ಸಾಮಾನ್ಯವಾಗಿ ನಮ್ಮಲ್ಲಿ ಕ್ರಿಕೆಟ್ ಗೆ (Cricket) ಇರುವಷ್ಟು ಅಭಿಮಾನಿಗಳು ಮತ್ತೆ ಬೇರೆ ಯಾವುದೇ ಕ್ರೀಡೆಗಳಿಗಿರಲಿಕ್ಕಿಲ್ಲ. ಹೌದು.. ನಮ್ಮ ಭಾರತ (India) ದೇಶದಲ್ಲಿ ಕ್ರಿಕೆಟ್ ಮತ್ತು ಕ್ರಿಕೆಟ್ ಆಟಗಾರರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡುವಷ್ಟು ಬೇರೆ ಯಾವ ದೇಶದಲ್ಲೂ ಯಾವ ಕ್ರಿಕೆಟ್ ಆಟಗಾರರನ್ನು (Cricket players) ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡಲಿಕ್ಕಿಲ್ಲ. ಇದಕ್ಕೆ ಉದಾಹರಣೆ ಎಂದರೆ ಏಷ್ಯಾ ಕಪ್ ನಲ್ಲಿ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ (Pakistan) ನಡುವಿನ ಸೂಪರ್ ಫೋರ್ ರೌಂಡ್ ನ ಪಂದ್ಯ. ಪಂದ್ಯ ಮುಗಿದರೂ ಅದರ ಬಗ್ಗೆ ಮಾತಾಡುವುದು ಮತ್ತು ಹಿರಿಯ ಕ್ರಿಕೆಟಿಗರು ತಮ್ಮ ತಮ್ಮ ಹೇಳಿಕೆಗಳನ್ನು ಹೇಳುವುದನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ.
ಪಾಕಿಸ್ತಾನ ವಿರುದ್ಧ ಸೋತ ಭಾರತ
ಅಂದಿನ ಪಂದ್ಯದಲ್ಲಿ ಭಾರತ ತಂಡವು ಮೊದಲು ಬ್ಯಾಟ್ ಮಾಡಿ ಉತ್ತಮ ಆರಂಭ ಪಡೆದರೂ ಸಹ ಮಧ್ಯದ ಓವರ್ ಗಳಲ್ಲಿ ಬ್ಯಾಟ್ಸ್ಮನ್ ಗಳು ಪೆವಿಲಿಯನ್ ಪರೇಡ್ ಮಾಡಿದ್ದರಿಂದ ಕೊನೆಗೆ 181 ರನ್ ಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಗಳು 182 ರನ್ ಗಳ ಗುರಿಯನ್ನು ಯಾವುದೇ ಒಂದು ಅಡೆತಡೆಗಳಿಲ್ಲದೆ ತಲುಪಿದರು.
ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ತುಂಬಾನೇ ಉಗುರು ಕಚ್ಚಿಕೊಂಡು ನೋಡುವ ಕ್ಷಣದವರೆಗೆ ಪಂದ್ಯವನ್ನು ತೆಗೆದುಕೊಂಡು ಹೋಗಿ ಕೊನೆಗೆ ವಿಜೇತರಾಗಿ ಹೊರಹೊಮ್ಮಿದ್ದನ್ನು ನಾವೆಲ್ಲಾ ನೋಡಿದ್ದೇವೆ.
ಭಾರತ ಸೋಲಲು ಎರಡು ಕಾರಣಗಳು
ಭಾರತದ ವಿರುದ್ಧ 182 ರನ್ ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ, ತನ್ನ ಇನ್ನಿಂಗ್ಸ್ ನ ಕೊನೆಯ ಎಸೆತದಲ್ಲಿ ಐದು ವಿಕೆಟ್ ಗಳೊಂದಿಗೆ ವಿಜಯದ ಗುರಿಯನ್ನು ತಲುಪಿತು. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲಾಗುವುದಕ್ಕೆ ಎರಡು ಪ್ರಮುಖ ಕಾರಣಗಳನ್ನು ನೀಡಿದ್ದಾರೆ ಇಲ್ಲೊಬ್ಬ ಮಾಜಿ ಕ್ರಿಕೆಟಿಗ.
ಇದನ್ನೂ ಓದಿ: MS Dhoni: ಧೋನಿ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್
ಹೌದು.. ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಆಸಿಫ್ ಅಲಿ ಅವರ ಕ್ಯಾಚ್ ಅನ್ನು ಭಾರತ ತಂಡದ ಬೌಲರ್ ಆದ ಅರ್ಶ್‌ದೀಪ್ ಸಿಂಗ್ ಅವರು ಕೈಚೆಲ್ಲಿದ್ದು ಮತ್ತು ಭಾರತೀಯ ಬೌಲರ್ ಗಳು ಹಾಕಿದ ವೈಡ್ ಎಸೆತಗಳೇ ಎರಡು ಪ್ರಮುಖ ಕಾರಣಗಳು ಮತ್ತು ಇದರಿಂದಲೇ ಭಾರತ ತಂಡ ಪಂದ್ಯವನ್ನು ಸೊತ್ತಿದ್ದು ಅಂತ ವೀರೇಂದ್ರ ಸೆಹ್ವಾಗ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಅರ್ಷ್‌ದೀಪ್ ಅವರ ಕ್ಯಾಚ್ ಡ್ರಾಪ್
ರವಿ ಬಿಷ್ಣೋಯ್ ಅವರು 18ನೇ ಓವರ್ ನಲ್ಲಿ ಆಸಿಫ್ ಅಲಿ ಅವರು ಇನ್ನೇನು ವಿಕೆಟ್ ಒಪ್ಪಿಸಿದ್ದಾರೆ ಅಂತ ಹೇಳುವಷ್ಟರಲ್ಲಿಯೇ ಶಾರ್ಟ್ ಥರ್ಡ್ ಮ್ಯಾನ್ ನಲ್ಲಿ ಅರ್ಷ್‌ದೀಪ್ ಅವರು ಆ ಕ್ಯಾಚ್ ಅನ್ನು ಕೈ ಚೆಲ್ಲಿದರು ಮತ್ತು ಇದರಿಂದ ಆಸಿಫ್ ಅವರು ಕ್ರೀಸ್ ನಲ್ಲಿ ಉಳಿಯುವಂತೆ ಮಾಡಿತು. ಇವರು 8 ಎಸೆತಗಳಲ್ಲಿ 16 ರನ್ ಗಳನ್ನು ಬಾರಿಸಿ ಪಂದ್ಯಕ್ಕೆ ಇನ್ನೂ ರೋಚಕತೆ ಮತ್ತು ವಿಜಯ ಎರಡನ್ನೂ ತಂದುಕೊಟ್ಟರು.
ವೈಡ್ ಎಸೆತಗಳು
ಮತ್ತೊಂದೆಡೆ, ಭಾರತೀಯ ಬೌಲರ್ ಗಳು ಒಟ್ಟಾಗಿ 8 ಹೆಚ್ಚುವರಿ ರನ್ ಗಳನ್ನು ಬಿಟ್ಟುಕೊಟ್ಟರು, ಅದರಲ್ಲಿ ಆರು ವೈಡ್ ಗಳು. "ಅರ್ಷ್‌ದೀಪ್ ಸಿಂಗ್ ಅವರು ಕೈಬಿಟ್ಟ ಕ್ಯಾಚ್ ಮತ್ತು ಭಾರತೀಯ ಬೌಲರ್ ಗಳು ಎಸೆದ ವೈಡ್ ಎಸೆತಗಳು ಪಾಕಿಸ್ತಾನ ವಿರುದ್ಧದ ಭಾರತದ ಸೋಲಿಗೆ ಕಾರಣ ಎಂದು ನಾನು ಭಾವಿಸುತ್ತೇನೆ. ಭಾರತದ ಬೌಲರ್ ಗಳು ಹೆಚ್ಚು ವೈಡ್ ಗಳನ್ನು ಹಾಕಿದರು" ಎಂದು ಪಂದ್ಯದ ನಂತರ ಕ್ರಿಕ್‌ಬಝ್ ನಲ್ಲಿ ಸೆಹ್ವಾಗ್ ಹೇಳಿದರು.
ಪಂದ್ಯದ ಬಗ್ಗೆ ಸೆಹ್ವಾಗ್ ಏನ್ ಹೇಳಿದ್ರು
"ಒಬ್ಬ ನಾಯಕನಾಗಿ ನನ್ನ ಬೌಲರ್ ಗಳು ಎದುರಾಳಿಗೆ ರನ್ ಬಾರಿಸುವಂತೆ ಬೌಲ್ ಮಾಡುವುದನ್ನು ನಾನು ಒಪ್ಪಿಕೊಳ್ಳುವೆ, ಆದರೆ ಹೀಗೆ ಹೆಚ್ಚುವರಿ ರನ್ ಗಳು ಮತ್ತು ಹೆಚ್ಚುವರಿ ಎಸೆತಗಳನ್ನು ಬಿಟ್ಟು ಕೊಡುವುದನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹೇಳಿದರು.
ಇದನ್ನೂ ಓದಿ: Yuzvendra Chahal: ಚಹಾಲ್ ಪತ್ನಿ ಧನಶ್ರೀ ವರ್ಮಾ ಆಸ್ಪತ್ರೆಗೆ ದಾಖಲು
ಪಾಕಿಸ್ತಾನದ ಪರವಾಗಿ ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 71 ರನ್ ಗಳಿಸಿದರೆ, ಮೊಹಮ್ಮದ್ ನವಾಜ್ 20 ಎಸೆತಗಳಲ್ಲಿ 42 ರನ್ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 73 ರನ್ ಕಲೆಹಾಕಿ ಪಾಕಿಸ್ತಾನವನ್ನು ಅಗ್ರಸ್ಥಾನಕ್ಕೇರಿಸಿದರು. "ಈ ಪಂದ್ಯದಲ್ಲಿ ಪೂರ್ತಿಯಾಗಿ ಕ್ರೆಡಿಟ್ ಪಾಕಿಸ್ತಾನ ತಂಡಕ್ಕೆ ಸಲ್ಲುತ್ತದೆ. ಏಕೆಂದರೆ ಅವರು ಪಂದ್ಯದುದ್ದಕ್ಕೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು" ಎಂದು ಸೆಹ್ವಾಗ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ