕೊಡುವುದು ಸೂಕ್ತ ಅಲ್ಲ ಎಂದು ಹೇಳಿದ್ದಾರೆ.

  ಪಾಂಡ್ಯ ಅವರು ಚರಿತ್ ಅಸಲಂಕಾ ಅವರನ್ನು ತಬ್ಬಿಕೊಂಡಿರುವ ಬಗ್ಗೆ  ಮೆಮ್ಸ್ ಗಳು ಬಂದಿದ್ದು, ಕೃನಾಲ್ ಪಾಂಡ್ಯ ರವಿ ಶಾಸ್ತ್ರಿ ಭಾರತ ತಂಡದ ಕೋಚ್ ಆಗಿದ್ದಾಗ ಮತ್ತು ಈಗ ದ್ರಾವಿಡ್ ಕೋಚ್ ಆಗಿದ್ದಾಗ ಎಂದು ಹೋಲಿಕೆ ಮಾಡಿ ಪಾಂಡ್ಯ ಅವರ ಫೋಟೋವನ್ನು ಹಾಕಿ ಅನೇಕ ತರಹದ ಮೆಮ್ಸ್ ಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಬಿಟ್ಟಿದ್ದು ತುಂಬಾನೇ ವೈರಲ್ ಆಗಿದೆ.
  First published: