ಭಾರತೀಯ ಕ್ರಿಕೆಟ್ ತಂಡದ ಬೌಲರ್ ದೀಪಕ್ ಚಹರ್ ಒಂದೇ ದಿನದಲ್ಲಿ ಇಂಟರ್ನೆಟ್ನ ಹೀರೋ ಆಗಿ ಬದಲಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವನ್ನು ಸಾಧಿಸಲು ಸಹಕರಿಸುವುದರ ಮೂಲಕ ಮಿಂಚಿದರು. 27 ವರ್ಷದ ದೀಪಕ್ 82 ಎಸೆತಗಳಲ್ಲಿ 69 ರನ್ ಬಾರಿಸುವ ಮೂಲಕ ಅಜೇಯರಾಗಿ ಭಾರತವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಮೈಕ್ರೋ ಬ್ಲಾಗಿಂಗ್ ಟ್ವಿಟರ್ನಲ್ಲಿ ಇವರ ಆಟದ ವೈಖರಿಯನ್ನು ಕೊಂಡಾಡಲಾಯಿತು. ಇದರ ಜೊತೆಗೆ ಇವರ ಆಟದ ಪರಿಯನ್ನು ಹೊಗಳಿದ್ದು ಮಾತ್ರವಲ್ಲದೆ. ದೀಪಕ್ ಚಹರ್ ಅವರ ಹೇರ್ಸ್ಟೈಲ್ ಅನ್ನು ಮುಂದಿಟ್ಟುಕೊಂಡು ಶ್ಪಾಘಿಸಿದ್ದಾರೆ.
ದೀಪಕ್ ಚಹರ್ ಅವರು ಜೂನ್ 9 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿ ನ್ಯೂ ಲುಕ್ ಎಂದು ಟ್ವೀಟ್ ಮಾಡಿದ್ದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ವಿರಾಟ್ ಕೊಹ್ಲಿ ಅವರು, ಈ ಹೇರ್ ಸ್ಟೈಲ್ಗೆ ಗಜನಿ ಹೇರ್ಸ್ಟೈಲ್ ಎಂದು ಕರೆಯುತ್ತಾರೆ. ಹಾಗಾಗಿ ಆತ ಬೌಲರ್ ಎಂಬುದನ್ನೇ ಮರೆತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಏಕೆಂದರೆ ಮಂಗಳವಾರ ನಡೆದ ಪಂದ್ಯದಲ್ಲಿ ಅವರು ಬೌಲರ್ ಎಂಬುದನ್ನು ಮರೆತು ರನ್ಗಳ ಮಳೆ ಸುರಿಸಿದ್ದರು.
New look 😈 pic.twitter.com/uVhCp9Ai9P
— Deepak chahar 🇮🇳 (@deepak_chahar9) June 9, 2021
ಶ್ರೀರಾಜ್ ದೇಶ್ಮುಖ್ ಎಂಬುವವರು ಟ್ವೀಟ್ ಮಾಡಿ, ದೀಪಕ್ ಚಹರ್ ಅವರು ಗಜನಿ ಹೇರ್ಸ್ಟೈಲ್ ಇದು ಅವರನ್ನು ಬೌಲರ್ ಎಂಬುದನ್ನೇ ಮರೆಸಿದೆ ಎಂದು ಟ್ವೀಟ್ ಮಾಡಿದ್ದಾರೆ. ದಿಯಾ ಎಂಬುವವರು ಟ್ವೀಟ್ ಮಾಡಿ, ಈ ಹೇರ್ಕಟ್ ಮಾಡಿಸಿದ್ದ ದಿನ ಏನಾದರೂ ವಿಶೇಷವಾಗಿರುವುದನ್ನು ಮಾಡಬೇಕೆಂದು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ. ಚಹರ್ ಈ ಫೋಟೋ ಪೋಸ್ಟ್ ಮಾಡಿದ ನಂತರ ಆಟವೇ ಮುಗಿದಿದೆ ಎಂದು ಆರ್ಚಿತ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಮೆಲೋ ಎಂಬುವವರು ಶ್ರೀಲಂಕಾಕ್ಕೆ ಆಯ್ಕೆಯೇ ಇಲ್ಲ ಎಂದಿದ್ದಾರೆ.
Deepak Chahar in his Ghajini hairstyle actually forgot that he is a front line bowler😆
What a mad mad knock that was! @deepak_chahar9 🙌#deepakchahar #SLvIND pic.twitter.com/JyUrHIcd3t
— Shreeraj Deshmukh (@ShreeSpeaks_11) July 21, 2021
ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಭಾರತ ತಂಡಕ್ಕೆ 276 ರನ್ಗಳ ಗುರಿಯನ್ನು ನೀಡಿತ್ತು. ಇದರ ಬೆನ್ನಟ್ಟಿದ ಭಾರತ ತಂಡ 36 ಓವರ್ಗಳಲ್ಲಿ 193 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ತೀರಾ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ಕಣಕ್ಕಿಳಿದು ಭಾರತ ತಂಡ ಜಯಭೇರಿ ಬಾರಿಸುವಂತೆ ಮಾಡಿತು. ಪ್ರಮುಖವಾಗಿ 1 ಸಿಕ್ಸ್ ಹಾಗೂ 7 ಬೌಂಡರಿಗಳನ್ನು ಬಾರಿಸುವುದರ ಮೂಲಕ ಅಜೇಯ 69 ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ದೀಪಕ್ ಚಹರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.
ಶ್ರೀಲಂಕಾ ವಿರುದ್ಧ ಎಂಟನೇ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿದ ಭಾರತದ ಎರಡನೇ ಆಟಗಾರ ದೀಪಕ್ ಚಹರ್ ಆಗಿದ್ದು, ಈ ಮೂಲಕ ವಿಶ್ವದಾಖಲೆಯನ್ನು ಸಹ ಬರೆದಿದ್ದಾರೆ. 2009ರಲ್ಲಿ ರವೀಂದ್ರ ಜಡೇಜ ಅರ್ಧಶತಕ ಬಾರಿಸಿದ್ದರು.ಇದು ಶ್ರೀಲಂಕಾದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ದೊರೆತ ಸತತ ಹತ್ತನೇ ಏಕದಿನ ಜಯ. ಭಾರತದಲ್ಲಿ ಭಾರತ ವಿರುದ್ಧ ಕೊನೆಯ ಬಾರಿಗೆ ಶ್ರೀಲಂಕಾ ಏಕದಿನ ಪಂದ್ಯವನ್ನು 2012 ರಲ್ಲಿ ಗೆದ್ದಿತ್ತು.
ಇದು ಶ್ರೀಲಂಕಾ ವಿರುದ್ಧ ಭಾರತಕ್ಕೆ ಸತತ ಒಂಬತ್ತನೇ ದ್ವಿಪಕ್ಷೀಯ ಏಕದಿನ ಸರಣಿ ಗೆಲುವು. ಭಾರತ ವಿರುದ್ಧ ಕೊನೆಯ ಬಾರಿಗೆ ಶ್ರೀಲಂಕಾ ಏಕದಿನ ಸರಣಿಯನ್ನು 1997 ರಲ್ಲಿ ಗೆದ್ದುಕೊಂಡಿತು. ಅಂದಿನಿಂದ, ಭಾರತವು 12 ದ್ವಿಪಕ್ಷೀಯ ಸರಣಿಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದರೆ, ಎರಡು ಸರಣಿಗಳು ಡ್ರಾ ಆಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ