• ಹೋಂ
 • »
 • ನ್ಯೂಸ್
 • »
 • Corona
 • »
 • Darshan: ಕೋವಿಡ್​ ಬಿಕ್ಕಟ್ಟಿನಲ್ಲಿ ಮೃಗಾಲಯಗಳು; ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್​ ಮನವಿ

Darshan: ಕೋವಿಡ್​ ಬಿಕ್ಕಟ್ಟಿನಲ್ಲಿ ಮೃಗಾಲಯಗಳು; ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್​ ಮನವಿ

ನಟ ದರ್ಶನ್​​

ನಟ ದರ್ಶನ್​​

ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು, 5 ಸಾವಿರಕ್ಕೂ ಹೆಚ್ಚು ವನ್ಯ ಜೀವಿಗಳಿದೆ. ಈ ವನ್ಯ ಜೀವಿಗಳ ನಿರ್ವಹಣೆ ಕೊರೋನಾ ಸಂಕಷ್ಟ ಕಾಲದಲ್ಲಿ ಕಷ್ಟವಾಗಿದೆ.

 • Share this:

  ಕೋವಿಡ್​ ಸೋಂಕು ಮನು ಕುಲಕ್ಕೆ ಮಾತ್ರವಲ್ಲ. ಪ್ರಾಣಿ ಸಂಕುಲಕ್ಕೂ ಕಂಟಕವಾಗಿದೆ. ಸೋಂಕು ನಿಯಂತ್ರಣಕ್ಕೆ ದೇಶದ ವಿವಿಧ ರಾಜ್ಯಗಳು ಹೇರಿರುವ ಲಾಕ್​ಡೌನ್​ ನಿಂದಾಗಿ ಜನಸಾಮಾನ್ಯರು ಮಾತ್ರವಲ್ಲ ಮೃಗಾಲಯದಲ್ಲಿನ ಪ್ರಾಣಿಗಳು ಕೂಡ ತೊಂದರೆಗೆ ಒಳಗಾಗಿವೆ. ಪ್ರವಾಸಿಗರಿಲ್ಲದೇ, ಮೃಗಾಲಯದಲ್ಲಿನ ವನ್ಯ ಜೀವಿಗಳು ಸಂಕಷ್ಟಕ್ಕೆ ಒಳಗಾಗಿವೆ. ಇವುಗಳ ರಕ್ಷಣೆ ಮಾಡುವುದು ನಮ್ಮ ಹೊಣೆಯಾಗಿದೆ. ಇದೇ ಕಾರಣಕ್ಕೆ ಇವುಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿ ಸಂಕುಲಕ್ಕೆ ನೆರವಾಗಬೇಕು ಎಂದು ನಟ ದರ್ಶನ್​ ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.


  ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು, 5 ಸಾವಿರಕ್ಕೂ ಹೆಚ್ಚು ವನ್ಯ ಜೀವಿಗಳಿದೆ. ಈ ವನ್ಯ ಜೀವಿಗಳ ನಿರ್ವಹಣೆ ಕೊರೋನಾ ಸಂಕಷ್ಟ ಕಾಲದಲ್ಲಿ ಕಷ್ಟವಾಗಿದೆ. ಕೊರೋನಾ ಸೋಂಕಿನ ಹಿನ್ನಲೆ ಜನರಿಗೆ ಮೃಗಾಲಯ ಪ್ರವೇಶ ನಿಷಿದ್ಧವಾಗಿದೆ. ಪ್ರಾಣಿಗಳ ಸುರಕ್ಷತಾ ದೃಷ್ಠಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆಯಾದರೂ ಪ್ರವಾಸಿಗರಿಲ್ಲದೇ ಈಗ ಆದಾಯ ಕುಂಠಿತವಾಗಿದೆ.


  ಇದನ್ನು ಓದಿ: ತಮಿಳುನಾಡಿನ ಮೃಗಾಲಯದಲ್ಲಿ ಸಿಂಹಗಳಿಗೆ ಕೊರೋನಾ ಪಾಸಿಟಿವ್; ಒಂದು ಸಿಂಹ ಸಾವು!


  ಮೃಗಾಲಯಗಳಿಗೆ ಬರುವ ಪ್ರವಾಸಿಗರ ಭೇಟಿಯಿಂದಾದ ಸಂಗ್ರಹಿತವಾದ ಆದಾಯದಿಂದ ಮೃಗಾಲಯದ ವನ್ಯ ಜೀವಿ ಮತ್ತು ಅಲ್ಲಿನ ಸಿಬ್ಬಂದಿಗಳ ನಿರ್ವಹಣೆ ನಡೆಸಲಾಗುತ್ತದೆ. ಆದರೆ, ಪ್ರವಾಸಿಗರಿಲ್ಲದೇ ಆದಾಯ ಖೋತಾ ಆಗಿದೆ. ಈ ಹಿನ್ನಲೆ ಇವುಗಳ ರಕ್ಷಣೆಗಾಗಿ ಜನರು ಪ್ರಾಣಿಗಳನ್ನು ದತ್ತು ಪಡೆಯಬೇಕು ಎಂದು ಚಾಲೆಂಜಿಗ್​ ಸ್ಟಾರ್​ ಮನವಿ ಮಾಡಿದ್ದಾರೆ.


  ಅನೇಕ ಜನರು ಮನೆಯಲ್ಲಿ ಪ್ರಾಣಿ ಸಾಕಬೇಕು ಎಂದು ಇಚ್ಚಿಸಿರುತ್ತಾರೆ. ಅವರು ಈ ಮೂಲಕ ಪ್ರಾಣಿಗಳ ಆರೈಕೆ ನಡೆಸಬಹುದು. ತಮ್ಮ ಹತ್ತಿರ ಮೃಗಾಲಯಗಳಿಗೆ ಹೋಗಿ ತಮಗಿಷ್ಟವಾದ ಪ್ರಾಣಿಗಳನ್ನು ದತ್ತು ಸ್ವೀಕರಿಸಬಹುದು. ಗಿಳಿಯಿಂದ ಆನೆವರೆಗೂ ಎಲ್ಲಾ ಪ್ರಾಣಿ- ಪಕ್ಷಿಯನ್ನು ದತ್ತು ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
  ಜೂ ಆಫ್​ ಕರ್ನಾಟಕ ಎಂಬ ಮೊಬೈಲ್​ ಆ್ಯಪ್​ ಮೂಲಕ ಅಥವಾ ಕರ್ನಾಟಕದಲ್ಲಿರುವ 9 ಜೂಗಳಲ್ಲಿ ನಿಮಗೆ ಹತ್ತಿರುವಿರುವ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ನಿಮ್ಮಿಷ್ಟದ ಪ್ರಾಣಿಗಳನ್ನು ದತ್ತು ಪಡೆಯಬಹುದು. ಈ ದತ್ತು ಹಣ ಕೂಡ ಹೆಚ್ಚಿನ ಹೊರೆಯಾಗದಂತೆ ಇದೆ. ಅಬ್ಬಾಬ್ಬ ಎಂದರೆ, ಆನೆಯಂತಹ ಪ್ರಾಣಿಗೆ1.85 ಸಾವಿರ ಇದೆ. ಅಲ್ಲದೇ ಇದು ವಾರ್ಷಿಕಹಣವಾಗಿದ್ದು, ಈ ದತ್ತು ಕಾರ್ಯಕ್ಕೆ ಜನರು ಮುಂದಾಗಬೇಕು. ಈ ಮೂಲಕ ಪ್ರಾಣಿ ಸಂಕುಲ ಉಳಿಸಬೇಕು ಎಂದು ಕಳಕಳಿಯ ಮನವಿ ಮಾಡಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:Seema R
  First published: