Dale Steyn Retires| ಎಲ್ಲಾ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್

ಡೇಲ್ ಸ್ಟೇನ್ 2005 ರಲ್ಲಿ ಸೆಂಚೂರಿಯನ್ ನಲ್ಲಿ ಏಷ್ಯಾ ಇಲೆವೆನ್ ವಿರುದ್ಧ ಆಫ್ರಿಕಾ ಇಲೆವೆನ್ ಪರ ತಮ್ಮ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ.

ಡೇಲ್ ಸ್ಟೇನ್.

ಡೇಲ್ ಸ್ಟೇನ್.

 • Share this:
  ದಕ್ಷಿಣ ಆಫ್ರಿಕಾದ ವೇಗಿ ದಂತಕಥೆ ಡೇಲ್ ಸ್ಟೇನ್ ಮಂಗಳವಾರ (ಆಗಸ್ಟ್ 31) ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು 93 ಟೆಸ್ಟ್‌ಗಳು 439 ವಿಕೆಟ್‌, 125 ಏಕದಿನ ಪಂದ್ಯಗಳಲ್ಲಿ 196 ವಿಕೆಟ್​ ಮತ್ತು 47 ಟಿ-20 ಪಂದ್ಯಗಳಲ್ಲಿ 64 ವಿಕೆಟ್​ಗಳನ್ನು ಕಬಳಿಸಿದ್ದು ಡೇಲ್ ಸ್ಟೇನ್ ದಾಖಲೆ. ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ನಾನಾ ಗಾಯಗಳಿಗೆ ತುತ್ತಾಗಿ ಗಾಯಗಳ ಕಾರಣಕ್ಕೆ ಕ್ರಿಕೆಟ್​ ಅಂಗಳದಿಂದ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದ ಡೇಲ್ ಸ್ಟೇನ್ ಇದೀಗ ಶಾಶ್ವತವಾಗಿ ಕ್ರಿಕೆಟ್​ನಿಂದ ದೂರಾಗಲು ನಿರ್ಧರಿಸಿದ್ದಾರೆ. ಸ್ಟೇನ್ ಆಗಸ್ಟ್ 2019 ರಲ್ಲೇ ಟೆಸ್ಟ್‌ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

  ಡೇಲ್ ಸ್ಟೇನ್ 2005 ರಲ್ಲಿ ಸೆಂಚೂರಿಯನ್ ನಲ್ಲಿ ಏಷ್ಯಾ ಇಲೆವೆನ್ ವಿರುದ್ಧ ಆಫ್ರಿಕಾ ಇಲೆವೆನ್ ಪರ ತಮ್ಮ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. 2013 ರಲ್ಲಿ ಪೋರ್ಟ್​ ಎಜಿಜಬೆತ್​ ಅಂಗಳದಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 39 ರನ್ ನೀಡಿ 6 ವಿಕೆಟ್​ ಕಬಳಿಸಿದ್ದು ಏಕದಿನ ಕ್ರಿಕೆಟ್​ನಲ್ಲಿ ಅವರ ಶ್ರೇಷ್ಠ ಸಾಧನೆ.

  ನ್ಯೂಜಿಲ್ಯಾಂಡ್ ವಿರುದ್ಧ ತನ್ನ ಟಿ-20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಸ್ಟೇನ್ ತಮ್ಮ ಎರಡನೇ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 9 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಸಹ ಅವರ ವೃತ್ತಿಜೀವನದ ಅತ್ಯುತ್ತಮ ಅಂಕಿಗಳಲ್ಲೊಂದಾಗಿದೆ. ಇನ್ನೂ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ ಕೇವಲ 28 ಇನ್ನಿಂಗ್ಸ್​ಗಳಲ್ಲಿ 100 ವಿಕೆಟ್ ಕಬಳಿಸಿದ ಅಪರೂಪದ ಸಾಧನೆಯೂ ಡೇಲ್ ಸ್ಟೇನ್ ಹೆಸರಿನಲ್ಲಿದೆ.

  ಡೇಲ್ ಸ್ಟೇನ್  2019 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆನಂತರ ಫಾರ್ಮ್ ಕೊರತೆ ಮತ್ತು ಗಾಯದ ಸಮಸ್ಯೆಯಿಂದ ಅವರು ಕ್ರಿಕೆಟ್​ನಿಂದ ದೂರ ಉಳಿದಿದ್ದರು.

  ತಮ್ಮ ನಿವೃತ್ತಿ ಘೋಷಣೆಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡೇಲ್ ಸ್ಟೇನ್ ತಮ್ಮ ಹೇಳಿಕೆಯಲ್ಲಿ, "ಇದು ನನ್ನ ಬದುಕಿನ ಅತ್ಯಂತ ಕಠಿಣ ಸಮಯ ಮತ್ತು ನಿರ್ಧಾರವಾಗಿದೆ. 20 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಹಲವು ನೆನಪುಗಳು ನನ್ನನ್ನು ನಿರಂತರವಾಗಿ ಕಾಡುತ್ತಿವೆ. ತರಬೇತಿ, ಪಂದ್ಯಗಳು, ಪ್ರಯಾಣ, ಗೆಲುವು-ಸೋಲುಗಳು ಆಟದ ನಡುವೆ ಕಾಡಿದ ಗಾಯಗಳು ಹೀಗೆ ಹೇಳಲು ನನಗೆ ಹಲವು ನೆನಪುಗಳಿವೆ. ಹಲವರಿಗೆ ನಾನು ಧನ್ಯವಾದಗಳನ್ನು ಹೇಳಬೇಕಿದೆ.

  ಇದನ್ನೂ ಓದಿ: Mysterious Fever in Firozabad| ನಿಗೂಢ ರೋಗಕ್ಕೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ 33 ಮಕ್ಕಳು ಸೇರಿ 40 ಜನ ಸಾವು!

  ಇಂದು ಅಧಿಕೃತವಾಗಿ ನಾನು ಹೆಚ್ಚು ಇಷ್ಟಪಡುವ ಆಟದಿಂದ ನಿವೃತ್ತಿ ಹೊಂದಿದ್ದೇನೆ. ಈ ವೃತ್ತಿ ಬದುಕಿನಲ್ಲಿ ಕಹಿ ಸಿಹಿಯನ್ನು ಸಮನಾಗಿಅನುಭವಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು, ಕುಟುಂಬದಿಂದ ಸಹ ಆಟಗಾರರಿಗೆ, ಪತ್ರಕರ್ತರಿಗೆ ಅಭಿಮಾನಿಗಳಿಗೆ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ" ಎಂದು ಡೇಲ್ ಸ್ಟೇನ್ ತಿಳಿಸಿದ್ದಾರೆ.

  ಡೆಕ್ಕನ್ ಚಾರ್ಜರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬ್ರಿಸ್ಬೇನ್ ಹೀಟ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್, ಜಮೈಕಾ ತಲ್ಲವಾಸ್, ಕೇಪ್ ಟೌನ್ ನೈಟ್ ರೈಡರ್ಸ್, ಕೇಪ್ ಟೌನ್ ಬ್ಲಿಟ್ಜ್, ಗ್ಲಾಸ್ಗೋ ಜೈಂಟ್ಸ್, ಮೆಲ್ಬೋರ್ನ್ ಸ್ಟಾರ್ಸ್, ಇಸ್ಲಾಮಾಬಾದ್ ಯುನೈಟೆಡ್ ಕ್ಯಾಂಡಿ ಟಸ್ಕರ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಸೇರಿದಂತೆ ಹಲವು ಟಿ20 ಲೀಗ್​ ತಂಡಗಳ ಪರವೂ ಸ್ಟೇನ್ ಕಣಕ್ಕಿಳಿದಿದ್ದಾರೆ.

  ಇದನ್ನೂ ಓದಿ: ಜಲಿಯನ್​ ವಾಲಾಬಾಗ್​ ಸ್ಮಾರಕ ನವೀಕರಣಕ್ಕೆ ಆಕ್ಷೇಪ; ಇಂತಹ ಅಪಮಾನ ಸಹಿಸಲ್ಲ ಎಂದ ರಾಹುಲ್​ ಗಾಂಧಿ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: