• ಹೋಂ
  • »
  • ನ್ಯೂಸ್
  • »
  • cricket
  • »
  • Yuvraj Singh: 'ಒಂದೇ ಓವರಲ್ಲಿ 6 ಸಿಕ್ಸ್' ಯುವಿಯ ದಾಖಲೆಗೆ 15 ವರ್ಷ; ಮಗನೊಂದಿಗೆ ಮಾಜಿ ಆಲ್‌ರೌಂಡರ್ ಸಂಭ್ರಮ!

Yuvraj Singh: 'ಒಂದೇ ಓವರಲ್ಲಿ 6 ಸಿಕ್ಸ್' ಯುವಿಯ ದಾಖಲೆಗೆ 15 ವರ್ಷ; ಮಗನೊಂದಿಗೆ ಮಾಜಿ ಆಲ್‌ರೌಂಡರ್ ಸಂಭ್ರಮ!

ಯುವರಾಜ್ ಸಿಂಗ್ ಮತ್ತು ಪುತ್ರ ಓರಿಯನ್ ಕೀಚ್ ಸಿಂಗ್

ಯುವರಾಜ್ ಸಿಂಗ್ ಮತ್ತು ಪುತ್ರ ಓರಿಯನ್ ಕೀಚ್ ಸಿಂಗ್

ಇಲ್ಲಿಯವರೆಗೆ, ವಿಶ್ವಕಪ್‌ನ ಉದ್ಘಾಟನಾ ಸಮಯವನ್ನು ನೆನಪಿಸಿಕೊಂಡಾಗಲೆಲ್ಲಾ ನೆನಪಿಗೆ ಬರುವುದು ಇಂಗ್ಲೆಂಡ್‌ನ ವೇಗಿ ಬೌಲರ್ ಸ್ಟುವರ್ಟ್ ಬ್ರಾಡ್‌ ಅವರ ಚೆಂಡಿಗೆ ದೇಶದ ಹೆಮ್ಮೆಯ ಆಲ್‌ರೌಂಡರ್ ಕ್ರಿಕೆಟಿಗ ಯುವರಾಜ್ ಸಿಂಗ್ ಹೊಡೆದ ಆರು ಸಿಕ್ಸರ್‌ಗಳು. ಇದೀಗ ಮಾಜಿ ಆಲ್‌ರೌಂಡರ್ ತಮ್ಮ ಪುತ್ರ ಓರಿಯನ್ ಕೀಚ್ ಸಿಂಗ್ ಅವರೊಂದಿಗೆ ತಮ್ಮ ಸಿಕ್ಸರ್ ನೆನಪುಗಳನ್ನು ಕಲೆಹಾಕಿದ್ದು, ಆ ದಿನದ ಆನಂದವನ್ನು ಅನುಭವಿಸುತ್ತಿರುವ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 20 ಓವರ್ ಮಾದರಿಯಲ್ಲಿ ವಿಶ್ವಕಪ್ ಪರಿಚಯಿಸಿ ಬರೋಬ್ಬರಿ 15 ವರ್ಷಗಳು ಕಳೆದಿವೆ. ಈ ವರ್ಷ, ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ (Australia) ನಡೆಯಲಿರುವ ಪಂದ್ಯದಲ್ಲಿ ಹದಿನಾರು ತಂಡಗಳು ಭಾಗವಹಿಸುತ್ತಿದ್ದು ಕಪ್ ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ತೀವ್ರ ಪೈಪೋಟಿಯನ್ನು ನೀಡಲಿವೆ. ಇಲ್ಲಿಯವರೆಗೆ, ವಿಶ್ವಕಪ್‌ನ (World Cup) ಉದ್ಘಾಟನಾ ಸಮಯವನ್ನು ನೆನಪಿಸಿಕೊಂಡಾಗಲೆಲ್ಲಾ ನೆನಪಿಗೆ ಬರುವುದು ಇಂಗ್ಲೆಂಡ್‌ನ ವೇಗಿ ಬೌಲರ್ ಸ್ಟುವರ್ಟ್ ಬ್ರಾಡ್‌ ಅವರ ಚೆಂಡಿಗೆ ದೇಶದ ಹೆಮ್ಮೆಯ ಆಲ್‌ರೌಂಡರ್ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj singh) ಹೊಡೆದ ಆರು ಸಿಕ್ಸರ್‌ಗಳು. ಇದೀಗ ಮಾಜಿ ಆಲ್‌ರೌಂಡರ್ ತಮ್ಮ ಪುತ್ರ ಓರಿಯನ್ ಕೀಚ್ ಸಿಂಗ್ ಅವರೊಂದಿಗೆ ತಮ್ಮ ಸಿಕ್ಸರ್ (Sixer) ನೆನಪುಗಳನ್ನು ಕಲೆಹಾಕಿದ್ದು, ಆ ದಿನದ ಆನಂದವನ್ನು ಅನುಭವಿಸುತ್ತಿರುವ ಕ್ಷಣವನ್ನು ಹಂಚಿಕೊಂಡಿದ್ದಾರೆ.


ಕ್ರಿಕೆಟಿಗ ತಮ್ಮ ಇನ್‌ಸ್ಟಾದಲ್ಲಿ ಇದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದು ಇತರ ಕ್ರಿಕೆಟ್ ಆಟಗಾರರ ಜೊತೆ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿತು.


ಅಪ್ಪನ ಸಾಧನೆಯನ್ನು ಆಸ್ವಾದಿಸಿದ ಯುವಿ ಪುತ್ರ
ಯುವರಾಜ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅಪ್ಪ ಮಗ ಇಬ್ಬರೂ ಕುಳಿತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ನೋಡಬಹುದು. ತಮ್ಮ ಸಿಕ್ಸರ್ ಸಾಧನೆಯನ್ನು ಆನಂದಿಸುತ್ತಿರುವ ಯುವರಾಜ್ ಮಗ ಒರಿಯನ್ ಅನ್ನು ತಮ್ಮ ತೊಡೆಯ ಮೇಲೆ ಕುಳ್ಳಿರಿಸಿಕೊಂಡಿದ್ದು, ಮಗ ಕೂಡ ಎವೆಯಿಕ್ಕದೆ ಅಪ್ಪನ ಸಾಧನೆಯನ್ನು ನೋಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.


ಇದನ್ನೂ ಓದಿ:  Team India Jersey: ಟೀಂ ಇಂಡಿಯಾಗೆ ಹೊಸ ಜೆರ್ಸಿ, ಇದರ ಹಿಂದಿದೆ ಒಂದು ಇಂಟ್ರೆಸ್ಟಿಂಗ್​ ಕಹಾನಿ!


ಟೆಲಿವಿಶನ್ ಪರದೆಯಲ್ಲಿ ಯುವರಾಜ್ ಅಮೋಘ ಪ್ರದರ್ಶನವನ್ನು ಪ್ರದರ್ಶಿಸಿದ ಕ್ಯಾಮೆರಾ ನಂತರ ತಂದೆ ಮಗನ ಅದ್ಭುತ ಪ್ರತಿಕ್ರಿಯೆಯನ್ನು ಸೆರೆಹಿಡಿಯಿತು. ಯುವರಾಜ್ ಸಿಕ್ಸ್ ಹೊಡೆದಂತೆಲ್ಲಾ ಕಾಮೆಂಟರಿಯನ್ನು ಹಾಗೆಯೇ ಅನುಕರಿಸುವ ಯುವಿ, ತದೇಕಚಿತ್ತನಾಗಿ ಪಂದ್ಯವನ್ನು ವೀಕ್ಷಿಸುತ್ತಿರುವ ಒರಿಯನ್ ಅನ್ನು ನೋಡಬಹುದು.


ಯುವಿ ಪೋಸ್ಟ್‌ಗೆ ಕ್ರಿಕೆಟಿಗರ ಮೆಚ್ಚುಗೆ
ಈ ವಿಡಿಯೋಗೆ ಯುವಿ ತಮ್ಮದೇ ಶೈಲಿಯಲ್ಲಿ ಶೀರ್ಷಿಕೆ ನೀಡಿದ್ದು, 15 ವರ್ಷಗಳ ನಂತರ ಇದನ್ನು ಜೊತೆಯಾಗಿ ವೀಕ್ಷಿಸಲು ಇದಕ್ಕಿಂತ ಉತ್ತಮ ಪಾಲುದಾರನನ್ನು ಹುಡುಕಲಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.ಈ ಪೋಸ್ಟ್ ಹಂಚಿಕೊಂಡಾಗಿನಿಂದ ಇನ್‌ಸ್ಟಾದಲ್ಲಿ ವಿಡಿಯೋವು 1.4 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಇಲ್ಲಿಯವರೆಗೆ 4 ಲಕ್ಷ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡಿದೆ. ಸಿಂಗ್ ಅವರ ಸಹ ಆಟಗಾರ ಇರ್ಫಾನ್ ಪಠಾಣ್ ಕೂಡ ಯುವಿಯವರ ಸಂತಸದಲ್ಲಿ ಪಾಲ್ಗೊಂಡಿದ್ದು, ತಮ್ಮ ಕಾಮೆಂಟ್ ಮಾಡಿದ್ದು, ಪುಟ್ಟ ಪೋರ ನಿಮ್ಮ ತಂತ್ರಗಾರಿಕೆಯ ಮೇಲೆ ಕಣ್ಣಿಟ್ಟಿದ್ದಾನೆ ಎಂದು ಬರೆದುಕೊಂಡಿದ್ದಾರೆ.


ಭಾರತೀಯ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ಮೆಚ್ಚುಗೆಯನ್ನು ನೀಡಿದ್ದು, ದೇವರ ಆಶೀರ್ವಾದ ಅವನ ಮೇಲಿರಲಿ ಎಂದಿದ್ದಾರೆ. ಯುವಿಯ ಅಭಿಮಾನಿಯೊಬ್ಬರು ಭಾರತದ ಅತ್ಯುತ್ತಮ ಆಲ್‌ರೌಂಡರ್ ಎಂದು ಬಣ್ಣಿಸಿದ್ದಾರೆ.


ಟಿ20 ಯ ಅವಿಸ್ಮರಣೀಯ ದಿನ
2007 ನೇ ವರ್ಷದ ಆ ದಿನ ಭಾರತ ಹಾಗೂ ಇಂಗ್ಲೆಂಡ್ ನಡುವೆ ಟಿ20 ವರ್ಲ್ಡ್ ಕಪ್ ನಡೆದ ಅವಿಸ್ಮರಣೀಯ ದಿನ. ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ, ಯುವರಾಜ್ ಸಿಂಗ್ ಅವರ ಭರ್ಜರಿ ಬ್ಯಾಟಿಂಗ್ ಅಬ್ಬರದೊಂದಿಗೆ 218 ರನ್‌ಗಳನ್ನು ಕಲೆಹಾಕಿತು.


16 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ 58 ರನ್ ಗಳಿಸಿದರು. ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ 58 ಹಾಗೂ 68 ರನ್ ಗಳಿಸಿದರು. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ 200 ರನ್‌ಗಳೊಂದಿಗೆ ಭಾರತದ ಮುಂದೆ ಮಂಡಿಯೂರಿತು. ಪಠಾಣ್ ಅವರ ಗಮನಾರ್ಹ ಬೌಲಿಂಗ್ ಮುಂದೆ ಇಂಗ್ಲೆಂಡ್ ಪಡೆ ತಲೆಬಾಗಿತು ಹಾಗೂ ಪಠಾಣ್ ಇಂಗ್ಲೆಂಡ್‌ನ ಮೂರು ವಿಕೆಟ್‌ಗಳನ್ನು ಕಬಳಿಸುವಲ್ಲಿ ಸಫಲರಾದರು.


ಇದನ್ನೂ ಓದಿ:   Gautam Gambhir: ಮತ್ತೊಮ್ಮೆ ಕೊಹ್ಲಿ ವಿರುದ್ಧ ಮಾತನಾಡಿದ ಗಂಭೀರ್, ಈ ವಿಚಾರದಲ್ಲಿ ರಿಸ್ಕ್​ ಬೇಡ ಎಂದ ಗೌತಿ


ಈ ವರ್ಷ ಎರಡನೇ ಆವೃತ್ತಿಗೆ ಕಾಲಿಡುತ್ತಿರುವ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಸಚಿನ್ ತೆಂಡುಲ್ಕರ್ ತಂಡದಲ್ಲಿ ಯುವಿ ಸ್ಪರ್ಧಿಸುತ್ತಿದ್ದಾರೆ. ಭಾರತೀಯ ತಂಡದ ದಂತಕಥೆಯಾಗಿ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿರುವ ಯುವಿ, ತಂಡದ ಪ್ರಮುಖ ಸದಸ್ಯರೆಂದೆನಿಸಿದ್ದಾರೆ.

top videos
    First published: