ಹೊಸಕೋಟೆಯ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಂ.ಗ್ರಾಮಾಂತರ ಜಿ.ಪಂ. ಸಿಇಓ ಭೇಟಿ, ಪರಿಶೀಲನೆ

ಬೆಸಿಗೆಯಲ್ಲಿ ನೀರಿನ ಬಗ್ಗೆ ಹೆಚ್ಚು ಗಮನ ಹರಿಸಿ ನರೇಗ ಯೋಜನೆಯಡಿ ಅಂತರ್ಜಲ ವೃದ್ದಿ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ‌ ಮತ್ತು ಅಂತರ್ಜಲ ಮಟ್ಟವನ್ನು ವೃದ್ಧಿಸಲು ಯೋಜನೆ‌ ರೂಪಿಸಲು ಎಂಎನ್ ನಾಗರಾಜ್ ಸಲಹೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ ಎಂಎನ್ ನಾಗರಾಜ್

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ ಎಂಎನ್ ನಾಗರಾಜ್

  • Share this:
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯತಿಯ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ನಾಗರಾಜ ಇಂದು ಭೇಟಿ ನೀಡಿ ಕೋವಿಡ್-19 ಮತ್ತು ಸ್ವಚ್ಛತೆ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಯ ಕಾರ್ಯ ವೈಖರಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.

ನಂತರ ಔಷಧ ದಾಸ್ತಾನು ಘಟಕಕ್ಕೆ ಭೇಟಿ ನೀಡಿದ ಸಿಇಓ ಎಂ.ಎನ್. ನಾಗರಾಜ್, ಔಷಧಿಗಳನ್ನು ಪರಿಶೀಲಿಸಿ, ಅವಧಿ ಮುಗಿದ ಔಷಧಿಗಳನ್ನು ಘಟಕದಿಂದ ಬೇರೆಡೆ ಸ್ಥಳಾಂತರಿಸಲು ವೈದ್ಯರಿಗೆ ಸೂಚನೆ ನೀಡಿದರು.
ಬಳಿಕ ಸಮೇತನಹಳ್ಳಿ ಘನ ಮತ್ತು ದ್ರವ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದರು.

ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳಲ್ಲಿ ಕೇವಲ 3 ಗ್ರಾಮಗಳಿಂದ ಕಸ ಸಂಗ್ರಹಣೆಯಾಗುತ್ತಿದ್ದು, ಉಳಿದ 2 ಗ್ರಾಮಗಳಿಂದ ಶೀಘ್ರ ಕಸ ಸಂಗ್ರಹಣೆ ಮಾಡಲು ಕ್ರಮವಹಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅವರು ಖಡಕ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Muthappa Rai - ಮರೆಯಾದ ಭೂಗತ ಲೋಕದ ಡಾನ್​ಗೆ ಮರುಜೀವ ನೀಡಿದ್ದ ಪುತ್ತೂರು ಮಹಾಲಿಂಗೇಶ್ವರ

ತದನಂತರ ಸಮೇತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ರಾಜಕಾಲುವೆಯ ಕಾಂಪೌಂಡ್ ನಿರ್ಮಾಣ ಮತ್ತು ಗೋಕಟ್ಟೆ ಕಾಮಗಾರಿಗಳ ಸ್ಥಳಕ್ಕೆ ಸಿಇಓ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿ, ಗೋಕಟ್ಟೆಗೆ ಮೆಟ್ಟಿಲುಗಳನ್ನು ನಿರ್ಮಿಸಲು ಸೂಚಿಸಿದರು. ಇದೇ ಸಮಯದಲ್ಲಿ ಸ್ಮಶಾನದ ಅಭಿವೃದ್ಧಿ ಕಾಮಗಾರಿಯನ್ನು ಸಹ ವೀಕ್ಷಣೆ ಮಾಡಿ ಕಾಮಗಾರಿ ತ್ವರಿತ ಮುಕ್ತಾಯ ಮಾಡಿ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದರು. ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಇಲ್ಲವಾದರೆ ಮನೆಗೆ ಹೋಗಲು ಸಿದ್ದವಾಗಿ ಎಂದು ಎಚ್ಚರಿಕೆ ನೀಡಿದರು.

ಸ್ವಚ್ಚ ಕುಡಿಯುವ ನೀರಿಗೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚನೆ ನೀಡಿದರು. ಬೆಸಿಗೆಯಲ್ಲಿ ನೀರಿನ ಬಗ್ಗೆ ಹೆಚ್ಚು ಗಮನ ಹರಿಸಿ ನರೇಗ ಯೋಜನೆಯಡಿ ಅಂತರ್ಜಲ ವೃದ್ದಿ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ‌ ಮತ್ತು ಅಂತರ್ಜಲ ಮಟ್ಟವನ್ನು ವೃದ್ಧಿಸಲು ಯೋಜನೆ‌ ರೂಪಿಸಲು ಸೂಚನೆ ನೀಡಿದರು.

First published: