IPL 2019: ಮೊದಲ ​ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಅಲ್ಜಾರಿ: ಅಷ್ಟಕ್ಕೂ ಯಾರೀತ?

22ರ ಹರೆಯದ ಯುವ ಬೌಲರ್ 2016 ರಲ್ಲಿ ಭಾರತದ ವಿರುದ್ಧ ​ಪಂದ್ಯದ ಮೂಲಕ ಟೆಸ್ಟ್​ಗೆ ಪಾದರ್ಪಣೆ ಮಾಡಿದ್ದರು.

zahir | news18
Updated:April 7, 2019, 10:01 PM IST
IPL 2019: ಮೊದಲ ​ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಅಲ್ಜಾರಿ: ಅಷ್ಟಕ್ಕೂ ಯಾರೀತ?
@Sportzwiki
  • News18
  • Last Updated: April 7, 2019, 10:01 PM IST
  • Share this:
ಶನಿವಾರ ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಸನ್​ರೈಸರ್ಸ್​ ತಂಡದ ಹೀನಾಯ ಸೋಲಿಗೆ ಕಾರಣವಾಗಿದ್ದು ಅಲ್ಜಾರಿ ಜೊಸೆಫ್. ಮುಂಬೈ ಇಂಡಿಯನ್ಸ್​ ಪರ ಮೊದಲ ಐಪಿಎಲ್​ ಪಂದ್ಯವಾಡಿದ ಅಲ್ಜಾರಿ, ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು.

ಅದ್ಭುತ ಬೌಲಿಂಗ್​ ಮಾಡಿದ್ದ ಅಲ್ಜಾರಿ ಸ್ಪೋಟಕ ಆಟಗಾರ ವಾರ್ನರ್ ಸೇರಿದಂತೆ  ಹೈದರಾಬಾದ್ ತಂಡದ ಪ್ರಮುಖ 6 ವಿಕೆಟ್​ಗಳನ್ನು ಉರುಳಿಸಿದ್ದರು. ಅದು ಕೂಡ 4 ಓವರ್​ನಲ್ಲಿ ಕೇವಲ 12 ರನ್​ ನೀಡಿ ಎಂಬುದು ವಿಶೇಷ. ಸನ್​​ರೈಸರ್ಸ್​ನ ಅತಿರಥ ಮಹಾರಥ ದಾಂಡಿಗರನ್ನು ಪೆವಿಲಿಯನ್​ಗೆ ಕಳುಹಿಸಿದ್ದ ಅಲ್ಜಾರಿ ಮೂಲತಃ ವೆಸ್ಟ್​ ಇಂಡೀಸ್ ಆಟಗಾರ.

22ರ ಹರೆಯದ ಯುವ ಬೌಲರ್ 2016 ರಲ್ಲಿ ಭಾರತದ ವಿರುದ್ಧ ​ಪಂದ್ಯದ ಮೂಲಕ ಟೆಸ್ಟ್​ಗೆ ಪಾದರ್ಪಣೆ ಮಾಡಿದ್ದರು. ಆಡಿರುವ 9 ಟೆಸ್ಟ್​ ಪಂದ್ಯಗಳಿಂದ ಈಗಾಗಲೇ 25 ವಿಕೆಟ್​ಗಳನ್ನು ಕಬಳಿಸಿ ವಿಂಡೀಸ್ ಪಾಲಿಗೆ ಹೊಸ ಭರವಸೆ ಮೂಡಿಸಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲೂ 16 ಪಂದ್ಯಗಳನ್ನಾಡಿ 24 ವಿಕೆಟ್​ ಪಡೆದಿದ್ದಾರೆ. ಅದರಲ್ಲೂ 5 ವಿಕೆಟ್​ಗಳ ಗುಚ್ಛವನ್ನೂ ತಮ್ಮದಾಗಿಸಿಕೊಂಡಿರುವ ಅಲ್ಜಾರಿ, ವೆಸ್ಟ್​ ಇಂಡೀಸ್​ ಕ್ರಿಕೆಟ್​ನ ವೇಗದ ಅಸ್ತ್ರದ ಕೊರತೆಯನ್ನು ನೀಗಿಸಲಿದ್ದಾರೆ ಎನ್ನಲಾಗುತ್ತಿದೆ.

ವಿಂಡೀಸ್ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅಲ್ಜಾರಿ ಐಪಿಎಲ್​ಗೂ ಆಯ್ಕೆಯಾಗಿದ್ದರು. ಆದರೆ ಇದೇ ಮೊದಲ ಬಾರಿ ಮುಂಬೈ ಇಂಡಿಯನ್ಸ್​ನ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದ ಯುವ ವೇಗಿ ನಿಜಕ್ಕೂ ಸನ್​ರೈಸರ್ಸ್​ ಪಾಲಿಗೆ ಕತ್ತಲೆಯಾಗಿ ಕಾಡಿದರು. ನಿಖರ ದಾಳಿಯಿಂದ ಮುಂಬೈ ಇಂಡಿಯನ್ಸ್​ ಪಾಲಿನ ಜಯದ ರೂವಾರಿಯಾದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್ ಮಾಡಿದ ಸಾಧನೆಯನ್ನು ಮಾಡಿದರು.

ಐಪಿಎಲ್​ ಮೊದಲ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ಪರ ಆಡಿದ್ದ ಪಾಕಿಸ್ತಾನ ಬೌಲರ್ ಸೊಹೈಲ್ ತನ್ವೀರ್ ಸಿಎಸ್​ಕೆ ವಿರುದ್ಧ ಕೇವಲ 14 ರನ್​ ನೀಡಿ 6 ವಿಕೆಟ್​ ಕಬಳಿಸಿರುವುದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.  11 ವರ್ಷಗಳ ಈ ದೀರ್ಘಾ ದಾಖಲೆಯನ್ನು​ ಮುರಿಯುವಲ್ಲಿ ಯಾವುದೇ ಬೌಲರ್ ಯಶಸ್ವಿಯಾಗಿರಲಿಲ್ಲ.

ಇದನ್ನೂ ಓದಿ: IPL 2019: ಅಲ್ಜಾರಿ ದಾಳಿಗೆ ಅದುರಿದ ಸನ್​ರೈಸರ್ಸ್​ ಬ್ಯಾಟ್ಸ್​ಮನ್​ಗಳು: ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ

ಆದರೆ 12ನೇ ಸೀಸನ್​ ಮೂಲಕ ಹೊಸ ಆರಂಭ ಪಡೆದ ವಿಂಡೀಸ್ ವೇಗಿ ಸೊಹೈಲ್ ತನ್ವೀರ್​ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ 12 ರನ್​ 6 ವಿಕೆಟ್​ಗಳನ್ನು ಉದುರಿಸಿದ್ದರು. ಈ ಬೌಲಿಂಗ್ ಪ್ರದರ್ಶನ ಈಗ ಐಪಿಎಲ್​ ಬೆಸ್ಟ್​ ಬೌಲಿಂಗ್ ಎಂದು ಗುರುತಿಸಿಕೊಂಡಿದೆ. ಹಾಗೆಯೇ ಪದಾರ್ಪಣೆ ಪಂದ್ಯದಲ್ಲಿ ಬೌಲರೊಬ್ಬರು ಮಾಡಿದ ಶ್ರೇಷ್ಠ ಸಾಧನೆ ಕೂಡ ಅಲ್ಜಾರಿ ಜೊಸೆಫ್ ಪಾಲಾಗಿದೆ.
First published:April 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading