• Home
 • »
 • News
 • »
 • coronavirus-latest-news
 • »
 • ಚೀನಿಗರೇ ನಾಯಿ ತಿನ್ನೋದು ನಿಲ್ಲಿಸಿ, ನಾವು ಗೋ ಮಾಂಸ ಪೂರೈಸುತ್ತೇವೆ; ಸಚಿವನಿಂದ ವಿವಾದಾತ್ಮಕ ಹೇಳಿಕೆ

ಚೀನಿಗರೇ ನಾಯಿ ತಿನ್ನೋದು ನಿಲ್ಲಿಸಿ, ನಾವು ಗೋ ಮಾಂಸ ಪೂರೈಸುತ್ತೇವೆ; ಸಚಿವನಿಂದ ವಿವಾದಾತ್ಮಕ ಹೇಳಿಕೆ

ಎನರ್ಜಿ ಮುಟೊಡಿ

ಎನರ್ಜಿ ಮುಟೊಡಿ

ಆಡಳಿತಾರೂಢ ಪಕ್ಷ ಜನು ಪಿಎಫ್​ ಪಾರ್ಟಿಯ ಸದಸ್ಯರಾಗಿರುವ ಮುಟೊಡಿ, ಮಾಹಿತಿ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿದ್ದಾರೆ. ಮುಟೊಡಿ ಹೇಳಿಕೆಗೆ ಟ್ವಿಟ್ಟರ್​ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

 • Share this:

  ಕೊರೋನಾ ವೈರಸ್​ ಚೀನಿ ವೈರಸ್​ ಎಂದು ಅಮೆರಿಕ ಜರಿದಿದೆ. ಅಷ್ಟೇ ಅಲ್ಲ, ಚೀನಾದವರು ಸಿಕ್ಕ ಸಿಕ್ಕ ಹುಳು, ಪ್ರಾಣಿಗಳನ್ನು ತಿನ್ನುತ್ತಾರೆ. ಹೀಗಾಗಿ ಪ್ರಾಣಿಗಳ ವೈರಸ್​ ಮನುಷ್ಯರಿಗೆ ಅಂಟುತ್ತಿದೆ ಎನ್ನುವ ಚರ್ಚೆ ಕೂಡ ಜೋರಾಗಿದೆ. ಈ ಮಧ್ಯೆ ಚೀನಿಗರೇ ನಾಯಿ ತಿನ್ನೋದು ನಿಲ್ಲಿಸಿ, ನಾವು ನಿಮಗೆ ದನದ ಮಾಂಸ ಪೂರೈಸುತ್ತೇವೆ ಎಂದು ಜಿಂಬಾಬ್ವೆ ಸಚಿವರು ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ.


  ಎನರ್ಜಿ ಮುಟೊಡಿ ಹೆಸರಿನ ಸಚಿವರು ಚೀನಾದ ಮಾರುಕಟ್ಟಯಲ್ಲಿ ಹಾವು, ನಾಯಿಗಳನ್ನು ಮಾರಾಟ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ಕೆಲ ಏಷ್ಯಾ ಹಾಗೂ ಆಫ್ರಿಕಾದ ರಾಷ್ಟ್ರಗಳಲ್ಲಿ ನಾಯಿ, ಬೆಕ್ಕು, ಹಾವು, ಬಾವಲಿ, ಮಂಗ ಮೊದಲಾದ ಪ್ರಾಣಿಗಳನ್ನು ತಿನ್ನುತ್ತಿದ್ದಾರೆ. ಇದರಿಂದ ಕೋವಿಡ್​ ಹಾಗೂ ಎಬೋಲಾದಂತ ಮಾರಕ ವೈರಸ್​ಗಳು ವಿಶ್ವಾದ್ಯಂತ ಹಬ್ಬುತ್ತಿವೆ. ನಾವು ಚೀನಾ, ಇಂಡೋನೇಷ್ಯಾ ಹಾಗೂ ಇತರ ರಾಷ್ಟ್ರಗಳಿಗೆ ಶೀಘ್ರವೇ ಗೋಮಾಂಸ ರಫ್ತು ಮಾಡುತ್ತೇವೆ. ಅವರು ಕಾಡು ಪ್ರಾಣಿಗಳನ್ನು ತಿನ್ನುವುದನ್ನು ನಿಲ್ಲಿಸಲಿ,” ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಮುಂಬರುವ ದಿನಗಳಲ್ಲಿ ಹಸಿವು-ನಿರುದ್ಯೋಗ ಹೆಚ್ಚಲಿದೆ, ಈಗಲೇ ಮಾರ್ಗೋಪಾಯ ಹುಡುಕಿ; ಸರ್ಕಾರಕ್ಕೆ ಹೆಚ್‌ಡಿಕೆ ಎಚ್ಚರಿಕೆ


  ಜಿಂಬಾಬ್ವೆ ಆಡಳಿತಾರೂಢ ಪಕ್ಷ ಜನು ಪಿಎಫ್​ ಪಾರ್ಟಿಯ ಸದಸ್ಯರಾಗಿರುವ ಮುಟೊಡಿ, ಮಾಹಿತಿ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿದ್ದಾರೆ. ಮುಟೊಡಿ ಹೇಳಿಕೆಗೆ ಟ್ವಿಟ್ಟರ್​ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಮೊದಲು ಚೀನಾ ಜೊತೆ ಉತ್ತಮ ಗೆಳೆತನವಿದೆ ಎಂದು ಜಿಂಬಾಬ್ವೆ ಸರ್ಕಾರ ಹೇಳಿತ್ತು. ಈ ಸಂದರ್ಭದಲ್ಲಿ ಅವರು ಈ ರೀತಿ ಹೇಳಿಕೆ ನೀಡಿರುವುದು ವಿವಾದ ಸೃಷ್ಟಿಸಿದೆ.

  Published by:Rajesh Duggumane
  First published: