ನವ ದೆಹಲಿ (ಮೇ 30); "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿದ ಲಸಿಕೆ ಕಾರ್ಯಕ್ರಮ ಇದೀಗ ಸೋಲನುಭವಿಸಿದೆ. 18-44 ವರ್ಷದವರಿಗೆ ಲಸಿಕೆ ನೀಡಲಾಗುತ್ತಿದೆ. ಮೋದಿ ಸರ್ಕಾರದ ಈ ಶೂನ್ಯ ವ್ಯಾಕ್ಸೀನ್ ನೀತಿಯು ಭಾರತ ಮಾತೆಯ ಎದೆ ಬಗೆಯುವ ಕೆಲಸದಂತೆ ಭಾಸವಾಗುತ್ತಿದೆ" ಎಂದು ರಾಹುಲ್ ಗಾಂಧಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ದ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಅಸಲಿಗೆ ಕೇಂದ್ರ ಸರ್ಕಾರ ಮೇ.01 ರಿಂದ ದೇಶದಲ್ಲಿರುವ ಎಲ್ಲರಿಗೂ ಅದರಲ್ಲೂ ಮುಖ್ಯವಾಗಿ 18-44 ವಯಸ್ಸಿನವರಿಗೆ ಲಸಿಕೆ ಕಾರ್ಯಕ್ರಮ ಆರಂಭಿಸಿತ್ತು. ಲಸಿಕೆಯಿಂದ ಮಾತ್ರ ಜನರನ್ನು ಕೊರೋನಾದಿಂದ ಕಾಪಾಡಲು ಸಾಧ್ಯ ಎಂದು ಪ್ರಧಾನಿ ಮೋದಿ ಸಹ ಹೇಳಿದ್ದರು. ಆದರೆ, ಈವರೆಗೆ ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ. ಹಲವಾರು ರಾಜ್ಯಗಳು ಲಸಿಕೆ ಕೊರತೆ ಅನುಭವಿಸುತ್ತಿವೆ. ಹೀಗಾಗಿಕೊರೊನಾ ನಿರ್ವಹಣೆಯನ್ನು ಕೇಂದ್ರವು ಕಳಪೆಯಾಗಿ ಮಾಡುತ್ತಿರುವ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಇತ್ತೀಚೆಗೆ ಕೇಂದ್ರದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
मोदी सरकार की ज़ीरो वैक्सीन नीति भारत माता के सीने में ख़ंजर का काम कर रही है।
दुखद सच।
— Rahul Gandhi (@RahulGandhi) May 31, 2021
One man and his arrogance
+
One virus and its mutants pic.twitter.com/mHeaG5Bg3X
— Rahul Gandhi (@RahulGandhi) May 31, 2021
ರಾಹುಲ್ ಗಾಂಧಿ ಹಂಚಿಕೊಂಡ ವರದಿಯು, ಕೊರೋನಾ ಎರಡನೇ ಅಲೆಯು ಭಾರತದ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಸಂಬಳ ಪಡೆಯುವ ಉದ್ಯೋಗಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಇದಲ್ಲದೆ, ಶೇಕಡಾ 97 ರಷ್ಟು ಭಾರತೀಯರು ತಮ್ಮ ಆದಾಯದಲ್ಲೂ ಇಳಿಕೆ ಕಂಡಿದ್ದಾರೆ ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ